ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಬಲಾಡಿ ಕಲ್‌ತ್ತೋಡ್ಮಿ ಮನೆಯವರ ಹಾಗೂ ಕುಟುಂಬಸ್ಥರ ಮೂಲನಾಗಬನದಲ್ಲಿ ನಡೆಯಲಿರುವ ಚತುಃ ಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಮುಹೂರ್ತ ದರ್ಶನ, ಚಪ್ಪರ ಮುಹೂರ್ತ ಕಾರ್ಯಕ್ರಮ ವೇದಮೂರ್ತಿ ಶಂಕರನಾರಾಯಣ ಉಡುಪ ಬಲಾಡಿ, ವೇದಮೂರ್ತಿ ಶ್ರೀನಿವಾಸ ಅಡಿಗ ಸೌಕೂರು ಹಾಗೂ ವೇದಮೂರ್ತಿ ವಿನಾಯಕ ಉಡುಪ ಬಲಾಡಿ ಅವರ ನೇತೃತ್ವದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿದೆ.
ನಾವಪಾತ್ರಿ ಸುದರ್ಶನ ಉಡುಪ ಮೂಡುಗೋಪಾಡಿ ಅವರು ಮುಹೂರ್ತ ದರ್ಶನವನ್ನು ನೆರವೇರಿಸಿ ಪ್ರಸಾದ ವಿತರಿಸಿದರು. ನಾಗಮಂಡಲೋತ್ಸವದ ವೈದ್ಯರಾದ ಸರ್ವೋತ್ತಮ ವೈದ್ಯ ಅಂಪಾರು, ಪಾಕತಜ್ಞರಾದ ಸುರೇಶ್ ಉಡುಪ ಶಾನ್ಕಟ್ ವಾದ್ಯವೃಂದದವರ ಪರವಾಗಿ ಸುದರ್ಶನ ದೇವಾಡಿಗ ಹಳ್ನಾಡು, ಮಂಡಲ ಚಪ್ಪರ, ಶ್ಯಾಮಿಯಾನ, ಅಡುಗೆ ಪಾತ್ರೆ, ಆಸನ ವ್ಯವಸ್ಥೆಯ ಪರವಾಗಿ ಹುಣ್ಸೆಮಕ್ಕಿ- ಜಪ್ತಿ ಮಣಿಕಂಠ ಶಾಮಿಯಾದ ಪರವಾಗಿ ಮಂಜುನಾಥ ಕಾಂಚನ್ ಹಾಗೂ ರಾಘವೇಂದ್ರ, ದೀಪಾಲಂಕಾರದ ನೆರವೇರಿಸುವ ಕಂದಾವರ ಉಳ್ಳೂರು ಕಾರ್ತಿಕೇಯ ಸೌಂಡ್ಸ್ & ಲೈಟಿಂಗ್ಸ್‌ನ ಕುಮಾರ ದೇವಾಡಿಗ, ಪುಷ್ಪಾಲಂಕಾರ ನೆರವೇರಿಸುವ ಬಸ್ರೂರು ಶ್ರೀ ಮೂಕಾಂಬಿಕಾ ಆರ್ಟ್ಸ್ & ಡೆಕೋರೇಟರ್ಸ್ ನ ಪ್ರದೀಪ್ ಜೋಗಿ ಅವರು ಪ್ರಸಾದ ಸ್ವೀಕರಿಸಿದ್ದಾರೆ.
ಬಲಾಡಿ ಕಲ್‌ತೋಡ್ಮಿ ಮನೆ ಚತುಃ ಪವಿತ್ರ ನಾಗಮಂಡಲೋತ್ಸವ ಸಮಿತಿಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಬಲಾಡಿ, ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಬಲಾಡಿ, ಮಾಜಿ ಶಾಸಕ ಸುಕುಮಾರ ಶೆಟ್ಟಿ, ನಾಗಮಂಡಲೋತ್ಸವ ಸಮಿತಿಯ ಮಾರ್ಗದರ್ಶಕರಾದ ಬಾಲ ಮಾಸ್ಟ್ರು ಕಾವ್ರಾಡಿ, ರತ್ನಾಕರ ಮಾಸ್ಟ್ರು, ಬಗ್ವಾಡಿ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ, ಬಾಲಕೃಷ್ಣ ಶೆಟ್ಟಿ ಅಂಪಾರು, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಸಂತೋಷ್ ಕುಮಾರ್ ಬಲಾಡಿ, ಸಂತೋಷ್ ಶೆಟ್ಟಿ ಹಡಾಳಿ, ಸತೀಶ್ ಶೆಟ್ಟಿ ಹಡಾಳಿ, ಕಿರಣ್ ಹೆಗ್ಡೆ ಅಂಪಾರು, ಅಶೋಕ್ ಅಂಪಾರು, ಸತೀಶ್ ಕುಂದರ್ ಮಣೂರು, ಸತೀಶ್ ಅಮೀನ್ ಸಾಲಿಗ್ರಾಮ, ಗೋಪಾಲ ಮಂಜರು ಹಿಲ್ಕೋಡು ಮುಂತಾದವರು ಉಪಸ್ಥಿತರಿದ್ದರು.
ಸೇವಾಕರ್ತರ ಮನೆಯವರಾದ ರಾಧಾ ಕಾಂಚನ್, ಬಸವ ಕಾಂಚನ್, ರಾಮ ಕುಂದರ್ ಮಣೂರು, ನರಸಿಂಹ ಮೆಂಡನ್, ರಮೇಶ್ ಕಾಂಚನ್, ವಿಜಯ ಮೆಂಡನ್, ಪ್ರಕಾಶ್ ಮೆಂಡನ್, ಮಂಜುನಾಥ್ ಕಾಂಚನ್, ಕೇಶವ ಕಾಂಚನ್, ನರೇಂದ್ರ ಮೆಂಡನ್, ಸಂದೀಪ್ ಕುಂದರ್ ಮಣೂರು, ಸತೀಶ್ ನೆಲ್ಲಿಕಟ್ಟೆ, ರಾಜೇಶ್ ಕಾಂಚನ್, ಮಂಜುನಾಥ ಗುಡ್ರಿ ನೇಂಪು ಹಾಗೂ ಬಲಾಡಿ ಕಲ್ ತೋಡ್ಮಿಮನೆ ಕುಟುಂವಸ್ಥರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.2024 ರ ಡಿಸೆಂಬರ್ 29 ರಂದು ಚತುಃ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಗಮಂಡಲೋತ್ಸವಕ್ಕೆ ಸಕಲ ಸಿದ್ದತೆಗಳು ನೆರವೇರುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕಲ್‌ತ್ತೋಡ್ಮಿ ಮನೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.
‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ದ ಪದಾಧಿಕಾರಿಗಳ ಚುನಾವಣೆ: ಅಂತಿಮ ಕಣದಲ್ಲಿ ‘ಐವರು ಅಭ್ಯರ್ಥಿ’ಗಳು
ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