Subscribe to Updates
Get the latest creative news from FooBar about art, design and business.
Author: kannadanewsnow57
ಬೆಳಗಾವಿ : ಬೆಳಗಾವಿಯಲ್ಲಿ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿಯ ನಾವಗೆಯ ಸ್ನೇಹಂ ಸೆಲೋ ಟೇಪ್ ತಯಾರಿಕಾ ಕಂಪನಿಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಕೆಎಲ್ ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಅಗ್ನಿ ಅವಘಡ ಸಂದರ್ಭದಲ್ಲಿ ಒಟ್ಟು 153 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರೆ. ಮತ್ತೊಬ್ಬ ಕಾರ್ಮಿಕ ಯಲ್ಲಪ್ಪ ಎಂಬುವರು ನಾತ್ತೆಯಾಗಿದ್ದಾರೆ. ಸತತ 5 ಗಂಟೆಗಳಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು: ರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯಲ್ಲಿ ಶೇ.50 ಮತ್ತು ನಿರ್ವಹಣೆಯೇತರ ಹುದ್ದೆಗಳಲ್ಲಿ ಶೇ.70ರಷ್ಟು ಮೀಸಲಾತಿ ನೀಡುವ ಕರಡು ಮಸೂದೆಗೆ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಮೃತಲಕ್ಷ್ಮಿ ಆರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. ಸಾಂವಿಧಾನಿಕ ಸವಾಲುಗಳು ಬಗೆಹರಿಯುವವರೆಗೆ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಅದರ ಅನುಷ್ಠಾನವನ್ನು ತಡೆಹಿಡಿಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅರ್ಜಿದಾರರು ಐಎಂಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪನ್ನು ಅವಲಂಬಿಸಿದ್ದಾರೆ. 30,000 ರೂ.ಗಿಂತ ಕಡಿಮೆ ಮಾಸಿಕ ವೇತನ ಹೊಂದಿರುವ ಖಾಸಗಿ ವಲಯದ ಉದ್ಯೋಗಗಳಲ್ಲಿ ಹರಿಯಾಣದ ಸ್ಥಳೀಯರಿಗೆ 75% ವಾಸಸ್ಥಳ ಮೀಸಲಾತಿ “ಅಸಂವಿಧಾನಿಕ” ಎಂದು ನ್ಯಾಯಾಲಯ ಘೋಷಿಸಿದ ಹರಿಯಾಣ ರಾಜ್ಯ ಮತ್ತು ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯವು “ಅಸಂವಿಧಾನಿಕ” ಎಂದು ಘೋಷಿಸಿತ್ತು. ಆದಾಗ್ಯೂ, ಮೇಲಿನ ತೀರ್ಪಿನಿಂದ ಭಿನ್ನವಾಗಿ, ನ್ಯಾಯಾಲಯವು “ಆ ಪ್ರಕರಣದಲ್ಲಿ ಶಾಸಕಾಂಗ…
ಬೆಂಗಳೂರು: ರಾಜ್ಯದಲ್ಲಿ ವಾಹನ ಚಾಲಕರಿಗೆ ನೀಡಲಾಗುವ ಡಿಎಲ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರ ಸ್ವರೂಪ ಬದಲಾಯಿಸಲಾಗುತ್ತಿದ್ದು, ಮೈಕ್ರೋಚಿಪ್ ಜೊತೆಗೆ ಕ್ಯೂಆರ್ ಕೋಡ್ ಅಳವಡಿಸಿದ ಡಿಎಲ್ ಮತ್ತು ಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ. ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಿಗೆ, ವಾಹನ ನೋಂದಣಿ ಪ್ರಮಾಣ ಪತ್ರ ಜಾರಿಗೆ ಕೇಂದ್ರದಿಂದ ನಿಯಮ ತಂದಿದ್ದು, ರಾಜ್ಯದಲ್ಲಿ ಆರ್.ಸಿ., ಡಿಎಲ್ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಡಿಎಲ್ ಮತ್ತು ಆರ್.ಸಿ.ಗಳಲ್ಲಿ ಕ್ಯೂಆರ್ ಕೋಡ್ ಇರಲಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ವಾಹನ ಸಂಪೂರ್ಣ ವಿವರ ಮತ್ತು ಚಾಲಕನ ವಿವರ ಸಿಗಲಿದೆ. ವಾಹನಗಳ ಮೇಲೆ ಪ್ರಕರಣಗಳ ಕುರಿತು ಮಾಹಿತಿಯೂ ಸಿಗಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರೂಪಿಸಿರುವ ನಿಯಮ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಕ್ಯೂಆರ್ ಕೋಡ್ ಇರುವ ಡಿಎಲ್ ಮತ್ತು ಆರ್.ಸಿ. ಮುದ್ರಿಸಿ ವಿತರಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಈ…
