ಬಳ್ಳಾರಿ : ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಜೂ.09 ರಂದು ಬೆಳಿಗ್ಗೆ 7.30 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು: ಎಫ್-1 ಯಶಸ್ವಿನಿ ಸ್ಪಾಂಜ್ ಕೈಗಾರಿಕೆ ಪ್ರದೇಶ ಮಾರ್ಗದ ಹಲಕುಂದಿ ಗ್ರಾಮ, ಮುಂಡರಿಗಿ ಕೈಗಾರಿಕಾ ಪ್ರದೇಶ, ಎಫ್-2 ಮಿಂಚೇರಿ ಐ.ಪಿ ಮಾರ್ಗದ ಮುಂಡರಗಿ, ಹಲಕುಂದಿ, ಮಿಂಚೇರಿ ಎಸ್.ಜೆ. ಕೋಟೆ ಕೃಷಿ ಪ್ರದೇಶಗಳು, ಎಫ್-4 ಸುಧಾಕರ ಪೈಪ್ ಮಾರ್ಗದ 2ನೇ ಹಂತ ಮುಂಡರಿಗಿ ಕೈಗಾರಿಕೆ ಪ್ರದೇಶ, ಎಫ್-5 ಅಪೇರಲ್ ಪಾರ್ಕ್ ಮಾರ್ಗದ 3ನೇ ಹಂತ ಮುಂಡರಿಗಿ ಕೈಗಾರಿಕೆ ಪ್ರದೇಶ, ಎಫ್-6 ಗುರುನಾಥ ರೈಸ್‍ಮಿಲ್ ಮಾರ್ಗದ 4ನೇ ಹಂತ ಮುಂಡರಿಗಿ ಕೈಗಾರಿಕೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shocking Video: ಹಾಡಹಗಲೇ ‘ಮದುವೆ’ಯಾಗಲು ನಿರಾಕರಿಸಿ ‘ಯುವತಿ’ಯನ್ನು ಕೊಚ್ಚಿ ಕೊಲೆಗೈದ ‘ಯುವಕ’
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ : ಸತತ 4 ಗಂಟೆಯ ಬಳಿಕ ಸ್ಥಳ ಮಹಜರು ನಡೆಸಿ ತೆರಳಿದ ‘SIT’