Author: kannadanewsnow57

ನ್ಯೂಯಾರ್ಕ್: ಅಮೇರಿಕಾದ ಅಧ್ಯಕ್ಷ ಜೋ ಬೈಡನ್ 2024 ರ ಸ್ಪರ್ಧೆಯಿಂದ ಹೊರಗುಳಿಯಲು ಒಪ್ಪಿಕೊಂಡಿದ್ದಾರೆ ಎಂದು ಪತ್ರಕರ್ತ ಮತ್ತು ನ್ಯೂಸ್ಮ್ಯಾಕ್ಸ್ ವೀಕ್ಷಕವಿವರಣೆಗಾರ ಮಾರ್ಕ್ ಹಾಲ್ಪೆರಿನ್ ಗುರುವಾರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ. 81 ವರ್ಷದ ಅವರು ಈ ವಾರಾಂತ್ಯದಲ್ಲಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯಬಹುದು ಎಂದು ಪ್ರಮುಖ ಡೆಮಾಕ್ರಟಿಕ್ ಮೂಲಗಳು ಆಕ್ಸಿಯೋಸ್ಗೆ ತಿಳಿಸಿವೆ. ನ್ಯೂಸ್ಮ್ಯಾಕ್ಸ್ನ ಹಾಲ್ಪೆರಿನ್ ತಮ್ಮ ಮೂಲವನ್ನು ಉಲ್ಲೇಖಿಸಿ ಬೈಡನ್ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸುವುದಿಲ್ಲ ಎಂದು ಹೇಳಿದರು. ಮುಂದಿನ ತಿಂಗಳು ಡೆಮಾಕ್ರಟಿಕ್ ಪಕ್ಷದ ಅಧಿಕೃತ ನಾಮನಿರ್ದೇಶನಕ್ಕಾಗಿ ಅವರು ಮುಕ್ತ ಸಮಾವೇಶವನ್ನು ಎದುರಿಸಲಿದ್ದಾರೆ. ಬೈಡನ್ ಈ ವಾರಾಂತ್ಯದಲ್ಲಿ ರಾಜೀನಾಮೆ ನೀಡುವ ನಿರೀಕ್ಷೆಯಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ ನಂತರ ಈ ನಾಟಕೀಯ ಬೆಳವಣಿಗೆ ಬಂದಿದೆ. ವರದಿಗಳ ಪ್ರಕಾರ, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಅಧ್ಯಕ್ಷ ಜೋ ಬೈಡನ್ ಅವರ ಉಮೇದುವಾರಿಕೆಯ ಬಗ್ಗೆ ಡೆಮಾಕ್ರಟ್ಗಳಿಗೆ ಖಾಸಗಿಯಾಗಿ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮಾಜಿ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಸ್ಪರ್ಧೆಯಿಂದ…

Read More

ಬೆಂಗಳೂರು :ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಕೆಲ ರೈಲುಗಳ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಅಲ್ಲದೇ ಕೆಲ ರೈಲುಗಳ ಸಂಚಾರವನ್ನು ನಿಯಂತ್ರಣ ಮಾಡಲಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯು ತಿಳಿಸಿದ್ದು, ಬೆಂಗಳೂರು ಯಾರ್ಡ್ ಸೇತುವೆ ಸಂಖ್ಯೆ 867 ಮತ್ತು ಬೆಂಗಳೂರು ಕಂಟೋನ್ಮೆಂಟ್-ಕೆಎಸ್‌ಆರ್ ಬೆಂಗಳೂರು ಭಾಗದ ಮಧ್ಯದಲ್ಲಿರುವ ಸೇತುವೆ ಸಂಖ್ಯೆ 857 ರಲ್ಲಿ ವಿವಿಧ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ ಮತ್ತು ನಿಯಂತ್ರಣ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ: ರೈಲುಗಳ ಸಂಚಾರ ರದ್ದು ಜುಲೈ 30, ಆಗಸ್ಟ್ 6 ಮತ್ತು 13 ರಂದು ರೈಲು ಸಂಖ್ಯೆ 12658 ಕೆಎಸ್‌ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಜುಲೈ 31, ಆಗಸ್ಟ್ 7 ಮತ್ತು 14 ರಂದು ರೈಲು ಸಂಖ್ಯೆ 12657 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್…

Read More

ನವದೆಹಲಿ: ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾದ 1971 ರ ಭಾರತ-ಪಾಕಿಸ್ತಾನ ಯುದ್ಧದಿಂದ ಬಂದಿದೆ ಎಂದು ನಂಬಲಾದ ದೊಡ್ಡ ಪ್ರಮಾಣದ ಮೋರ್ಟಾರ್ ಶೆಲ್ಗಳು ಪಶ್ಚಿಮ ತ್ರಿಪುರಾ ಜಿಲ್ಲೆಯ ರಂಗುಟಿಯಾದಲ್ಲಿ ಗುರುವಾರ ಮೀನು ಕೊಳವನ್ನು ಉತ್ಖನನ ಮಾಡುವಾಗ ಪತ್ತೆಯಾಗಿವೆ. ಈ ಆವಿಷ್ಕಾರವು ಇಡೀ ಪ್ರದೇಶದಲ್ಲಿ ಕೋಲಾಹಲವನ್ನು ಉಂಟುಮಾಡಿದೆ.ಆರಂಭದಲ್ಲಿ, ಚಿಪ್ಪುಗಳು ಫಿರಂಗಿಗಳಿಂದ ಅಥವಾ ಗಾರೆಗಳಿಂದ ಬಂದವುಗಳೇ ಎಂಬುದು ಅಸ್ಪಷ್ಟವಾಗಿತ್ತು; ನಂತರ, ಅವು ಮೋರ್ಟಾರ್ ಶೆಲ್ ಗಳು ಎಂದು ದೃಢಪಡಿಸಲಾಯಿತು. ಮಾಹಿತಿ ಪಡೆದ ನಂತರ, ಬಮುಥಿಯಾ ಹೊರಠಾಣೆಯ ಪೊಲೀಸ್ ತಂಡ ಮತ್ತು ಟಿಎಸ್ಆರ್ ಸಿಬ್ಬಂದಿ ಉತ್ಖನನವನ್ನು ಮುಂದುವರಿಸಲು ಬಂದರು. ಒಟ್ಟು 27 ಮೋರ್ಟಾರ್ ಶೆಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೀನು ಕೊಳವನ್ನು ಅಗೆಯುವಾಗ ರಂಗುಟಿಯಾದಲ್ಲಿರುವ ದುಲಾಲ್ ನಾಮ್ ಅವರ ಮನೆಯಲ್ಲಿ 27 ಮೋರ್ಟಾರ್ ಶೆಲ್ಗಳನ್ನು ಹೂಳಲಾಗಿದೆ ಎಂದು ಬಮುಥಿಯಾ ಹೊರಠಾಣೆಯ ಉಸ್ತುವಾರಿ ಅಧಿಕಾರಿ ಆಂಥೋನಿ ಜಮಾತಿಯಾ ಹೇಳಿದ್ದಾರೆ. ಚಿಪ್ಪುಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು ಮತ್ತು ಸುಮಾರು 53 ವರ್ಷಗಳ ಕಾಲ ಹೂಳಲಾಗಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಈ ಚಿಪ್ಪುಗಳ ಮೂಲದ ದೇಶ…

Read More

ಬೆಂಗಳೂರು : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸ್ತಕ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಅಸಕ್ತರು ಆನ್‍ಲೈನ್ ವೆಬ್‍ಸೈಟ್ ವಿಳಾಸ www.kacdc.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಹತೆ: ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ “ನಮೂನೆ-ಜಿ” ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು). ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಮಾಡಿಸಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಶೇಷಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಿಗಳಿಗೆ ಶೇ.5 ಮೀಸಲಾತಿ ಇರಿಸಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ). ಯೋಜನೆಗಳು: ಸ್ವಯಂ-ಉದ್ಯೋಗ…

Read More

ಹಾವೇರಿ : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹಾವೇರಿ ಜಿಲ್ಲೆಯಲ್ಲಿ ಮಳೆಗೆ ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಇಂದು ಮುಂಜಾನೆ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ತಾಯಿ ಚೆನ್ನಮ್ಮ, ಮಕ್ಕಳಾದ ಅಮೂಲ್ಯ, ಅನನ್ಯಾ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಆರು ಜನರ ಮೇಲೆ ಗೋಡೆ ಕುಸಿದಿದೆ. ಮೂವರು ಸಾವನ್ನಪ್ಪಿದು, ಉಳಿದ ಮೂವರು ಗಾಯಗೊಂಡಿದ್ದಾರೆ.

