Author: kannadanewsnow57

ಕಲಬುರಗಿ : ಕಲ್ಯಾಣ ಕರ್ನಾಟಕದ ಜನತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಿಹಿಸುದ್ದಿ  ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದವರಿಂದಲೆ 50 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಲಬುರಗಿ ನಗರದ ಎನ್.ವಿ.ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿಯೇ 371ಜೆ ಮೀಸಲಾತಿಯನ್ವಯ ಕಲ್ಯಾಣ ಕರ್ನಾಟಕ ಭಾಗದವರಿಂದಲೆ 50 ಸಾವಿರ ಹುದ್ದೆ ಭರ್ತಿ ಮಾಡಲಾಗುವುದು. ಈಗಾಗಲೆ ವಿವಿಧ ಇಲಾಖೆಯಲ್ಲಿ 15 ಸಾವಿರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಂದಿನ 2-3 ವರ್ಷಗಳಲ್ಲಿ ಎಲ್ಲಾ ಹುದ್ದೆ ಭರ್ತಿ ಮಾಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು ಎಂದರು. ಕಳೆದ 2022ರ ಡಿಸೆಂಬರ್‍ನಲ್ಲಿ ಇದೇ ಸ್ಥಳದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನ ನಿಡುವುದಾಗಿ ಘೋಷಿಸಿದ್ದರು, ಅದರಂತೆ ನಮ್ಮ ಸರ್ಕಾರ  5 ಸಾವಿರ ಕೋಟಿ ಹಣ…

Read More

ನವದೆಹಲಿ: ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಮುಖ್ತಾರ್ ಅನ್ಸಾರಿಗೆ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಮಂಗಳವಾರ ಅನ್ಸಾರಿಯನ್ನು ದೋಷಿ ಎಂದು ಘೋಷಿಸಿತ್ತು ಮತ್ತು ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಲು ಮಾರ್ಚ್ 13 ರಂದು ನಿಗದಿಪಡಿಸಿತ್ತು. ಪ್ರಾಸಿಕ್ಯೂಷನ್ ಪರವಾಗಿ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ವಿನಯ್ ಕುಮಾರ್ ಸಿಂಗ್ ಮತ್ತು ವಿಶೇಷ ಪ್ರಾಸಿಕ್ಯೂಷನ್ ಅಧಿಕಾರಿ ಉದಯರಾಜ್ ಶುಕ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ವೇಳೆ ಆರೋಪಿ ಮುಖ್ತಾರ್ ಅನ್ಸಾರಿ ಬಾಂದಾ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅವನೀಶ್ ಗೌತಮ್ ಅವರು ಮುಖ್ತಾರ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 428 (ಕಿಡಿಗೇಡಿತನ), 467 (ಅಮೂಲ್ಯ ಭದ್ರತೆಯ ನಕಲು), 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 30 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ ಎಂದು ಸಿಂಗ್ ಹೇಳಿದರು.

