Author: kannadanewsnow57

ಇಂಡೋನೇಷ್ಯಾ : ಇಂಡೋನೇಷ್ಯಾದ ಅತಿದೊಡ್ಡ ದ್ವೀಪದಲ್ಲಿ ಪದವಿ ಪ್ರವಾಸಕ್ಕಾಗಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಕನಿಷ್ಠ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಜಾವಾ ದ್ವೀಪ ಪಟ್ಟಣ ಡೆಪೋಕ್ನಿಂದ ಜನಪ್ರಿಯ ಪ್ರವಾಸಿ ತಾಣವಾದ ಲೆಂಬಾಂಗ್ಗೆ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕರೆದೊಯ್ಯುತ್ತಿದ್ದ ಬಸ್ ಶನಿವಾರ ಸಂಜೆ 6:48 ಕ್ಕೆ (ಸ್ಥಳೀಯ ಸಮಯ) ಅಪಘಾತಕ್ಕೀಡಾಗಿದೆ. ವಿದ್ಯಾರ್ಥಿಗಳು ಶಾಲಾ ಪ್ರವಾಸದಲ್ಲಿದ್ದಾಗ ಬಸ್ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ಎಡಕ್ಕೆ ವಾಲಿತು, ಕಾರು ಮತ್ತು ಮೂರು ಮೋಟಾರು ಬೈಕುಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪಶ್ಚಿಮ ಜಾವಾ ಪ್ರಾಂತ್ಯದ ಪೊಲೀಸ್ ವಕ್ತಾರ ಜೂಲ್ಸ್ ಅಬ್ರಹಾಂ ಅಬಾಸ್ಟ್ ಭಾನುವಾರ ಎಎಫ್ಪಿಗೆ ತಿಳಿಸಿದರು. ಮೃತಪಟ್ಟ ಪ್ರಯಾಣಿಕರಲ್ಲಿ ಒಂಬತ್ತು ಮಂದಿ ವಿದ್ಯಾರ್ಥಿಗಳು ಮತ್ತು ಅವರಲ್ಲಿ ಒಬ್ಬರು ಶಿಕ್ಷಕರಾಗಿದ್ದರು ಎಂದು ಅಬಸ್ತ್ ಹೇಳಿದರು.

