Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣ : 11 ಆರೋಪಿಗಳು ಅರೆಸ್ಟ್!

26/02/2026 12:41 PM

ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ?

26/02/2026 12:33 PM

ವಿಶ್ವದ ಅತಿ ಹೆಚ್ಚು ಟ್ರ್ಯಾಕ್ ಮಾಡಲ್ಪಟ್ಟ ವಿಮಾನವಾಗಿ ಮೋದಿ ಪಯಣದ ‘ಏರ್ ಇಂಡಿಯಾ ಒನ್’! ಯಾಕಿಷ್ಟು ಕುತೂಹಲ?

26/02/2026 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲಾ ‘RTO ವ್ಯಾಪ್ತಿ’ಯಲ್ಲಿ ‘ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ’ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ
KARNATAKA

ರಾಜ್ಯದ ಎಲ್ಲಾ ‘RTO ವ್ಯಾಪ್ತಿ’ಯಲ್ಲಿ ‘ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ’ ನಿರ್ಮಾಣ: ಸಚಿವ ರಾಮಲಿಂಗಾರೆಡ್ಡಿ

By kannadanewsnow0929/08/2024 9:51 AM

ಬೆಂಗಳೂರು: ರಾಜ್ಯದ ಎಲ್ಲಾ ಪ್ರಾದೇಶಿಕ RTO ಕಛೇರಿಯ ವ್ಯಾಪ್ತಿಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬುಧವಾರದಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆಯಿತು.

ಹೀಗಿದೆ ಸಭೆಯಲ್ಲಿ ಪ್ರಮುಖ ಹೈಲೈಟ್ಸ್

ವಾರ್ಷಿಕ ರಾಜಸ್ವ ಗುರಿ- ರೂ.13000‌ ಕೋಟಿ ಜುಲೈ 2024ರ ಅಂತ್ಯಕ್ಕೆ ಸಂಗ್ರಹಿಸಬೇಕಾದ ರಾಜಸ್ವ- ರೂ 4325 ಕೋಟಿ

ಜುಲೈ 2024ರ ಅಂತ್ಯಕ್ಕೆ ಸಂಗ್ರಹಿಸಿರುವ ರಾಜಸ್ವ- 3534
ಶೇಕಡಾವಾರು-82%

* ರಾಜಸ್ವ ಸಂಗ್ರಹಣೆಯ ಗುರಿಯನ್ನು ಶೇಕಡ 100 ರಷ್ಟು ಸಾಧಿಸಲು ಪ್ರವರ್ತನ ಚಟುವಟಿಕೆಗಳೂ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಂಡು ಕಾರ್ಯನಿರ್ವಹಿಸಲು ಸೂಚಿಸಲಾಯಿತು.

* ಪ್ರಸ್ತುತ ಇಲಾಖೆಗೆ ಹೊಸದಾಗಿ 85 ಮೋಟಾರು ವಾಹನ ನಿರೀಕ್ಷಕರು ನೇಮಕಗೊಂಡಿದ್ದು, ಇವರನ್ನು ಬಳಸಿಕೊಂಡು ಪ್ರವರ್ತನ ಚಟುವಟಿಕೆಗಳನ್ನು ಹೆಚ್ಚಿಸುವುದು.

* ಇಲಾಖೆಗೆ ಪ್ರವರ್ತನ ಕಾರ್ಯಗಳಿಗೆ ರಸ್ತೆ ಸುರಕ್ಷತಾ ನಿಧಿಯಿಂದ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದ್ದು, ಅವುಗಳನ್ನು ಉಪಯೋಗಿಸಿಕೊಂಡು ರಾಜಸ್ವ ಸಂಗ್ರಹಣೆಯ ಗುರಿಯನ್ನು ತಲುಪುವುದು.

* ಬಾಕಿ ಇರುವ ತೆರಿಗೆ ಮೊತ್ತವನ್ನು ವಸೂಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆಸಕ್ತಿವಹಿಸಿ ತೆರಿಗೆ ಬಾಕಿದಾರರ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ (Charge Sheet) ಸಲ್ಲಿಸಲು ಅಗತ್ಯ ಕ್ರಮವಹಿಸುವುದು.

* ಬಾಕಿ ಇರುವ 6,77,348 ಡಿ.ಎಸ್.ಎ. ಕೇಸ್‌ ಗಳನ್ನು ವಿಲೇಗೊಳಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದು.

Automated Driving Test Tracks ಗಳ ನಿರ್ಮಾಣ

* ಎಲ್ಲಾ ಕಛೇರಿಯ ವ್ಯಾಪ್ತಿಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತಿದೆ.

* ರೂ.80.00 ಕೋಟಿಗಳ ವೆಚ್ಚದಲ್ಲಿ ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ, ದಾವಣಗೆರೆಗಳಲ್ಲಿ ಡ್ರೈವಿಂಗ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗುತ್ತಿದೆ.

* ರೂ.72.95 ಕೋಟಿಗಳ ವೆಚ್ಚದಲ್ಲಿ ತುಮಕೂರು, ಯಲಹಂಕ, ಶಿರಸಿ, ಸಕಲೇಶಪುರ, ಕೆ.ಜಿ.ಎಫ್.

* ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಭಾಲ್ಕಿ ಮತ್ತು ಬೈಲಹೊಂಗಲಗಳಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

* 2024-25ನೇ ಸಾಲಿನಲ್ಲಿ 06 ಸ್ಥಳಗಳಲ್ಲಿ ರೂ.36.00 ಕೋಟಿಗಳ ವೆಚ್ಚದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ.