Read More

ಸಿಯೋನಿ : ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ. ರಿಯಾಕ್ಟರ್ ಮಾಪಕದಲ್ಲಿ ಅದರ ತೀವ್ರತೆಯು 3.6 ದಾಖಲಾಗಿದೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾದ ಕೂಡಲೇ ಜನರು ತಮ್ಮ ಮನೆಗಳಿಂದ ಹೊರಬಂದರು. ಭೂಕಂಪ ಸಂಭವಿಸಿದ ನಂತರ, ಜನರು ಸ್ವಲ್ಪ ಸಮಯದವರೆಗೆ ಭೂಮಿಯು ಸುತ್ತು ಮತ್ತು ಸುತ್ತು ನಡುಗುತ್ತಿರುವಂತೆ ಭಾಸವಾಯಿತು ಎಂದು ಹೇಳಿದರು. ಭೂಕಂಪನದ ಅನುಭವವಾದ ನಂತರ ಅನೇಕ ಜನರು ಮನೆಗಳಿಂದ ಹೊರಬಂದರು, ಆದರೆ ಭೂಕಂಪದ ತೀವ್ರತೆಯನ್ನು ಹವಾಮಾನ ತಜ್ಞರು 3.6 ಇತ್ತು ಎಂದು ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು : ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗೆ ಪ್ರೌಢಶಾಲಾ ಶಿಕ್ಷಕರನ್ನು ನೇಮಕ ಮಾಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಪ್ರೌಢಶಾಲೆಗಳ ಶಿಕ್ಷಕರ ಕೊರತೆ ಇದ್ದರೆ ಮಾತ್ರ ಪ್ರಾಥಮಿಕ ಶಿಕ್ಷಕರನ್ನು ಪರಿಗಣಿಸಬೇಕು. ಪರೀಕ್ಷೆ ಇರುವ ವಿಷಯದ ದಿನದಂದ ಸಂಬಂಧಿಸಿದ ವಿಷಯದ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ  ನೇಮಿಸಬಾರದು. ತರಬೇತಿ ಹೊಂದಿದ ಪದವೀಧರ ಶಿಕ್ಷಕರನ್ನು ಗಣಿತ ಮತ್ತು ವಿಜ್ಞಾನದ ವಿಷಯದ ಪರೀಕ್ಷೆ ನಡೆಯುವ ದಿನಗಳಂದು ಕೊಠಡಿ ಮೇಲ್ವಿಚಾರಕರನ್ನಾಗಿ ಎಂದು ಸೂಚನೆ ನೀಡಲಾಗಿದೆ. ಇನ್ನು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಕೇಂದ್ರಗಖಳ ಮೇಲ್ವಿಚಾರಕರಿಗೆ ನಾಳೆಯಿಂದ ತರಬೇತಿ ನೀಡಲಾಗುತ್ತಿದೆ.  ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಆಯ್ದ ಮುಖ್ಯ ಅಧೀಕ್ಷಕರು, ತಾಲೂಕು ನೋಡಲ್‌  ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ.

Read More

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮೊದಲ ಹಂತದಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕದಿಂದ ಬಿಜೆಪಿ ಆಭ್ಯರ್ಥಿಗಳ ಪಟ್ಟಿ ಇಂತಿದೆ.! ತುಮಕೂರು ವಿ ಸೋಮಣ್ಣ ಮೈಸೂರು ಯಾದ್‌ವೀರ್‌ ದ. ಕನ್ನಡ ಬ್ರೀಜೇಶ್ ಚೌಟ ಬೆಂಗಳೂರು ಗ್ರಾಮಾಂತರ : ಸಿ.ಎನ್‌ ಮಂಜುನಾಥ್‌ ಬೆಂಗಳೂರು ಕೇಂದ್ರ -ಪಿ.ಸಿಮೋಹನ್‌ ಬೆಂಗಳೂರು ದ: ತೇಜಸ್ವಿ ಸೂರ್ಯ ಬೆಂಗಳೂರು ಉತ್ತರ; ಶೋಭಾ ದಾವಣಗೆರೆ: ಗಾಯತ್ರಿ ಸಿದ್ದೇಶ್ವರ ವಿಜಯಪುರ: ರಮೇಶ್‌ ಜಿಗಜಿಗಣಿ ಹಾವೇರಿ: ಮಾಜಿ ಸಿಎಂ ಬಸವರಾಜಬೊಮ್ಮಾಯಿ ಧಾರವಾಡ: ಪ್ರಹ್ಲಾದ್‌ ಜೋಶಿ ಚಿಕ್ಕೋಡಿ-ಅಣ್ಣ ಸಾಹೇಬ್‌ ಜೊಲ್ಲೆ ಬಾಗಲಕೋಟೆ-ಪಿ.ಸಿ ಗೌದ್ದಿಗೆಗದ್ದರ್‌ ಕಲಬುರಗಿ-ಉಮೇಶ್‌ ಜಾಧವ್‌ ಬೀದರ್‌ -ಭಗಂವಂಥ್‌ ಕೂಬ ಕೊಪ್ಪಳ-ಬಸವರಾಜ ಕ್ಯಾವತರ್‌ ಬಳ್ಳಾರಿ ಶ್ರೀರಾಮುಲು ಉಡುಪಿ-ಚಿಕ್ಕಮಗಳೂರು-ಕೋಟಾ ಶ್ರೀನಿವಾಸ ಚಾಮರಾಜನಗರ-ಎಸ್‌ ಬಾಲರಾಜ್‌ https://twitter.com/ANI/status/1767908439815057462

