ಬೆಂಗಳೂರು: ಇಂದು ಸಂಜೆ 7.30ಕ್ಕೆ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಸ್ವ ಇಚ್ಛೆಯಿಂದ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತ ಪತ್ರವನ್ನು ಸಲ್ಲಿಸಲಿದ್ದೇನೆ ಎಂಬುದಾಗಿ ಸಚಿವ ಬಿ.ನಾಗೇಂದ್ರ ಘೋಷಣೆ ಮಾಡಿದರು.
ಇಂದು ವಿಧಾನಸೌಧದ 3ನೇ ಮಹಡಿಯಲ್ಲಿರುವಂತ ಸಚಿವರ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಸಚಿವ ಬಿ.ನಾಗೇಂದ್ರ ಅವರು, ಈಗಾಗಲೇ ಕಳೆದ ಹತ್ತು ದಿನಗಳಿಂದ ಇವ್ತತು ನಿಗಮದ ಪ್ರಕರಣವನ್ನು ಅನೇಕ ರೀತಿಯಲ್ಲಿ ತೋರಿಸಲಾಗುತ್ತಿದೆ. ರಾಜ್ಯದ ಜನರಲ್ಲಿ ಆತಂಕದ ರೀತಿಯಲ್ಲಿ ತೋರಿಸಲಾಗುತ್ತಿದೆ. ವಿಪಕ್ಷಗಳು ಕಳೆದ 10 ದಿನಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಸರು ಕೆಡಿಸೋ ಕೆಲಸ ಮಾಡುತ್ತಿದ್ದಾವೆ ಎಂದರು.
ಇವತ್ತು ನಿಗದಮಲ್ಲಿ ಆಗಿರುವಂತ ಅವ್ಯವಹಾರ ಸಂಬಂಧ ಎಂಡಿ ಹಾಗೂ ಇತರರನ್ನು ಎಸ್ಐಟಿ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ಪಕ್ಷದ ಎಲ್ಲಾ ನಾಯಕರ ಜೊತೆಗೆ ಚರ್ಚಿಸಲಾಗಿ, ಯಾರೂ ನನ್ನ ರಾಜೀನಾಮೆಗೆ ಒತ್ತಡ ಹಾಕಿರಲಿಲ್ಲ. ಇವತ್ತು ನಾನು ಸ್ವಇಚ್ಛೆಯಿಂದ ರಾಜೀನಾಮೆಗೆ ಮುಂದಾಗಿದ್ದೇನೆ ಎಂದರು.
ಇಂದು ಸಂಜೆ 7.30ಕ್ಕೆ ಸಿಎಂ ಸಿದ್ಧರಾಮಯ್ಯ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ. ಅವರಿಗೂ ನಾನು ರಾಜೀನಾಮೆ ನೀಡುವುದಾಗಿ ತಿಳಿಸಿಲ್ಲ. ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಉತ್ತರಾಖಂಡ ಹಿಮಪಾತ: ನಾಳೆ ಬೆಳಿಗ್ಗೆ 9 ಮೃತದೇಹ ಬೆಂಗಳೂರಿಗೆ ಆಗಮನ, ಬದುಕಿಳಿದ 13 ಚಾರಣಿಗರೂ ವಾಪಾಸ್
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!