Author: kannadanewsnow57

ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ಉಚಿತವಾಗಿ ಮಾಡಲು ಜೂನ್ 30ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಪಡಿತರ ಚೀಟಿದಾರರು ಆಧಾರ್ ದೃಢೀಕರಣ (ಇ-ಕೆವೈಸಿ) ಯನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ಮೂಲಕ ತಮ್ಮ ಗುರುತು, ನೋಂದಣಿ ಅಥವಾ ಮರು ನೋಂದಣಿ ಮಾಡಿಸದೆ ಇರುವ ಎಲ್ಲಾ ಸದಸ್ಯರು ಜೂನ್ 30ರೊಳಗೆ ಬಯೋಮೆಟ್ರಿಕ್ ಸಂಗ್ರಹಣೆ (ಇ-ಕೆವೈಸಿ) ಮಾಡಿಸಿಕೊಳ್ಳಲು ಅಂತಿಮ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ. ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳು ಆಹಾರ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಆಧಾರ್ ದೃಢೀಕರಣ (ಇ-ಕೆವೈಸಿ)ಯನ್ನು ಮಾಡದೇ ಇರುವ ಫಲಾನುಭವಿಗಳಿಗೆ ಜುಲೈ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇ-ಕೆವೈಸಿ ಮಾಡುವುದು ನಿಮ್ಮ ಸ್ಥಳೀಯ ಪಡಿತರ ಅಥವಾ ಪಿಡಿಎಸ್ ಡೀಲರ್‌ಗೆ ಭೇಟಿ ನೀಡಿ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಯನ್ನು…

Read More

ಬೆಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ರಾಮನಗರ, ಮಂಡ್ಯ, ಮೈಸೂರು, ವಿಜಯನಗರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ ಹಲವಡೆ ಜೂ.23ರಿಂದ ಜೂ.29ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. . ಕರಾವಳಿಯಲ್ಲಿ ಜೂ.23ರಿಂದ ಜೂ.29ರವರೆಗೆ ಆರೆಂಜ್ ಅಲರ್ಟ್ ಘೋಷಿಸ ಲಾಗಿದೆ. ಇಂದಿನಿಂದ ಜೂ.29ರವರೆಗೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read More

ರೈಲ್ವೆ ನೇಮಕಾತಿ ಮಂಡಳಿ (RRB) 2025-26 ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ 6,180 ತಂತ್ರಜ್ಞರ ಹುದ್ದೆಗಳಿಗೆ ದೊಡ್ಡ ಪ್ರಮಾಣದ ನೇಮಕಾತಿ ಅಭಿಯಾನವನ್ನು ಅಧಿಕೃತವಾಗಿ ನಡೆಸುವುದಾಗಿ ತಿಳಿಸಿದೆ. ಆನ್‌ಲೈನ್ ನೋಂದಣಿ ಜೂನ್ 28 ರಂದು ಪ್ರಾರಂಭವಾಗಿ ಜುಲೈ 28 ರಂದು ರಾತ್ರಿ 11.59 ಕ್ಕೆ ಮುಕ್ತಾಯಗೊಳ್ಳುತ್ತದೆ. RRB ತಂತ್ರಜ್ಞರ ನೇಮಕಾತಿ 2025 ರ ಪ್ರಮುಖ ವಿವರಗಳು ಒಟ್ಟು ಖಾಲಿ ಹುದ್ದೆಗಳಲ್ಲಿ, 180 ತಂತ್ರಜ್ಞರ ಗ್ರೇಡ್ 1 ಸಿಗ್ನಲ್ ಹುದ್ದೆಗಳಿಗೆ, ಉಳಿದ 6,000 ತಂತ್ರಜ್ಞರ ಗ್ರೇಡ್ 3 ಹುದ್ದೆಗಳಿಗೆ. ಎರಡೂ ಹುದ್ದೆಗಳಿಗೆ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಸಲಾಗುತ್ತದೆ, ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆ ಮಾಡಲಾಗುತ್ತದೆ. ಈ ನೇಮಕಾತಿ ಉಪಕ್ರಮವು ಭಾರತೀಯ ರೈಲ್ವೆಯ ತಾಂತ್ರಿಕ ಕಾರ್ಯಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ, ವಿಶೇಷವಾಗಿ ಹಿಂದಿನ ನೇಮಕಾತಿ ಚಕ್ರಗಳಲ್ಲಿ ಇದೇ ರೀತಿಯ ಅವಕಾಶಗಳನ್ನು ಕಳೆದುಕೊಂಡವರಿಗೆ ಗಮನಾರ್ಹ ಅವಕಾಶವನ್ನು ನೀಡುತ್ತದೆ. ಅರ್ಹತಾ ಮಾನದಂಡಗಳು ತಂತ್ರಜ್ಞ ಗ್ರೇಡ್ 1 ಸಿಗ್ನಲ್: ಅರ್ಜಿದಾರರು ಭೌತಶಾಸ್ತ್ರ,…

