Author: kannadanewsnow57

ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ 9 ಮಂದಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಫತ್ತೆಪುರ ಬಳಿ ಹಳ್ಳ ದಾಟುವಾಗ ನೀರಿನ ಸೆಳೆತಕ್ಕೆ 9 ಮಂದಿ ಕೊಚ್ಚಿ ಹೋಗಿದ್ದು, 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ ಖಾಸಗಿ ಬ್ಯಾಂಕ್ ನೌಕರ ಬಸವರಾಜ್ ಎಂಬುವರು ನಾಪತ್ತೆಯಾಗಿದ್ದು, ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾಯಚೂರಿನ ಖಾಸಗಿ ಬ್ಯಾಂಕ್ ನೌಕರ ಬಸವರಾಜ್ ಸೇರಿದಂತೆ 9 ಮಂದಿ ಫತ್ತೇಪುರ ಬಳಿ ಹಳ್ಳದಾಟುವಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.9 ಮಂದಿಯಲ್ಲಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಬಸವರಾಜ್ ಗೆ ಶೋಧ ಮುಂದುವರೆಸಲಾಗಿದೆ.

Read More

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನ ಮುಟ್ಟುತ್ತಿದೆ. ಇದರಿಂದಾಗಿ 9 ಕ್ಯಾರೆಟ್, 14 ಕ್ಯಾರೆಟ್, 18 ಕ್ಯಾರೆಟ್ ಆಭರಣಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, 9 ಕ್ಯಾರೆಟ್ ಚಿನ್ನದ (ಕೆಟಿ) ಆಭರಣಗಳ ಹಾಲ್‌ಮಾರ್ಕ್ ಅನ್ನು ಶೀಘ್ರದಲ್ಲೇ ದೇಶದಲ್ಲಿ ಕಡ್ಡಾಯಗೊಳಿಸಬಹುದು. ಇತ್ತೀಚಿನ ದಿನಗಳಲ್ಲಿ, Gen Z ಗಳಲ್ಲಿ ಕಡಿಮೆ ಕ್ಯಾರೆಟ್ ಆಭರಣಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಸರಪಳಿ ಕಳ್ಳತನದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈ ಕ್ರಮವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಈಗಾಗಲೇ 14 ಕ್ಯಾರೆಟ್, 18 ಕ್ಯಾರೆಟ್, 22 ಕ್ಯಾರೆಟ್, 23 ಕ್ಯಾರೆಟ್ ಮತ್ತು 24 ಕ್ಯಾರೆಟ್‌ನ ಆಭರಣಗಳ ಮೇಲೆ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ ಎಂಬುದು ಗಮನಾರ್ಹ. ಈ ನಿಯಮಗಳು 2022 ರಿಂದಲೇ ಜಾರಿಗೆ ಬಂದಿವೆ. ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ ವಿಶ್ವ ಗೋಲ್ಡ್ ಕೌನ್ಸಿಲ್ ವರದಿಯ ಪ್ರಕಾರ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರವಾಗಿದೆ. ಭವಿಷ್ಯದಲ್ಲಿಯೂ ದೇಶದಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಮುಂಬರುವ ಹಬ್ಬಗಳು…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ 17 ಆರೋಪಿಗಳ ವಿರುದ್ಧ ಇದೀಗ ಪೊಲೀಸರು 4500 ಪುಟಗಳಷ್ಟು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು ಇಂದು ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೆ ಸೆಪ್ಟೆಂಬರ್ 9 ಕ್ಕೆ 3 ತಿಂಗಳು ತುಂಬಲಿವೆ. ಈಗಾಗಲೇ 4500 ಪುಟಗಳ ಚಾರ್ಜ್‌ಶೀಟ್ ಮುಕ್ತಾಯಗೊಂಡಿದ್ದು, ಇಂದು ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗಬಾರದೆಂದು ಕಾನೂನು ತಜ್ಞರ ಸಲಹೆಯನ್ನೂ ಪಡೆಯಲಾಗಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ನಡೆಸಲಾಗಿದೆ. 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ 90 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವುದು ನಿಯಮ. ಹಾಗಾಗಿ ಸೆಪ್ಟೆಂಬರ್ 9ಕ್ಕೆ 3 ತಿಂಗಳು ಅಂದರೆ ಸಂಪೂರ್ಣವಾಗಿ 90 ದಿನಗಳು ಮುಗಿಯಲಿವೆ. ಹಾಗಾಗಿ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಈಗಾಗಲೇ ಕಾನೂನು…

