ಮೇರಿಲ್ಯಾಂಡ್ನ ಚೆಸಾಪೀಕ್ ಕೊಲ್ಲಿಯ ಬಾಲ್ಟಿಮೋರ್ ಬಂದರಿನಲ್ಲಿ ಸರಕು ಹಡಗಿನಲ್ಲಿ ಸೋಮವಾರ ಸ್ಫೋಟ ಸಂಭವಿಸಿದೆ. ಘಟನೆಯ ವೀಡಿಯೊ ತುಣುಕುಗಳು ಆನ್ ಲೈನ್ ನಲ್ಲಿ ಕಾಣಿಸಿಕೊಂಡಿವೆ.
ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಅವಶೇಷಗಳ ಬಳಿ ಹಡಗು ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ ಎಂದು ಬಾಲ್ಟಿಮೋರ್ ನಗರದ ಅಗ್ನಿಶಾಮಕ ಅಧಿಕಾರಿಗಳು ಡಬ್ಲ್ಯುಬಿಎಎಲ್-ಟಿವಿಗೆ ತಿಳಿಸಿದ್ದಾರೆ. ಹಡಗಿನಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಇಲಾಖೆ ವಕ್ತಾರ ಜಾನ್ ಮಾರ್ಷ್ ಖಚಿತಪಡಿಸಿದ್ದಾರೆ.
ಬಾಲ್ಟಿಮೋರ್ ಮತ್ತು ಚೆಸಾಪೀಕ್ ಬೇ ಹಡಗು ವೀಕ್ಷಕರ ಗುಂಪಿನ ಸದಸ್ಯ ಮೈಕ್ ಸಿಂಗರ್ ಮಾತನಾಡಿ, ಸಂಜೆ 6:28 ಕ್ಕೆ ಸ್ಫೋಟ ಸಂಭವಿಸಿದೆ. ಅವರ ಪ್ರಕಾರ, ಹಡಗು ಕಲ್ಲಿದ್ದಲು ಹೊರೆಯನ್ನು ಹೊತ್ತೊಯ್ಯುತ್ತಿತ್ತು ಮತ್ತು ಆಗಷ್ಟೇ ಸಿಎಸ್ಎಕ್ಸ್ ಕಲ್ಲಿದ್ದಲು ಹಡಗುಕಟ್ಟೆಯಿಂದ ಹೊರಟಿತ್ತು.
ಸದ್ಯಕ್ಕೆ, ಅಧಿಕಾರಿಗಳು ಈ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
BREAKING: Cargo ship explodes in Baltimore Harbor in Chesapeake Bay, Maryland. pic.twitter.com/HuAErSIisR
— AZ Intel (@AZ_Intel_) August 18, 2025