ನವದೆಹಲಿ : ಗೋಧಿ, ಅಕ್ಕಿ ಮತ್ತು ಸಕ್ಕರೆ ರಫ್ತು ನಿಷೇಧಕ್ಕೆ ಸಂಬಂಧಿಸಿದ ಪರಿಸ್ಥಿತಿಯನ್ನ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಆಹಾರ ಪದಾರ್ಥಗಳ ರಫ್ತಿನ ಮೇಲಿನ ನಿಷೇಧವನ್ನ ಸದ್ಯಕ್ಕೆ ತೆಗೆದುಹಾಕಲಾಗುವುದಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಅಂತಹ ಯಾವುದೇ ಪ್ರಸ್ತಾಪವನ್ನ ಪರಿಗಣಿಸುತ್ತಿಲ್ಲ. ಇನ್ನು ದೇಶದಲ್ಲಿ ಗೋಧಿ ಮತ್ತು ಸಕ್ಕರೆಯ ಸಾಕಷ್ಟು ಲಭ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು. ಹೀಗಾಗಿ ಆಮದು ಮಾಡಿಕೊಳ್ಳುವ ಅಗತ್ಯವೂ ಇರುವುದಿಲ್ಲ ಎಂದರು.
ಭಾರತವು ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ: ಪಿಯೂಷ್ ಗೋಯಲ್
ಸುದ್ದಿಗಾರರೊಂದಿಗೆ ಮಾತನಾಡಿದ ಪಿಯೂಷ್ ಗೋಯಲ್, ರಫ್ತು ನಿಷೇಧವನ್ನು ತೆಗೆದುಹಾಕುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ ಹೇಳಿದರು. ದೇಶೀಯ ಬೇಡಿಕೆಯಿಂದಾಗಿ ಗೋಧಿ, ಅಕ್ಕಿ ಮತ್ತು ಸಕ್ಕರೆ ರಫ್ತನ್ನ ನಿಷೇಧಿಸಲಾಯಿತು. ನಮ್ಮಲ್ಲಿ ಅವುಗಳ ಸಾಕಷ್ಟು ಲಭ್ಯತೆ ಇದೆ ಎಂದು ಅವರು ಹೇಳಿದರು. ದೇಶೀಯ ಅಗತ್ಯಗಳನ್ನು ಪೂರೈಸಲು ನಾವು ಅವುಗಳನ್ನ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದರು.
ಹಣದುಬ್ಬರವನ್ನ ನಿಯಂತ್ರಿಸಲು ಕ್ರಮ.!
ಭಾರತವು 2022ರ ಮೇ ತಿಂಗಳಲ್ಲಿ ಗೋಧಿ ರಫ್ತನ್ನ ನಿಷೇಧಿಸಿತ್ತು. ಇದರ ನಂತರ, ಜುಲೈ 2023 ರಲ್ಲಿ, ಬಾಸ್ಮತಿ ಅಲ್ಲದ ಅಕ್ಕಿಯ ರಫ್ತನ್ನು ನಿಷೇಧಿಸಲಾಯಿತು. ಇದಲ್ಲದೆ, 2023 ರ ಅಕ್ಟೋಬರ್ನಲ್ಲಿ ಸಕ್ಕರೆ ರಫ್ತನ್ನು ಸಹ ನಿಷೇಧಿಸಲಾಯಿತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. ಇದಲ್ಲದೆ, ಭಾರತ್ ಅಟಾ ಮತ್ತು ಭಾರತ್ ದಾಲ್ ಸಹ ಅಗ್ಗದ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲಾಯಿತು.
“ಭಾರತದ ಜೊತೆ ಸಮಾಲೋಚನೆ ನಡೆಸದೇ ವಿಶ್ವದ ಯಾವುದೇ ಪ್ರಮುಖ ವಿಷಯ ನಿರ್ಧರಿಸೋದಿಲ್ಲ” : ಸಚಿವ ಜೈಶಂಕರ್
BIG NEWS: ‘ಆಪರೇಷನ್ ಸರ್ವಶಕ್ತಿ’: ಜಮ್ಮು-ಕಾಶ್ಮೀರದಲ್ಲಿ ‘ಭಾರತೀಯ ಸೇನೆ’ಯಿಂದ ‘ಭಯೋತ್ಪಾದನಾ ವಿರೋಧಿ ಅಭಿಯಾನ’
“ಭಾರತದ ಜೊತೆ ಸಮಾಲೋಚನೆ ನಡೆಸದೇ ವಿಶ್ವದ ಯಾವುದೇ ಪ್ರಮುಖ ವಿಷಯ ನಿರ್ಧರಿಸೋದಿಲ್ಲ” : ಸಚಿವ ಜೈಶಂಕರ್