Read More

ಬೆಂಗಳೂರು: ಭಾರತೀಯ ಸೇನೆಗೆ ಅಗ್ನಿವೀರರ ನೇಮಕಾತಿಗೆ ಕರ್ನಾಟಕದಿಂದ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಇದೇ ಜೂನ್ 30ರಿಂದ ಜುಲೈ 10ರವರೆಗೆ ಈ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಈಗಾಗಲೇ ಭಾರತೀಯ ಸೇನೆಯ ಅಧಿಕೃತ ವೆಬ್ ಪೋರ್ಟಲ್ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಆಧರಿಸಿ ಕ್ರಮವಾಗಿ www. joinindianarmy.nic.in ವೆಬ್ ಸೈಟ್ ನಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು. ಮೂಲ ಪ್ರವೇಶ ಪತ್ರವನ್ನು ಕೊಂಡೊಯ್ಯುವುದು ಅವಶ್ಯ. ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಕಡ್ಡಾಯ. ಸಾಮಾನ್ಯ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುತ್ತಿದ್ದು,ಸಾಮಾನ್ಯ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಗಣಿತ ಮತ್ತು ಲಾಜಿಕಲ್ ರಿಸನಿಂಗ್ ಕುರಿತು ಪ್ರಶ್ನೆಗಳಿರಲಿವೆ. ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ. ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ನಡೆಯಲಿದೆ.

Read More

ನವದೆಹಲಿ : ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಒಂಟಿ ತಾಯಂದಿರ ಮಕ್ಕಳಿಗೆ ಇತರ ಹಿಂದುಳಿದ ವರ್ಗ (ಒಬಿಸಿ) ಪ್ರಮಾಣಪತ್ರಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ನಿಯಮಗಳನ್ನು ತಿದ್ದುಪಡಿ ಮಾಡುವ “ಪ್ರಮುಖ” ವಿಷಯವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರ್ಧರಿಸಿದೆ. ಒಂಟಿ ತಾಯಂದಿರ ಮಕ್ಕಳಿಗೆ OBC ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಈ ರಿಟ್ ಅರ್ಜಿಯು ಒಂದು ಪ್ರಮುಖ ವಿಷಯವನ್ನು ಎತ್ತುತ್ತದೆ, ಅದರಲ್ಲಿ ತಾಯಂದಿರು OBC ಗೆ ಸೇರಿದವರು… ಇದನ್ನು ಆಲಿಸಬೇಕಾಗಿದೆ” ಎಂದು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ನೇತೃತ್ವದ ಪೀಠವು ಗಮನಿಸಿತು. ದೆಹಲಿ ಮೂಲದ ಮಹಿಳೆಯೊಬ್ಬರು ಈ ಪ್ರಕರಣವನ್ನು ಸಲ್ಲಿಸಿದ್ದರು, ಮತ್ತು ಸುಪ್ರೀಂ ಕೋರ್ಟ್ ಜನವರಿಯಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆಗಳನ್ನು ಕೋರಿತ್ತು. ಈ ವಿಷಯಕ್ಕೆ ವಿಸ್ತೃತ ಪರಿಗಣನೆಯ ಅಗತ್ಯವಿದೆ ಎಂದು ಕೇಂದ್ರವು ವಾದಿಸಿತ್ತು ಮತ್ತು ರಾಜ್ಯಗಳನ್ನು ಉನ್ನತ ನ್ಯಾಯಾಲಯದ ಮುಂದೆ ಪ್ರಕರಣದಲ್ಲಿ ಪಕ್ಷಗಳಾಗಿ ಹಾಜರುಪಡಿಸಬೇಕಾಗಿದೆ. ಈ ಪ್ರಶ್ನೆಗೆ ನ್ಯಾಯಾಲಯವು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೇಂದ್ರವು ಹೇಳಿದೆ. ಜುಲೈ 22 ರಂದು ಪ್ರಕರಣವನ್ನು ಮುಂದಿನ ವಿಚಾರಣೆಗೆ…