ಮನುಷ್ಯನ ದೇಹಕ್ಕೆ ಉಟಕ್ಕಿಂತಲು ನೀರು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಮುಕ್ಕಾಲು ಭಾಗ ನೀರು ಆವೃತವಾಗಿದೆ. ಹೀಗಿದ್ದರೂ ತಜ್ಞರ ಪ್ರಕಾರ ಮನುಷ್ಯ ಆರೋಗ್ಯವಾಗಿರಬೇಕೆಂದರೆ ದಿನವೊಂದಕ್ಕೆ ಕನಿಷ್ಟ ಎಂಟು ಗ್ಲಾಸ್ ನೀರು ಸೇವಿಸಬೇಕು. ದಿನವೂ ತಣ್ಣೀರಿನ ಜೊತೆಗೆ ಒಂದು ಗ್ಲಾಸ್ ಬಿಸಿ ನೀರು ಸೇವಿಸಿ ಆಗ ನಿಮ್ಮ ಆರೋಗ್ಯದ ಮೇಲೆ ಚಮತ್ಕಾರವೇ ಆಗಿಬಿಡುತ್ತದೆ. ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ವ್ಯಾಯಾಮ ಶುರು ಮಾಡುವ ಮೊದಲು ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯಿರಿ. ಹೀಗೆ ಮಾಡಿದರೆ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದು ವ್ಯಾಯಾಮದ ಒಂದು ಬಗೆ ಅಂದರೂ ತಪ್ಪಿಲ್ಲ. ಪ್ರತಿದಿನ ಬೆಚ್ಚಗಿನ ನೀರು ಸೇವೆನ ಮಾಡಿದರೆ ದೇಹದಲ್ಲಿನ ವಿಷಕಾರಿ ಅಂಶ ಕಡಿಮೆಯಾಗುತ್ತದೆ. ಇದರಿಂದ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ. ಹಾಗು ತ್ವಚೆ ಹೊಳಪಿನಿಂದ ಕೂಡಿರುತ್ತದೆ. ಚರ್ಮ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅಧಿಕ ರಕ್ತಸಂಚಾರ ಉಂಟಾಗುತ್ತದೆ ಹಾಗು ಚರ್ಮದ ಜೀವಕೋಶಗಳಿಗೆ ಪೌಷ್ಟಿಕ ಸತ್ವವನ್ನು ನೀಡುತ್ತದೆ. ಉಗುರು ಬೆಚ್ಚಗಿನ ನೀರು ಚರ್ಮದ ಭಾಗದಲ್ಲಿ ಕಂಡುಬರುವ ಫ್ರೀ ರಾಡಿಕಲ್ ಅಂಶವನ್ನು ಹೊರ…
ಬೆಂಗಳೂರು : ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರವು ಗೃಹ ಆರೋಗ್ಯ ಯೋಜನೆ ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳಲ್ಲಿ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಈ ಯೋಜನೆಯ ಆರಂಭದ ದಿನಾಂಕವನ್ನು ಬುಧವಾರ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಗೃಹ ಆರೋಗ್ಯ ಯೋಜನೆಯ ಮೂಲಕ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿ ಇತರೆ ಆರೋಗ್ಯ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಡಯಾಬಿಟಿಕ್, ಪ್ರಿ –ಡಯಾಬಿಟಿಕ್ ಪತ್ತೆ ಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸಮುದಾಯ ಮಧುಮೇಹ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ರೂ 4,000 ಫಲಾನುಭವಿಗಳ ಖಾತೆಗೆ DBT ಪೇಮೆಂಟ್ ಹಣ ವರ್ಗಾವಣೆ ಆಗಲಿದೆ. ಈ ಬಗ್ಗೆ ಜನಾಂದೋಲನಾ ಸಮಾವೇಶದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇಂದಿನಿಂದ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಲಿದೆ. ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಹಣ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಯಜಮಾನಿಯರು, ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಹಣವನ್ನು ಬಂದಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ 2 ದಿನದ ಒಳಗೆ ಎರಡು ಕಂತುಗಳ ಹಣ ಅಂದರೆ 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ 4000 ರೂಪಾಯಿ ಬರುವ ಸಾಧ್ಯತೆ ಕೂಡ ಇದೇ ಎನ್ನಲಾಗಿದೆ. ಗೃಹಲಕ್ಷ್ಮಿ ಹಣ ಸ್ಟೇಟಸ್ ತಿಳಿದುಕೊಳ್ಳುವ ವಿಧಾನ ಹೀಗಿದೆ ನೋಡಿ ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿಕೊಳ್ಳಿ ಪ್ಲೇ ಸ್ಟೋರ್ ನಲ್ಲಿ DBT Karnataka ಅಪ್ಲಿಕೇಶನ್…
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ರ ಸೆಮಿಫೈನಲ್ನಲ್ಲಿ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಸೋತ ನಂತರ ಒಲಿಂಪಿಕ್ ಫೈನಲ್ಗೆ ಪ್ರವೇಶಿಸಲು 44 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುವ ಭಾರತೀಯ ಪುರುಷರ ಹಾಕಿ ತಂಡದ ಕನಸು ಈಡೇರಲಿಲ್ಲ. ಟೋಕಿಯೊದಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಜರ್ಮನಿ ವಿರುದ್ಧ 5-4 ಅಂತರದಲ್ಲಿ ಜಯ ಸಾಧಿಸುವ ಮೂಲಕ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ನಲ್ಲಿ ಪದಕಕ್ಕಾಗಿ ಭಾರತದ 41 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಮೂರು ವರ್ಷಗಳ ನಂತರ, ಜರ್ಮನಿಯ ವಿರುದ್ಧ ಭಾರತೀಯ ಪುರುಷರ ಹಾಕಿ ತಂಡ ಸೋಲನ್ನು ಅನುಭವಿಸಿದೆ. ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ಫೈನಲ್ ಆಗಸ್ಟ್ 8 ರಂದು (ಗುರುವಾರ) ನಡೆಯಲಿದೆ. ಮತ್ತೊಂದೆಡೆ, ಭಾರತವು ಅದೇ ದಿನ ಸ್ಪೇನ್ ವಿರುದ್ಧ ಕಂಚಿನ ಪದಕಕ್ಕಾಗಿ ಹೋರಾಡಲಿದೆ. https://twitter.com/Media_SAI/status/1820894222511435972?ref_src=twsrc%5Egoogle%7Ctwcamp%5Eserp%7Ctwgr%5Etweet&ref_src=twsrc%5Egoogle%7Ctwcamp%5Eserp%7Ctwgr%5Etweet
ಮಕ್ಕಳ ಸರಿಯಾದ ಬೆಳವಣಿಗೆಗೆ ಕೆಲ ಪೌಷ್ಟಿಕಯುಕ್ತ, ನೈಸರಗಿಕವಾದ ಆಹಾರಗಳನ್ನು ನೀಡಬೇಕು. ಈ ಕೆಳಗಿನ ಆಹಾರಗಳನ್ನು ಮಕ್ಕಳಿಗೆ ಪ್ರತಿನಿತ್ಯ ಸೇವಿಸಲು ಕೊಟ್ಟರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ ಹಾಗು ಮಕ್ಕಳು ದೈಹಿಕವಾಗಿ ಸಧೃಢರಾಗಿರುತ್ತಾರೆ. ಮೊಟ್ಟೆ: ದಿನಕ್ಕೊಂದು ಮೊಟ್ಟೆ ಮಕ್ಕಳಿಗೆ ಅನೇಕ ರೀತಿಯಲ್ಲಿ ಸಹಾಯವಾಗುತ್ತದೆ. ಇದರಲ್ಲಿ ಹೇರಳವಾಗಿ ಪ್ರೋಟೀನ್ ಅಂಶವಿದ್ದು ಮಕ್ಕಳ ದೈಹಿಕ ಬೆಳವಣಿಗೆಗೆ ಸಂಪೂರ್ಣವಾಗಿ ನೆರವಾಗುತ್ತದೆ. ಇದು ಮಗುವಿಗೆ ಮಾಂಸಖಂಡಗಳನ್ನು ಬಲಗೊಳಿಸುತ್ತದೆ ಹಾಗು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಮೊಸರು: ಪ್ಯಾಕೆಟ್ ಮೊಸರಿಗಿಂತ ಮನೆಯಲ್ಲಿಯೇ ಹೆಪ್ಪು ಹಾಕಿದ ಮೊಸರನ್ನು ಮಕ್ಕಳಿಗೆ ಕೊಡುವುದು ಉತ್ತಮ ಅಭ್ಯಾಸ. ಆದಷ್ಟು ಪ್ಯಾಕೆಟ್ ಮೊಸರನ್ನು ಮಕ್ಕಳಿಗೆ ಕೊಡುವುದನ್ನು ಅವೈಡ್ ಮಾಡಿ. ನಿತ್ಯವೂ ಊಟದಲ್ಲಿ ಮಕ್ಕಳಿಗೆ ಮೊಸರು ಮಜ್ಜಿಗೆ ಸೇವಿಸಲು ಕೊಡಿ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಅಂಶವಿದ್ದು ಇವೆಲ್ಲ ಮಕ್ಕಳ ಚರ್ಮಕ್ಕೆ ಹಾಗು ಹೊಟ್ಟೆಯ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಇದರ ಜೊತೆ ದಿನವೂ ಎರಡು ಹೊತ್ತು ಮಕ್ಕಳಗಿಎ ಹಾಲು ಸೇವಿಸಲು ನೀಡಬೇಕು. ಹಾಲಿನಲ್ಲಿರುವ ಕ್ಯಾಲ್ಸಿಯಂ ಮಕ್ಕಳಿಗೆ ಹೆಚ್ಚು…
ಮೈಸೂರು : ವಾಲ್ಮೀಕಿ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನಂ.1 ಆರೋಪಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಮಾತನಾಡಿ ಅವರು, ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನಂ.1 ಆರೋಪಿಯಾಗಿದ್ದಾರೆ. ಆ ಕಾರಣಕ್ಕೆ ಇಬ್ಬರ ಹೆಸರನ್ನು ಕೈಬಿಟ್ಟು ಕೆಲಸ ಮಾಡುವಂತೆ ಸೂಚಿಸಿದ್ದಾರೆ. ST ಸಮುದಾಯದ 187 ಕೋಟಿ ರೂ. ಲೂಟಿ ಹೊಡೆದ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರನ್ನು ಹಗರಣದ ಚಾರ್ಜ್‌ಶಿಟ್‌ನಿಂದ ಕೈಬಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟರ ರಕ್ಷಣೆಗೆ ನಿಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಭ್ರಷ್ಟ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವವರೆಗೂ ಬಿಜೆಪಿ-ಜೆಡಿಎಸ್ ಹೋರಾಟ ಮುಂದುವರಿಯಲಿದೆ ಎಂದರು.
ನವದೆಹಲಿ: ಭಾರತೀಯ ಆಟೋ ಕಂಪನಿಗಳು ಶೀಘ್ರದಲ್ಲೇ ದೇಶದಲ್ಲಿ ಶೇಕಡಾ 100 ರಷ್ಟು ಎಥೆನಾಲ್ ನಿಂದ ಚಲಿಸುವ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಎಥೆನಾಲ್ ಅನ್ನು ಪೆಟ್ರೋಲ್ನೊಂದಿಗೆ ಬೆರೆಸಿ ದೇಶಾದ್ಯಂತ ಮಾರಾಟ ಮಾಡುತ್ತಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ. ಅಲ್ಲದೆ, ವಾಹನ ತಯಾರಕರು ಫ್ಲೆಕ್ಸ್-ಇಂಧನ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿರುವ ಸಮಯದಲ್ಲಿ ಅವರ ಹೇಳಿಕೆಗಳು ಬಂದಿವೆ. ಕಾರು ಪೆಟ್ರೋಲ್ ಮತ್ತು ಎಥೆನಾಲ್ ಎರಡರಲ್ಲೂ ಚಲಿಸಬಹುದು. ಫ್ಲೆಕ್ಸ್-ಇಂಧನ ಎಂಜಿನ್ ಚಾಲಿತ ಕಾರಿನಲ್ಲಿ ಕೇಂದ್ರ ಸಚಿವರು ಸೋಮವಾರ ಸಂಸತ್ತಿಗೆ ಆಗಮಿಸಿದರು. ಫ್ಲೆಕ್ಸ್ ಎಂಜಿನ್ ಹೊಂದಿರುವ ವಿಶ್ವದ ಮೊದಲ ವಾಹನ ಇದಾಗಿದೆ ಮತ್ತು ಇದು ಯುರೋ 6 ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಗಡ್ಕರಿ ಹೇಳಿದರು. “ಇದು ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ನೀಡುತ್ತದೆ” ಎಂದು ಗಡ್ಕರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಕಬ್ಬಿನ ರಸ, ಕಾಕಂಬಿ ಮತ್ತು ಜೋಳದಿಂದ ಉತ್ಪತ್ತಿಯಾಗುವ ಎಥೆನಾಲ್ ನಿಂದ ಚಲಿಸುತ್ತದೆ.…