ಬೆಂಗಳೂರು: ಪರಿಸರ ಮತ್ತು ಹವಾಮಾನ ವೈಪರೀತ್ಯದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶಾಲೆಯಲ್ಲೂ ʼಜಾಗೃತಿ ಕ್ಲಬ್ʼಗಳನ್ನು ಕಡ್ಡಾಯವಾಗಿ ಆರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಜಾಗೃತಿ ಕ್ಲಬ್ಗಳು ಪರಿಸರ ಮತ್ತು ನಿಸರ್ಗವನ್ನು ಉಳಿಸುವ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಪರಿಸರ ಮತ್ತು ಹವಾಮಾನ ವೈಪರೀತ್ಯದಂತಹ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಶಾಲೆಯಲ್ಲೂ ʼಜಾಗೃತಿ ಕ್ಲಬ್ʼಗಳನ್ನು ಕಡ್ಡಾಯವಾಗಿ ಆರಂಭಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಜಾಗೃತಿ ಕ್ಲಬ್ಗಳು ಪರಿಸರ ಮತ್ತು ನಿಸರ್ಗವನ್ನು ಉಳಿಸುವ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದು ಉಪ ಮುಖ್ಯಮಂತ್ರಿಗಳಾದ… pic.twitter.com/z6Be4ett0w
— DIPR Karnataka (@KarnatakaVarthe) June 18, 2025
“ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದರೆ ಬೆಂಗಳೂರು ನಗರದಾದ್ಯಂತ ಇರುವ ಅರಣ್ಯ ಇಲಾಖೆ ಜಾಗಗಳು ಉಳಿದಂತಾಗುತ್ತದೆ. ಸಾರ್ವಜನಿಕರಿಗೂ ಅನುಕೂಲವಾಗುತ್ತದೆ” ಎಂದು ಹೇಳಿದರು.
“ಭೂಮಿ ನಮಗೆ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು ಎನ್ನುವುದನ್ನು ಯಾರೊಬ್ಬರು ಮರೆಯಬಾರದು. ಪ್ರಕೃತಿ ಉಚಿತವಾಗಿ ಊಟ ಕೊಡುತ್ತಿದೆ ಎಂದು ಅದನ್ನು ಕಂಠಪೂರ್ತಿ ತಿನ್ನಬಾರದು. ಭವಿಷ್ಯಕ್ಕೂ ಉಳಿಸಬೇಕು” ಎಂದು ತಿಳಿಸಿದರು.
“ಸುತ್ತಲಿನ ಪ್ರಕೃತಿ, ಮಣ್ಣು, ನೀರನ್ನು ಉಳಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಹಸಿರು ಮತ್ತು ಉಸಿರನ್ನು ರಕ್ಷಿಸುವ ಗ್ಯಾರಂಟಿಯನ್ನು ನಮ್ಮ ಸರ್ಕಾರ ನೀಡಲಿದೆ. ಪ್ರಕೃತಿಯಿಂದ ನಾವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿಗೆ ಅದಕ್ಕೆ ವಾಪಸ್ ಕೊಡಬೇಕು. ಈ ಭೂಮಿ ಉಳಿದರೆ ಮಾತ್ರ ನಾವು ಉಳಿಯುತ್ತೇವೆ” ಎಂದರು.
“ನಾವುಗಳು ನಮ್ಮ ಜೀವಿತಾವಧಿಯಲ್ಲಿ ಒಂದೊಂದು ಮರವನ್ನು ಬೆಳೆಸುವಂತಹ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ನಗರದ ಶಾಲೆಗಳ ವಿದ್ಯಾರ್ಥಿಗಳು ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ಯೋಜನೆ ರೂಪಿಸಿದೆವು. ಕಳೆದ ವರ್ಷ ಸುಮಾರು 50 ಸಾವಿರ ಸಸಿಗಳನ್ನು ನೆಡಲಾಗಿದೆ. ಇವುಗಳನ್ನು ವಿದ್ಯಾರ್ಥಿಗಳೇ ಪೋಷಿಸುತ್ತಿದ್ದಾರೆ” ಎಂದು ಹೇಳಿದರು.
“ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ʼಕ್ಲೈಮೆಟ್ ಆಕ್ಷನ್ ಕ್ಲಬ್ʼ ರಚನೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ. ಬೆಂಗಳೂರಲ್ಲಿ 1.20 ಕೋಟಿಗೆ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ನಾವು ಆಲೋಚನೆ ಮಾಡಬೇಕಿದೆ” ಎಂದು ಹೇಳಿದರು.
“ನನ್ನ ಹುಟ್ಟುಹಬ್ಬದ ದಿನ ಕಬಿನಿ ಹಿನ್ನೀರಿನ ಅರಣ್ಯಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಸಂಪತ್ ಭರಿತವಾದ ಪ್ರಾಣಿ ಸಂಕುಲವನ್ನು ನಾನು ನೋಡಿದೆ. ಆಗ ವಿದೇಶದಲ್ಲಿರುವಂತೆ ನನಗೆ ಭಾಸವಾಯಿತು” ಎಂದು ಹೇಳಿದರು.
UGCET-2025ರ CET ಶ್ರೇಣಿಯ ಕುರಿತಂತೆ ಕೆಇಎಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