Subscribe to Updates
Get the latest creative news from FooBar about art, design and business.
Author: kannadanewsnow57
ವಾಷಿಂಗ್ಟನ್ : ಕದನ ವಿರಾಮ ಈಗ ಜಾರಿಯಲ್ಲಿದೆ. ದಯವಿಟ್ಟು ಅದನ್ನು ಉಲ್ಲಂಘಿಸಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ವಿರುದ್ಧ ಇರಾನ್ ಕದನ ವಿರಾಮ ಘೋಷಿಸಿದ್ದು, ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಬೆನ್ನಲ್ಲೇ ಇರಾನ್ ಸಹ ಯುದ್ಧ ವಿರಾಮ ಘೋಷಿಸಿದೆ. https://twitter.com/ANI/status/1937378924536995975?ref_src=twsrc%5Egoogle%7Ctwcamp%5Eserp%7Ctwgr%5Etweet ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. 12 ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು : ಕಾರುಗಳ ಓವರ್ ಟೆಕ್ ವಿಚಾರದಲ್ಲಿ ಗಲಾಟೆಯಾಗಿ ಕಾರಿನಲ್ಲಿದ್ದ ಮುಸ್ಲಿಂ ವ್ಯಕ್ತಿಗಳಿಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಇದೀಗ ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್ ಹಾಗೂ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ದಾಬಸ್ ಪೇಟೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಮ್ಯಾನ್ ಶ್ರೀಧರ್ ಹಾಗೂ ಚಾಲಕ ಮಹೇಶ್ ನನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಕಾರು ಚಾಲಕ ಹಾಗೂ ಗನ್ಮ್ಯಾನ್ ಮೇಲೆ ಎಫ್ಐಆರ್ ದಾಖಲಾಗಿದೆ. ಅನಂತ್ ಕುಮಾರ್ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಚಾಲಕ…
ಬೆಂಗಳೂರು : ನಮ್ಮ ಸರ್ಕಾರದಲ್ಲಿ ಆರ್ಥಿ ತೊಂದರೆ ಇಲ್ಲ. ಮನಸ್ಸಿಗೆ ಬೇಸರಗೊಂಡು ಶಾಸಕ ರಾಜುಕಾಗೆ ಮಾತನಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಮನಸ್ಸಿಗೆ ಬೇಸರಗೊಂಡು ಶಾಸಕ ರಾಜುಕಾಗೆ ಮಾತನಾಡಿದ್ದಾರೆ. ಕೆಲವೊಮ್ಮೆ ಕ್ಷೇತ್ರಗಳಲ್ಲಿ ಅನುದಾನ ಬಿಡುಗಡೆ ಆಗುವುದು ವಿಳಂಬವಾಗುತ್ತದೆ. ಎಸ್ಟಿಮೇಟ್ ಬಳಿಕ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಲಿದೆ ಎಂದರು. ಕಾಂಗ್ರೆಸ್ ಶಾಸಕರಾದಂತಹ ರಾಜು ಕಾಗೆ ರಾಜ್ಯದ ಇಂತಹ ಆಡಳಿತ ವ್ಯವಸ್ತೆಯಿಂದ ನನಗೆ ತುಂಬಾ ನೋವಾಗಿದೆ. ಎರಡು ದಿನದಲ್ಲಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟರು ಯಾವುದೇ ಆಶ್ಚರ್ಯವಿಲ್ಲ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಧಾನ ಹೊರ ಹಾಕಿದ ಅವರು, ರಾಜಿನಾಮೆ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಶಾಸಕ ರಾಜು ಕಾಗೆ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಸ್ವಪಕ್ಷದ ಶಾಸಕರಿಂದಲೇ ಇದೀಗ ಅಸಮಾಧಾನ ಹೊರ ಬೀಳುತ್ತಿದೆ. ನಾನು ಸಹ ರಾಜೀನಾಮೆ ನೀಡುವ…