Read More

ಬೆಂಗಳೂರು : ಗೌರಿ-ಗಣೇಶ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ಗಳಿಗೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಿಂದ ವಿವಿಧ ಊರುಗಳಿಗೆ ಹೋಗುವ ಪ್ರಯಾಣಿಕರಿಂದ ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತೀವೆ. ಬೆಂಗಳೂರು-ಬಳ್ಳಾರಿ ಬಸ್ ಟಿಕೆಟ್ ದರ ಪರಿಶೀಲಿಸಿದಾಗ ಖಾಸಗಿ ಬಸ್ ಟಿಕೆಟ್ ದರ 1000 ರೂ-1500 ರೂ.ವರೆಗೆ ನಿಗದಿ ಮಾಡಿವೆ. ಸೆ. 5 ರಂದು ಬೆಂಗಳೂರು-ದಾವಣಗೆರೆ ಖಾಸಗಿ ಟ್ರಾವೆಲ್ಸ್ ಒಂದರ ಬಸ್ ನ ಟಿಕೆಟ್ ದರ 900-2000 ರೂ. ದರ ನಿಗದಿಪಡಿಸಲಾಗಿದೆ. ಇನ್ನು ಬೆಂಗಳೂರು-ಗುಲ್ಬರ್ಗ: 1200-1800 ರೂ., ಬೆಂಗಳೂರು-ಯಾದಗಿರಿ: 1100-1750 ರೂ., ಬೆಂಗಳೂರು-ದಾವಣಗೆರೆ: 900-2000 ರೂ., ಬೆಂಗಳೂರು-ಹಾಸನ: 899-1800 ರೂ., ಬೆಂಗಳೂರು-ಧಾರವಾಡ: 1200-3000 ರೂ., ಬೆಂಗಳೂರು-ಚಿಕ್ಕಮಗಳೂರು: 900-1500 ರೂ.ಗೆ ಏರಿಸಲಾಗಿದ್ದು, ಊರಿಗೆ ಹೊರಟ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಿದೆ.

Read More

ತೈಯಾನ್ : ಚೀನಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶಾಲಾ ಬಸ್ ವೊಂದು ನಿಯಂತ್ರಣ ಕಳೆದುಕೊಂದು ರಸ್ತೆ ಮೇಲೆ ನಿಂತಿದ್ದ ಜನರ ಮೇಲೆ ನುಗ್ಗಿದ ಪರಿಣಾಮ 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ತೈಯಾನ್ ನಗರದಲ್ಲಿ ಸಾರ್ವಜನಿಕ ಶಾಲಾ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ನುಗ್ಗಿತು.ಘಟನೆಯಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೆಳಿಗ್ಗೆ 7 ಗಂಟೆಗೆ ತೈಯಾನ್ ನಗರದ ಮಧ್ಯಮ ಶಾಲೆಯ ಗೇಟ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಡಾಂಗ್‌ಪಿಂಗ್ ಕೌಂಟಿ ಪೊಲೀಸ್ ಇಲಾಖೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಡೊಂಗ್‌ಪಿಂಗ್ ಕೌಂಟಿಯ ಪೊಲೀಸ್ ಇಲಾಖೆ ಆರು ಪೋಷಕರು ಮತ್ತು ಐದು ಮಕ್ಕಳು ಸೇರಿದ್ದಾರೆ, ಸದ್ಯ ಬಸ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More

