ಮೈಸೂರು: ಸಾಗರ ತಾಲ್ಲೂಕಿನಲ್ಲಿ ನಡೆಯಲಿರುವ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿಭಾಯಿಸುವ ಉದ್ದೇಶದಿಂದ, ನೈರುತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವಿನಲ್ಲಿ ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಓಡಿಸಲಿದೆ.
ರೈಲು ಸಂಖ್ಯೆ 06585 / 06586 – ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ (04 ಟ್ರಿಪ್ ಗಳು)
ರೈಲು ಸಂಖ್ಯೆ 06585 – ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು 03.02.2026, 05.02.2026, 08.02.2026 ಮತ್ತು 10.02.2026 (ಮಂಗಳವಾರ, ಗುರುವಾರ, ಭಾನುವಾರ ಮತ್ತು ಮಂಗಳವಾರ) ದಿನಗಳಲ್ಲಿ ಸಂಚರಿಸಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 22:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.
ರೈಲು ಸಂಖ್ಯೆ 06586 ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ ರೈಲು 04.02.2026, 06.02.2026, 09.02.2026 ಮತ್ತು 11.02.2026( ಬುಧವಾರ, ಶುಕ್ರವಾರ, ಸೋಮವಾರ ಮತ್ತು ಬುಧವಾರ) ದಿನಗಳಲ್ಲಿ ಸಂಚರಿಸಲಿದೆ. ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 09:30ಕ್ಕೆ ಹೊರಟು, ಸಂಜೆ 17:15ಕ್ಕೆ ಯಶವಂತಪುರಕ್ಕೆ ತಲುಪಲಿದೆ.
ಕೋಚ್ ಸಂಯೋಜನೆ: 07 ಸ್ಲೀಪರ್ ಕ್ಲಾಸ್ ಕೋಚ್ ಗಳು, 06 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್ ಗಳು.
ರೈಲು ಸಂಖ್ಯೆ 06587 / 06588 ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ (01 ಟ್ರಿಪ್)
ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು 06.02.2026 (ಶುಕ್ರವಾರ) ರಂದು ಸಂಚರಿಸಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 22:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.
ರೈಲು ಸಂಖ್ಯೆ 06588 ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ ರೈಲು 07.02.2026 (ಶನಿವಾರ) ರಂದು ಸಂಚರಿಸಲಿದೆ. ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 09:30ಕ್ಕೆ ಹೊರಟು, ಸಂಜೆ 17:15ಕ್ಕೆ ಯಶವಂತಪುರಕ್ಕೆ ತಲುಪಲಿದೆ.
ಕೋಚ್ ಸಂಯೋಜನೆ: 01 ಎಸಿ ಟು ಟಯರ್ ಕೋಚ್, 02 ಎಸಿ ತ್ರಿ ಟಯರ್ ಕೋಚ್ ಗಳು, 10 ಸ್ಲೀಪರ್ ಕ್ಲಾಸ್ ಕೋಚ್ ಗಳು, 05 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್ ಗಳು
ಈ ರೈಲುಗಳು ಎರಡೂ ದಿಕ್ಕುಗಳಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ ಹಾಲ್ಟ್, ಆನಂದಪುರಂ, ಅಡ್ಡೇರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.








