ಬಳ್ಳಾರಿ : ನಗರದ ಜಿಲ್ಲಾ ಕೋರ್ಟ್ ಸಂಕೀರ್ಣ ವ್ಯಾಪ್ತಿಯಲ್ಲಿನ ವಿದ್ಯುತ್ ಲೈನಿನ ನಿರ್ವಹಣೆ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜು.13 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ 11.ಕೆ.ವಿ ಫೀಡರ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ರೆಡ್ಡಿ ಅವರು ತಿಳಿಸಿದ್ದಾರೆ.
ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು
ಎಫ್-6 ಫೀಡರ್ನ ತಾಳೂರು ರಸ್ತೆ, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್.ಪಿ.ಸರ್ಕಲ್, ಶಾಸ್ರೀ ನಗರ, ಬ್ಯಾಂಕ್ ಕಾಲೋನಿ, ಬಸವನಕುಂಟೆ, ಸಿರುಗುಪ್ಪ ರೋಡ್, ರಾಮ ನಗರ, ಹವಂಬಾವಿ ಮತ್ತು ಎಫ್-14 ಫೀಡರ್ ವ್ಯಾಪ್ತಿಯ ಜಿಲ್ಲಾ ಕೋರ್ಟ್ ಸಂಕೀರ್ಣ.
ಎಫ್-13 ಫೀಡರ್ ವ್ಯಾಪ್ತಿಯ ದೇವಿನಗರ, ಸಿರುಗುಪ್ಪಾ ರಸ್ತೆ, ಇಂದಿರ ನಗರ, ಸಂಜಯನಗರ, ಶಿವಲಿಂಗ ನಗರ, ಶಾಸ್ತ್ರೀನಗರ, ಬಸವನಕುಂಟೆ, ಎಂ.ಕೆ.ನಗರ, ಹವಂಬಾವಿ, ಅಶೋಕ ನಗರ, ಶ್ರೀನಿವಾಸ ನಗರ, ಕುರಿಹಟ್ಟಿ, ಎಸ್.ಪಿ. ಸರ್ಕಲ್, ವೀರಣ್ಣಗೌಡ ನಗರ, ರಾಜೇಶ್ವರಿ ನಗರ, ಕೆ.ಎಂ.ಎಫ್, ಭುವನಗಿರಿ ಕಾಲೋನಿ, ಎಸ್.ಎಲ್.ವಿ ಕಾಲೋನಿ, ಶಿವಗಿರಿ ಕಾಲೋನಿ, ರಾಮನಗರ, ಶ್ರೀನಿವಾಸ ನಗರ, ಸೂರ್ಯ ಕಾಲೋನಿ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ‘ಮೊಬೈಲ್ ಫೋನ್’ ಜವಾಬ್ದಾರಿಯುತವಾಗಿ ಬಳಸಿ: ಸಿಎಂ ಮಾಧ್ಯಮ ಸಲಹೆಗಾರ ‘ಕೆ.ವಿ.ಪ್ರಭಾಕರ್’ ಕಿವಿಮಾತು