ಬಳ್ಳಾರಿ : ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳುತ್ತಿರುವುದರಿಂದ ಅ.23 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 06 ಗಂಟೆಯವರೆಗೆ ಸಿರುಗುಪ್ಪ ನಗರದ ಆದೋನಿ ರಸ್ತೆಗೆ ಹೊಂದಿಕೊಂಡಿರುವ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಎಫ್-12 ಆದೋನಿ ರಸ್ತೆ ಮತ್ತು ಎಫ್-13 ಅರಳಿಗನೂರು ಕೈಗಾರಿಕಾ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಲಿದೆ.
ತುರ್ತು ನಿರ್ವಹಣೆ ಕಾರ್ಯ ಮುಗಿಯುವವರೆಗೂ ಅಥವಾ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇರುತ್ತದೆ, ಹಾಗಾಗಿ ಗ್ರಾಹಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸಗಳನ್ನು ಮಾಡಬಾರದು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIG NEWS: ದೆಹಲಿಗೂ ಕಾಲಿಡುತ್ತಿದೆ ಕರುನಾಡ ಹೆಮ್ಮೆಯ ನಂದಿನಿ: ಅ.27, 28ರಂದು ‘ನಂದಿನಿ ಮಾರಾಟ ಮಳಿಗೆ’ ಉದ್ಘಾಟನೆ
ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?