ನವದೆಹಲಿ : ಸ್ಪ್ಯಾಮ್ ಕರೆಗಳು ಮತ್ತು ನೋಂದಣಿಯಾಗದ ಟೆಲಿ-ಮಾರ್ಕೆಟಿಂಗ್ ಕಂಪನಿಗಳ ವಿರುದ್ಧ ಬೃಹತ್ ಕ್ರಮ ಕೈಗೊಳ್ಳುವ ಮೂಲಕ 2.75 ಲಕ್ಷ ದೂರವಾಣಿ ಸಂಖ್ಯೆಗಳನ್ನು ಸಂಪರ್ಕ ಕಡಿತಗೊಳಿಸಲಾಗಿದೆ ಮತ್ತು 50 ಸಂಸ್ಥೆಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಟೆಲಿಕಾಂ ನಿಯಂತ್ರಕ TRAI ಇತ್ತೀಚೆಗೆ ಅನುಸರಿಸಿದ ಕಠಿಣ ನಿಲುವಿನ ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಟೆಲಿಕಾಂ ಕಂಪನಿಗಳಿಗೆ ನೋಂದಣಿ ಇಲ್ಲದೆ ಟೆಲಿ-ಮಾರ್ಕೆಟಿಂಗ್ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಅವುಗಳ ಸಂಖ್ಯೆಯನ್ನು ನಿರ್ಬಂಧಿಸಲು ಕೇಳಿದೆ. ಟ್ರಾಯ್ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನಕಲಿ ಕರೆಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಗಮನಿಸಿದೆ ಎಂದು ತಿಳಿಸಿದೆ. 2024 ರ ಮೊದಲಾರ್ಧದಲ್ಲಿ ನೋಂದಾಯಿಸದ ಟೆಲಿ-ಮಾರ್ಕೆಟಿಂಗ್ ಸಂಸ್ಥೆಗಳ ವಿರುದ್ಧ 7.9 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸ್ಪ್ಯಾಮ್ ಕರೆಗಳನ್ನು ನಿಗ್ರಹಿಸಲು, ಆಗಸ್ಟ್ 13, 2024 ರಂದು ಎಲ್ಲಾ ಪ್ರವೇಶ ಪೂರೈಕೆದಾರರಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಲಾಯಿತು ಮತ್ತು ನೋಂದಣಿ ಇಲ್ಲದೆ ಟೆಲಿ-ಮಾರ್ಕೆಟಿಂಗ್ ಸಂಸ್ಥೆಗಳನ್ನು ತಕ್ಷಣವೇ ನಿಗ್ರಹಿಸಲು ಅವರನ್ನು ಕೇಳಲಾಗಿದೆ…

Read More

ನವದೆಹಲಿ: ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪತಿ ಆತ್ಮಹತ್ಯೆಗೆ ಪತ್ನಿಯ ವಿವಾಹೇತರ ಸಂಬಂಧ ಕಾರಣವಾಗಿರದಿರಬಹುದು ಎಂದು ಹೇಳಿದೆ. ಮಹಿಳೆ ಮತ್ತು ಆಕೆಯ ಸಂಗಾತಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ತಳ್ಳಿ ಹಾಕಿದೆ. ಪತ್ನಿಯ ವಿವಾಹೇತರ ಸಂಬಂಧವೇ ಮಗನ ಸಾವಿಗೆ ಕಾರಣ ಎಂದು ಮೃತನ ತಾಯಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿರುವ ಅಂಶಗಳು ನಿಜವೆಂದು ಒಪ್ಪಿಕೊಂಡರೂ, ಮೃತ ಮಹಿಳೆ ಆತ್ಮಹತ್ಯೆಗೆ ಪ್ರೇರೇಪಿಸುವ ಉದ್ದೇಶವನ್ನು ಹೊಂದಿದ್ದಳು ಎಂಬುದು ಸಾಬೀತಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ದಿಯೇಶ್ ಎ ಜೋಶಿ ಅವರನ್ನೊಳಗೊಂಡ ಏಕ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಮೃತರ ಪತ್ನಿಗೆ ಆತ್ಮಹತ್ಯೆಗೆ ಪ್ರೇರೇಪಿಸುವ ಉದ್ದೇಶವಿತ್ತು ಎಂದು ಹೇಳಲಾಗದು ಹಾಗಾಗಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೆವಿ ಪ್ರಕಾಶ್ ಬಾಬು ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ. ವಿವಾಹೇತರ ಸಂಬಂಧವು ಸೆಕ್ಷನ್ 306 ಐಪಿಸಿ ಅಡಿಯಲ್ಲಿ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಫೋಟೋ, ಮೆಸೇಜ್ ಮಾಡಿದ್ದು ಸತ್ಯ ಎಂದು ಇನ್ ಸ್ಟಾಗ್ರಾಂ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ 17 ಆರೋಪಿಗಳ ವಿರುದ್ಧ ಇದೀಗ ಪೊಲೀಸರು 4500 ಪುಟಗಳಷ್ಟು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ನಡುವೆ ಪವಿತ್ರಾಗೌಡಗೆ ಅಶ್ಲೀಲ ಫೋಟೋ, ಮೆಸೇಜ್ ಕಳಿಸಿದ್ದು ನಿಜ : ಇನ್ ಸ್ಟಾಗ್ರಾಂ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೆ ಸೆಪ್ಟೆಂಬರ್ 9 ಕ್ಕೆ 3 ತಿಂಗಳು ತುಂಬಲಿವೆ. ಈಗಾಗಲೇ 4500 ಪುಟಗಳ ಚಾರ್ಜ್‌ಶೀಟ್ ಮುಕ್ತಾಯಗೊಂಡಿದ್ದು, ಶೀಘ್ರವೇ ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶವಾಗಬಾರದೆಂದು ಕಾನೂನು ತಜ್ಞರ ಸಲಹೆಯನ್ನೂ ಪಡೆಯಲಾಗಿದೆ. ಎರಡ್ಮೂರು ಬಾರಿ ಪರಿಶೀಲನೆಯನ್ನೂ ನಡೆಸಲಾಗಿದೆ. 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ 90 ದಿನಗಳ…