Read More

ಬೆಂಗಳುರು : ರಾಜ್ಯ ಸರ್ಕಾರವು ಮತ್ತೆ 9 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ಮದ್ಯ ಮಾರಾಟಗಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಬಕಾರಿ ಲೈಸೆನ್ಸ್ ಶುಲ್ಕ ಶೇ. 50ರಷ್ಟು ಇಳಿಕೆ ಮಾಡಿದ್ದು, ಇದರ ಅವಧಿ 5 ವರ್ಷಕ್ಕೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ. ಹೌದು, ಮದ್ಯ ಮಾರಾಟಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಅಬಕಾರಿ ಸನ್ನದು ಶುಲ್ಕವನ್ನು ಶೇಕಡ 50ರಷ್ಟು ಇಳಿಕೆ ಮಾಡಿದೆ. ಪ್ರತಿ ವರ್ಷ ಲೈಸೆನ್ಸ್ ನವೀಕರಣಕ್ಕೆ ವಿನಾಯಿತಿ ನೀಡಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಬಕಾರಿ ಸನ್ನದು ಶುಲ್ಕ ದುಪ್ಪಟ್ಟು ಮಾಡಿ ಕರಡು ಪ್ರಸ್ತಾವನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಲಾಗಿತ್ತು. ಸನ್ನದು ಶುಲ್ಕ ಹೆಚ್ಚಳಕ್ಕೆ ಮದ್ಯ ಮಾರಾಟಗಾರರಿಂದ ಬಹಳಷ್ಟು ಆಕ್ಷೇಪಣೆ ಬಂದಿದ್ದು, ಆಕ್ಷೇಪಣೆ ಸ್ವೀಕರಿಸಿದ ಒಂದು ತಿಂಗಳ ನಂತರ ಶುಲ್ಕ ಇಳಿಕೆ ಮಾಡಲಾಗಿದೆ. ಇದುವರೆಗೆ ಪ್ರತಿ ವರ್ಷ ಅಬಕಾರಿ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕಿತ್ತು. ಇದನ್ನು ಪ್ರತಿ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣಕ್ಕೆ ಅವಕಾಶ ಕಲ್ಪಿಸಿ ಮಹತ್ವದ ಆದೇಶ ಹೊರಡಿಸಿದೆ.

Read More

ವಾಷಿಂಗ್ಟನ್ : ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. 12 ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ. ತನ್ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರವಾಗಿ ಮತ್ತು ಅಸ್ಥಿರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಕ್ಕಾಗಿ ಇರಾನ್ ಸೋಮವಾರ ಕತಾರ್ ಮತ್ತು ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. “ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಮತ್ತು ಸಂಪೂರ್ಣವಾದ CEASEFIRE (ಇಂದಿನಿಂದ ಸುಮಾರು 6 ಗಂಟೆಗಳಲ್ಲಿ, ಇಸ್ರೇಲ್ ಮತ್ತು ಇರಾನ್ ತಮ್ಮ ಪ್ರಗತಿಯಲ್ಲಿರುವ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರ!) ನಡೆಯಲಿದೆ ಎಂದು ಸಂಪೂರ್ಣವಾಗಿ ಒಪ್ಪಿಕೊಂಡಿದೆ, 12 ಗಂಟೆಗಳ ಕಾಲ, ಆ ಸಮಯದಲ್ಲಿ ಯುದ್ಧವನ್ನು…

