Author: kannadanewsnow57

ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಬಾಬಾ ವಂಗಾ ಬಲ್ಗೇರಿಯಾದಲ್ಲಿ ವಾಸಿಸುತ್ತಿದ್ದ ಪ್ರಸಿದ್ಧ ವಿಶ್ವ ಪ್ರವಾದಿ. 1911 ರಲ್ಲಿ ಜನಿಸಿದ ಬಾಬಾ ವಂಗಾ ಅವರು ಕೇವಲ 12 ವರ್ಷದವರಿದ್ದಾಗ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡರು. ಬಾಬಾ ವಂಗಾ ಆಗಸ್ಟ್ 1996 ರಲ್ಲಿ ನಿಧನರಾದರು. ಬಾಬಾ ವಂಗಾ ಅವರು ಸಾಯುವ ಮೊದಲು 5079 ವರ್ಷಗಳ ಭವಿಷ್ಯವಾಣಿಯನ್ನು ನುಡಿದಿದ್ದರು. ಇಲ್ಲಿಯವರೆಗೆ, ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿ, ರಾಜಕುಮಾರಿ ಡಯಾನಾ ಸಾವು ಮತ್ತು ಬ್ರೆಕ್ಸಿಟ್ ನಂತಹ ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವೆಂದು ಸಾಬೀತಾಗಿದೆ. ಬಾಬಾ ವಂಗಾ ಅವರು 2024 ಕ್ಕೆ ಇಂತಹ ಅನೇಕ ಭವಿಷ್ಯವಾಣಿಗಳನ್ನು ನೀಡಿದ್ದಾರೆ, ಅದು ಭಯಾನಕವಾಗಿದೆ. ಅವುಗಳಲ್ಲಿ ಒಂದು 2024 ರ ಅಪಾಯಕಾರಿ ಹವಾಮಾನದ ಬಗ್ಗೆ. ಬಾಬಾ ವೆಂಗಾ ಅವರ ಈ ಅಪಾಯಕಾರಿ ಭವಿಷ್ಯವಾಣಿಯ ಬಗ್ಗೆ ತಿಳಿಯಿರಿ. ಬಾಬಾ ವಂಗಾ ಹವಾಮಾನದ ಭವಿಷ್ಯವಾಣಿ 2024 ರಲ್ಲಿ, ಬಾಬಾ…

Read More

ಗದಗ :  ತುಂಗಭದ್ರಾ ನದಿ ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಗದಗದ ಜಿಮ್ಸ್ ವೈದ್ಯಕೀಯ ಹಾಸ್ಟೆಲ್ ಹಾಗೂ ಸಿಬ್ಬಂದಿ ಕಾರ್ಟರ್ಸ್ ಗೆ  ಸಮರ್ಪಕವಾಗಿ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ.   ತೀವ್ರ ಬರಗಾಲದ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಬತ್ತಿ ಹೋಗಿದೆ. ಈ ಹಿನ್ನೆಲೆಯಲ್ಲಿ ಜಿಮ್ಸ್ ಆಡಳಿತ ಮಂಡಳಿ ಒಂದು ವಾರ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಗದಗ ನಗರದ ಹೊರ ವಲಯದಲ್ಲಿರುವ ಜಿಮ್ಸ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಹಾಗೂ ಕ್ವಾರ್ಟರ್ಸ್ ಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.

Read More

ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಬಿಡುವಿಲ್ಲದ ಜೀವನ ಮತ್ತು ಸಾಮಾಜಿಕ ಮಾಧ್ಯಮವು ನಿದ್ರೆಯನ್ನು ಕಸಿದುಕೊಳ್ಳಬಹುದು. ವಿಶೇಷವಾಗಿ ಸಾಮಾಜಿಕ ಮಾಧ್ಯಮವು ಅಂತಹ ಪರಿಣಾಮವನ್ನು ಬೀರುತ್ತದೆ. ರಾತ್ರಿ ಹೊತ್ತು ಮಲಗುವ ವೇಳೆ ಸಿನಿಮಾ, ವೆಬ್ ಸಿರೀಸ್,ಐಪಿಎಲ್. ವಿಶೇಷವಾಗಿ ರೀಲ್ ಗಳು ಮತ್ತು ಮೀಮ್ ಗಳು ತುಂಬಾ ಅಭ್ಯಾಸವಾಗಿವೆ. ಇವು ದೇಹದ ಹೆಚ್ಚು ಅಗತ್ಯವಿರುವ ನಿದ್ರೆಯನ್ನು ಕಳೆದುಕೊಳ್ಳುತ್ತಿದ್ದಾವೆ. ತಡರಾತ್ರಿಯವರೆಗೆ ಆನ್ ಲೈನ್ ನಲ್ಲಿದ್ದು ತಡವಾಗಿ ಮಲಗುವವರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಹೊಂದುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಹೌದು, ತಡರಾತ್ರಿವರೆಗೂ ಮೊಬೈಲ್ ನೋಡಿ ಬೆಳಗ್ಗೆ ಬೇಗನೇ ಏಳುವುದು ದೇಹದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಲಗುವ ಸಮಯಕ್ಕೆ ತೊಂದರೆಯಾದರೆ ಸಿರ್ಕಾಡಿಯನ್ ಲಯಕ್ಕೆ ತೊಂದರೆಯಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ದೀರ್ಘಕಾಲೀನ ಅಪಾಯಗಳನ್ನು ಹೆಚ್ಚಿಸುತ್ತದೆ. ನಿದ್ರೆ ಸಾಮಾನ್ಯವಾಗಿ.. ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ, ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನೀವು ರಾತ್ರಿಯಲ್ಲಿ…

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ಸಂಬಂಧ ಆರೋಪಿ ಗಿರೀಶ್ ನ್ನು ನಿನ್ನೆ ರಾತ್ರಿ ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಪೊಲೀಸ್ ಕಮಿಷನರ್ ರೇಣುಕಾ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ನಿನ್ನೆ ರಾತ್ರಿ ಆರೋಪಿ ಗಿರೀಶ್ ನನ್ನು ವಶಕ್ಕೆ ಪಡೆಯಲಾಗಿದೆ. ಗಿರೀಶ್ ತಲೆ, ಮುಖಕ್ಕೆ ಗಂಭೀರವಾದ ಗಾಯವಾಗಿದೆ. ಚೇತರಿಕೆ ಬಳಿಕ ಗಿರೀಶ್ ನ್ನನು ವಶಕ್ಕೆ ಪಡೆದು ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡ ಗಿರೀಶ್ ನನ್ನು ಇಂದು ಮುಂಜಾನೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ತನಿಖೆ ಮಾಡದೇ ಪುರಾವೆ ಇಲ್ಲದೇ ಏನೂ ಮಾತನಾಡಲ್ಲ ಎಂದು ತಿಳಿಸಿದ್ದಾರೆ.

Read More

ನವದೆಹಲಿ : 2024 ರ ಲೋಕಸಭಾ ಚುನಾವಣೆಗೆ ಈಗಾಗಲೇ 4 ಹಂತಗಳ ಮತದಾನ ಮುಗಿದಿದೆ. ಅದೇ ಸಮಯದಲ್ಲಿ, ಐದನೇ ಹಂತದ ಮತದಾನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಐದನೇ ಹಂತದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ವಿವಿಧ ರಾಜ್ಯಗಳ ಅಭ್ಯರ್ಥಿಗಳು ತಮ್ಮ ನಾಮನಿರ್ದೇಶನದ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಚುನಾವಣಾ ಅಫಿಡವಿಟ್ ಗಳನ್ನು ಸಲ್ಲಿಸುತ್ತಾರೆ. ಈ ಅಫಿಡವಿಟ್ ಆ ಅಭ್ಯರ್ಥಿಗಳ ಶಿಕ್ಷಣ, ಅಪರಾಧ ಚಾರ್ಟ್, ನಿವ್ವಳ ಮೌಲ್ಯ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಒಟ್ಟು ಆಸ್ತಿ 2 ರೂಪಾಯಿಗಳ ಬಡ ಅಭ್ಯರ್ಥಿಯ ಬಗ್ಗೆ ಹೇಳಲಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಬಡ ಅಭ್ಯರ್ಥಿ ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಸ್ಪರ್ಧಿಸುತ್ತಿರುವವರಲ್ಲಿ, ಇತರ ಅಭ್ಯರ್ಥಿಗಳು ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ್ದಾರೆ. ಮತ್ತೊಂದೆಡೆ, ಕೇವಲ ರೂ. 1000 ಮೌಲ್ಯದ ಆಸ್ತಿಯನ್ನು ಹೊಂದಿರುವ ಅಭ್ಯರ್ಥಿ ಇದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಆರನೇ…

Read More

ಹುಬ್ಬಳ್ಳಿ : ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಯುವತಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಆರೋಪಿ ಆಟೋ ಚಾಲಕ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ (21)ನನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ಗೀಶ್ ಪರಾರಿಯಾಗಿದ್ದ. ಈತನ ಚಲವಲನ ಹುಬ್ಬಳ್ಳಿ ಗೋಕುಲ್ ರಸ್ತೆಯಲ್ಲಿನ ಹೊಸ ಬಸ್ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಜಾಡು ಹಿಡಿದು ದಾವಣಗೆರೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ರೈಲಿನಲ್ಲಿ ಕರೆದುಕೊಂಡು ಬರುವಾಗ ಬಿದ್ದು ಗಾಯಗೊಂಡಿದ್ದಾನೆ. ಸದ್ಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಂಜೆಯೇ ಕೋರ್ಟ್ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

