Author: kannadanewsnow89

ನವದೆಹಲಿ: 2026ನೇ ಸಾಲಿನ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಶ್ರೇಯಾಂಕ ಪಟ್ಟಿಯನ್ನು ಸ್ಕೈಟ್ರಾಕ್ಸ್ (Skytrax) ಬಿಡುಗಡೆ ಮಾಡಿದೆ. ಈ ಬಾರಿಯೂ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು (Singapore Changi Airport) ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಭಾರತದ ಪಾಲಿಗೆ ಹೆಮ್ಮೆಯ ವಿಷಯವೆಂದರೆ, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (IGI) ಗಣನೀಯ ಪ್ರಗತಿ ಸಾಧಿಸಿದೆ. ತನ್ನ ಅತ್ಯಾಧುನಿಕ ಸೌಲಭ್ಯಗಳು, ಒಳಾಂಗಣ ಉದ್ಯಾನವನ ಮತ್ತು ಅತ್ಯುತ್ತಮ ಪ್ರಯಾಣಿಕ ಸೇವೆಯಿಂದಾಗಿ ಚಾಂಗಿ ವಿಮಾನ ನಿಲ್ದಾಣವು ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೆಹಲಿ ವಿಮಾನ ನಿಲ್ದಾಣವು ಜಾಗತಿಕ ಪಟ್ಟಿಯಲ್ಲಿ 4 ಸ್ಥಾನಗಳ ಏರಿಕೆ ಕಂಡಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ವೇಗದ ಕಸ್ಟಮ್ಸ್ ಪ್ರಕ್ರಿಯೆಗಳು ಇದಕ್ಕೆ ಕಾರಣವಾಗಿವೆ. ಕತಾರ್‌ನ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೆಡಾ ವಿಮಾನ ನಿಲ್ದಾಣಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಹಂಚಿಕೊಂಡಿವೆ.

Read More

ಶ್ರೀನಗರ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ತೀವ್ರಗೊಂಡಿರುವ ಬೆನ್ನಲ್ಲೇ, ಕಾಶ್ಮೀರದ ಮುಸ್ಲಿಂ ಸಮುದಾಯವು ಇರಾನ್ ಪರವಾಗಿ ಅಭೂತಪೂರ್ವ ಬೆಂಬಲ ಸೂಚಿಸಿದೆ. ಇರಾನ್‌ನಲ್ಲಿ ಸಂಕಷ್ಟಕ್ಕೀಡಾಗಿರುವ ಜನರಿಗಾಗಿ ಕಾಶ್ಮೀರದಾದ್ಯಂತ ಭಾರಿ ಪ್ರಮಾಣದ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಜನರು ತಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಶ್ರೀನಗರ, ಬುದ್ಗಾಮ್ ಮತ್ತು ಬಾರಾಮುಲ್ಲಾ ಭಾಗದ ಮಹಿಳೆಯರು ತಮ್ಮ ಚಿನ್ನದ ಬಳೆಗಳು, ಕಿವಿಯೋಲೆಗಳು ಮತ್ತು ಉಂಗುರಗಳನ್ನು ಸ್ವಯಂಪ್ರೇರಿತರಾಗಿ ದಾನ ಮಾಡಿದ್ದಾರೆ. ಅನೇಕರು ತಮ್ಮ ಮಗಳ ಮದುವೆಗೆಂದು ಕೂಡಿಟ್ಟಿದ್ದ ಒಡವೆಗಳನ್ನೂ ನೀಡಿದ್ದಾರೆ.  ಕೇವಲ ಹಣವಷ್ಟೇ ಅಲ್ಲದೆ, ಕಾಶ್ಮೀರಿಗಳು ತಮ್ಮ ಸಾಂಪ್ರದಾಯಿಕ ತಾಮ್ರದ ಪಾತ್ರೆಗಳು (Copper Utensils), ಕುರಿ-ಮೇಕೆಗಳಂತಹ ಜಾನುವಾರುಗಳು, ಬೈಕ್ ಮತ್ತು ಕಾರುಗಳನ್ನು ಸಹ ಯುದ್ಧದ ನೆರವಿಗಾಗಿ ನೀಡುತ್ತಿರುವುದು ವಿಶೇಷವಾಗಿದೆ.  ಸಣ್ಣ ಮಕ್ಕಳು ತಾವು ವರ್ಷಗಳಿಂದ ಕೂಡಿಟ್ಟಿದ್ದ ‘ಪಿಗ್ಗಿ ಬ್ಯಾಂಕ್’ (Piggy Banks) ಅಥವಾ ಮಣ್ಣಿನ ಹುಂಡಿಗಳನ್ನು ತಂದು ದಾನದ ಕೇಂದ್ರಗಳಿಗೆ ಹಸ್ತಾಂತರಿಸುತ್ತಿದ್ದಾರೆ.

