ಬೆಂಗಳೂರು: ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ದಿನಾಂಕ: 10-09-2024ರ ನಾಳೆಯಿಂದ ಸ್ವಚ್ಚತಾ ಕಾರ್ಯ ಕೈಗೊಂಡಿರುವ ಹಿನ್ನಲೆ ಗಣೇಶಮೂರ್ತಿ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ.
ಈ ಕುರಿತಂತೆ ಬಿಬಿಎಂಪಿಯಿಂದ ಮಾಹಿತಿ ನೀಡಲಾಗಿದ್ದು, ಯಡಿಯೂರು ಕೆರೆಯ ವಿಸರ್ಜನಾ ಕೊಳ(ಕಲ್ಯಾಣಿ)ಯಲ್ಲಿ ದಿನಾಂಕ: 10-09-2024 ರಂದು ಸ್ವಚ್ಚತಾ ಕಾರ್ಯ ಕೈಗೊಂಡಿರುವ ಹಿನ್ನಲೆ ಗಣೇಶಮೂರ್ತಿ ವಿಸರ್ಜನೆಗೆ ನಿರ್ಬಂಧ ಇರುತ್ತದೆ ಎಂದು ತಿಳಿಸಿದೆ.
ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ವಾರ್ಡ್ ಸಂಖ್ಯೆ 188 ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಕಲ ಸಿದ್ಧತೆಯೊಂದಿಗೆ ವಾರ್ಡ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುತ್ತದೆ ಎಂದು ಹೇಳಿದೆ.
ಗಣೇಶ ಚತುರ್ಥಿ ದಿನಾವಾದ ದಿನಾಂಕ: 07-09-2024 ರಿಂದ 17-09-2024 ರವರೆಗೆ ಸಾರ್ವಜನಿಕರು ಗಣೇಶ ವಿಸರ್ಜನೆಯನ್ನು ಕೆರೆಯ ವಿಸರ್ಜನಾ ಕೊಳದಲ್ಲ್ಲಿ ಮಾಡಲಾಗುತ್ತಿದ್ದು, ಕಲ್ಯಾಣಿಯ ವಿಸರ್ಜನಾ ಕೊಳದ ಬಹುಪಾಲು ಭಾಗವು ತುಂಬಿದ್ದು, ನಂತರದ ಗಣೇಶ ಮೂರ್ತಿ ವಿಸರ್ಜನೆಗೆ ಸ್ಥಳಾವಕಾಶ ಇಲ್ಲದಿರುವುದಿಲ್ಲ. ಈ ಪೈಕಿ ವಿಸರ್ಜನಾ ಕೊಳದಲ್ಲಿ ತುಂಬಿರುವ ಮಣ್ಣು ಮತ್ತು ಇತರೆ ಗಣೇಶ ಮೂರ್ತಿಗಳ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಹೊಸದಾಗಿ ನೀರು ತುಂಬಿಸಿ ಸಾರ್ವಜನಿಕರಿಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದೆ.
ಆದ್ದರಿಂದ ದಿನಾಂಕ: 10-09-2024 ರಂದು ವಿಸರ್ಜನಾ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ಹಾಗೂ ಗಣೇಶ ಮೂರ್ತಿ ವಿಸರ್ಜನೆ ನಿರ್ಬಂಧಿಸಲಾಗಿದ್ದು, ಸದರಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಲು ಎಂದು ಪದ್ಮನಾಭನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಯಶವಂತಪುರದವರೆಗೆ ವಿಸ್ತರಣೆ
ಮಂಕಿಪಾಕ್ಸ್ ಬಗ್ಗೆ ಆಂತಕ ಬೇಡ, ಇರಲಿ ಈ ಎಚ್ಚರಿಕೆ: ಹೀಗಿವೆ ರೋಗದ ಲಕ್ಷಣಗಳು