Automated Testing Stations ಗಳ ಸ್ಥಾಪನೆ

* ಅರ್ಹತಾ ಪತ್ರ ನವೀಕರಣಕ್ಕಾಗಿ (Fitness Renewal) ಬರುವ ವಾಹನಗಳನ್ನು ಕಡ್ಡಾಯವಾಗಿ ಅಕ್ಟೋಬರ್ 2024ರಿಂದ ATSಗಳ ಮೂಲಕ ತಪಾಸಣೆಗೊಳಪಡಿಸಬೇಕಾಗಿರುತ್ತದೆ.

* ಈ ಹಿನ್ನೆಲೆಯಲ್ಲಿ ಜಮೀನು ಲಭ್ಯವಿರುವ 13 ಸ್ಥಳಗಳಲ್ಲಿ (ದೇವನಹಳ್ಳಿ, ತುಮಕೂರು, ಕೋಲಾರ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಗದಗ, ರಾಣೆಬೆನ್ನೂರು, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಬೀದ‌ರ್, ಮತ್ತು ಯಾದಗಿರಿ) DBFOT ಮಾದರಿಯಲ್ಲಿ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

* 19 ಸ್ಥಳಗಳಲ್ಲಿ (ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಕೇಂದ್ರ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರೆ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆ) BOO ಮಾದರಿಯಲ್ಲಿ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

Vehicle Location Tracking System ಅನ್ನು ಜಾರಿಗೊಳಿಸುವುದು

* ಸೆಪ್ಟಂಬರ್ 10ರ ನಂತರ ಎಲ್ಲಾ ಖಾಸಗಿ ಸೇವಾ (PSV) ವಾಹನಗಳಿಗೆ VLTD ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸತಕ್ಕದ್ದು, ಹಾಗೂ ಈ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸುವುದು.

* ಇ-ಆಡಳಿತ ವಿಭಾಗದಲ್ಲಿನ ಬಾಕಿಯಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ, ಶೀಘ್ರವಾಗಿ ವಿಲೇಗೊಳಿಸಲು ಕ್ರಮವಹಿಸಲು ಸೂಚಿಸಲಾಯಿತು.

‘ಕ್ಯಾನ್ಸರ್’ ಒಂದು ರೋಗವಲ್ಲ, ಆಯುರ್ವೇದ ಏನು ಹೇಳುತ್ತದೆ? ಈ ಕಾಯಿಲೆಗೆ ‘ಚಿಕಿತ್ಸೆ’ ಏನು?! | Ayurveda In Cancer

50 ಸಾವಿರ ಸಂಬಳದಲ್ಲಿ 1 ಲಕ್ಷ ರೂ. `ಪಿಂಚಣಿ’ : `NPS’ಗಿಂತ `UPS’ ಹೇಗೆ ಉತ್ತಮ? ಇಲ್ಲಿದೆ ಡಿಟೈಲ್ಸ್

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣ : 11 ಆರೋಪಿಗಳು ಅರೆಸ್ಟ್!

26/02/2026 12:41 PM1 Min Read

ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ?

26/02/2026 12:33 PM2 Mins Read

SHOCKING : ಕೋತಿ ಅಡ್ಡ ಬಂತೆಂದು ಸಡನ್ ಬ್ರೇಕ್ ಹಾಕಿದಕ್ಕೆ ಆಟೋ ಪಲ್ಟಿ : ಕಾರು ಡಿಕ್ಕಿಯಾಗಿ ಚಾಲಕ ಸಾವು!

26/02/2026 12:29 PM1 Min Read
Recent News

BREAKING : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣ : 11 ಆರೋಪಿಗಳು ಅರೆಸ್ಟ್!

26/02/2026 12:41 PM

ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ?

26/02/2026 12:33 PM

ವಿಶ್ವದ ಅತಿ ಹೆಚ್ಚು ಟ್ರ್ಯಾಕ್ ಮಾಡಲ್ಪಟ್ಟ ವಿಮಾನವಾಗಿ ಮೋದಿ ಪಯಣದ ‘ಏರ್ ಇಂಡಿಯಾ ಒನ್’! ಯಾಕಿಷ್ಟು ಕುತೂಹಲ?

26/02/2026 12:31 PM

SHOCKING : ಕೋತಿ ಅಡ್ಡ ಬಂತೆಂದು ಸಡನ್ ಬ್ರೇಕ್ ಹಾಕಿದಕ್ಕೆ ಆಟೋ ಪಲ್ಟಿ : ಕಾರು ಡಿಕ್ಕಿಯಾಗಿ ಚಾಲಕ ಸಾವು!

26/02/2026 12:29 PM
State News
KARNATAKA

BREAKING : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣ : 11 ಆರೋಪಿಗಳು ಅರೆಸ್ಟ್!

By kannadanewsnow0526/02/2026 12:41 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.…

ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ! ಅರ್ಜಿ ಸಲ್ಲಿಕೆ ಹೇಗೆ?

26/02/2026 12:33 PM

SHOCKING : ಕೋತಿ ಅಡ್ಡ ಬಂತೆಂದು ಸಡನ್ ಬ್ರೇಕ್ ಹಾಕಿದಕ್ಕೆ ಆಟೋ ಪಲ್ಟಿ : ಕಾರು ಡಿಕ್ಕಿಯಾಗಿ ಚಾಲಕ ಸಾವು!

26/02/2026 12:29 PM

ಕಾಂಗ್ರೆಸ್ ಪಕ್ಷದ 140 ಶಾಸಕರು ಕೂಡ ‘ಸಿಎಂ’ ಆಗಲು ಅರ್ಹರೆ : MLC ಬಿಕೆ ಹರಿಪ್ರಸಾದ್ ಹೇಳಿಕೆ

26/02/2026 12:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.