Read More

ವಾಷಿಂಗ್ಟನ್ : ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. 12 ದಿನಗಳ ಯುದ್ಧ ಮುಗಿದಿದ್ದು, ಇರಾನ್ ಮತ್ತು ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಟ್ವೀಟ್ ಮಾಡಿದ್ದಾರೆ. ತನ್ನ ಪರಮಾಣು ತಾಣಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಗೆ ಪ್ರತೀಕಾರವಾಗಿ ಮತ್ತು ಅಸ್ಥಿರ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಕ್ಕಾಗಿ ಇರಾನ್ ಸೋಮವಾರ ಕತಾರ್ ಮತ್ತು ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಇರಾನ್-ಇಸ್ರೇಲ್ ನಡುವೆ ಕದನ ವಿರಾಮ ಘೋಷಿಸಿದ್ದಾರೆ. “ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಮತ್ತು ಸಂಪೂರ್ಣವಾದ CEASEFIRE (ಇಂದಿನಿಂದ ಸುಮಾರು 6 ಗಂಟೆಗಳಲ್ಲಿ, ಇಸ್ರೇಲ್ ಮತ್ತು ಇರಾನ್ ತಮ್ಮ ಪ್ರಗತಿಯಲ್ಲಿರುವ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರ!) ನಡೆಯಲಿದೆ ಎಂದು ಸಂಪೂರ್ಣವಾಗಿ ಒಪ್ಪಿಕೊಂಡಿದೆ, 12 ಗಂಟೆಗಳ ಕಾಲ, ಆ ಸಮಯದಲ್ಲಿ ಯುದ್ಧವನ್ನು…

Read More

ಧಾರವಾಡ : ಧಾರವಾಡದ ವಿದ್ಯಾಗಿರಿಯ ನಿವಾಸಿಯಾದ ಮಂಜುನಾಥ ಕೋಟುರ ಅನ್ನುವರು ತಮ್ಮ ಉಪಯೋಗಕ್ಕಾಗಿ 2023 ರಲ್ಲಿ ರೂ.1,31,719 ಹಣ ವಿನಿಯೋಗಿಸಿ ಧಾರವಾಡದಲ್ಲಿ ಎದುರುದಾರರ ಓಲಾ ಎಲೆಕ್ಟ್ರಿಕ್ ಕಂಪನಿಯವರ ಸ್ಕೂಟರ್ನ್ನು ಖರೀದಿಸಿದ್ದರು. ಖರೀದಿಸಿದ ಕೆಲವೇ ದಿನಗಳಲ್ಲಿ ಅವರ ಸ್ಕೂಟರ್ ರಸ್ತೆಯಲ್ಲಿ ಹೋಗುವಾಗ ನಿಲ್ಲುವುದು ಹಾಗೂ ಬ್ಯಾಟರಿ ಸಮಸ್ಯೆ ಮಾಡಹತ್ತಿತು. ಈ ಬಗ್ಗೆ ಎದುರುದಾರರ ಸರ್ವಿಸ್ ಸ್ಟೇಷನ್ಗೆ ಹಾಗೂ ಗ್ರಾಹಕರ ಸಹಾಯವಾಣಿಗೆ ವಿಷಯ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ದೂರುದಾರರು ವಾಹನವನ್ನು ತಮ್ಮ ಉಪಯೋಗಕ್ಕೆ ಬಳಸದೇ ಅದನ್ನು ತಮ್ಮ ಮನೆಯಲ್ಲಿ ಇಟ್ಟಿರುತ್ತಾರೆ. ಸಾಕಷ್ಟು ಹಣ ವ್ಯಯ ಮಾಡಿ ವಾಹನ ಖರೀದಿಸಿದರು ಅದನ್ನು ದೂರುದಾರರಿಗೆ ಉಪಯೋಗಿಸಲು ಸಾಧ್ಯವಾಗದೇ ಇದ್ದು ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಜೂನ್ 28, 2024 ದೂರನ್ನು ಸಲ್ಲಿಸಿದ್ದರು.   ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ…

Read More