Read More

ನವದೆಹಲಿ: ಮೊಬೈಲ್ ರೀಚಾರ್ಜ್ ವಿಚಾರದಲ್ಲಿ ಗ್ರಾಹಕರಿಗೆ ಆಗುತ್ತಿರುವ ‘ಅನ್ಯಾಯ’ವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಈಗ ಗಂಭೀರ ಕ್ರಮಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ತಿಂಗಳ ಪ್ಲಾನ್ ಎಂದು ಕರೆಸಿಕೊಳ್ಳುವ ರೀಚಾರ್ಜ್‌ಗಳು ಕೇವಲ 28 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ. ಇದರಿಂದಾಗಿ ಗ್ರಾಹಕರು ವರ್ಷಕ್ಕೆ 12ರ ಬದಲಿಗೆ 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆಯನ್ನು ಹೋಗಲಾಡಿಸಲು 30 ದಿನಗಳ ಪೂರ್ಣ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ. ಒಂದು ತಿಂಗಳಿಗೆ 30 ಅಥವಾ 31 ದಿನಗಳಿದ್ದರೂ, ಟೆಲಿಕಾಂ ಕಂಪನಿಗಳು 28 ದಿನಗಳ ಪ್ಯಾಕ್ ನೀಡುತ್ತವೆ. ಇದರಿಂದ ಪ್ರತಿ ತಿಂಗಳು 2 ರಿಂದ 3 ದಿನಗಳು ಉಳಿಯುತ್ತವೆ. ಈ ಉಳಿದ ದಿನಗಳೆಲ್ಲಾ ಸೇರಿ ವರ್ಷದ ಕೊನೆಯಲ್ಲಿ ಗ್ರಾಹಕರು ಒಂದು ಹೆಚ್ಚುವರಿ ರೀಚಾರ್ಜ್ (13ನೇ ರೀಚಾರ್ಜ್) ಮಾಡಬೇಕಾಗುತ್ತದೆ. ಈ ’28 ದಿನಗಳ ತಂತ್ರ’ದಿಂದಾಗಿ ಟೆಲಿಕಾಂ ಕಂಪನಿಗಳು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹೆಚ್ಚುವರಿ ಆದಾಯ ಗಳಿಸುತ್ತಿವೆ ಎಂದು ರಾಜ್ಯಸಭೆಯಲ್ಲಿ ಸಂಸದ ರಾಘವ್ ಚಡ್ಡಾ ಇತ್ತೀಚೆಗೆ ಧ್ವನಿ…

Read More

ಲಂಡನ್/ನ್ಯೂಯಾರ್ಕ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯಿಂದಾಗಿ ಗಗನಕ್ಕೇರಿದ್ದ ಕಚ್ಚಾ ತೈಲದ ಬೆಲೆಗಳು ಬುಧವಾರದ ವಹಿವಾಟಿನಲ್ಲಿ ಶೇ. 5ಕ್ಕೂ ಹೆಚ್ಚು ಕುಸಿತ ಕಂಡಿವೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿಢೀರ್ ಇಳಿಕೆಯಾಗಿದೆ. ಅಂತರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕ್ರೂಡ್ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 5.2% ರಷ್ಟು ಕುಸಿದು, ಹೂಡಿಕೆದಾರರಲ್ಲಿ ನೆಮ್ಮದಿ ಮೂಡಿಸಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆಯೂ ಸಹ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸ್ಥಿರತೆಯ ಮುನ್ಸೂಚನೆ ನೀಡಿದೆ. ತೈಲ ಬೆಲೆಯಲ್ಲಿನ ಈ ಕುಸಿತವು ಭಾರತದಂತಹ ತೈಲ ಆಮದು ಅವಲಂಬಿತ ದೇಶಕ್ಕೆ ದೊಡ್ಡ ವರದಾನವಾಗಲಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಸದ್ಯಕ್ಕೆ ತಪ್ಪಿದಂತಾಗಿದೆ.