Read More

ಮೈಸೂರು : ಕಲುಷಿತ ನೀರು ಸೇವಿಸಿ ಒಂದೇ ಗ್ರಾಮದ 25 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿಯಲ್ಲಿ ನಡೆದಿದೆ. ಜೆಜೆಎಂ ಯೋಜನೆಯ ಕಾಮಗಾರಿ ಪೈಲ್ ಲೈನ್ ಒಡೆದು ಕಲುಷಿತ ನೀರು ಸೇರ್ಪಡೆಯಾಗಿ ಕಡೇಮನುಗನಹಳ್ಳಿಯ 25 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದ ಗ್ರಾಮದ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ತಮ್ಮ ಜನ್ಮದಿನವಾದ ಮೇ 15 ರಂದು ಚುನಾವಣೆ ಪ್ರಚಾರ, ಖಾಸಗಿ ಕಾರ್ಯಕ್ರಮ ನಿಮಿತ್ತ ತಾವು ಉತ್ತರ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಯಾರಿಗೂ ಸಿಗುವುದಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಬಂಧುಗಳು ಅಂದು ತಮ್ಮನ್ನು ಭೇಟಿ ಮಾಡಲು ಪ್ರಯತ್ನಿಸುವುದು ಬೇಡ. ದಯವಿಟ್ಟು ಯಾರೂ ತಪ್ಪು ತಿಳಿಯಬಾರದು. ತಾವು ಇದ್ದಲ್ಲಿಂದಲೇ ನನ್ನನ್ನು ಆಶೀರ್ವದಿಸಿ, ಹಾರೈಸಿ ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರಗಾಲವಿದೆ. ಮಳೆ, ಬೆಳೆ ಇಲ್ಲದೆ ಜನರು ಬವಣೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ನನ್ನ ಜನ್ಮದಿನವನ್ನು ಆಚರಿಸಬಾರದು. ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬಾರದು. ಕಟೌಟ್, ಪೋಸ್ಟರ್ಸ್ ಹಾಕುವುದಾಗಲಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದಾಗಲಿ ಮಾಡಬಾರದು. ನಿಮ್ಮ ಪ್ರೀತಿಯಷ್ಟೇ ನನಗೆ ಸಾಕು. ಅದುವೇ ನನಗೆ ಶ್ರೀರಕ್ಷೆ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಫೇಲ್ ಆಗಿದ್ದಕ್ಕೆ ಹೆದರಿ ಎಂಜಿನಿಯರಿಂಗ್ ವಿದ್ಯಾರ್ಥಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಕ್ಕೆ ಹೆದರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಹಾರ ಮೂಲದ ಅಮೃತೇಶ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಹೇಮಲತಾ ಪಾಂಡೆ, ವಿಜಯಶಂಕರ್ ದಂಪತಿಯ ಮಗ ಅಮೃತೇಶ್ ಪಾಂಡೆ ಆರ್. ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಆದರೆ ಎರಡು ವಿಷಯದಲ್ಲಿ ಫೇಲ್ ಆಗಿದ್ದು, ತಂದೆಗೆ ತಿಳಿಯುತ್ತದೆ ಎಂದು ಹೆದರಿ ಜಿಗಣಿ ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಗಣಿ ಕೆರೆಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳೀಯರು ಜಿಗಣಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಸೈನಿಕರ ಡ್ರೆಸ್ ಕೋಡ್ಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿ, ಮಹಿಳಾ ಸೈನಿಕರ ಡ್ರೆಸ್ ಕೋಡ್ ಬಗ್ಗೆ ವಿಶೇಷ ವಿಷಯಗಳನ್ನು ಹೇಳಲಾಗಿದೆ. ಬಿಎಸ್ಎಫ್ ಹೊರಡಿಸಿದ ಸುತ್ತೋಲೆಯಲ್ಲಿ ಮಹಿಳಾ ಸೈನಿಕರು ಕರ್ತವ್ಯದಲ್ಲಿರುವಾಗ ಭಾರವಾದ ಮೇಕಪ್, ಉದ್ದನೆಯ ಕಿವಿಯೋಲೆಗಳು, ತೆರೆದ ಕೂದಲು ಮತ್ತು ಹೆಚ್ಚಿನ ಬಳೆಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಶಿಸ್ತುಬದ್ಧ ಪಡೆಗೆ ಇದು ಒಳ್ಳೆಯದಲ್ಲ. ಯಾವುದೇ ಮಹಿಳಾ ಸಿಬ್ಬಂದಿ ಈ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಸುತ್ತೋಲೆಯನ್ನು ಮೇ 6 ರಂದು ಹೊರಡಿಸಲಾಗಿದೆ. ಮಹಿಳಾ ಸೈನಿಕರು ಕರ್ತವ್ಯದ ಸಮವಸ್ತ್ರವನ್ನು ಧರಿಸಿ ಭಾರಿ ಮೇಕಪ್ ಧರಿಸಿರುವುದು ಕಂಡುಬಂದಾಗ ಸುತ್ತೋಲೆ ಹೊರಡಿಸುವ ಅಗತ್ಯವು ಉದ್ಭವಿಸಿತು. ಇದಲ್ಲದೆ, ಮಹಿಳಾ ಸೈನಿಕರು ಕರ್ತವ್ಯದ ಸಮವಸ್ತ್ರದೊಂದಿಗೆ ಸಾಕಷ್ಟು ಅಲಂಕಾರಿಕ ಬಳೆಗಳನ್ನು ಧರಿಸಿದ್ದ ಅನೇಕ ಪ್ರಕರಣಗಳಿವೆ. ಬಿಎಸ್ಎಫ್ನಲ್ಲಿ ಡ್ರೆಸ್ ಕೋಡ್ನ ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ,…