Read More

ವಾಷಿಂಗ್ಟನ್‌ : ಭಾರತದ ನಂತರ ಅಮೆರಿಕ ಕೂಡ ಚೀನಾಕ್ಕೆ ದೊಡ್ಡ ಹೊಡೆತ ನೀಡಿದೆ. ಚೀನಾದ ಆ್ಯಪ್ ಟಿಕ್ ಟಾಕ್ ಅನ್ನು ನಿಷೇಧಿಸುವ ಮಸೂದೆಯನ್ನು ಯುಎಸ್ ಹೌಸ್ ಅಂಗೀಕರಿಸಿದೆ. ಟಿಕ್ ಟಾಕ್ ಅನ್ನು ನಿಷೇಧಿಸುವ ಈ ಮಸೂದೆಯನ್ನು ಬಹುಮತದೊಂದಿಗೆ ಅಂಗೀಕರಿಸುವ ಮೂಲಕ ಯುಎಸ್ ಹೌಸ್ ಚೀನಾಕ್ಕೆ ಬಲವಾದ ಸಂದೇಶವನ್ನು ನೀಡಿದೆ. ರಾಜಕೀಯವಾಗಿ ವಿಭಜಿತ ವಾಷಿಂಗ್ಟನ್ನಲ್ಲಿ, ಟಿಕ್ಟಾಕ್ ಅನ್ನು ನಿಷೇಧಿಸುವ ವಿಷಯದಲ್ಲಿ ಸಂಸದರು ಪ್ರಸ್ತಾವಿತ ಕಾನೂನಿನ ಪರವಾಗಿ 352 ಮತಗಳು ಮತ್ತು ವಿರೋಧವಾಗಿ ಕೇವಲ 65 ಮತಗಳು ಚಲಾವಣೆಯಾದವು. ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಬುಧವಾರ ಈ ಮಸೂದೆಯನ್ನು ಭಾರಿ ಬಹುಮತದೊಂದಿಗೆ ಅಂಗೀಕರಿಸುವ ಮೂಲಕ ಚೀನಾಕ್ಕೆ ಶಾಕ್‌ ಕೊಟ್ಟಿದೆ. ಯುಎಸ್ನ ಈ ನಿರ್ಧಾರವು ಟಿಕ್ಟಾಕ್ ಅನ್ನು ಅದರ ಚೀನೀ ಮಾಲೀಕರಿಂದ ಬೇರ್ಪಡಿಸಲು ಅಥವಾ ಯುನೈಟೆಡ್ ಸ್ಟೇಟ್ಸ್ನಿಂದ ನಿಷೇಧಿಸಲು ಒತ್ತಾಯಿಸುತ್ತದೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2023-24 ನೇ ಸಾಲಿನಲ್ಲಿ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಪ್ಯಾಕೇಜ್‌ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಅರ್ಜಿ ಸಲ್ಲಿಕೆ ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ರೈತರ ಅರ್ಜಿ ರೈತರ ಭಾವಚಿತ್ರ FID (FID ಇಲ್ಲವಾದಲ್ಲಿ ಆಧಾರ್‌ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್‌ ಪಾಸ್‌ ಬುಕ್ ಪ್ರತಿ) ಕೃಷಿ ಭಾಗ್ಯ ಪ್ಯಾಕೇಜ್‌ ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದೆ ಕ್ಷೇತ್ರ ಬದು ನಿರ್ಮಾಣ ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ. ಕೃಷಿ ಹೊಂಡ ಎಲ್ಲಾ ರೀತಿಯ…

Read More

ಬೆಂಗಳೂರು : ರಾಜ್ಯ ಸರ್ಕಾರವು ಅಸ್ಪೃಶ್ಯತಾ ನಿವಾರಣಾ ಉದ್ದೇಶದಿಂದ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನ ಯೋಜನೆಯನ್ನು ಜಾರಿಮಾಡಲಾಗಿದೆ. ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಇತರೆ ಜಾತಿಯ ಯುವತಿ/ಯುವಕರನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ಕ್ರಮವಾಗಿ 2.50 ಲಕ್ಷ ಹಾಗೂ 3 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಇತರೆ ಜಾತಿಯ ಯುವತಿ/ಯುವಕರನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ʼಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನʼ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುತ್ತದೆ. ಅಂತರ್ಜಾತಿ ವಿವಾಹವಾದ ದಂಪತಿಗಳು, ವಿವಾಹವಾದ 18 ತಿಂಗಳುಗಳ ಒಳಗಾಗಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ : https://swdservices.karnataka.gov.in/swincentive/ICM/ICMHome.aspx