Read More

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿಟ್ಟಿರುವ ’15 ಅಂಶಗಳ ಶಾಂತಿ ಯೋಜನೆ’ಗೆ ಇರಾನ್ ಈಗ ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮ ಏರ್ಪಡಬೇಕಾದರೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳನ್ನು ಮುಚ್ಚಬೇಕು ಎಂಬುದು ಇರಾನ್‌ನ ಪ್ರಮುಖ ಬೇಡಿಕೆಯಾಗಿದೆ. ಪರ್ಷಿಯನ್ ಗಲ್ಫ್ ಮತ್ತು ಸುತ್ತಮುತ್ತಲಿನ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. “ವಿದೇಶಿ ಪಡೆಗಳ ಉಪಸ್ಥಿತಿಯೇ ಈ ಭಾಗದ ಅಸ್ಥಿರತೆಗೆ ಕಾರಣ” ಎಂದು ಇರಾನ್ ವಾದಿಸಿದೆ. ಅಮೆರಿಕವು ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧಗಳನ್ನು ತಕ್ಷಣವೇ ಹಿಂಪಡೆಯಬೇಕು. ವಿಶೇಷವಾಗಿ ತೈಲ ರಫ್ತು ಮತ್ತು ಬ್ಯಾಂಕಿಂಗ್ ವ್ಯವಹಾರಗಳಿಗೆ ಮುಕ್ತ ಅವಕಾಶ ನೀಡಬೇಕು. ಇತ್ತೀಚಿನ ವೈಮಾನಿಕ ದಾಳಿಗಳಿಂದ ಇರಾನ್‌ನ ಮೂಲಸೌಕರ್ಯ ಮತ್ತು ಸೇನಾ ನೆಲೆಗಳಿಗೆ ಉಂಟಾಗಿರುವ ಹಾನಿಗೆ ಅಮೆರಿಕವು ಭಾರಿ ಮೊತ್ತದ ನಷ್ಟ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನೂ ಇರಾನ್ ಇಟ್ಟಿದೆ ಎನ್ನಲಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಯುರೇನಿಯಂ ಪುಷ್ಟೀಕರಣ…

Read More

ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆಯ (ನಾರಿ ಶಕ್ತಿ ವಂದನ್ ಅಧಿನಿಯಮ) ಜಾರಿಗೆ ಅಗತ್ಯವಿರುವ ತಿದ್ದುಪಡಿಗಳನ್ನು ತರಲು ವಿಶೇಷ ಅಧಿವೇಶನ ಕರೆಯುವ ಕೇಂದ್ರ ಸರ್ಕಾರದ ಉದ್ದೇಶವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ‘ಯು-ಟರ್ನ್ ಉಸ್ತಾದ್’ ಎಂದು ಕರೆದಿರುವ ಕಾಂಗ್ರೆಸ್, ಸರ್ಕಾರದ ನಡೆ ಕೇವಲ ರಾಜಕೀಯ ಗಿಮಿಕ್ ಎಂದು ಆರೋಪಿಸಿದೆ. 2023ರಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಕಾಯ್ದೆಯು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ (Delimitation) ನಂತರವಷ್ಟೇ ಜಾರಿಗೆ ಬರಬೇಕಿತ್ತು. ಆದರೆ, ಈಗ ಸರ್ಕಾರವು ಈ ಷರತ್ತನ್ನು ಸಡಿಲಿಸಿ, 2011ರ ಜನಗಣತಿಯ ಆಧಾರದ ಮೇಲೆ ಮೀಸಲಾತಿ ಜಾರಿಗೆ ತರಲು ವಿಶೇಷ ಅಧಿವೇಶನ ಕರೆಯಲು ಚಿಂತಿಸುತ್ತಿದೆ ಎನ್ನಲಾಗಿದೆ.  “2023ರಲ್ಲಿ ಇದೇ ಬಿಲ್ ಚರ್ಚೆಗೆ ಬಂದಾಗ, ಕೂಡಲೇ ಜಾರಿ ಮಾಡಿ ಎಂದು ನಾವು ಕೇಳಿದ್ದೆವು. ಆದರೆ ಆಗ ‘ಜನಗಣತಿ ಇಲ್ಲದೆ ಸಾಧ್ಯವೇ ಇಲ್ಲ’ ಎಂದಿದ್ದ ಸರ್ಕಾರ, ಈಗ ದಿಢೀರ್ ಆಗಿ ತನ್ನ ನಿಲುವು ಬದಲಿಸಿದೆ. ಇದೇ ಅಸಲಿ ಯು-ಟರ್ನ್,” ಎಂದು ಕಾಂಗ್ರೆಸ್ ನಾಯಕ…

