Author: kannadanewsnow57

ಬೆಂಗಳೂರು : ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರೇ ಹಣ ಹೊಂದಿಸಿಕೊಳ್ಳಬೇಕು, ಕೇಂದ್ರ ಸರ್ಕಾರವನ್ನು ಕೇಳಬಾರದು ಎನ್ನುವ ನಿರ್ಮಲಾ ಸೀತಾರಾಮನ್ ಅವರ ಯಜಮಾನಿಕೆಯ ಧೋರಣೆ ಅತ್ಯಂತ ಖಂಡನೀಯ, ಈ ಹೇಳಿಕೆ ಆರುವರೆ ಕೋಟಿ ಕನ್ನಡಿಗರಿಗೆ ತೋರಿರುವ ಅಗೌರವ ಮತ್ತು ಮಾಡಿರುವ ಅವಮಾನ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಶತಾಯಗತಾಯ ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿ ಬಡವರಿಗೆ ನೀಡಲಾಗಿರುವ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವಂತೆ ಮಾಡಬೇಕೆಂಬ ದುರಾಲೋಚನೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಇದೆ ಎನ್ನುವುದು ಕನ್ನಡಿಗರಿಗೆ ಈಗ ಅರ್ಥವಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ರಾಜ್ಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ನೀಡಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೇ, ನಾವು ನಮ್ಮ ಗ್ಯಾರಂಟಿ ಯೋಜನೆಗಳಿಗೆ ವಿಶೇಷವಾದ ಅನುದಾನ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಬೇಡಿಕೊಳ್ಳುತ್ತಿಲ್ಲ, ಈ ಯೋಜನೆಗಳಿಗೆ ಬೇಕಿರುವ ಅನುದಾನವನ್ನು ಬಜೆಟ್ ನಲ್ಲೇ ಮೀಸಲಿಟ್ಟಿದ್ದೇವೆ ಎಂದರು. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ದ ಸಿಡಿದೆದ್ದಿರುವ ಕನ್ನಡಿಗರ ಕೂಗಿಗೆ…

Read More

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ನಂತ್ರ, ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮವನ್ನು ಆಯೋಗವು ಕೈಗೊಂಡಿದೆ. ಇದರ ನಡುವೆ ಭಾನುವಾರ ಒಂದೇ ದಿನ ಬರೋಬ್ಬರಿ 2.84 ಕೋಟಿ ಮೌಲ್ಯದ ಹಣ, ವಸ್ತು, ಮದ್ಯವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಕುರಿತಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಭಾನುವಾರ ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ರೂ.1,87,81,820 ಹಣವನ್ನು ಜಪ್ತಿ ಮಾಡಿರೋದಾಗಿ ತಿಳಿಸಿದ್ದಾರೆ. ಇನ್ನೂ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸರು ಸೇರಿ 133 ಕ್ವಿಂಚಾಲ್ ಪಿಡಿಎಸ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅದರ ಬೆಲೆ ರೂ.3,33,000 ಆಗಿದೆ. ಇದಲ್ಲದೇ 764.55 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ. ಒಟ್ಟಾರೆಯಾಗಿ 5.04 ಕೆಜಿ ಮಾದಕ ದ್ರವ್ಯ, ಅಬಕಾರಿ ಇಲಾಖೆಯಿಂದ 3.65 ಕೆಜಿ ಸೇರಿದಂತೆ 8.69 ಕೆಜಿ ಮಾದಕ ದ್ರವ್ಯ ಸೇರಿದಂತೆ ರೂ.2,84,21,200 ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿರೋದಾಗಿ ತಿಳಿಸಿದೆ.

Read More

ದಾಂಪತ್ಯದಲ್ಲಿ ಅನ್ಯೋನ್ಯತೆಯು ಇದ್ದರೆ ಮಾತ್ರ ಅದು ಹೆಚ್ಚು ಕಾಲ ಬಾಳಿಕೆ ಬರಲು ಸಾಧ್ಯ. ಸಂಗಾತಿಗಳಿಬ್ಬರು ತಮ್ಮ ನಿತ್ಯ ಜೀವನದಲ್ಲಿ ಮಾಡುವಂತಹ ಕೆಲವೊಂದು ಚಟುವಟಿಕೆಗಳು ಹಾಗೂ ಕಾರ್ಯಗಳು ಅವರ ನಡುವಿನ ಭಾಂದವ್ಯವನ್ನು ಹೆಚ್ಚಿಸುವುದು. ಆದರೆ ಇಂದಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗಸ್ಥರಾಗಿರುವ ಕಾರಣದಿಂದಾಗಿ ಜತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಲಿದೆ. ದಂಪತಿಯು ಈ ಚಟುವಟಿಕೆಗಳನ್ನು ಜತೆಯಾಗಿ ನಡೆಸಿದರೆ ಅದರಿಂದ ಅವರ ನಡುವೆ ಭಾಂದವ್ಯ ಹೆಚ್ಚಾಗುವುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಚಟುವಟಿಕೆಗಳ ಬಗ್ಗೆ ತಿಳಿಯಲು ನೀವು ಈ ಲೇಖನ ಓದಿ. ದಂಪತಿಯು ತಮ್ಮ ಮಕ್ಕಳನ್ನು ಇಂತಹ ಜಾಗಗಳಿಗೆ ಕರೆದುಕೊಂಡು ಹೋಗುವುದು ಸಹಜ. ಆದರೆ ದಂಪತಿಗಳಿಬ್ಬರೇ ಇಲ್ಲಿಗೆ ಹೋದರೆ ಅವರ ನಡುವಿನ ಭಾಂದವ್ಯ ಹೆಚ್ಚಾಗುವುದು. ಇಂತಹ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ನಾವು ಕೆಲವೊಂದು ಬಾಲ್ಯದ ವಿಚಾರಗಳನ್ನು ಹಂಚಿ ಕೊಳ್ಳುತ್ತೇವೆ. ಇದು ಇಬ್ಬರ ಮನಸ್ಸನ್ನು ಸರಿಯಾಗಿ ಅರಿಯಲು ಸಾಧ್ಯವಾಗಲಿದೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ ಇದ್ದರೆ ಇನ್ನು ಕೆಲವರಿಗೆ…

Read More

ನವದೆಹಲಿ: ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗಿಂತ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್ ನ ಹೆಚ್ಚಿನ ಹೊರೆ ಇದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ. 2016 ರಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ನ ಹೊರೆ ವಯಸ್ಸಿನ ಪ್ರಮಾಣೀಕರಣದ ನಂತರ 1,00,000 ಮಹಿಳೆಯರಿಗೆ 515.4 ಡಿಎಎಲ್ವೈ ಎಂದು ಅಂದಾಜಿಸಲಾಗಿದೆ. ಪೂರ್ವ ಮತ್ತು ಈಶಾನ್ಯ ಪ್ರದೇಶಗಳಿಗಿಂತ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ದೆಹಲಿಯಲ್ಲಿ ಸ್ತನ ಕ್ಯಾನ್ಸರ್ ನ ಹೆಚ್ಚಿನ ಹೊರೆ ಇದೆ. 2025 ರ ಅಂದಾಜಿನ ಪ್ರಕಾರ 5.6 ಮಿಲಿಯನ್ ಡಿಎಎಲ್ವೈಗಳನ್ನು ತಲುಪುವ ಮೂಲಕ ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ತಿಳಿಸಿದೆ. ಡಿಎಎಲ್ವೈಗಳು ಒಟ್ಟಾರೆ ರೋಗದ ಹೊರೆಯ ಅಳತೆಯಾಗಿದ್ದು, ಅನಾರೋಗ್ಯ, ಅಂಗವೈಕಲ್ಯ ಅಥವಾ ಅಕಾಲಿಕ ಮರಣದಿಂದಾಗಿ ಕಳೆದುಹೋದ ವರ್ಷಗಳ ಸಂಖ್ಯೆಯಾಗಿ ವ್ಯಕ್ತಪಡಿಸಲಾಗುತ್ತದೆ. ಗ್ರಾಮೀಣ ಮಹಿಳೆಯರು ತಮ್ಮ ನಗರ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆ ಕಡಿಮೆ ಮತ್ತು ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ…

Read More

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ರೂ.50 ಸಾವಿರ ಮೇಲ್ಪಟ್ಟು ನಗದು ಹಣವನ್ನು ಸೂಕ್ತ ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗಲು ಮತ್ತು ಸಾಗಾಣಿಕೆ ಮಾಡಲು ಅವಕಾಶ ಇರುವುದಿಲ್ಲ. ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡಿದ ನಗದು ಹಣವನ್ನು ಚುನಾವಣಾ ತಂಡಗಳು ಜಪ್ತಿ ಮಾಡಿ ಸಮಿತಿಗೆ ಹಾಜರುಪಡಿಸಿ ವರದಿ ಸಲ್ಲಿಸಲಾಗುತ್ತದೆ. ಚುನಾವಣಾ ತಂಡದಿಂದ ನಗದು ಹಣವನ್ನು ಜಪ್ತಿ ಮಾಡಿದಲ್ಲಿ, ಸಾರ್ವಜನಿಕರು ಹಣ ಬಿಡುಗಡೆಗಾಗಿ ಮೇಲ್ಮನವಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಕುಂದು ಕೊರತೆಗಳ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಲೋಕಸಭೆ ಸಾರ್ವತ್ರಿಕ ಚುನಾವಣೆಯ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ. ಸಮಿತಿಯ ವಿವರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬಳ್ಳಾರಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ಲೋಕಸಭಾ ಸಾರ್ವತ್ರಿಕ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಲು ಜಲಮಂಡಳಿಯು ಮುಂದಾಗಿದ್ದು, ೨೪ ಸಾವಿರಕ್ಕೂ ಹೆಚ್ಚು ವಾಟರ್ ಟ್ಯಾಂಕರ್ ಗಳಿಗೂ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು, ಉಲ್ಲೇಖ(1)ರ ಪತ್ರದಲ್ಲಿ ಬೆಂಗಳೂರು ನಗರ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 24,000 ಲೀಟರ್ ಮತ್ತು ಮೇಲ್ಪಟ್ಟು ಸಾಮರ್ಥ್ಯದ ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ 200 ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಬಾಡಿಗೆ ಮೇರೆಗೆ ಉಪಯೋಗಿಸಲು ಧರವನ್ನು ನಿಗಧಿಪಡಿಸಲು ಕೋರಿರುತ್ತಾರೆ. ಅದರಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ದರ ನಿಗಧಿಪಡಿಸಲು ತಾಂತ್ರಿಕ ಸಮಿತಿಯನ್ನು ಉಲ್ಲೇಖ(2)ರಂತೆ ರಚಿಸಿ ಆದೇಶಿಸಲಾಗಿರುತ್ತದೆ. ಮುಂದುವರೆದು ಸದರಿ ತಾಂತ್ರಿಕ ಸಮಿತಿಯೂ ಕುಡಿಯುವ ನೀರಿನ ಖಾಸಗಿ ನೀರಿನ ಟ್ಯಾಂಕರ್‌ಗಳ ದರ ನಿಗಧಿಪಡಿಸುವ ಬಗ್ಗೆ ಸಾಧಕ-ಬಾಧಕಗಳು, ಲೋಕೋಪಯೋಗಿ ಇಲಾಖೆಯ ಎಸ್.ಆರ್. ದರಗಳು ಮತ್ತು ವಾಸ್ತವಿಕ ಲಭ್ಯವಿರುವ ಅಂಕಿ- ಅಂಶಗಳನ್ನು…

Read More

ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ಅವರು ಘರ್ ವಾಪ್ಸಿಯಾಗುವುದು ನಿಶ್ಚಿತವಾಗಿದ್ದು, ಇಂದು ಪದಾಧಿಕಾರಿಗಳು, ಬೆಂಬಗಲಿರೊಂದಿಗೆ ಬಿಜೆಪಿ ಪಕ್ಷವನ್ನು ಶಾಸಕ ಜನಾರ್ಧನ ರೆಡ್ಡಿ ಇಂದು ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಈ ಸಂಬಂಧ ತಮ್ಮ ನಿವಾಸದಲ್ಲಿ ಸಭೆ ನಡೆಸಿದಂತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಜನಾರ್ಧನರೆಡ್ಡಿ ಅವರು, ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸೋಮವಾರ ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿಪಿ ಪಕ್ಷವನ್ನು ವೀಲನಗೊಳಿಸೋದಾಗಿ ತಿಳಿಸಿದರು. ಸೋಮವಾರ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸುವುದರ ಜೊತೆಗೆ, ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತಾವು ಸೇರ್ಪಡೆಯಾಗಲಿದ್ದೇನೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರೋದಾಗಿ ತಿಳಿಸಿದರು.

Read More

ಬೆಂಗಳೂರು : ಮಾರ್ಚ್ 25 ರಿಂದ 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕ ಪರೀಕ್ಷೆ ಆರಂಭವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದಿನಾಂಕ: 25.03.2024 ರಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಗಳಿರುವ ದಿನಾಂಕ:25.03.2024 ರ ಸೋಮವಾರ ಮತ್ತು 27.03.2024 ರ ಬುಧವಾರದಂದು ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇಲ್ಲದಿರುವ ದಿನಾಂಕ : 26.03.2024 ರ ಮಂಗಳವಾರ ಮತ್ತು 28.03.2024 ರ ಗುರುವಾರದಂದು ಬೆಳಗಿನ ಅವಧಿಯಲ್ಲಿ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ.

Read More

ನವದೆಹಲಿ : ಮಾರ್ಚ್‌ 25 ರ ಇಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನೂರು ವರ್ಷಗಳ ನಂತರ, ಹೋಳಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಚಂದ್ರಗ್ರಹಣ ಗೋಚರಿಸದ ಕಾರಣ ಇದು ಯಾವುದೇ ಪರಿಣಾಮ ಬೀರುವುದಿಲ್ಲ. 2024 ರ ಮೊದಲ ಚಂದ್ರಗ್ರಹಣವು ಇಂದು ಸಂಭವಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇಂದು ಹೋಳಿ ಹಬ್ಬ ಬಂದಿರುವುದರಿಂದ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳಲಿದೆ. ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿದಂತೆ, 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರ ಬುಧವಾರ ಸಂಭವಿಸಲಿದ್ದು, ಮೊದಲ ಸೂರ್ಯಗ್ರಹಣವು ಏಪ್ರಿಲ್…

Read More

ಆರೋಗ್ಯ ಎನ್ನುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ. ದೇಹ ಸುಸ್ಥಿತಿಯಲ್ಲಿದ್ದರೆ ಮಾತ್ರ ದಿನನಿತ್ಯದ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಸಾಧ್ಯ. ಅದು ಮಕ್ಕಳ ವಿಷಯದಲ್ಲಿಯೂ ಅನ್ವಯವಾಗುತ್ತದೆ. ಈಗಂತೂ ಸಾಂಕ್ರಾಮಿಕ ಕಾಯಿಲೆಗಳಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವದು ತುಸು ಕಷ್ಟದ ಕೆಲಸವೇ ಸರಿ. ಇತ್ತೀಚೆಗೆ ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ. ಆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಚೇರಿಗಳು ಆನ್ಲೈನ್‌ ಕೆಲಸಕ್ಕೆ ಅಂತ್ಯ ಹಾಡಿ ಆಫೀಸ್‌ಗೆ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದೆ. ಅದೇ ರೀತಿ ಶಾಲೆಗಳೂ ಕೂಡ ಮಕ್ಕಳಿಗೆ ಆನ್ಲೈನ್‌ ಬದಲಿಗೆ ಭೌತಿಕವಾಗಿ ಪಾಠಮಾಡಲು ಆರಂಭಿಸಿವೆ. ಆದರೆ ಸಮಸ್ಯೆ ಎಂದರೆ ಶಾಲೆಗೆ ಹೋಗುವ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು. ಅದಕ್ಕೆ ಹಲವು ಕಾರಣಗಳಿದೆ. ಆಹಾರ, ಜೀವನ ಶೈಲಿ ಒಂದು ರೀತಿಯಲ್ಲಿ ಕಾರಣವಾದರೆ ಮಕ್ಕಳು ಇರುವ ವಾತಾವರಣ ಕೂಡ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಇದನ್ನು ಹೊರತುಪಡಿಸಿ ಇನ್ನೂಂದಿಷ್ಟು ಕಾರಣಗಳಿಂದ ಮಕ್ಕಳು ಆಗಾಗ ಹುಷಾರಿಲ್ಲದಂತೆ ಆಗುತ್ತಾರೆ. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಶಾಲೆಗೆ ಹೋಗುವ ಗಡಿಬಿಡಿಯಲ್ಲಿ ಸರಿಯಾಗಿ ಆಹಾರ ತಿನ್ನದೇ ಇರುವುದು, ಪೌಷ್ಟಿಕಾಂಶಗಳ ಕೊರತೆ…

Read More