ಬಳ್ಳಾರಿ : ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ 220/110/ 11ಕೆ.ವಿ ಮಾರ್ಗದ ಎಫ್-37 ಮತ್ತು ಎಫ್-38 ಕೈಗಾರಿಕಾ ಫೀಡರ್‌ಗಳ ಹೆಚ್ಚುವರಿ ಭಾರವನ್ನು ಎಫ್-71 ಹರಗಿನದೋಣಿ ಎನ್‌ಜೆವೈ ಫೀಡರ್ ಮೇಲೆ ವರ್ಗಾಹಿಸುವ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜ.05 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲೀದೆ ಎಂದು ಜೆಸ್ಕಾಂನ ಗ್ರಾಮೀಣ ಉಪ ವಿಭಾಗದ ಕಾರ್ಯ ಮತ್ತು ಪಾಲನಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯವಾಗು ಪ್ರದೇಶಗಳು
ಎಫ್-32 ಐಪಿ ಸೆಟ್ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಅಲ್ಲೀಪುರ, ಆಲದಹಳ್ಳಿ, ಕೃಷಿ ಪ್ರದೇಶಗಳು. ಎಫ್-37 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಫೀಡರ್ ಮಾರ್ಗದ ಬೆಳಗಲ್ಲು ಗ್ರಾಮ, ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶಗಳು.
ಎಫ್-38 ಬೆಳಗಲ್ಲು ತಾಂಡ ಕೈಗಾರಿಕೆ ಪ್ರದೇಶ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ ಗ್ರಾಮಗಳು. ಎಫ್-71 ಹರಗಿನದೋಣಿ ಎನ್‌ಜೆವೈ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡ ಗ್ರಾಮ ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ: ಜ.5ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut