Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಇಂದು ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತಿದ್ದು, ದೀಪಾವಳಿ ಹಬ್ಬಕ್ಕೆ ಮಿಂಟೋ ಆಸ್ಪತ್ರೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳ ಪಟಾಕಿ ಪ್ರಕರಣ ಎದುರಿಸಲು ಪ್ರತ್ಯೇಕ ಬೆಡ್ ಗಳ ವ್ಯವಸ್ಥೆ ಮಾಡಲಗಿದೆ. ಮಕ್ಕಳಿಗೆ ಒಂದು ಪ್ರತ್ಯೇಕ ವಾರ್ಡ್ ನಲ್ಲಿ 12 ಬೆಡ್ ಗಳ ಮೀಸಲು ಇಡಲಾಗಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿ ಒಟ್ಟು 25 ಕ್ಕೂ ಅಧಿಕ ಬೆಡ್ ಮೀಸಲು ಇಡಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ 20 ಕ್ಕೂ ಅಧಿಕ ಬೆಡ್ ಗಳು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ಮಿಂಟೋದಲ್ಲಿ ತುರ್ತು ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಬೇಕಾದ ಸಿದ್ಧತೆ ಕೈಗೊಳ್ಳಲಾಗಿದೆ. ಪಟಾಕಿ ಸುಟ್ಟ ಗಾಯಕ್ಕೆ ಸಿಂಪಲ್ ಮನೆ ಮದ್ದು 1) ಪಟಾಕಿಯಿಂದ ಸುಟ್ಟ ಗಾಯ ಉಂಟಾದರೆ ಆ ಭಾಗವನ್ನು ತಣ್ಣೀರಿಗೆ ಹಿಡಿಯಿರಿ. ಅಥವಾ ಆ ಪ್ರದೇಶಕ್ಕೆ ಕೋಲ್ಡ್ ಕಂಪ್ರೆಸ್ ಅನ್ನು ಆರಿಸಿಕೊಳ್ಳಿ. ಸುಟ್ಟ ಗಾಯವನ್ನು ತಂಪಾಗಿಸುವುದರಿಂದ ನೋವು, ಊತ ಕಡಿಮೆ ಮಾಡುತ್ತದೆ 2) ತೆಂಗಿನ ಎಣ್ಣೆಯು ಕೂಡ…
ಬೆಂಗಳೂರು : ಇಂದು ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟು ಮಾಡಿ ಪರಿಸರಕ್ಕೆ ಹಾನಿ ಮಾಡುತ್ತಿದೆ. ಜೊತೆಗೆ ಜನರ ಆರೋಗ್ಯವನ್ನು ಹದಗೆಡಿಸುತ್ತಿದೆ. ಮತ್ತು ಪ್ರಾಣಿ-ಪಕ್ಷಿಗಳ ಕಲರವಕ್ಕೆ ಘಾಸಿ ಉಂಟುಮಾಡುತ್ತಿದೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ಮನವಿ ಮಾಡಲಾಗಿದೆ. ಮಾರಾಟ ಹಾಗೂ ಸಾರ್ವಜನಿಕರು ಹಸಿರು ಪಟಾಕಿ ಗುರುತಿಸುವಿಕೆ ಕ್ರಮಗಳು : ಪಟಾಕಿ ಬಾಕ್ಸ್ಗನಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐರಆರ್) ಮತ್ತು ನ್ಯಾಷನಲ್ ಎನ್ವಿರಾನ್ಮೆಂ್ಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸಿಟಿಟ್ಯೂಟ್ (ಎನ್ಇುಇಆರ್ಐರ) ಇವರ ಲೋಗೋ ಹಾಗೂ ನೊಂದಾಯಿತ ಸಂಖ್ಯೆಯೊಂದಿಗೆ ಮುದ್ರಿತವಾಗಿರಬೇಕು. ಅಧಿಕೃತ ಮಾರಾಟಗಾರರು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರದಿಂದ ನೀಡುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ನಿಷೇಧಿತ ಪಟಾಕಿಗಳ ಮಾರಾಟ ಕಂಡುಬಂದಲ್ಲಿ ಅಂತಹ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು…
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು, ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ.17000 ಗಳಿಂದ ರೂ. 27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ ನೋಂದಾಯಿತವಾಗಿರುವ ಆಸ್ಪತ್ರೆಗಳು, ಚಿಕಿತ್ಸಾ ಸೌಲಭ್ಯಗಳು ಮತ್ತು ಇತರೆ ಉಪಯುಕ್ತ ಮಾಹಿತಿಯ ಕೈಪಿಡಿ
ಬೆಂಗಳೂರು : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, 18 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ ಡಿ.7ರಂದು ಅರ್ಹತಾ ಪರೀಕ್ಷೆ (ಟಿಇಟಿ) ನಿಗದಿಪಡಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅ.23ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನ.9ವರೆಗೆ ಅವಕಾಶ ಇರಲಿದೆ. ಡಿ.7ರಂದು ಪತ್ರಿಕೆ-1, ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ಇನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ದಿನಾಂಕ 23-10-2025ರಿಂದ ದಿನಾಂಕ 09-11-2025ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದಿದೆ. ಟಿಇಟಿ ಪರೀಕ್ಷೆ ದಿನಾಂಕ ಹೀಗಿದೆ ಟಿಇಟಿ ಪರೀಕ್ಷೆಯು ಪತ್ರಿಕೆ-1ಕ್ಕೆ ದಿನಾಂಕ 07-12-2025ರ ಭಾನುವಾರ ಬೆಳಗ್ಗೆ 9.30ರಿಂದ 12 ಗಂಟೆಯವರೆಗೆ ನಡೆಯಲಿದೆ. ಪತ್ರಿಕೆ-2ರ…
ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ (RRB) ನಿರುದ್ಯೋಗಿಗಳಿಗೆ ಶುಭ ಸುದ್ದಿ ಪ್ರಕಟಿಸಿದೆ. ತಾಂತ್ರಿಕೇತರ ಜನಪ್ರಿಯ ವರ್ಗದಲ್ಲಿ (NTPC) 8,850 ಹುದ್ದೆಗಳನ್ನ ಭರ್ತಿ ಮಾಡಲು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಈ ಪ್ರಕ್ರಿಯೆಯ ಮೂಲಕ, ಭಾರತೀಯ ರೈಲ್ವೆಯಲ್ಲಿ ವಿವಿಧ ಪದವಿ ಮತ್ತು ಪದವಿಪೂರ್ವ ಹಂತದ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗುತ್ತದೆ. ಮಧ್ಯಂತರ ಮತ್ತು ಪದವಿ ಪಡೆದವರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನ ಬಳಸಿಕೊಳ್ಳಬಹುದು. ಏತನ್ಮಧ್ಯೆ, ಈ ಅಧಿಸೂಚನೆಯಲ್ಲಿ ಆಲ್ ಸ್ಟೇಷನ್ ಮಾಸ್ಟರ್, ಗೂಡ್ಸ್ ರೈಲು ವ್ಯವಸ್ಥಾಪಕ, ಸಂಚಾರ ಸಹಾಯಕ (ಮೆಟ್ರೋ ರೈಲ್ವೆ), ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್, ಸೀನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್-ಕಮ್-ಟೈಪಿಸ್ಟ್, ರೈಲು ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಮುಂತಾದ ವಿವಿಧ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 21 ರಿಂದ ಪ್ರಾರಂಭವಾಗಲಿದ್ದು, ನವೆಂಬರ್ 20 ರಂದು ಕೊನೆಯ ದಿನಾಂಕವಾಗಲಿದೆ. ಒಟ್ಟು ಹುದ್ದೆಗಳು…
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅ.26ರಂದು ಮಳೆಯಾಗಲಿದೆ. ಇಂದಿನಿಂದ ಒಂದು ವಾರ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ನೀಡಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಾಮರಾಜನಗರ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ಲೈನ್ ವ್ಯವಸ್ಥೆಗೆ ಚಾಲನೆ ದೊರೆತಿದೆ. ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ 2000 ಚ.ಮೀ.ಗಳ ವರೆಗೆ * ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ https://bbmp.karnataka.gov.in/BtoAKhata ರಲ್ಲಿ ಲಾಗಿನ್ ಆಗಿ * ನಿಮ್ಮ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ * ಮಾಲೀಕರ ಆಧಾರ್ ದೃಢೀಕರಿಸಿ * ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ * ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್‌ಗಳಿಗೆ ಅರ್ಹತೆಯಿಲ್ಲ) + ಸ್ವೀಕೃತಿಯನ್ನು ಪಡೆಯಿರಿ * ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ * ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು “ಏಕ ನಿವೇಶನ”…
ರಾಜ್ಯ ಸರ್ಕಾರವು ಪ್ರತಿ 1 ಟನ್ ಮರಳಿಗೆ ರೂ.850 ನಂತೆ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ರಾಜ್ಯ ಸರ್ಕಾರವು ಪ್ರತಿ 1 ಟನ್ ಮರಳಿಗೆ ರೂ.850 ನಂತೆ ದರ ನಿಗದಿ ಮಾಡಿ ಡಿಸೆಂಬರ್ ಅಂತ್ಯದ ವೇಳೆಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಮರಳು ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಪ್ರತಿ 1 ಟನ್ ಮರಳಿಗೆ ರೂ.850 ನಂತೆ ದರ ನಿಗದಿ ಮಾಡಿದೆ. ಜಿಲ್ಲೆಯಲ್ಲಿ 24 ಮರಳು ಬ್ಲಾಕ್ ಗಳನ್ನು ಗುರುತಿಸಿ ಟೆಂಡರ್ ಅಂತಿಮಗೊಳಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಮರಳು ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. ದಾವಣಗೆರೆ ಜಿಲ್ಲಾದ್ಯಂತ ಒಟ್ಟು 24 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 4 ಬ್ಲಾಕ್ ಸರ್ಕಾರಿ…