Read More

ಬೆಂಗಳೂರು: ಓದುವ ಸಮಸ್ಯೆ ಎದುರಿಸುತ್ತಿರುವಂತ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ರಾಜ್ಯಾಧ್ಯಂತ ರೀಡ್-ಎ-ಥಾನ್ ಅಭಿಯಾನ ನಡೆಯಲಿದೆ. 21 ದಿನಗಳ ಕಾಲ ನಡೆಯುವಂತ ಅಭಿಯಾನದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಓದುವ ಕೌಶಲ್ಯವನ್ನು ಶಾಲಾ ಮಕ್ಕಳಿಗೆ ವೃದ್ಧಿಸುವಂತ ಕಾರ್ಯ ನಡೆಯಲಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, “ಇಂದಿನ ಓದುಗರು ನಾಳಿನ ನಾಯಕರು” ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿ ಓದುವ ಕೌಶಲ್ಯಗಳು ಹಾಗೂ ಹವ್ಯಾಸ ಬೆಳೆಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡುತ್ತದೆ. ಈ ನಿಟ್ಟಿನಲ್ಲಿ 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಓದು ಅಭಿಯಾನದ ಉದ್ದೇಶವಾಗಿದೆ ಎಂದಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು, ಅಭಿಯಾನದ ರೂಪದಲ್ಲಿ ಓದುವ ಚಟುವಟಿಕೆಗಳನ್ನು ಆಯೋಜಿಸಿ, ಮಕ್ಕಳಲ್ಲಿ ಓದುವಿಕೆ ಮತ್ತು ಪುಸ್ತಕಗಳ ಬಗ್ಗೆ ಒಲವು ಬೆಳಸುವಂತೆ ಕ್ರಮವಹಿಸಬೇಕಾಗಿರುತ್ತದೆ. ಗ್ರಹಿಕೆ ಸಾಮರ್ಥ್ಯಗಳನ್ನು ಹಾಗೂ ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಪುಸ್ತಕಗಳು ಪಾತ್ರ ಮಹತ್ವದ್ದಾಗಿರುತ್ತದೆ.…

Read More

ಮಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಆರ್ಭಟದ ನಡುವೆ ಇಲಿ ಜ್ವರದ ಆತಂಕ ಶುರುವಾಗಿದ್ದು, ಇಲಿ ಜ್ವರಕ್ಕೆ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಇಲಿ ಜ್ವರದಿಂದ ಬಳಲುತ್ತಿದ್ದ ಕನಕಮಜಲು ಗ್ರಾಮದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಯುವರಾಜ್ ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವರಾಜ್ ಮೃತಪಟ್ಟಿದ್ದಾನೆ. ಯುವಕ ರಕ್ತ ಪರೀಕ್ಷೆಯ ವರದಿಯಲ್ಲಿ ಮೃತ ಯುವರಾಜನಿಗೆ ಇಲಿ ಜ್ವರ ಇರುವುದು ದೃಢಪಟ್ಟಿದೆ.

Read More