Read More

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರು ಮೇ. 15 ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ವಿಮಾನ ಟಿಕೆಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯಕ್ಕೆ ವಾಪಸ್ ಬರಲು ಪ್ರಜ್ವಲ್ ರೇವಣ್ಣ ಅವರು ಲುಪ್ತಾನ್ಸಾ ಫ್ಲೈಟ್ ಟಿಕೆಟ್ ಬುಕ್ ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಆದರೆ ಇದೀಗ ಈ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ. ಮೇ.15 ರ ಮಧ್ಯಾಹ್ನ 1.30 ಕ್ಕೆ ಫ್ರಾಂಕ್ ಫರ್ಟ್ ನಿಂದ ವಿಮಾನವು ಹೊರಡಲಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಆದರೆ ಈ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿದ್ದ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್ ಐಟಿಗೆ ನೀಡುವ ಮುನ್ನವೇ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಹೋಗಿದ್ದು,ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ…

Read More

ದಾವಣಗೆರೆ : ವಯೋಸಹಜವಾಗಿ ಮೃತಪಟ್ಟ ತಂದೆ ಸಾವಿನಿಂದ ಮನನೊಂದ ಮಗ ವಿಷ ಸೇವಿಸಿ ಆತ್ಮತಹ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ನಡೆದಿದೆ. ವಯೋಸಹಜವಾಗಿ ತಂದೆ ಚಂದ್ರನಾಯ್ಕ್ (೬೨) ಮೃತಪಟ್ಟಿದ್ದು, ತಂದೆ ಸಾವಿನಿಂದ ಮನನೊಂದ ಮಗ ಶಿವಕುಮಾರ್ (೩೨) ಆತ್ಮಹತ್ಯೆಗೆ ಶರಣಾಗಿದ್ದಾರೆ. ದಿವ್ಯಾಂಗನಾಗಿದ್ದ ಶಿವಕುಮಾರ್ ಗೆ ಆಸರೆಯಾಗಿದ್ದ ತಂದೆ ಚಂದ್ರನಾಯ್ಕ್ ಸಾವಿನಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಫಂಗಲ್ ಇನ್ಫೆಕ್ಷನ್ ಹಾಗೂ ಥ್ರೋಟ್ ಇನ್ಫೆಕ್ಷನ್ ಕೇಸ್​ಗಳು 10% ರಷ್ಟು ಹೆಚ್ಚಳವಾಗಿವೆ. ಹವಾಮಾನ ವೈಪರಿತ್ಯದಿಂದಾಗಿ ಥ್ರೋಟ್ ಇನ್ಫೆಕ್ಷನ್ ಜಾಸ್ತಿಯಾಗಿವೆ.‌ ಹೆಚ್ಚು ಬಿಸಿಲು ಅಂತ ಅತೀವವಾದ ತಣ್ಣನೆಯ ಆಹಾರ ಪದಾರ್ಥಗಳನ್ನ ಸೇವಿಸುವುದರ ಜೊತೆಗೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಹವಾಮಾನದಲ್ಲಿನ‌ ಬದಲಾವಣೆಗೆ ದೇಹ ತಕ್ಷಣಕ್ಕೆ ಹೊಂದಿಕೊಳ್ಳುವುದಿಲ್ಲ. ಈ ವೇಳೆ‌ ಥ್ರೋಟ್ ಇನ್ಫೆಕ್ಷನ್ ಕೇಸ್​ಗಳು ಹೆಚ್ಚಾಗಿ ಕಂಡು ಬರಲಿದೆ. ಥ್ರೋಟ್ ಇನ್ಫೆಕ್ಷನ್ ಕಂಟಲು ನೋವು ಬರುವುದು, ಏರು ಉಸಿರು ಕಾಣಿಸಿಕೊಳ್ಳುವುದು, ತಲೆಭಾರವಾಗುವುದು, ಅಲರ್ಜಿ ಆಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಧ್ಯ ಬೆಂಗಳೂರಿನಲ್ಲಿ 10% ರಷ್ಟು ಥ್ರೋಟ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನು, ಥ್ರೋಟ್ ಇನ್ಫೆಕ್ಷನ್ ಜೊತೆಗೆ ಫಂಗಲ್ ಇನ್ಫೆಕ್ಷನ್ ಕೇಸ್​ಗಳು ಸಹ ಹೆಚ್ಚಾಗುತ್ತಿವೆ.ಫಂಗಲ್ ಇನ್ಫೆಕ್ಷನ್ ಹೆಚ್ಚಾದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ‌ ಸ್ಕಿನ್​ನಲ್ಲಿ ವೈಟ್ ಪ್ಯಾಚಾಸ್ ಉಂಟಾಗುವುದು, ಸ್ಕಿನ್ ಡ್ರೈ…