ದುಬೈನಿಂದ ಆಗಮಿಸುತ್ತಿದ್ದ ಸರಕು ವಿಮಾನವು ಸೋಮವಾರ ಮುಂಜಾನೆ ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದು, ನೆಲ-ಸೇವಾ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದರು. ಟರ್ಕಿಶ್ ವಾಹಕ ಏರ್ ಎಸಿಟಿ ನಿರ್ವಹಿಸುತ್ತಿದ್ದ ಎಮಿರೇಟ್ಸ್ ಸ್ಕೈಕಾರ್ಗೋ ವಿಮಾನ EK9788, ದುಬೈನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (DWC) ಹೊರಟ ನಂತರ ಉತ್ತರ ರನ್ವೇ 07R ಅನ್ನು ಮುಟ್ಟಿದಾಗ ಬೆಳಗಿನ ಜಾವ ಸುಮಾರು 3.53 ಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಹಾಂಗ್ ಕಾಂಗ್ ಮಾನದಂಡ ವರದಿ ಮಾಡಿದೆ. ಟಿಸಿ-ಎಸಿಎಫ್ ನೋಂದಣಿಯಾಗಿರುವ ಬೋಯಿಂಗ್ 747-481 (ಬಿಡಿಎಸ್ಎಫ್) ವಿಮಾನವು ಲ್ಯಾಂಡಿಂಗ್ ರೋಲ್ ಸಮಯದಲ್ಲಿ ಎಡಕ್ಕೆ ತಿರುಗಿ ರನ್ವೇ ಪಕ್ಕದಲ್ಲಿರುವ ಸಮುದ್ರಕ್ಕೆ ಭಾಗಶಃ ಮುಳುಗಿತು ಎಂದು ವರದಿಯಾಗಿದೆ. https://twitter.com/RT_com/status/1980032404019376429?ref_src=twsrc%5Etfw%7Ctwcamp%5Etweetembed%7Ctwterm%5E1980032404019376429%7Ctwgr%5E071c252e179c920d7ebdb4486afaaba9751de72b%7Ctwcon%5Es1_c10&ref_url=https%3A%2F%2Ftimesofindia.indiatimes.com%2Fworld%2Fsouth-asia%2Fhong-kong-plane-crash-cargo-jet-skids-off-runway-into-water-two-dead%2Farticleshow%2F124697335.cms https://twitter.com/AirNavRadar/status/1980041765546586541?ref_src=twsrc%5Etfw%7Ctwcamp%5Etweetembed%7Ctwterm%5E1980041765546586541%7Ctwgr%5E071c252e179c920d7ebdb4486afaaba9751de72b%7Ctwcon%5Es1_c10&ref_url=https%3A%2F%2Ftimesofindia.indiatimes.com%2Fworld%2Fsouth-asia%2Fhong-kong-plane-crash-cargo-jet-skids-off-runway-into-water-two-dead%2Farticleshow%2F124697335.cms
ಬೆಂಗಳೂರು : ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಹ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಹಸಿರು ಪಟಾಕಿ ಹೊಡೆಯಬೇಕು ಎಂದು ಈಗಾಗಲೇ ರಾಜ್ಯಸರ್ಕಾರ ತಿಳಿಸಿದೆ. ಆದರೆ ಪಟಾಕಿ ಸಿಡಿಸುವ ಮುನ್ನ ಯಾವುದೇ ಅನಾಹುತ ಆಗದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳೋದು ಒಳ್ಳೆಯದು. ಇದಕ್ಕೆ ಬೆಳಕಿನ ಹಬ್ಬ ದೀಪಾವಳಿ ಭವಿಷ್ಯ ಬೆಳಗುವ ಹಬ್ಬವಾಗಲಿ. ರಾಸಾಯನಿಕ ಪಟಾಕಿಗಳನ್ನು ತ್ಯಜಿಸಿ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ. ಪಟಾಕಿ ಸಿಡಿಸುವಾಗ ಜಾಗರೂಕರಾಗಿರಿ. ಪರಿಸರ ಸ್ನೇಹಿ ಹಬ್ಬ ನಮ್ಮ ಆದ್ಯತೆಯಾಗಲಿ ಎಂದು ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ಹೀಗಿವೆ ವೈದ್ಯರ ಸಲಹೆಗಳು * ಪಟಾಕಿ ಖರೀದಿಸುವಾಗ ಐಎಸ್ಐ ಪ್ರಮಾಣೀಕರಣದ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ. * ಪಟಾಕಿ ಬಾಕ್ಸ್ ಮೇಲಿರುವ ಎಚ್ಚರಿಕೆ, ಸೂಚನೆಗಳನ್ನು ಅನುಸರಿಸಿ. * ಕನಿಷ್ಠ 2-3 ಅಡಿ ದೂರ ನಿ೦ತು ಪಟಾಕಿ ಹಚ್ಚಿ. * ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ. ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ…














