Author: kannadanewsnow57

ಬೆಂಗಳೂರು : ಗರ್ಭಿಣಿ ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಯಡಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕøತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿ ಮಹಿಳೆಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ ನೋಂದಣಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆ ಮಾಹಿತಿಯ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್(ಯಾವುದಾದರು ಪ್ರತಿ) ಸಲ್ಲಿಸಬೇಕು. ಮಹಿಳೆಯ ಮೊದಲ ಪ್ರಸವದ ಮತ್ತು ನಂತರದ ಸಾಕಷ್ಟು ವಿಶ್ರಾಂತಿಗಾಗಿ ಆಂಶಿಕ ಪರಿಹಾರವನ್ನು ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು…

Read More

ಮನಾಲಿ : ಹಿಮಾಚಾಲ ಪ್ರದೇಶದಲ್ಲಿ ಭಾರೀ ಹಿಮಪಾತವಾದ ಹಿನ್ನೆಲೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವು ರಸ್ತೆಗಳು ಬಂದ್ ಆಗಿ ಪ್ರವಾಸಿಗರು ಪರದಾಟ ನಡೆಸುತ್ತಿದ್ದಾರೆ. ಶಿಮ್ಲಾ, ಮನಾಲಿ ಮತ್ತು ಹಿಮಾಚಲ ಪ್ರದೇಶದ ಇತರ ಪ್ರವಾಸಿ ಕೇಂದ್ರಗಳಲ್ಲಿ ಜನರು ‘ವೈಟ್ ಕ್ರಿಸ್‌ಮಸ್’ ಅನ್ನು ಅನುಭವಿಸುತ್ತಿರುವಾಗ, ಹಿಮಪಾತವು 200 ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲು ಕಾರಣವಾಯಿತು, ಹೋಟೆಲ್ ಬುಕಿಂಗ್‌ನಲ್ಲಿ ಹೆಚ್ಚಳವಾಗಿದೆ ಮತ್ತು ವಾಹನ ಸ್ಕಿಡ್ ಮಾಡುವ ಘಟನೆಗಳಿಂದ ನಾಲ್ಕು ಸಾವುಗಳು ಸಂಭವಿಸಿವೆ. ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಹಿಮಾಚಲ ಪ್ರದೇಶದ ಶಿಮ್ಲಾ, ಮನಾಲಿ ಮತ್ತು ಹಲವಾರು ಇತರ ಪಟ್ಟಣಗಳು ​​ಹಿಮಪಾತ ಆಗುತ್ತಿದ್ದು, ಇದು ಈ ಡಿಸೆಂಬರ್ 25 ಅನ್ನು ‘ಬಿಳಿ ಕ್ರಿಸ್ಮಸ್’ ಆಗಿ ಮಾಡುತ್ತದೆ, ಇದು ಈ ಸಮಯದಲ್ಲಿ ಪ್ರವಾಸಿಗರಿಗೆ ಹೆಚ್ಚು ಅಪೇಕ್ಷಿತ ದೃಶ್ಯವಾಗಿದೆ. https://twitter.com/i/status/1871434759727112701 https://twitter.com/i/status/1871208286348865933

Read More

ಬೆಂಗಳೂರು : ಡಿಸೆಂಬರ್ 25 ರ ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದು, ಇಂದು ಕ್ರಿಸ್ಮಸ್ ಹಿನ್ನೆಲೆಯಲ್ಲಿ ರಿಚರ್ಡ್ ಪಾರ್ಕ್ ಹತ್ತಿರ ಡೇವಿಸ್ ರಸ್ತೆಯಲ್ಲಿರುವ ಹೋಲಿ ಗೋಸ್ಟ್ ಚರ್ಚ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಕೆಳಕಂಡ ರಸ್ತೆಯಲ್ಲಿ ಮಧ್ಯಾಹ್ನ 12 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಿಂದ ಕುಕ್ಸನ್ ರಸ್ತೆ ಜಂಕ್ಷನ್‌ ವರೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಿದೆ ಸಂಚಾರಿ ಸಲಹೆ ಡೇವಿಸ್ ರಸ್ತೆ ಕಡೆಯಿಂದ ಹೆಚ್​​.ಎಂ ರಸ್ತೆ ಕಡೆಗೆ ಸಂಚರಿಸುವವರು ಡೇವಿಸ್ ರಸ್ತೆಯಲ್ಲಿ ಜಾನ್ ಆರ್ಮ್‌ ಸ್ಟ್ರಾಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನೇರವಾಗಿ ಸಾಗಿ ವಿವಿಯಾನಿ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಂಚರಿಸಿ ಕುಕ್ಸನ್ ರಸ್ತೆಯಲ್ಲಿ ಎಡತಿರುವು ಪಡೆದು ಡೇವಿಸ್ ರಸ್ತೆ ತಲುಪಿ ನಂತರ ಡೇವಿಸ್ ರಸ್ತೆಯಲ್ಲಿ…

Read More

ಕಲಬುರಗಿ : ಶಾಲಾ ಬಸ್​ಗೆ ಮಗುವನ್ನು ಹತ್ತಿಸುವಾಗ ವಿದ್ಯುತ್​ ವೈಯರ್​ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಮೋಹನ್​ ಲಾಡ್ಜ್​​ ಮುಂಭಾಗದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕರೆಂಟ್​ ಶಾಕ್​ನಿಂದ (Electric shock) ಗಂಭೀರವಾಗಿ ಗಾಯಗೊಂಡಿರುವ ಬಾಗ್ಯಶ್ರೀ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಬಾಗ್ಯಶ್ರೀ ಅವರು ತಮ್ಮ ಬುದ್ಧಿಮಾಂದ್ಯ ಮಗನನ್ನ ಶಾಲೆಗೆ ಕಳುಹಿಸಲು ಶಾಲಾ ವಾಹನ ಹತ್ತಿಸಲು ಬಂದಿದ್ದರು. ಈ ವೇಳೆ ರಸ್ತೆಯ‌ಲ್ಲಿ ತುಂಡಾಗಿ ಬಿದ್ದಿದ್ದ ವೈರ್ ತಗುಲಿದ್ದು,ಶಾಕ್​ ಹೊಡೆದು ಭಾಗ್ಯಶ್ರೀ ಅವರು ರಸ್ತೆಯಲ್ಲಿ ಬಿದ್ದು ವಿಲವಿಲ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ಭಾಗ್ಯಶ್ರೀ ಸಾವು-ಬದಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಭಾಗ್ಯಶ್ರೀ ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಜೆಸ್ಕಾಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. https://twitter.com/i/status/1871436353680158964

Read More

ಬೆಂಗಳೂರು : ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು ಈ ಸಂಘದ ಸದಸ್ಯತ್ವ ಶುಲ್ಕವನ್ನು ಕಟಾವಣೆ ಮಾಡುವ ಕುರಿತು ಶಿಕ್ಷಣ ಇಲಾಖೆ ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ(ರಿ), ಬೆಂಗಳೂರು ಈ ಸಂಘದ ಸದಸ್ಯತ್ವ ಶುಲ್ಕವನ್ನು ಸರ್ಕಾರದ ಉಲ್ಲೇಖ-1 ಮತ್ತು 2ರ ಆದೇಶಗಳಲ್ಲಿ ತಿಳಿಸಿರುವಂತೆ 2024-25ನೇ ಸಾಲಿಗೆ 2024ರ ಡಿಸೆಂಬರ್ ತಿಂಗಳ ವೇತನದಿಂದ ಹಾಗೂ ಮುಂಬರುವ ವರ್ಷಗಳಲ್ಲಿ ಪ್ರತಿ ಏಪ್ರಿಲ್ ತಿಂಗಳ ವೇತನದಿಂದ ಕಟಾವಣೆ ಮಾಡಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಹಾಗೂ ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳನ್ನು ಕೋರಲಾಗಿದೆ. (ಪತಿಗಳನ್ನು ಲಗತ್ತಿಸಿದೆ)

Read More

ಬೆಂಗಳೂರು : ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ವೇಳೆ ಬಂದೋಬಸ್ತ್‌ಗೆ ಪೊಲೀಸ್‌ ಇಲಾಖೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದಾರೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ವೇಳೆ ಬಂದೋಬಸ್ತ್ಗೆ ಪೊಲೀಸ್‌ ಇಲಾಖೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚನೆ * ಮಾಲ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು * ಪೊಲೀಸ್ ಸಿಬ್ಬಂದಿ ಹೆಲೈಟ್ ಹಾಗೂ ಲಾಠಿಯನ್ನು ಹೊಂದಿರಬೇಕು . ಎಲ್ಲ ಅಧಿಕಾರಿಗಳು ಸರ್ವೀಸ್ ರಿವಾಲ್ವ‌ರ್ ಅನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು * ಹೆಣ್ಣು ಮಕ್ಕಳನ್ನು ಚುಡಾಯಿಸುವವರು ಹಾಗೂ ದಾಂಧಲೆ ನಡೆಸುವವರನ್ನು ಕೂಡಲೇ ವಶಕ್ಕೆ ಪಡೆದುಕೊಂಡು ಕ್ರಮ ತೆಗೆದುಕೊಳ್ಳಬೇಕು * ರಸ್ತೆ ಮೇಲೆ ಬಾಟಲಿ ಒಡೆದು ದಾ೦ಧಲೆ ನಡೆಸುವವರನ್ನು ತಕ್ಷಣವೇ ವಶಕ್ಕೆ ಪಡೆದುಕೊಳ್ಳಬೇಕು * ಹೆಚ್ಚಿನ ಜನರು ಜಮಾವಣೆ ಆಗುವ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿರಬೇಕು * ಚರ್ಚ್‌ ಸ್ಟ್ರೀಟ್, ಬ್ರಿಗೇಡ್‌ ರಸ್ತೆ ಹಾಗೂ ಮಹಾತ್ಮಗಾಂಧಿ ರಸ್ತೆಯಲ್ಲಿ ಆಗಮನ ಹಾಗೂ ನಿರ್ಗಮನ ದ್ವಾರಗಳನ್ನು ಅಳವಡಿಸಬೇಕು…

Read More

ನವದೆಹಲಿ : ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ ಇತ್ಯಾದಿಗಳ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಂಗಿಕ ದೌರ್ಜನ್ಯ ಮತ್ತು ಆಸಿಡ್ ದಾಳಿಯಿಂದ ಬದುಕುಳಿದವರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ನರ್ಸಿಂಗ್ ಹೋಂಗಳು ಅಂತಹ ಸಂತ್ರಸ್ತರಿಗೆ / ಬದುಕುಳಿದವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದೆ. . ಬದುಕುಳಿದವರನ್ನು “ಪ್ರಥಮ ಚಿಕಿತ್ಸೆ, ರೋಗನಿರ್ಣಯ ಪರೀಕ್ಷೆಗಳು, ಲ್ಯಾಬ್ ಪರೀಕ್ಷೆಗಳು, ಶಸ್ತ್ರಚಿಕಿತ್ಸೆ ಮತ್ತು ಅಗತ್ಯವಿರುವ ಯಾವುದೇ ವೈದ್ಯಕೀಯ ಮಧ್ಯಸ್ಥಿಕೆ ಸೇರಿದಂತೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸದೆ ಹಿಂತಿರುಗಿಸಲಾಗುವುದಿಲ್ಲ” ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಯಾವುದೇ ವೈದ್ಯಕೀಯ ವೃತ್ತಿಪರರು, ಅರೆವೈದ್ಯಕೀಯ ವೃತ್ತಿಪರರು, ವೈದ್ಯಕೀಯ ಸಂಸ್ಥೆಗಳು, ಸಾರ್ವಜನಿಕ ಅಥವಾ ಖಾಸಗಿಯಾಗಿದ್ದರೂ, ಅಂತಹ ಸಂತ್ರಸ್ತರಿಗೆ / ಬದುಕುಳಿದವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ…

Read More

ನವದೆಹಲಿ : ಇಂದು (ಡಿಸೆಂಬರ್ 25) ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ. ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಈ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿಯೂ ಆಚರಿಸಲಾಗುತ್ತದೆ. ವಾಜಪೇಯಿ ಅವರ ಪರಂಪರೆಯನ್ನು ಗೌರವಿಸಲು ಎನ್‌ಡಿಎ ಉನ್ನತ ನಾಯಕರು ಯಾವಾಗಲೂ ಅಟಲ್ ಸ್ಮಾರಕದಲ್ಲಿ ಸೇರುತ್ತಾರೆ. ಆಚರಣೆಗಳು ವಿವಿಧ ಹಂತಗಳಲ್ಲಿ ನಡೆಯಲಿವೆ, ಅದರಲ್ಲಿ ಮೊದಲನೆಯದು ನವದೆಹಲಿಯಲ್ಲಿ ನಡೆಯಲಿದೆ, ಅಲ್ಲಿ ‘ಸದೈವ್ ಅಟಲ್’ ಸ್ಮಾರಕದಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಮೈತ್ರಿ ಪಾಲುದಾರರ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಕೂಟವು ವಾಜಪೇಯಿಯವರಿಗೆ ಶ್ರದ್ಧಾಂಜಲಿ ಮಾತ್ರವಲ್ಲದೆ ಎನ್‌ಡಿಎ ಸರ್ಕಾರದ ಏಕತೆ ಮತ್ತು ರಾಜಕೀಯ ಶಕ್ತಿಯನ್ನು ಒತ್ತಿಹೇಳುವ ಅವಕಾಶವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದು ಪ್ರಧಾನಿ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಹೀಗೆ. ಮಾಜಿ…