Read More

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳನ್ನು ಪೆನ್ ಡ್ರೈವ್ ಗೆ ಕಾಪಿ ಮಾಡಿ, ಹಂಚಿಕೆ ಮಾಡಿರೋ ಆರೋಪ ಸಂಬಂಧ ಈಗಾಗಲೇ ಕೆಲ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೇ ಪೆನ್ ಡ್ರೈವ್ ಕೇಸ್ ತನಿಖೆ ಚುರುಕುಗೊಳಿಸಿ 18 ಕಡೆ ಹಾಸನದಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ವೇಳೆಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಹಂಚಿಕೆ ಸಂಬಂಧ ಎಸ್‌ಐಟಿ ಅಧಿಕಾರಿಗಳಿಂದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹಾಸನದಲ್ಲಿ ಈ ಕೇಸ್ ಸಂಬಂಧ 18 ಕಡೆ ದಾಳಿಯನ್ನು ನಡೆಸಲಾಗಿತ್ತು. ಈ ದಾಳಿಯ ವೇಳೆಯಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆದಿದೆ ಎನ್ನಲಾಗುತ್ತಿದೆ. ಹಾಸನ ಪೆನ್ ಡ್ರೈವ್ ಕೇಸ್ ಸಂಬಂಧ ಎಸ್‌ಐಟಿ ಅಧಿಕಾರಿಗಳು ನಡೆಸಿದಂತ 18 ಕಡೆಯ ದಾಳಿಯಲ್ಲಿ 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್ ವಶ ಪಡಿಸಿಕೊಂಡಿದೆ ಎನ್ನಲಾಗುತ್ತಿದೆ. 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್,…

Read More

ನವದೆಹಲಿ : ಆಡಳಿತ ನಡೆಸುವ ಎಲ್ಲಾ ಐದು ವರ್ಷಗಳ ಕಾಲ ರಾಜಕೀಯ ಮಾಡಬಾರದು ಎಂದು ನರೇಂದ್ರ ಪ್ರಧಾನಿ ಮೋದಿ ಹೇಳಿದ್ದಾರೆ. ವಿಶೇಷ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ರಾಜಕೀಯ, ‘ಒನ್ ನೇಷನ್ ಒನ್ ಎಲೆಕ್ಷನ್’ ಅನುಷ್ಠಾನ, 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಎನ್ಡಿಎ ಗುರಿ, ಪ್ರತಿಪಕ್ಷ ಭಾರತ ಬಣ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಹಂಚಿಕೊಂಡ ಮಂತ್ರದ ಬಗ್ಗೆ ಮಾತನಾಡಿದರು. ಒಂದು ವರ್ಷದ ಹಿಂದೆಯೇ ಲೋಕಸಭಾ ಚುನಾವಣೆಗೆ ಕೆಲಸ ಪ್ರಾರಂಭಿಸುವಂತೆ ಮತ್ತು ಅಭ್ಯರ್ಥಿಗಳನ್ನು ಘೋಷಿಸುವವರೆಗೆ ಕಾಯದಂತೆ ಪಕ್ಷದ ನಾಯಕತ್ವ ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು. ಬಿಜೆಪಿಯ ಮಹತ್ವಾಕಾಂಕ್ಷೆಯ “400 ಪಾರ್” ಘೋಷಣೆ ಮತ್ತು ಅದರ ಹಿಂದಿನ ತಾರ್ಕಿಕತೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿ…

Read More

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರು ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗುವ ಸಾದ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read More

ಅಫಜಲಪುರ : ಬಸ್ ನಿಲ್ದಾಣದಲ್ಲಿ ಹಾರ್ನ್ ಮಾಡಿದಕ್ಕೆ ಕೆಕೆ ಆರ್ ಟಿಸಿ ಬಸ್ ಚಾಲಕನ ಮೇಲೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕೆಕೆ ಆರ್ ಟಿಸಿ ಬಸ್ ಚಾಲಕ ಸುರೇಶ್ ಗಾಯೊಂಡ ಚಾಲಕನಾಗಿದ್ದು, ಬಸ್ ನಿಲ್ದಾಣಕ್ಕೆ ಬಂದ ವೇಳೆ ಹಾರ್ನ್ ಮಾಡಿದ ವೇಳೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ. ಮುಂಬೈ-ಅಫಜಲಪುರ ಕೆಕೆಆರ್ ಟಿಸಿ ಬಸ್ ನಿಲ್ದಾಣದ ಚಾಲಕ ಸುರೇಶ್ ಬಸ್ ನಿಲ್ದಾಣ ಪ್ರವೇಶಿಸುವಾಗ ಹಾರ್ನ್ ಹಾಕಿದ್ದಾರೆ. ಈ ವೇಳೆ ದುಷ್ಕರ್ಮಿಯೊಬ್ಬ ಬ್ಲೇಡ್ ನಿಂದ ಹಲ್ಲೆ ಮಾಡಲಾಗಿದೆ. ಚಾಲಕ ಸುರೇಶ್ ಅವರನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More