ಬೆಂಗಳೂರು: ದಿನೇ ದಿನೇ ಆನ್ ಲೈನ್ ಗೇಮ್, ಬೆಟ್ಟಿಂಗ್ ಕಾರಣದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂತಹ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದು, ಅದರಲ್ಲಿ ಆನ್ ಲೈನ್ ಗೇಮ್ಸ್, ಬೆಟ್ಟಿಂಗ್ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಅನೇಕ ಆನ್ ಲೈನ್ ಗೇಮ್ಸ್ ನಿಷೇಧಿಸಲಾಗಿತ್ತು. ಈಗಲೂ ಅಂತದ್ದೇ ಮಹತ್ವದ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸಚಿವ ಅಮಿತ್ ಶಾಗೆ ಬರೆದಂತ ಪತ್ರದಲ್ಲಿ ಕೋರಿದ್ದಾರೆ.
ಆನ್ ಲೈನ್ ಗೇಮ್ಸ್ ಗೆ ಅಡಿಟ್ ಆಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದಾವೆ. ಆದರೇ ಆನ್ ಲೈನ್ ಗೇಮ್ಸ್ ಮಾಲೀಕರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಆನ್ ಲೈನ್ ಗೇಮ್ ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸಚಿವರಿಗೆ ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
OMG: ಆರ್ಡರ್ ರದ್ದುಗೊಳಿಸಿದ 2 ವರ್ಷಗಳ ನಂತರ ‘ಅಮೆಜಾನ್’ನಿಂದ ಪ್ರೆಶರ್ ಕುಕ್ಕರ್ ಪಡೆದ ವ್ಯಕ್ತಿ | Amazon Order
ಮಹಿಳೆಯರಿಗೆ ‘ಉಚಿತ LPG ಸಿಲಿಂಡರ್’: ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡ, ದಾಖಲೆಗಳೇನು? ಇಲ್ಲಿದೆ ಮಾಹಿತಿ