Read More

ಬೆಂಗಳೂರು : ಕಳೆದ ಹತ್ತು ವರ್ಷದಲ್ಲಿ 480 ಕ್ಕೂ ಹೆಚ್ಚು ವಿಪಕ್ಷ ಶಾಸಕರ ಮೇಲೆ ಐಟಿ- ಇಡಿ ಮೂಲಕ ದಾಳಿ ನಡೆಸಿ, ಬೆದರಿಸಿ ಅಪರೇಷನ್ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಮರ್ಥವಾಗಿ ವಿರೋಧಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದೆ ಇದ್ದಾಗ ಕೇಂದ್ರ ಬಿಜೆಪಿ ಸರ್ಕಾರ ಐಟಿ-ಇಡಿ ಮೂಲಕ ಸಹಾಯಕ್ಕೆ ಬರುತ್ತದೆ. ಕಳೆದ ಹತ್ತು ವರ್ಷದಲ್ಲಿ 480 ಕ್ಕೂ ಹೆಚ್ಚು ವಿಪಕ್ಷ ಶಾಸಕರ ಮೇಲೆ ಐಟಿ- ಇಡಿ ಮೂಲಕ ದಾಳಿ ನಡೆಸಿ, ಬೆದರಿಸಿ ಅಪರೇಷನ್ ಮೂಲಕ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲದೆ ಮತ್ತೇನು. ಸಾಲು-ಸಾಲು ಹಗರಣಗಳನ್ನು ಹೊಂದಿರುವ ಬಿಜೆಪಿ ಶಾಸಕರು, ನಾಯಕರ ಮೇಲೆ ಐಟಿ -ಇಡಿ ದಾಳಿ ನಡೆದಿಲ್ಲ, ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ದಾಳಿ ಇಲ್ಲ, ಬಳ್ಳಾರಿ ರೆಡ್ಡಿ ಬ್ರದರ್ ಮೇಲೆ ಇದ್ದ ಕೇಸ್’ಗಳು ಬಿಜೆಪಿ ಸೇರಿದ ಕೊಡಲೇ ಎಲ್ಲವು ಖುಲಾಸೆ ಆಗಿದೆ. ಹೀಗೆ ಕೇಂದ್ರ ಸಚಿವರುಗಳು,…

Read More

ನವದೆಹಲಿ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಚಂಡೀಗಢ-ದಿಬ್ರುಗಢ ಎಕ್ಸ್ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಮತ್ತು 32 ಜನರು ಗಾಯಗೊಂಡಿದ್ದಾರೆ. ಓರ್ವ ಮಹಿಳೆ ಸೇರಿದಂತೆ ಗಾಯಗೊಂಡ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಗೊಂಡಾ ಪಟ್ಟಣದಿಂದ 30 ಕಿ.ಮೀ ದೂರದಲ್ಲಿರುವ ಜಿಲಾಹಿ ಮತ್ತು ಮೋತಿಗಂಜ್ ರೈಲ್ವೆ ನಿಲ್ದಾಣಗಳ ನಡುವೆ ಚಂಡೀಗಢದಿಂದ ಅಸ್ಸಾಂಗೆ ತೆರಳುತ್ತಿದ್ದ ರೈಲು ಹಳಿ ತಪ್ಪಿದೆ. ಮೃತರನ್ನು ಚಂಡೀಗಢ ನಿವಾಸಿ ರಾಹುಲ್ (38) ಎಂದು ಗುರುತಿಸಲಾಗಿದೆ. ಮತ್ತು ಬಿಹಾರದ ಸರೋಜ್ ಕುಮಾರ್ ಸಿಂಗ್ (30). ಮೂರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಹಳಿ ತಪ್ಪುವ ಮೊದಲು ಸ್ಫೋಟದ ಶಬ್ದ ಕೇಳಿದೆ ಎಂದು ರೈಲಿನ ಲೋಕೋ ಪೈಲಟ್ ಹೇಳಿರುವ ಹೇಳಿಕೆಯ ಬಗ್ಗೆ ರೈಲ್ವೆ ಮತ್ತು ಯುಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೈಲ್ವೆ ಸುರಕ್ಷತಾ ಆಯೋಗದ ತನಿಖೆಯ ಹೊರತಾಗಿ, ಹಳಿ ತಪ್ಪಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ…

Read More

ಬಳ್ಳಾರಿ : ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ಮನೆ ಒಳಗಿನ ಫ್ರಿಜ್, ಎರ್‍ಕೂಲರ್, ಅಲಂಕೃತ ಗಿಡಗಳ ಕುಂಡಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಡೆಂಗ್ಯು ಹರಡದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ. ಈಡಿಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಸಹ ಲಕ್ಷಣಗಳಾಧರಿಸಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಹೊರತಾಗಿ ಸಾರ್ವಜನಿಕರು ಮನೆಯ ಒಳಗೆ ಸೊಳ್ಳೆ ಉತ್ಪತ್ತಿಯಾಗುವಂತಹ ಫ್ರಿಜ್‍ನ ಹಿಂಭಾಗ, ಅಲಂಕೃತವಾಗಿ ಬಳಸುವ ಮನಿಪ್ಲಾಂಟ್ ಕುಂಡಗಳು (ಬಾಟಲ್), ಸ್ನಾನಗೃಹದಲ್ಲಿ ಮುಚ್ಚಳ ಮುಚ್ಚಲು ಸಾಧ್ಯವಿಲ್ಲದ ಸಿಮೆಂಟ್ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರು ಖಾಲಿ ಮಾಡಬೇಕು ಎಂದು ಹೇಳಿದ್ದಾರೆ. ಶಿಕ್ಷಕರು ಶಾಲೆ, ಅಂಗನವಾಡಿಗಳಲ್ಲಿ ಪ್ರಾರ್ಥನೆ ವೇಳೆ ಮಕ್ಕಳಿಗೆ ತಮ್ಮ ಮನೆಯಲ್ಲಿ ನೀರು ಸಂಗ್ರಹಾರಕಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ ನೀರು ತುಂಬಿದ ನಂತರ ಮುಚ್ಚಳ ಮುಚ್ಚುವಂತೆ ಪಾಲಕರ ಮನವೊಲಿಸಲು ತಿಳಿಸಬೇಕು. ಲಾರ್ವಾ ಪತ್ತೆ ಹಚ್ಚಿ ಮಾಹಿತಿ ತಿಳಿಸಿದ ವಿದ್ಯಾರ್ಥಿಗಳಿಗೆ ಎಲ್ಲರ ಸಮ್ಮುಖದಲ್ಲಿ ಪ್ರಶಂಸಿಸಬೇಕು ಎಂದು…

Read More

ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ.6 ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಪ್ರಸಕ್ತ(2024-25) ಸಾಲಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಶೇ.6 ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವ ಪ್ರತಿ ಫಲಾನುಭವಿಗಳಿಗೆ ಗರಿಷ್ಠ 65 ಸಾವಿರ ರೂ ಸಾಲದ ಮೊತ್ತಕ್ಕೆ ಶೇ.6 ಬಡ್ಡಿ ಸಹಾಯಧನ (3625 ರೂ.) ನೀಡಲಾಗುತ್ತದೆ. ಪ್ರತಿ ಹಸು/ಎಮ್ಮೆ ಘಟಕದ ಮೊತ್ತ ರೂ:65000, ಶೇ.6 ವಾರ್ಷಿಕ ಬಡ್ಡಿ ಸಹಾಯಧನದ ಪ್ರತಿ ಫಲಾನುಭವಿಗೆ ಗರಿಷ್ಟ ರೂ.3624.50/-(3625), ಆಸಕ್ತ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಸಂಬಂಧಪಟ್ಟ ಪಶು ಆಸ್ಪತ್ರೆಗಳನ್ನು…

Read More

ಬೆಂಗಳೂರು : 2024-25ನೇ ಸಾಲಿಗೆ ಸಮಾಜ ಕಲ್ಯಾಣ ಇaಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಊಟ-ವಸತಿಯೊಂದಿಗೆ, ಯು.ಪಿ.ಎಸ್.ಸಿ ಸಂಯೋಜಿತ ಪದವಿ (Integrated Under Graduate Degree) ತರಬೇತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಊಟ-ವಸತಿಯೊಂದಿಗೆ, ಯು.ಪಿ.ಎಸ್.ಸಿ ಸಂಯೋಜಿತ ಪದವಿ (Integrated Under Graduate Degree) ತರಬೇತಿ ನೀಡಲು ಉದ್ದೇಶಿಸಲಾಗಿದೆ. ಯು.ಪಿ.ಎಸ್.ಸಿ ಸಂಯೋಜಿತ ಪದವಿ (Integrated Under Graduate Degree) ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.

Read More