Read More

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ಉದ್ವಿಗ್ನತೆ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು ಎಂಬ ಆಶಾವಾದದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ ಕಂಡಿದೆ. ಹೂಡಿಕೆದಾರರು ಉತ್ಸಾಹದಿಂದ ಷೇರು ಖರೀದಿ ನಡೆಸಿದ್ದರಿಂದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಎರಡೂ ಮಹತ್ವದ ಮೈಲಿಗಲ್ಲುಗಳನ್ನು ತಲುಪಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಸೂಚ್ಯಂಕವಾದ ಸೆನ್ಸೆಕ್ಸ್ ಸುಮಾರು 700 ಪಾಯಿಂಟ್‌ಗಳಷ್ಟು ಏರಿಕೆ ಕಂಡು ಹೂಡಿಕೆದಾರರಲ್ಲಿ ಹರ್ಷ ಮೂಡಿಸಿದೆ.ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಸೂಚ್ಯಂಕವಾದ ನಿಫ್ಟಿ ಇಂದು 23,000 ಪಾಯಿಂಟ್‌ಗಳ ಐತಿಹಾಸಿಕ ಗಡಿಯನ್ನು ದಾಟಿ ಮುನ್ನುಗ್ಗಿದೆ. ಮಾರುಕಟ್ಟೆಯ ಈ ದಿಢೀರ್ ಚೇತರಿಕೆಯಿಂದಾಗಿ ಕೇವಲ ಒಂದು ದಿನದಲ್ಲಿ ಹೂಡಿಕೆದಾರರ ಒಟ್ಟು ಸಂಪತ್ತು ಕೋಟ್ಯಂತರ ರೂಪಾಯಿಗಳಷ್ಟು ಹೆಚ್ಚಾಗಿದೆ.  ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಮಾತುಕತೆಯ ಮೂಲಕ ಶಮನವಾಗಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ಜಾಗತಿಕ ಮಾರುಕಟ್ಟೆಗಳ ಜೊತೆಗೆ ಭಾರತೀಯ ಮಾರುಕಟ್ಟೆಯೂ ಚೇತರಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಅವಕಾಶ ನೀಡಿದ ಸುದ್ದಿಯು ಕಚ್ಚಾ ತೈಲ ಬೆಲೆ…

Read More

ವಾಷಿಂಗ್ಟನ್/ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ಮಹತ್ವದ ಮಿಲಿಟರಿ ಹೆಜ್ಜೆ ಇಟ್ಟಿದ್ದಾರೆ. ಅಮೆರಿಕ ಭೂಸೇನೆಯ ಅತ್ಯಂತ ಶಕ್ತಿಶಾಲಿ ಮತ್ತು ತುರ್ತು ಪ್ರತಿಕ್ರಿಯಾ ಪಡೆಯಾದ ’82ನೇ ಏರ್‌ಬೋರ್ನ್ ಡಿವಿಷನ್’ (82nd Airborne Division) ನ 1,000ಕ್ಕೂ ಹೆಚ್ಚು ಸೈನಿಕರನ್ನು ಪಶ್ಚಿಮ ಏಷ್ಯಾಕ್ಕೆ ನಿಯೋಜಿಸಲಾಗಿದೆ. 82ನೇ ಏರ್‌ಬೋರ್ನ್ ಡಿವಿಷನ್ ಸೈನಿಕರು ಕೇವಲ 18 ಗಂಟೆಗಳ ಅವಧಿಯಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಯುದ್ಧ ಭೂಮಿಗೆ ಧುಮುಕುವ ಸಾಮರ್ಥ್ಯ ಹೊಂದಿದ್ದಾರೆ. ಇವರು ಶತ್ರು ಪ್ರದೇಶಗಳಲ್ಲಿ ಪ್ಯಾರಾಚೂಟ್ ಮೂಲಕ ಇಳಿದು ವಿಮಾನ ನಿಲ್ದಾಣ ಮತ್ತು ಪ್ರಮುಖ ನೆಲೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪರಿಣಿತರು. ಇರಾನ್‌ನ ಇತ್ತೀಚಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಸೇನಾ ಬಲವನ್ನು ಹೆಚ್ಚಿಸುತ್ತಿದೆ. ಈಗಾಗಲೇ ಸಾವಿರಾರು ಮೆರಿನ್ ಸೈನಿಕರು ಆ ಭಾಗಕ್ಕೆ ತೆರಳಿದ್ದು, ಈಗ ಈ ಗಣ್ಯ ಪಡೆ ಅವರನ್ನು ಸೇರಿಕೊಳ್ಳಲಿದೆ.  ಒಂದು ಕಡೆ ಇರಾನ್ ಜೊತೆ ಶಾಂತಿ ಮಾತುಕತೆಯ…

