ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ಬಡವರಬಂಧು ಎಂದರೆ ಅದು ಎಸ್. ಬಂಗಾರಪ್ಪ ಮಾತ್ರ. ತಮ್ಮ ಅಧಿಕಾರ ಅವಧಿಯಲ್ಲಿ ಬಡವರ ಪರವಾಗಿ ಎಸ್.ಬಂಗಾರಪ್ಪ ಅವರು ಜಾರಿಗೆ ತಂದಷ್ಟು ಜನಪ್ರಿಯ ಯೋಜನೆ ಬೇರೆ ಯಾರೂ ತಂದಿರಲಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ತಾಯಿಮಗು ಆಸ್ಪತ್ರೆಯಲ್ಲಿ ಭಾನುವಾರ ಬ್ಲಾಕ್ ಕಾಂಗ್ರೇಸ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿಗಳ ವತಿಯಿಂದ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಒಳರೋಗಿಗಳಿಗೆ ಹಣ್ಣುಬ್ರೆಡ್ ವಿತರಣೆ ಮಾಡಿ ಮಾತನಾಡಿದಂತ ಅವರು, ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಆಶ್ರಯ, ಅಕ್ಷಯ, ಆರಾಧನಾ, ವಿಶ್ವದಂತಹ ಯೋಜನೆ ಅವಿಸ್ಮರಣೀಯವಾದದ್ದು, ಬಗರ್‌ಹುಕುಂ ಮೂಲಕ ಭೂಹೀನರಿಗೆ ಭೂಮಿಭಾಗ್ಯ ಕಲ್ಪಿಸಿದ ಬಂಗಾರಪ್ಪ ಅವರ ಶಿಷ್ಯ ನಾನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಗ್ರಾಮೀಣ ಕೃಪಾಂಕ ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಬಂಗಾರಪ್ಪ ಅವರ ಕೊಡುಗೆ ಅಪಾರವಾಗಿದೆ. ಇಂದಿಗೂ ಅನೇಕ ಜನರು ಅವರ ಫೋಟೋ ಇರಿಸಿ ಪೂಜಿಸುತ್ತಾರೆ ಎಂದು ಹೇಳಿದರು.
ಬಂಗಾರಪ್ಪ ಅವರು ಶಾಸಕರನ್ನು ತಯಾರಿಸುವ ಕಾರ್ಖಾನೆಯಾಗಿದ್ದರು. ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ನನ್ನಂತೆ ಅನೇಕ ಯುವ ಮುಖಂಡರು ಶಾಸಕರಾಗಿ ರಾಜಕೀಯ ರಂಗ ಪ್ರವೇಶ ಮಾಡಲು ಸಹಕಾರಿಯಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಅವರು ವಿಶೇಷ ಒತ್ತು ನೀಡಿದ್ದರು. ಶಾಲೆಗೆ ಹೋಗಿ ಬರುವ ಮಕ್ಕಳಿಗೆ 1 ರೂ. ಪ್ರೋತ್ಸಾಹಧನ ನೀಡಿ ಶಿಕ್ಷಣದ ಆಸಕ್ತಿ ಹೆಚ್ಚಿಸುವ ಕೆಲಸ ಬಂಗಾರಪ್ಪ ಅವರು ಮಾಡಿದ್ದರು. ನನ್ನ ರಾಜಕೀಯ ರಂಗದಲ್ಲಿ ಎಸ್.ಬಂಗಾರಪ್ಪ ಅವರು ಗುರುಗಳು ಮಾತ್ರವಲ್ಲದೇ, ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಸರಸ್ವತಿ ನಾಗರಾಜ್, ಎಲ್.ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ರವಿಕುಮಾರ್, ಲಲಿತಮ್ಮ, ಸುರೇಶಬಾಬು, ಉಷಾ ಎನ್., ಗಿರೀಶ್ ಕೋವಿ, ಮಹಾಬಲ ಕೌತಿ, ವಿಲ್ಸನ್, ರವೀಂದ್ರ, ಡಿ.ದಿನೇಶ್, ಅನ್ವರ್ ಭಾಷಾ, ನಾರಾಯಣ ಅರಮನೆಕೇರಿ, ಯಶವಂತ ಪಣಿ ಇನ್ನಿತರರು ಹಾಜರಿದ್ದರು.
ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಿಗುವ ವಿಶ್ವಾಸವಿದೆ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!