Read More

ಬೆಂಗಳೂರು : ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಮುಗಿದಿದ್ದು, ಇಂದಿನಿಂದ ಕ್ರಮ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ. ಫೆಬ್ರವರಿ 28 ರಂದು ಹೊರಡಿಸಿದ್ದ ಸುತ್ತೋಲೆಯಂತೆಯೇ ಶೇ 60ರಷ್ಟು ಕನ್ನಡ ಬಳಸದ ವಾಣಿಜ್ಯ ಮಳಿಗೆಗಳ ʼವ್ಯಾಪಾರ ಪರವಾನಗಿʼ ಅಮಾನತು ಮಾಡಿ, ಬೀಗ ಹಾಕಲಾಗುತ್ತದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ-2024 ರ ತಿದ್ದುಪಡಿಯನ್ವಯ ನಾಮಫಲಕದ ಮೇಲ್ಬಾಗದಲ್ಲಿ ಶೇ 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು, ರಾಜ್ಯದಲ್ಲಿನ ಎಲ್ಲಾ ಉದ್ದಿಮೆಗಳು, ಕಾರ್ಖಾನೆಗಳು, ಬ್ಯಾಂಕ್‍ಗಳು, ಸಂಘ, ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಶಾಲಾ, ಕಾಲೇಜುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ 60 ರಷ್ಟು ಕನ್ನಡ ಭಾಷೆಯ ಪ್ರದರ್ಶನ ಇರಲೇಬೇಕಾಗುತ್ತದೆ. ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ರಾಜ್ಯದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಎಲ್ಲರೂ ಸ್ವಯಂ ಪ್ರೇರಿತವಾಗಿ ಕನ್ನಡ ಬಳಕೆ ಮಾಡಬೇಕು. ಒಂದು ವೇಳೆ ಸಂಪೂರ್ಣವಾಗಿ ಕನ್ನಡ ಬಳಕೆ ಮಾಡುವುದಾದರೇ ಯಾವುದೇ ಅಭ್ಯಂತರ ಇರುವುದಿಲ್ಲ. ಬ್ಯಾಂಕ್, ಉದ್ದಿಮೆಗಳು ತ್ರಿಭಾಷಾ ಸೂತ್ರ…

Read More

ಬೆಂಗಳೂರು : ಆಧಾರ್‌ ಕಾರ್ಡ್‌ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್‌ ಪ್ರಾಧಿಕಾರ 2024ರ ಜೂನ್‌ 14ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್‌ ಕಾರ್ಡ್‌ ಬಳಕೆದಾರರು ಉಚಿತ ಆಧಾರ್‌ ಅಪ್‌ಡೇಟ್‌ ಪ್ರಯೋಜನ ಪಡೆಯಬಹುದಾಗಿದೆ. ಆದರೆ, ಉಚಿತ ಪರಿಷ್ಕರಣೆ ಸೇವೆಯು ಆನ್‌ಲೈನ್‌ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಆಧಾರ್‌ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯ. ನಿಮ್ಮ ಆಧಾರ್ ಕಾರ್ಡ್ ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸುವುದು ಹೇಗೆ.? * ಯುಐಡಿಎಐ ಅಧಿಕೃತ ವೆಬ್ಸೈಟ್ https://uidai.gov.in ಗೆ ಭೇಟಿ ನೀಡಿ * ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನ ನಮೂದಿಸಿ ಮತ್ತು ನಿಮ್ಮ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ‘ಸೆಂಡ್ ಒಟಿಪಿ’ ಕ್ಲಿಕ್ ಮಾಡಿ * ಇದರ ನಂತರ ‘ಡೆಮೋಗ್ರಾಫಿಕ್ಸ್ ಡೇಟಾವನ್ನು ನವೀಕರಿಸಿ’ ಮತ್ತು ಸಂಬಂಧಿತ ಆಯ್ಕೆಯನ್ನು ಆರಿಸಿ. * ‘ಮುಂದುವರಿಯಿರಿ’ ಕ್ಲಿಕ್ ಮಾಡಿ ಮತ್ತು ಅಗತ್ಯ ಡಾಕ್ಯುಮೆಂಟ್ ಅನ್ನು…

Read More