ಬೆಂಗಳೂರು: ರಾಜ್ಯ ಸರ್ಕಾರದಿಂದ ಎಲ್ಲಾ ಬಿ-ಖಾತಾಗಳಿಗೆ ಎ-ಖಾತಾ ಭಾಗ್ಯ ಕರುಣಿಸುವಂತ ನಿರ್ಧಾರವನ್ನು ಕೈಗೊಂಡಿದೆ. ಆ ಮೂಲಕ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿತ್ತು. ಹಾಗಾದ್ರೇ ಬಿ-ಖಾತಾ ಹೊಂದಿರುವ ಆಸ್ತಿಗಳಿಗೆ ಎ-ಖಾತಾ ಭಾಗ್ಯದ ಬಗ್ಗೆ ಜನರು ತಿಳಿಯಲೇಬೇಕಾದಂತ ವಿಚಾರಗಳೇನು ಅಂತ ಮುಂದೆ ಓದಿ.. ಜೊತೆಗೆ ವೀಡಿಯೋದಲ್ಲಿ ವಿವರವಾದ ಮಾಹಿತಿ ಇದೆ ನೋಡಿ.
ನಿಮ್ಮ ಪ್ರಾಪರ್ಟಿ ಇನ್ನೂ ಬಿ-ಖಾತಾದಲ್ಲಿದೆ ಎಂಬ ಆತಂಕ ಕಾಡುತ್ತಿದೆಯೇ? ಚಿಂತೆ ಬಿಡಿ, ಕಷ್ಟಪಟ್ಟು ದುಡಿದು ಗಳಿಸಿದ ಆಸ್ತಿಗೆ ಸಂಬಂಧಿಸಿದ ಆತಂಕಗಳನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸಿಕೊಳ್ಳಬಹುದಾಗಿದೆ.
ಬಿ-ಖಾತಾದಿಂದ ಎ-ಖಾತಾ ಪಡೆಯಲು ಇವುಗಳು ಕಡ್ಡಾಯ
ಬಿ-ಖಾತಾದಿಂದ ಎ-ಖಾತಾ ಪಡೆಯಲು ಸಾರ್ವಜನಿಕ ರಸ್ತೆ ಸಂಪರ್ಕ ಕಡ್ಡಾಯಲಾಗಿದೆ. ನಿವೇಶನ, ಮನೆಯಿರುವ ಜಾಗಕ್ಕೆ ಸಾರ್ವಜನಿಕ ರಸ್ತೆಯಿರಬೇಕು. ಒಂದು ವೇಳೆ ಓಡಾಡುವ ರಸ್ತೆ ಖಾಸಗಿಯಾಗಿದ್ದರೇ, ಅದನ್ನು ಮೊದಲು ಸಾರ್ವಜನಿಕ ರಸ್ತೆಯಂದು ಘೋಷಿಸಿಕೊಳ್ಳಬೇಕಾಗಿದೆ.
ಎ-ಖಾತಾ ಪಡೆಯಲು ಭೂಪರಿವರ್ತನೆ ಅತ್ಯಗತ್ಯವಾಗಿದೆ. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿಕೊಳ್ಳಬೇಕು ಅಥವಾ ನಿಗದಿತ ಶುಲ್ಕ ಪಾವತಿಸಿ ಅನುಮೋದನೆ ಪಡೆಯಬೇಕು.
ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಅಗತ್ಯವಾಗಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಬರುವ ಭೂಮಿಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಆದರೇ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿಗದಿತ ಶುಲ್ಕ ಪಾವತಿಸಿ ವಿನ್ಯಾಸ ಅನುಮೋದನೆ ಪಡೆಯಬೇಕಾಗಿದೆ.
ಅನುಮೋಜನೆ ಇಲ್ಲದ ಅಪಾರ್ಟ್ ಮೆಂಟ್ ಗಳಲ್ಲಿ ಫ್ಲಾಟ್ ಕೊಂಡವರಿಗೂ ಸಿಗಲಿದೆ ಎ-ಖಾತಾ. ಆದರೇ ರಸ್ತೆ ಸಂಪರ್ಕ ನಿಯಮ ಪಾಲಿಸಲೇಬೇಕಾಗಿದೆ.
ಸೆಪ್ಟೆಂಬರ್.10, 2024ಕ್ಕಿಂತ ಮೊದಲು ನಿವೇಶನ ಕೊಂಡವರಿಗೆ ಎ-ಖಾತಾ ಭಾಗ್ಯ ಲಭಿಸಲಿದೆ. ಹೌದು ಮೊದಲು ಏಕ ನಿವೇಶನ ವಿನ್ಯಾಸಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆದು, ನಂತ್ರ ಸ್ಥಳೀಯ ನಗರಸಭೆ ಅಥವಾ ಪುರಸಭೆಗೆ ಎ ಖಾತಾಕ್ಕಾಗಿ ಅರ್ಜಿ ಸಲ್ಲಿಸಬೇಕು.
ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976ರ ವಿವಿಧ ಕಲಂ ಅಡಿಯಲ್ಲಿ ಅಧಿಕೃತ ಎ-ಖಾತಾ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಆ ಎಲ್ಲಾ ಬಗ್ಗೆ ಈ ಕೆಳಗಿನ ಲಿಂಕ್ ನಲ್ಲಿ ಇರುವಂತ ವೀಡಿಯೋದಲ್ಲಿ ವಿವರವಾಗಿ ವಿವರಿಸಲಾಗಿದೆ. ತಪ್ಪದೇ ನೋಡಿ, ಮಾಹಿತಿ ತಿಳಿದು ಬಿ-ಖಾತಾ ಆಸ್ತಿ ಮಾಲೀಕರು, ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸಿ.
ನಿಮ್ಮ ಪ್ರಾಪರ್ಟಿ ಇನ್ನೂ ಬಿ-ಖಾತಾದಲ್ಲಿದೆ ಎಂಬ ಆತಂಕ ಕಾಡುತ್ತಿದೆಯೇ? ಚಿಂತೆ ಬಿಡಿ, ಕಷ್ಟಪಟ್ಟು ದುಡಿದು ಗಳಿಸಿದ ಆಸ್ತಿಗೆ ಸಂಬಂಧಿಸಿದ ಆತಂಕಗಳನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಸೂಕ್ತ ದಾಖಲೆಗಳನ್ನು ಹೊಂದಿದ್ದರೆ ಬಿ-ಖಾತಾವನ್ನು ಎ-ಖಾತಾಗೆ ಪರಿವರ್ತಿಸಿಕೊಳ್ಳಬಹುದಾಗಿದೆ.
ಹೇಗೆ? ಇದಕ್ಕಿರುವ… pic.twitter.com/UDVzFuK9vg
— DIPR Karnataka (@KarnatakaVarthe) January 31, 2026
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ- ಸಚಿವ ಚಲುವರಾಯಸ್ವಾಮಿ
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಈಗ ಮೆಟ್ರೋ ರೈಲಿನಲ್ಲಿ ಈ ಎಲ್ಲವೂ ನಿಷೇಧ, ತಪ್ಪಿದ್ರೆ ಕೇಸ್, ದಂಡ ಫಿಕ್ಸ್








