Author: kannadanewsnow57

ಬೆಂಗಳೂರು : ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೆ ಸರ್ಕಾರಿ ವಾಹನ ನೀಡದಂತೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿದ್ದು, ಸರ್ಕಾರಿ ವಾಹನಗಳ ಬಳಕೆ ಕುರಿತಂತೆ ಚುನಾವಣಾ ಆಯೋಗ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರಿ ವಾಹನಗಳನ್ನು ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಯಾವುದೇ ಕಾರ್ಯಕ್ಕೂ ಬಳಸಬಾರದು. ಚುನಾವಣಾ ಪ್ರಚಾರ ಸೇರಿ ರಾಜಕೀಯ ಪಕ್ ಹಾಗೂ ವ್ಯಕ್ತಿಗಳ ಪರವಾಗಿ ವಾಹನಗಳ ಬಳಕೆ ನಿರ್ಬಂಧಿಸಲಾಗಿದೆ.

Read More

ಬೆಂಗಳೂರು : ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಾಲಾ ಶಿಕ್ಷಕರು ಹಾಗೂ ಪಿಯುಸಿ ಉಪನ್ಯಾಸಕರಿಗೆ ಲೋಕಸಭೆ ಚುನಾವಣಾ ಕಾರ್ಯದಿಂದ ವಿನಾಯಿತಿ ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯಾದ್ಯಂತ ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಅರಂಭವಾಗಲಿವೆ. ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಪಿಯುಸಿ ಉಪನ್ಯಾಸಕರಿಗೆ ಲೋಕಸಭಾ ಚುನಾವಣೆ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಪತ್ರ ಬರೆಯಲಾಗಿದೆ. ಇನ್ನು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಮೌಲ್ಯಮಾಪನ ಕಾರ್ಯದ ಜೊತೆಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ 2 ಮತ್ತು 3 ನಡೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಕೋರಲಾಗಿದೆ.

Read More

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೇಲಿಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಹಾಗೂ ತಾಯಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಮಲ್ಲಸಮುದ್ರ ಗ್ರಾಮದ ತಲಾರಿ ಮಾರಕ್ಕ (24) ಮಕ್ಕಳಾದ ನಯನ (4) ಹರ್ವಧನ (2) ಮೃತಪಟ್ಟಿದ್ದಾರೆ. ಮನೆಯ ಪಕ್ಕದ ಕಣದ ಬೇಲಿಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲೇ ಮಾರಕ್ಕ ತನ್ನ ಇಬ್ಬರು ಮಕ್ಕಳನ್ನು ಬೆಂಕಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Read More

ಬೆಂಗಳೂರು : ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಒಟ್ಟು 29 ಲಕ್ಷ ಪ್ರಕರಣಗಳು ಇತ್ಯರ್ಥಪಡಿಸಲಾಗಿದ್ದು, 2,541 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಕೆ. ಸೋಮಶೇಖರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಕೆ.ಸೋಮಶೇಖರ್ ಮಾತನಾಡಿ, ಮಾರ್ಚ್ 16 ರಂದು ರಾಜ್ಯಾದ್ಯಂತ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ 2,52,277 ಬಾಕಿ ಮತ್ತು 26,48,035 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ 29,00,312 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. 2,541 ಕೋಟಿ ರೂ.ಗಳನ್ನು ಇತ್ಯರ್ಥ / ಪರಿಹಾರವಾಗಿ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಲೋಕ ಅದಾಲತ್ ನಲ್ಲಿ 771 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 281 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಅದಾಲತ್ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ನ್ಯಾಯಮೂರ್ತಿ ಸೋಮಶೇಖರ್, ಧಾರವಾಡದ ಟಾಟಾ ಮಾರ್ಕೊಪೋಲೊ ಕಂಪನಿ ಮತ್ತು ನೌಕರರ ನಡುವಿನ ಕೈಗಾರಿಕಾ…

Read More

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ 236 ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ ಎಂದು ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ನಿಯಮಗಳನ್ನು ಅಧಿಸೂಚಿಸಿದ ನಂತರ, 20 ಹೊಸ ಅರ್ಜಿಗಳನ್ನು ಸಲ್ಲಿಸಲಾಯಿತು. ಉತ್ತರವನ್ನು ಸಲ್ಲಿಸಲು ಸರ್ಕಾರಕ್ಕೆ ನಾಲ್ಕು ವಾರಗಳ ಸಮಯ ಬೇಕು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪರವಾಗಿ ಕಪಿಲ್ ಸಿಬಲ್, ಅಸಾದುದ್ದೀನ್ ಒವೈಸಿ ಪರವಾಗಿ ನಿಜಾಮ್ ಪಾಷಾ ವಾದ ಮಂಡಿಸಿದ್ದರು. ಈ ಕಾನೂನನ್ನು 2019 ರ ಡಿಸೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿತು ಎಂದು ಸಿಬಲ್ ಹೇಳಿದರು. ಸರ್ಕಾರವು ತನ್ನ ನಿಯಮಗಳನ್ನು ಸೂಚಿಸಲು ನಾಲ್ಕೂವರೆ ವರ್ಷಗಳನ್ನು ತೆಗೆದುಕೊಂಡಿತು. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಅವಸರದಲ್ಲಿರಬಾರದು. ನ್ಯಾಯಾಲಯದ ತೀರ್ಪಿಗಾಗಿ ಸರ್ಕಾರ ಕಾಯಬಹುದು. ಈ ಕಾನೂನಿನ ಅಡಿಯಲ್ಲಿ ಯಾರಾದರೂ ಪೌರತ್ವ ಪಡೆದರೆ ಮತ್ತು ನ್ಯಾಯಾಲಯವು ನಂತರ ಈ ಕಾನೂನನ್ನು ರದ್ದುಗೊಳಿಸಿದರೆ,…