Read More

ಭಾನುವಾರದಂದು ಭಗವಂತನಿಗೆ ಈ ಮಾಲೆಯನ್ನು ನಿಮ್ಮ ಕೈಯಿಂದಲೇ ಕಟ್ಟಿಕೊಂಡರೆ ಎಷ್ಟೇ ದೊಡ್ಡ ಅಡೆತಡೆಯಾದರೂ ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ. ಋಣಭಾರ ತೊಲಗಲು, ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು, ಶತ್ರು ಬಾಧೆಯಿಂದ ಮುಕ್ತಿ ಹೊಂದಲು ಭೈರವನ ಆರಾಧನೆ ಹೇಗೆ ಉತ್ತಮವೋ, ಅದೇ ರೀತಿ ಅಡೆತಡೆಗಳ ನಿವಾರಣೆಗೆ ಭೈರವನ ಆರಾಧನೆ ಮಾಡಬಹುದು. ಕೆಲವು ಕೆಲಸಗಳು ಎಂದಿಗೂ ಮುಗಿಯುವುದಿಲ್ಲ. ನಾವು ಅನೇಕ ವಿಷಯಗಳನ್ನು ಪ್ರಯತ್ನಿಸಿದ್ದೇವೆ. ಭೈರವನನ್ನು ಪೂಜಿಸುವಾಗ ಅಡೆತಡೆಗಳು ಕಂಡುಬಂದರೆ ತಕ್ಷಣವೇ ಅಡೆತಡೆಗಳು ನಿವಾರಣೆಯಾಗುತ್ತವೆ. ಶಿವನ ಅಂಶವುಳ್ಳ ಈ ಭೈರವನಿಗೆ ಎಂತಹ ದೊಡ್ಡ ಸಂಕಷ್ಟವನ್ನೂ ನಿವಾರಿಸುವ ಶಕ್ತಿಯಿದೆ. ಅಡೆತಡೆಗಳನ್ನು ನಿವಾರಿಸುವ ಭೈರವನ ಆರಾಧನೆಯನ್ನು ನಾವೂ ತಿಳಿಯೋಣವೇ? ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ…

Read More

ಬಳ್ಳಾರಿ : ಬಳ್ಳಾರಿಯ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಮಗುವನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ಬಳ್ಳಾರಿ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಮಲಗಿದ್ದ ವೇಳೆ ಭಿಕ್ಷೆ ಬೇಡತ್ತಿದ್ದ ಬಿಬಿ ಫಾತಿಮಾ ಎಂಬುವರ ಮಗುವನ್ನು ಕಿಡ್ನಾಪ್ ಮಾಡಲಾಗಿದೆ. ಮಗು ಹುಡುಕಿ ಕೊಡುವಂತೆ ದೂರು ನೀಡಿದ್ರೂ ಪೊಲೀಸ್ ಸಿಬ್ಬಂದಿ ಸ್ಪಂಧಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಮನೆ ಬಾಡಿಗೆ ಕಟ್ಟಲಾಗದೇ ಕಳೆದ ಎರಡು ತಿಂಗಳಿಂದ ರೈಲ್ವೆ ನಿಲ್ದಾಣದಲ್ಲಿ ವಾಸಿಸುತ್ತಿದ್ದ ಬಿಬಿಫಾತಿಮಾಳ ಮಗುವನ್ನು ಅಪಹರಣ ಮಾಡಲಾಗಿದೆ. ಆ ಜಾಗದಲ್ಲೇ ಸುಭಾನಿ ಎಂಬ ಭಿಕ್ಷುಕ ಮಲಗಿದ್ದ. ಹೀಗಾಗಿ ಆತನೇ ಅಪಹರಣ ಮಾಡಿದ್ದಾನೆ ಎಂದು ಬಿಬಿ ಫಾತಿಮಾ ದೂರು ನೀಡಿದ್ದು, ಗಾಂಘಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More