Author: kannadanewsnow57

ಬೆಂಗಳೂರು: ಸಚಿವ ಕೆಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ಆರೋಪದ ಸಂಬಂಧ ಇಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಡಿಜಿ ಮತ್ತು ಐಜಿಪಿಗೆ ದೂರು ನೀಡಿದ್ದಾರೆ. ಹನಿಟ್ರ್ಯಾಫ್ ಯತ್ನ ಪ್ರಕರಣಕ್ಕೆ ಸಮಬಂಧಿಸಿದಂತೆ ಇಂದು ಬೆಂಗಳೂರಿನ ಡಿಜಿ ಮತ್ತು ಐಜಿಪಿ ಕಚೇರಿಗೆ ಭೇಟಿ ನೀಡಿ ಎಂಎಲ್ ಸಿ ದೂರು ನೀಡಿದ್ದಾರೆ. ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ ಮೂರು ತಿಂಗಳಿನಿಂದ ಯತ್ನ ನಡೆಸಿದ್ದರು. ಹನಿಟ್ರ್ಯಾಪ್ ಸಂಬಂಧ ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ ಯತ್ನ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ಯಾರೆಂದು ಹೇಗೆ ಹೋಳೋದು? ತನಿಖೆಯಾಗಲಿ ಎಲ್ಲವೂ ಹೊರ ಬರುತ್ತದೆ. ನಮ್ಮ ತಂದೆಯಷ್ಟೇ ಅಲ್ಲ ಯಾರಿಗೂ ಈ ರೀತಿಯಾಗಿ ಆಗಬಾರದು. ಎಲ್ಲರ ಮನೆಯಲ್ಲೂ ಹೆಣ್ಣಮುಕ್ಕಳು ಇರ್ತಾರೆ ಅಲ್ವ? ಈ ರೀತಿ ಆದ್ರೇ ಹೇಗೆ.? ಪ್ರಕರಣದ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆಗಲಿ ಎಂದು ಹೇಳಿದ್ದಾರೆ.

Read More

ಬೆಂಗಳೂರು : ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿಯ ಮಧ್ಯಂತರ ವರದಿಯನ್ನು ಇಂದು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ. ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನವೆಂಬರ್ ತಿಂಗಳಿನಲ್ಲಿಯೇ ರಚಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಆಯೋಗಕ್ಕೆ ಹೊಣೆ ನಿಗದಿಪಡಿಸಲಾಗಿತ್ತು. ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ದ ಒಳ ಮೀಸಲಾತಿ ನೀಡುವ ಕುರಿತು ಪರಿಶೀಲಿಸಿ ಆಯೋಗ ವರದಿ ನೀಡಿದೆ. https://twitter.com/siddaramaiah/status/1905156492795449392?ref_src=twsrc%5Egoogle%7Ctwcamp%5Eserp%7Ctwgr%5Etweet

Read More

ಬೆಂಗಳೂರು : ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹಿಳಾ ನೌಕರರ ಪಾತ್ರ ಕುರಿತಾದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಮಹಿಳಾ ಸರ್ಕಾರಿ ಅಧಿಕಾರಿ/ನೌಕರರಿಗೆ ದಿನಾಂಕ: 28.03.2025 ರಂದು ಒಂದು ದಿನದ ಓ.ಓ.ಡಿ. ಸೌಲಭ್ಯವನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏನಿದೆ ಸುತ್ತೋಲೆಯಲ್ಲಿ? ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹಿಳಾ ನೌಕರರ ಪಾತ್ರ ಕುರಿತಾದ ಕಾರ್ಯಗಾರವನ್ನು ದಿನಾಂಕ: 28.03.2025 ರಂದು ಪೂರ್ವಾಹ್ನ 10.00 ಗಂಟೆಗೆ ಬಾಲಭವನ ಆವರಣದಲ್ಲಿರುವ ಆಡಿಟೋರಿಯಂ, ಬೆಂಗಳೂರು, ಇಲ್ಲಿ ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಮಹಿಳಾ ಸರ್ಕಾರಿ ಅಧಿಕಾರಿ/ನೌಕರರು ವಿಶೇಷ ಅನುಮತಿಯನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ…

Read More

ಬೆಂಗಳೂರು : ಯುಗಾದಿ ಹಾಗೂ ರಂಜಾನ್‌ ಹಬ್ಬದ ಪ್ರಯುಕ್ತ ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 2,000 ಬಸ್‌ಗಳನ್ನು ರಸ್ತೆಗಿಳಿಸಲಿವೆ. ಮಾರ್ಚ್‌ 28 ರಿಂದ 30ರ ವರೆಗೆ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ಮಾರ್ಚ್‌ 31 ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ವ್ಯವಸ್ಥೆ ಇರಲಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ, ಹೊರರಾಜ್ಯಗಳ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ತಿರುಪತಿ, ವಿಜಯವಾಡ ಸಹಿತ ವಿವಿಧೆಡೆ ವಿಶೇಷ ಬಸ್‌ಗಳು ಸಂಚರಿಸಲಿವೆ. https://ksrtc.in/ ವೆಬ್‌ಸೈಟ್ ಮೂಲಕ ಇ-ಟಿಕೆಟ್ ಬುಕ್ಕಿಂಗ್‌ ಮಾಡಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇ.5 ರಿಯಾಯಿತಿ ಸಿಗಲಿದೆ. ಹೋಗುವ ಮತ್ತು ಬರುವ ಪ‍್ರಯಾಣದ ಟಿಕೆಟ್‌ ಒಟ್ಟಿಗೆ ಕಾಯ್ದಿರಿಸಿದರೆ ವಾಪಸ್ಸಾಗುವ…

Read More

ರಾಮನಗರ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಕಾರು, ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಲಿ ಸಮೀಪ ಕಾರು ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಶಿವಪ್ರಕಾಶ್ (37), ಪುಟ್ಟಗೌರಮ್ಮ (72) ಹಾಗೂ ಶಿವರತ್ನ (52) ಎಂದು ಗುರುತಿಸಲಾಗಿದೆ. ಮೃತರು ಚನ್ನಪಟ್ಟಣ ತಾಲೂಕಿನ ಮಂಗಾಡನಹಳ್ಳಿ ನಿವಾಸಿಗಳು. ಗಾಯಗೊಂಡ ಮೂವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಬೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ರಾಮನಗರ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು, ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಲಿ ಸಮೀಪ ಕಾರು ಹಾಗೂ ಕ್ಯಾಂಟರ್ ನಡುವೆ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಶಿವಪ್ರಕಾಶ್ (37), ಪುಟ್ಟಗೌರಮ್ಮ (72) ಹಾಗೂ ಶಿವರತ್ನ (52) ಎಂದು ಗುರುತಿಸಲಾಗಿದೆ. ಮೃತರು ಚನ್ನಪಟ್ಟಣ ತಾಲೂಕಿನ ಮಂಗಾಡನಹಳ್ಳಿ ನಿವಾಸಿಗಳು. ಗಾಯಗೊಂಡ ಮೂವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಪೊಲೀಸರು ಬೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಬೆಂಗಳೂರು : ಸ್ವಪಕ್ಷ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದು ಅಲ್ಲದೆ, ಕಳೆದ ಫೆಬ್ರವರಿ 10ರಂದು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ಗೆ ಉತ್ತರಿಸದ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಈ ವಿಚಾರವಾಗಿ ಶಾಸಕ ಯತ್ನಾಳ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಯತ್ನಾಳ್, ಕೆಲ ರಾಜಕೀಯ ಪಟ್ಟಭದ್ರರು, ಅಡ್ಡಸ್ಟೆಂಟ್ ರಾಜಕಾರಣದ ಹರಿಕಾರರಿಂದ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ. ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ. ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ…

Read More

ನವದೆಹಲಿ : ಸರ್ಕಾರಿ ನೌಕರನೊಬ್ಬ ಮೊದಲ ಪತ್ನಿಯನ್ನು ಹೊಂದಿರುವಾಗಲೇ ಎರಡನೇ ಮದುವೆಯಾದರೆ, ಅವನನ್ನು ಕೆಲಸದಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಮೊದಲ ಮದುವೆ ಇನ್ನೂ ಹಾಗೆಯೇ ಇರುವಾಗಲೇ ಎರಡನೇ ಮದುವೆಯಾದ ಸರ್ಕಾರಿ ನೌಕರನ ವಜಾ ಪ್ರಕರಣದಲ್ಲಿ ಈ ತೀರ್ಪು ಬಂದಿದ್ದು, ಆ ಪ್ರಕರಣದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ಈ ವಜಾಗೊಳಿಸುವಿಕೆಯನ್ನು ರದ್ದುಗೊಳಿಸುವ ಮೂಲಕ ನ್ಯಾಯಾಲಯವು ಹಕ್ಕುಗಳು ಮತ್ತು ಕಾನೂನುಗಳನ್ನು ಗೌರವಿಸಿತು. ಸರ್ಕಾರಿ ನೌಕರರು ಎರಡನೇ ಮದುವೆಯಾದರೆ, ಯುಪಿ ಸರ್ಕಾರಿ ನೌಕರರ ನಡವಳಿಕೆ ನಿಯಮಗಳ ನಿಯಮ 29 ರ ಪ್ರಕಾರ ಸಣ್ಣ ಶಿಕ್ಷೆ ಮಾತ್ರ ನೀಡಲಾಗುತ್ತದೆ. ಆದ್ದರಿಂದ, ಉದ್ಯೋಗಿ ಎರಡನೇ ಬಾರಿಗೆ ಮದುವೆಯಾಗಿದ್ದರೂ ಸಹ, ಅವರನ್ನು ಕೆಲಸದಿಂದ ವಜಾಗೊಳಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಕ್ಷಿತಿಜ್ ಶೈಲೇಂದ್ರ ಹೇಳಿದರು. “1955 ರ ಹಿಂದೂ ವಿವಾಹ ಕಾಯ್ದೆ ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಹೇಳಲಾದ ವಾಸ್ತವಿಕ ಮತ್ತು ಕಾನೂನು ಪ್ರತಿಪಾದನೆಯನ್ನು ಪರಿಗಣಿಸಿ ಮತ್ತು ಈ ನ್ಯಾಯಾಲಯ ಅಥವಾ ಅಧಿಕಾರಿಗಳ ಮುಂದೆ…

Read More

ಬ್ರಾಂಡೆಡ್ ಔಷಧಿಗಳಿಗೆ ಹೋಲಿಸಿದರೆ ಜೆನೆರಿಕ್ ಔಷಧಿಗಳು ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. ಬ್ರಾಂಡೆಡ್ ಔಷಧಿಗಳು 100 ರೂಪಾಯಿ ಬೆಲೆಯದ್ದಾಗಿದ್ದರೆ, ಜೆನೆರಿಕ್ ಔಷಧಿಗಳು ಕೇವಲ ಹತ್ತು ರೂಪಾಯಿ ಬೆಲೆಯದ್ದಾಗಿವೆ. ಬಡವರಿಗೆ ಜೆನೆರಿಕ್ ಔಷಧಗಳು ಒಂದು ವರದಾನ. ಬ್ರಾಂಡ್ ಔಷಧಿಗಳು ಯಾವುವು? ಅನೇಕ ಔಷಧೀಯ ಕಂಪನಿಗಳು ಟ್ಯಾಬ್ಲೆಟ್ ಅಥವಾ ಸಿರಪ್ ಅನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತವೆ. ಕೆಲವು ವರ್ಷಗಳ ಕಾಲ ಪ್ರಯೋಗಗಳನ್ನು ನಡೆಸಲಾಗುವುದು. ಆ ಎಲ್ಲಾ ಪರೀಕ್ಷೆಗಳು ಮುಗಿದ ನಂತರವೇ ಅವರು ಬೆಲೆ ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಈ ಔಷಧಿಗಳನ್ನು ಆ ಔಷಧೀಯ ಕಂಪನಿಯ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಅಂದರೆ ಆ ಔಷಧ ಕಂಪನಿಯು ಒಂದು ಬ್ರಾಂಡ್ ಆಗಿದೆ. ಆ ಫಾರ್ಮಾ ಕಂಪನಿಯಿಂದ ಬರುವ ಎಲ್ಲವೂ ಬ್ರಾಂಡೆಡ್ ಔಷಧ. ಔಷಧೀಯ ಕಂಪನಿಯು ಸುಮಾರು 20 ವರ್ಷಗಳ ಕಾಲ ಔಷಧದ ಪೇಟೆಂಟ್ ಅನ್ನು ಹೊಂದಿದೆ. ಔಷಧ ತಯಾರಿಸಲು ಬಳಸುವ ಸೂತ್ರವನ್ನು ಔಷಧ ಕಂಪನಿ ಯಾರಿಗೂ ಹೇಳುವುದಿಲ್ಲ. ಅದನ್ನು ಮಾಡಲು ಯಾವುದೇ ಅನುಮತಿ ಇಲ್ಲ. ಏಕೆಂದರೆ…

Read More

ಐದು ವರ್ಷಗಳಿಂದ ಫಿಲ್ಟರ್ ಮಾಡಿದ ನೀರನ್ನು ಕುಡಿಯುತ್ತಿದ್ದ ಮಹಿಳೆಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಆರು ತಿಂಗಳಿನಿಂದ ಆಕೆಗೆ ಅನಿಯಮಿತ ಋತುಚಕ್ರ, ಯಕೃತ್ತಿನ ಹಾನಿ, ಆಗಾಗ್ಗೆ ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಡುತ್ತಿದ್ದವು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಟಿಸಿದ ಸುದ್ದಿ ಲೇಖನದ ಪ್ರಕಾರ, ಶಾಂಘೈನ ಲಿ ಎಂಬ ಮಹಿಳೆ ಎದುರಿಸಿದ ಈ ಕಹಿ ಅನುಭವದ ವಿವರಗಳು ಈ ಕೆಳಗಿನಂತಿವೆ. ಸೆಪ್ಟೆಂಬರ್ 2020 ರಲ್ಲಿ, ಅವರು ಶಿಯೋಮಿಯಿಂದ ವಾಟರ್ ಪ್ಯೂರಿಫೈಯರ್ ಖರೀದಿಸಿದರು. ಕಂಪನಿಯ ತಂತ್ರಜ್ಞರು ಬಂದರು, ಶುದ್ಧೀಕರಣ ಯಂತ್ರವನ್ನು ಅಳವಡಿಸಿ ಹೊರಟುಹೋದರು. ಅವರು ಕಳೆದ ಐದು ವರ್ಷಗಳಿಂದ ಶುದ್ಧೀಕರಣ ನೀರನ್ನು ಕುಡಿಯುತ್ತಿದ್ದಾರೆ ಮತ್ತು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಅವರು ಆಸ್ಪತ್ರೆಗೆ ಹೋದಾಗ, ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ ಯಕೃತ್ತು ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ, ತಾನು ಕುಡಿಯುವ ನೀರು ಎಷ್ಟರ ಮಟ್ಟಿಗೆ ಶುದ್ಧೀಕರಿಸಲ್ಪಡುತ್ತಿದೆ ಎಂದು ತಿಳಿದುಕೊಳ್ಳಲು ಅವಳು ಬಯಸಿದ್ದಳು. ಈ ಉದ್ದೇಶಕ್ಕಾಗಿ, ಅವರು ಟಿಡಿಎಸ್ ಪರೀಕ್ಷಿಸಲು ನೀರಿನ ಗುಣಮಟ್ಟದ ಪೆನ್ನು ಖರೀದಿಸಿದರು. ಶುದ್ಧೀಕರಣ…

Read More