Read More

ಬೆಂಗಳೂರು : ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿವಿಧ ಚುನಾವಣಾ ಕಾರ್ಯಗಳಿಗೆ ನಿಯೋಜಿಸಿದ ಅಧಿಕಾರಿಗಳು ಮತ್ತು ಖಾಸಗಿ ವಲಯಗಳ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಚುನಾವಣಾ ಆಯೋಗ ಸೂಚನೆ ನೀಡಿದೆ. ಚುನಾವಣೆಯು ಪ್ರಜಾಪ್ರಭುತ್ವ ಹಬ್ಬವಿದ್ದಂತೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯವರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಎಂದು ತಿಳಿಸಲಾಗಿದೆ. ಚುನಾವಣಾ ಆಯೋಗವು ಅಗತ್ಯ ಸೇವೆಗಳ ಇಲಾಖೆಗಳಿಗೆ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಲಾಖೆ ಮತ್ತು ಆಕಾಶವಾಣಿ, ಬಿ.ಎಸ್.ಎನ್.ಎಲ್ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಅಂಚೆ ಮತಚೀಟಿ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಫಾರಂ-12 ಅರ್ಜಿ ನೀಡಲಾಗುತ್ತದೆ. ಅದರಲ್ಲಿ ತಮ್ಮ ಹೆಸರು, ಮತದಾರ ಗುರುತಿನ ಸಂಖ್ಯೆ, ಆಯಾ…

Read More

ಮ್ಯಾಗ್ನಮ್ ಮತ್ತು ಬೆನ್ & ಜೆರ್ರಿಯಂತಹ ಜನಪ್ರಿಯ ಬ್ರಾಂಡ್ಗಳಿಗೆ ನೆಲೆಯಾಗಿರುವ ಯೂನಿಲಿವರ್ ತನ್ನ ಐಸ್ ಕ್ರೀಮ್ ಘಟಕವನ್ನು ಸ್ವತಂತ್ರ ವ್ಯವಹಾರವಾಗಿ ಪರಿವರ್ತಿಸಲು ಯೋಜಿಸಿದೆ, ಗ್ರಾಹಕ ಸರಕುಗಳ ಗುಂಪು ಮಂಗಳವಾರ ಹೊಸ ವೆಚ್ಚ-ಉಳಿತಾಯ ಕಾರ್ಯಕ್ರಮವನ್ನು ಘೋಷಿಸಿದ್ದು, ಇದು 7,500 ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ಸ್ಪಿನ್ ಆಫ್ ತಕ್ಷಣವೇ ಪ್ರಾರಂಭವಾಗಲಿದ್ದು, 2025 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಲಂಡನ್ ಮೂಲದ ಕಂಪನಿ ತಿಳಿಸಿದೆ.ಯೂನಿಲಿವರ್ ವಿಭಜನೆಯ ನಂತರ ಮಾರಾಟದ ಬೆಳವಣಿಗೆ ಮತ್ತು ಸಾಧಾರಣ ಮಾರ್ಜಿನ್ ಸುಧಾರಣೆಯನ್ನು “ಸರಳ ಮತ್ತು ಹೆಚ್ಚು ಕೇಂದ್ರೀಕೃತ ಕಂಪನಿ” ಯಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 800 ಮಿಲಿಯನ್ ಯುರೋಗಳ ($ 869 ಮಿಲಿಯನ್) ಒಟ್ಟು ವೆಚ್ಚ ಉಳಿತಾಯವನ್ನು ನೀಡುವ ನಿರೀಕ್ಷೆಯಿರುವ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಮತ್ತು ಪ್ರಸ್ತಾವಿತ ಬದಲಾವಣೆಗಳು ಜಾಗತಿಕವಾಗಿ ಸುಮಾರು 7,500 ಹುದ್ದೆಗಳ ಮೇಲೆ ಪರಿಣಾಮ ಬೀರುತ್ತವೆ, ಒಟ್ಟು ಪುನರ್ರಚನೆ ವೆಚ್ಚಗಳು ಈಗ ಈ ಅವಧಿಯಲ್ಲಿ…

Read More

ಪ್ರಯಾಗ್ ರಾಜ್: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಗಳ ಸಾವಿನ ಪ್ರತಿಕಾರ ತೀರಿಸಿಕೊಳ್ಳಲು ಕುಟುಂಬಸ್ಥರು ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮೃತ ಮಹಿಳೆಯ ಪೋಷಕರು ಆಕೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಅನ್ಶಿಕಾ ಕೇಸರ್ವಾನಿ ಎಂಬ ಮೃತ ಮಹಿಳೆಯ ಪೋಷಕರು ತನ್ನ ಅತ್ತೆ-ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು ತಿಳಿಸಿದ್ದಾರೆ. https://twitter.com/Shadab_VAHIndia/status/1769938875714318818?ref_src=twsrc%5Etfw%7Ctwcamp%5Etweetembed%7Ctwterm%5E1769938875714318818%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F ದುರಂತದಲ್ಲಿ ಇಬ್ಬರು ಜನರು ಸುಟ್ಟುಹೋಗಿದ್ದರೆ, ಪೊಲೀಸರು ಕುಟುಂಬದ ಐದು ಜನರನ್ನು “ಉರಿಯುತ್ತಿರುವ ಮನೆ” ಯಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತರನ್ನು ಅತ್ತೆ ಶೋಭಾ ದೇವಿ ಮತ್ತು ಮಾವ ರಾಜೇಂದ್ರ ಕೇಸರ್ವಾನಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಅನ್ಶಿಕಾ ಕೇಸರ್ವಾನಿ ಅವರ ಅಳಿಯಂದಿರು ತಮ್ಮ ಮಗಳನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. https://twitter.com/SachinGuptaUP/status/1769936755124289666?ref_src=twsrc%5Etfw%7Ctwcamp%5Etweetembed%7Ctwterm%5E1769936755124289666%7Ctwgr%5E%7Ctwcon%5Es1_c10&ref_url=https%3A%2F%2Fapi-news.dailyhunt.in%2F

Read More

ನವದೆಹಲಿ: ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮುಂಬರುವ ಲೋಕಸಭಾ ಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕಾಮೆಂಟರಿ ಮಾಡಲಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಸಿಧು ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಸಿಧು ಬಗ್ಗೆ ಮಾಹಿತಿ ನೀಡಿದ ಸ್ಟಾರ್ ಸ್ಪೋರ್ಟ್ಸ್, ಶ್ರೇಷ್ಠ ನವಜೋತ್ ಸಿಂಗ್ ಸಿಧು ನಮ್ಮ ತಾರಾಗಣಕ್ಕೆ ಸೇರಿದ್ದಾರೆ. 2024ರ ಐಪಿಎಲ್ ಟೂರ್ನಿ ಮಾರ್ಚ್ 22ರಿಂದ ಆರಂಭವಾಗಲಿದೆ. ನವಜೋತ್ ಸಿಂಗ್ ಸಿಧು ಅವರು ತಮ್ಮ ಪತ್ನಿಯ ಅನಾರೋಗ್ಯದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು, ಆದರೆ ನವಜೋತ್ ಸಿಂಗ್ ಸಿಧು ಅವರು ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ಪತ್ನಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಉಲ್ಲೇಖಿಸಿ ಮತ್ತು ಅವರ ಪತ್ನಿಯ ಕಳಪೆ ಆರೋಗ್ಯವನ್ನು ಉಲ್ಲೇಖಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು. ಸಿಧು ಅವರ ಪಂಜಾಬ್ ಕಾಂಗ್ರೆಸ್ ಬಿಟ್ಟು…

Read More

ಬೆಂಗಳೂರು : ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಿದೆ. 200 ಯೂನಿಟ್‌‌‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ. ಹೌದು, ಬರದ ಬೇಗೆಯಲ್ಲಿ ಬಸವಳಿದಿರುವ, ಬೇಸಿಗೆಯ ಝಳದಲ್ಲಿ ಮರುಗುತ್ತಿರುವ ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಸರ್ಕಾರ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ. ಚುನಾವಣೆಗೂ ಮುನ್ನ ಪ್ರತಿ ಮನೆಗೆ 200 ಯೂನಿಟ್‌ ಕರೆಂಟ್‌ ಫ್ರೀ ಎಂದು ಹೇಳಿದ್ದ ಕಾಂಗ್ರೆಸ್‌, ಚುನಾವಣೆ ಬಳಿಕ ಕಂಡಿಷನ್ಸ್‌ ಅಪ್ಲೈ ಎಂದು ಉಲ್ಟಾ ಹೊಡೆದಿತ್ತು. ಈಗ ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ ಗ್ರಾಹಕರು, 200 ಯೂನಿಟ್‌‌‌ಗಿಂತ ಜಾಸ್ತಿ ವಿದ್ಯುತ್‌ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ. ಗೃಹಜ್ಯೋತಿಯಲ್ಲಿಯೂ ಸಹ ಕಾಂಗ್ರೆಸ್‌ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಕಿಡಿಕಾರಿದೆ.

Read More