ನವದೆಹಲಿ : ಮಂಗಳವಾರ ಆಪರೇಷನ್ ಸಿಂಧು ಅಡಿಯಲ್ಲಿ ಇಸ್ರೇಲ್ನಿಂದ 161 ಭಾರತೀಯ ಪ್ರಜೆಗಳು ದೆಹಲಿಗೆ ಆಗಮಿಸಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಪಬಿತ್ರ ಮಾರ್ಗರಿಟಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು ಜೂನ್ 23 ರಂದು ಇಸ್ರೇಲ್ ಆಪರೇಷನ್ ಸಿಂಧು ಹಂತ ಪ್ರಾರಂಭವಾಯಿತು ಎಂದು ಹೇಳಿದ್ದಾರೆ. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಸರ್ಕಾರದ ಅತ್ಯುನ್ನತ ಆದ್ಯತೆಯಾಗಿ ಉಳಿದಿದೆ ಎಂದು ಜೈಸ್ವಾಲ್ ಒತ್ತಿ ಹೇಳಿದರು. X ನಲ್ಲಿನ ಪೋಸ್ಟ್ನಲ್ಲಿ, ಜೈಸ್ವಾಲ್ ಹೀಗೆ ಹೇಳಿದ್ದಾರೆ, “#ಆಪರೇಷನ್ ಸಿಂಧುದ ಇಸ್ರೇಲ್ ಹಂತವು ಜೂನ್ 23, 2025 ರಂದು ಪ್ರಾರಂಭವಾಯಿತು, ಇಸ್ರೇಲ್ನಿಂದ 161 ಭಾರತೀಯ ಪ್ರಜೆಗಳ ಮೊದಲ ಗುಂಪನ್ನು ಮನೆಗೆ ಕರೆತಂದಿತು. ಅವರು ಇಂದು ಬೆಳಿಗ್ಗೆ 0820 ಗಂಟೆಗೆ ಜೋರ್ಡಾನ್ನ ಅಮ್ಮನ್ನಿಂದ ಸುರಕ್ಷಿತವಾಗಿ ನವದೆಹಲಿಗೆ ಬಂದರು. ವಿಮಾನ ನಿಲ್ದಾಣದಲ್ಲಿ, ರಾಜ್ಯ ಸಚಿವ @PmargrheritaBJP ಅವರನ್ನು ಸ್ವೀಕರಿಸಿದರು. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ…
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಮುಚ್ಚಿರುವುದರಿಂದ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನಗಳ ಸ್ಥಿತಿಯ ಕುರಿತು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ವಿನಂತಿಸಲಾಗಿದೆ. ನಿಮ್ಮ ಸಹಕಾರಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದೆ.
ಇಸ್ರೇಲ್ ವಿರುದ್ಧ ಇರಾನ್ ಕದನ ವಿರಾಮ ಘೋಷಿಸಿದ್ದು, ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಬೆನ್ನಲ್ಲೇ ಇರಾನ್ ಸಹ ಯುದ್ಧ ವಿರಾಮ ಘೋಷಿಸಿದೆ. ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. 12 ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ. ತನ್ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರವಾಗಿ ಮತ್ತು ಅಸ್ಥಿರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಕ್ಕಾಗಿ ಇರಾನ್ ಸೋಮವಾರ ಕತಾರ್ ಮತ್ತು ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. “ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಮತ್ತು ಸಂಪೂರ್ಣವಾದ CEASEFIRE (ಇಂದಿನಿಂದ ಸುಮಾರು 6 ಗಂಟೆಗಳಲ್ಲಿ,…
ಬೆಂಗಳೂರು : ಜುಲೈ 2 ರಂದು ನಂದಿ ಬೆಟ್ಟದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಯಾಬಿನೆಟ್ ನಲ್ಲಿ ಮತ್ತೊಂದು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಜುಲೈ 2 ರಂದು ನಂದಿ ಬೆಟ್ಟದಲ್ಲಿ ನಡೆಯುವ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಪಡಿತರ ಅಕ್ಕಿ ಜೊತೆಗೆ ಆಹಾರ ಕಿಟ್ ವಿತರಣೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ. ಸಕ್ಕರೆ, ಉಪ್ಪು, ತೊಗರಿಬೇಳೆ, ಟೀ, ಕಾಫಿ ಪೌಡರ್, ಅಡುಗೆ ಎಣ್ಣೆ ಗೋಧಿ ಒಳಗೊಂಡ ಆಹಾರ ಕಿಟ್ ವಿತರಣೆಗೆ ಆಹಾರ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ವಿತರಣೆ ಮಾಡುವ ಸಾಧ್ಯತೆ ಇದೆ.
ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ವಾಯುಸೇನೆಯು ಇಸ್ರೇಲ್ ನ ಬಿರ್ ಸೇವಾ ಪ್ರದೇಶದಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನ್ ದಾಳಿಯಿಂದ ಇಸ್ರೇಲ್ ನ ಹಲವು ಕಟ್ಟಡಗಳಿಗೆ ಹಾನಿಯಾಗಿದೆ.
ನವದೆಹಲಿ : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ದಿನದ ವಹಿವಾಟಿನ ಸಮಯದಲ್ಲಿ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕ ಏರಿಕೆಯಾಗಿದ್ದು, ಮತ್ತು ನಿಫ್ಟಿ 25,000 ಗಡಿ ದಾಟಿದೆ. ಸೆನ್ಸೆಕ್ಸ್ 800 ಅಂಕಗಳ ಜಿಗಿತ. ನಿಫ್ಟಿ 25,200 ದಾಟಿದೆ; ಅದಾನಿ ಪೋರ್ಟ್ಸ್ ಶೇ. 4 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ರಾಜಧಾನಿ ದೆಹಲಿಯ ಭಾಟಿ ಗಣಿ ಪ್ರದೇಶದಲ್ಲಿ ನಡೆದ ಉನ್ನತ ಮಟ್ಟದ ಎನ್ಕೌಂಟರ್ನಲ್ಲಿ ಮೋಸ್ಟ್ ವಾಂಟೇಡ್ ಕ್ರಿಮಿನಲ್ ರೋಮಿಲ್ ನನ್ನು ಹತ್ಯೆ ಮಾಡಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರಿಯಾಣ ಎಸ್ಟಿಎಫ್ ನಡೆಸಿದ ಎನ್ಕೌಂಟರ್ನಲ್ಲಿ ಕುಖ್ಯಾತ ದರೋಡೆಕೋರ ರೋಮಿಲ್ ಬೊಹ್ರಾ ಎಂಬಾತನ ತಲೆಗೆ 3 ಲಕ್ಷ ರೂ. ಬಹುಮಾನವಿತ್ತು. ಈ ಕಾರ್ಯಾಚರಣೆಯಲ್ಲಿ, ಇನ್ಸ್ಪೆಕ್ಟರ್ ಮತ್ತು ಎಸ್ಐ ಸೇರಿದಂತೆ ಇಬ್ಬರು ಪೊಲೀಸರು ಗಾಯಗೊಂಡರು. ಗುಂಡು ಇಬ್ಬರ ಗುಂಡು ನಿರೋಧಕ ಜಾಕೆಟ್ಗಳಿಗೆ ತಗುಲಿ ದೊಡ್ಡ ಅನಾಹುತವೊಂದು ತಪ್ಪಿತು. ದೆಹಲಿ-ಹರಿಯಾಣ ಗಡಿಯಲ್ಲಿ ಎನ್ಕೌಂಟರ್ : ಮೋಸ್ಟ್ ವಾಂಟೆಡ್ ಕ್ರಿಮಿನಲ್ `ರೋಮಿಲ್ ಬೊಹ್ರಾ’ ಹತ್ಯೆ | Romil Bohra