Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾದ ಸರ್ಕಾರಿ ನೌಕರನಿಗೆ ಹೊಸ ಹುದ್ದೆಗೆ ಹಾಜರಾಗಲು ಸೇರಿಕೆ ಕಾಲ ಸಿಗುತ್ತದೆ. ವಿಶೇಷ ಕರ್ತವ್ಯಕ್ಕಾಗಿ ಸ್ವಲ್ಪ ಕಾಲದವರೆಗೆ ಮಾತ್ರ ಬೇರೆಡೆ ಕಳುಹಿಸಿದರೆ ಕೇವಲ ವಾಸ್ತವಿಕ ಪ್ರಯಾಣ ಸಮಯವನ್ನು ಅನುಮತಿಸಬಹುದು. ಕೋರಿಕೆ ಮೇರೆಗೆ ವರ್ಗಾವಣೆಯಾದಾಗ ಸೇರುವ ಕಾಲ ದೊರೆಯುವುದಿಲ್ಲ. ಪ್ರಯಾಣದ ದಿನಗಳನ್ನು ಬಳಸಲು ಬರುವುದಿಲ್ಲ. ಈ ದಿನಗಳಿಗಾಗಿ ರಜೆಯನ್ನು ಮಂಜೂರು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಿಯಮ 85 ರಲ್ಲಿ ಹೇಳಿದಂತೆ ಚಾರ್ಜ್ ವಹಿಸಿಕೊಳ್ಳಲು ತಗಲುವ ದಿನಗಳನ್ನು ಮಾತ್ರ ಉಪಯೋಗಿಸಿಕೊಳ್ಳಬಹುದು. ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರ / ಇತರ ಸಂಸ್ಥೆಗೆ ನಿಯೋಜನೆ ಮೇಲೆ ಹೋದ ರಾಜ್ಯ ಸರ್ಕಾರಿ ನೌಕರರಿಗೆ ಅವುಗಳು ರಚಿಸಿದ ನಿಯಮಗಳ ಪ್ರಕಾರ ಸೇರುವ ಕಾಲ ಸಿಗುತ್ತದೆ. ಆದರೆ ಒಪ್ಪಂದದಲ್ಲಿ ಬೇರೆ ನಿಯಮಗಳನ್ನು ಅನ್ವಯವಾಗುವಂತೆ ಕರಾರುಗಳಿದ್ದರೆ ಅದರ ಪ್ರಕಾರ ಸೇರುವ ಕಾಲ ಸಿಗುತ್ತದೆ. ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರ ಇತರ ಸಂಸ್ಥೆಗಳಿಂದ ನಮ್ಮ ರಾಜ್ಯಕ್ಕೆ ನಿಯೋಜನೆ ಮೇಲೆ ಬಂದರೆ ಅವರಿಗೆ ಕ.ನಾ.ಸೇ.ನಿಯಮಾವಳಿಗಳು ಅನ್ವಯವಾಗುತ್ತದೆ.…
ಅಡುಗೆ ಮನೆಯಲ್ಲಿ ಇರಬಾರದ ವಸ್ತುಗಳು ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರತಿಯೊಂದು ಭಾಗ ಮತ್ತು ಅಲ್ಲಿ ಇರಿಸಲಾಗಿರುವ ವಸ್ತುಗಳು ಒಂದು ನಿರ್ದಿಷ್ಟ ಶಕ್ತಿಯನ್ನು ಹೊರಸೂಸುತ್ತವೆ. ಅಡುಗೆಮನೆಯು ಆಹಾರವನ್ನು ತಯಾರಿಸುವ ಸ್ಥಳವಾಗಿರುವುದರಿಂದ, ಅದು ಆರೋಗ್ಯ ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ತಪ್ಪಿಸುವುದು ಉತ್ತಮ. ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಅಥವಾ ಉತ್ತಮ ಶಕ್ತಿಯ ಹರಿವನ್ನು ತಡೆಯಬಹುದು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ,…
ರೋಹ್ಟಕ್: ಜೂನ್ 24 ರ ರಾತ್ರಿ ಪಾಣಿಪತ್ನಲ್ಲಿ ನಿಂತಿದ್ದ ರೈಲಿನ ಖಾಲಿ ಕೋಚ್ನಲ್ಲಿ ನಾಲ್ವರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪಾಣಿಪತ್ನಲ್ಲಿ ನಿಂತಿದ್ದ ರೈಲಿನ ಖಾಲಿ ಬೋಗಿಯಲ್ಲಿ 35 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಜೂನ್ 26 ರಂದು ಪೊಲೀಸರಿಗೆ ಮಹಿಳೆ ನಾಪತ್ತೆಯಾದ ಬಗ್ಗೆ ದೂರು ಬಂದಿತ್ತು. ಜೂನ್ 24 ರಿಂದ ಜಗಳದ ನಂತರ ಆಕೆ ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಹೇಳಿದ್ದರು. ಇದು ಮೊದಲೇ ಸಂಭವಿಸಿತ್ತು ಆದರೆ ತಾನು ತಾನಾಗಿಯೇ ಹಿಂತಿರುಗುತ್ತಿದ್ದೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಮಹಿಳೆ ಪೊಲೀಸರಿಗೆ ತಿಳಿಸಿದಾಗ, ತನ್ನ ಪತಿ ಕಳುಹಿಸಿದ್ದಾನೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ತನ್ನ ಬಳಿಗೆ ಬಂದಿದ್ದಾರೆ. “ಅವನು ತನ್ನನ್ನು ಕರೆದುಕೊಂಡು ಹೋಗಿ ನಿಂತಿದ್ದ ರೈಲಿನ ಖಾಲಿ ಬೋಗಿಗೆ ಹತ್ತಿದನು, ಅಲ್ಲಿ ಅವನು ತನ್ನ ಮೇಲೆ ಅತ್ಯಾಚಾರ ಮಾಡಿದನು ಎಂದು ಅವಳು ಹೇಳಿದಳು. ನಂತರ, ಇತರ ಇಬ್ಬರು ಪುರುಷರು…
ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲೂ ