ಬೆಂಗಳೂರು: ನಗರದಲ್ಲಿ ದಿಢೀರ್ ಸುರಿಯುತ್ತಿರುವಂತ ಗಾಳಿ ಮಳೆಯಿಂದಾಗಿ ಆಟೋ ಮೇಲೆ ಮರಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.
ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಬಿರುಗಾಳಿ ಕೂಡ ಬೀಸುತ್ತಿದೆ. ಬೆಂಗಳೂರಿನ ಕತ್ರಿಗುಪ್ಪೆಯ ಎಂ.ಎಂ ಬಾರ್ ಬಳಿಯಲ್ಲಿ ಭಾರೀ ಮಳೆಯೊಂದಿಗೆ ಮರವೊಂದು ಆಟೋ ಮೇಲೆ ಉರುಳಿ ಬಿದ್ದಿದೆ. ಈ ಪರಿಣಾಮ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ಕೆ ಆರ್ ಮಾರ್ಕೆಟ್, ಕತ್ರಿಗುಪ್ಪೆ, ಜಯನಗರ ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡ ಪರಿಣಾಮ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
BREAKING: ‘ಪಾಕಿಸ್ತಾನಿ FM ರೇಡಿಯೋ’ ಕೇಂದ್ರಗಳಲ್ಲಿ ‘ಭಾರತೀಯ ಹಾಡು’ ಪ್ರಸಾರ ಸ್ಥಗಿತಕ್ಕೆ ‘ಪಾಕ್ ಆದೇಶ’