Read More

ಡಿಸೆಂಬರ್ : ಅರ್ಜೆಂಟೀನಾದ ಕ್ಯಾಟಮಾರ್ಕಾದಲ್ಲಿ ಬೆಳ್ಳಂಬೆಳಗ್ಗೆ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ. ಭೂಕಂಪವು 133 ಕಿಮೀ (82.64 ಮೈಲುಗಳು) ಆಳದಲ್ಲಿದೆ ಎಂದು EMSC ತಿಳಿಸಿದೆ. ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಕೇವಲ 6 ನಿಮಿಷಗಳ ಹಿಂದೆ ಅರ್ಜೆಂಟೀನಾದಲ್ಲಿ ಟಿನೊಗಾಸ್ಟಾ, ಡಿಪಾರ್ಟಮೆಂಟೊ ಡಿ ಟಿನೊಗಾಸ್ಟಾ, ಕ್ಯಾಟಮಾರ್ಕಾ ಬಳಿ 5.7 ತೀವ್ರತೆಯ ಭೂಕಂಪವನ್ನು ವರದಿ ಮಾಡಿದೆ. ಭೂಕಂಪವು ಮಂಗಳವಾರ, ಡಿಸೆಂಬರ್ 24, 2024 ರಂದು ಸಂಜೆ 7:42 ಕ್ಕೆ ಸ್ಥಳೀಯ ಕಾಲಮಾನದಲ್ಲಿ ಮಧ್ಯಂತರದಿಂದ 229.2 ಕಿಮೀ ಆಳದಲ್ಲಿ ಸಂಭವಿಸಿದೆ. ಭೂಕಂಪಶಾಸ್ತ್ರಜ್ಞರು ಡೇಟಾವನ್ನು ಪರಿಶೀಲಿಸಿ ಮತ್ತು ಅವರ ಲೆಕ್ಕಾಚಾರಗಳನ್ನು ಪರಿಷ್ಕರಿಸಿ ಅಥವಾ ಇತರ ಏಜೆನ್ಸಿಗಳು ತಮ್ಮ ವರದಿಯನ್ನು ನೀಡಿದಂತೆ ನಿಖರವಾದ ಪ್ರಮಾಣ, ಅಧಿಕೇಂದ್ರ ಮತ್ತು ಭೂಕಂಪದ ಆಳವನ್ನು ಮುಂದಿನ ಕೆಲವು ಗಂಟೆಗಳು ಅಥವಾ ನಿಮಿಷಗಳಲ್ಲಿ ಪರಿಷ್ಕರಿಸಬಹುದು. ನಂತರ ಎರಡನೇ ವರದಿಯನ್ನು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ನೀಡಿತು, ಇದು 5.5 ತೀವ್ರತೆಯ ಭೂಕಂಪ ಎಂದು…

Read More

ಬೆಂಗಳೂರು: ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ. ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಇ-ಖಾತಾ ಪಡೆಯಲು ಇ-ಕೆವೈಸಿ ಕಡ್ಡಾಯ 1.ಆಧಾರ್ ಇ-ಕೆವೈಸಿ 2.ಆಸ್ತಿಯ GPS ಫೋಟೋ 3.SAS ಆಸ್ತಿ ತೆರಿಗೆ/ ಅರ್ಜಿ ಸಂಖ್ಯೆ 4.ಬೆಸ್ಕಾಂ ಮೀಟರ್ ಸಂಖ್ಯೆ ನಿಮ್ಮ ಆಸ್ತಿಗಳನ್ನು ಮಾರಲು ಅಥವಾ ಯಾವುದೇ ಆಸ್ತಿ ವಹಿವಾಟಿಗಾಗಿ ಈಗಲೇ ನಿಮ್ಮ ಇ-ಖಾತಾ ಪಡೆಯಿರಿ. * ವಂಚನೆಯುಕ್ತ, ಅಕ್ರಮ ನೋಂದಣಿಗಳು ಮತ್ತು ನಕಲಿ ಖಾತೆಗಳಿಗೆ ತಡೆ * ಒಂದೇ ಆಸ್ತಿಯ ಮೇಲಿನ ಬಹು-ನೋಂದಣಿಗಳಿಗೆ ಕಡಿವಾಣ * ಆಸ್ತಿ ವಿವಾದಗಳ ನಿಯಂತ್ರಣ * ತ್ವರಿತ, ಪಾರದರ್ಶಕ ವಹಿವಾಟು *…

Read More