Read More

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಟ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮೈಯಂ (MNM) ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಆಡಳಿತಾರೂಢ ಡಿಎಂಕೆ (DMK) ಪಕ್ಷವು ಸೀಟು ಹಂಚಿಕೆಯಲ್ಲಿ ಕಮಲ್ ಹಾಸನ್ ಅವರ ಬೇಡಿಕೆಯನ್ನು ತಿರಸ್ಕರಿಸಿದ ಬೆನ್ನಲ್ಲೇ, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಎಂಎನ್ಎಂ ನಿರ್ಧರಿಸಿದೆ. ಇದು ಕಮಲ್ ಹಾಸನ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಲು ಕಮಲ್ ಹಾಸನ್ ಆಸಕ್ತಿ ತೋರಿದ್ದರು. ಆದರೆ, ಡಿಎಂಕೆ ಕೇವಲ ಬೆರಳೆಣಿಕೆಯಷ್ಟು ಅಥವಾ ಅತ್ಯಲ್ಪ ಸೀಟುಗಳನ್ನು ನೀಡಲು ಮುಂದಾಗಿದ್ದರಿಂದ ಮಾತುಕತೆ ಮುರಿದುಬಿದ್ದಿದೆ ಎನ್ನಲಾಗಿದೆ. ​ಚುನಾವಣೆಯಿಂದ ದೂರ: ಸ್ವತಂತ್ರವಾಗಿ ಸ್ಪರ್ಧಿಸಿದರೆ ಮತಗಳು ವಿಭಜನೆಯಾಗಬಹುದು ಮತ್ತು ಪಕ್ಷಕ್ಕೆ ಹೆಚ್ಚಿನ ಲಾಭವಾಗದು ಎಂಬ ಕಾರಣಕ್ಕೆ ಈ ಬಾರಿ ಸ್ಪರ್ಧಿಸದಿರಲು ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2018ರಲ್ಲಿ ಭರ್ಜರಿಯಾಗಿ ಆರಂಭವಾದ ಎಂಎನ್ಎಂ, ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿರಲಿಲ್ಲ.…

Read More

ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಈ ಯುದ್ಧವನ್ನು ನಾವು ಈಗಾಗಲೇ ಗೆದ್ದಿದ್ದೇವೆ. ಮಿಲಿಟರಿ ಶಕ್ತಿಯ ದೃಷ್ಟಿಯಿಂದ ನೋಡುವುದಾದರೆ ಇರಾನ್ ಈಗ ಸತ್ತಂತೆಯೇ (Militarily they are dead),” ಎಂದು ಟ್ರಂಪ್ ಘೋಷಿಸುವ ಮೂಲಕ ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.  ಇರಾನ್‌ನ ಪ್ರಮುಖ ಸೇನಾ ನೆಲೆಗಳು ಮತ್ತು ಭದ್ರತಾ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ದಾಳಿಗಳ ನಂತರ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕದ ಸೇನಾ ಸಾಮರ್ಥ್ಯದ ಮುಂದೆ ಇರಾನ್ ಮಂಡಿಯೂರಿವೆ ಎಂಬುದು ಅವರ ವಾದ.  “ಇರಾನ್ ಇನ್ನು ಮುಂದೆ ಅಮೆರಿಕ ಅಥವಾ ಅದರ ಮಿತ್ರ ರಾಷ್ಟ್ರಗಳಿಗೆ ಬೆದರಿಕೆ ಹಾಕುವ ಸ್ಥಿತಿಯಲ್ಲಿಲ್ಲ. ಅವರ ರಕ್ಷಣಾ ವ್ಯವಸ್ಥೆಯನ್ನು ನಾವು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದೇವೆ,” ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈ ಹೇಳಿಕೆಯ ಮೂಲಕ ಟ್ರಂಪ್ ಅವರು ಕೇವಲ ಇರಾನ್‌ಗೆ ಮಾತ್ರವಲ್ಲದೆ, ಅಮೆರಿಕದ ಶಕ್ತಿಯನ್ನು ಸವಾಲು ಹಾಕುವ ಇತರ ರಾಷ್ಟ್ರಗಳಿಗೂ ಪರೋಕ್ಷ ಎಚ್ಚರಿಕೆ…

Read More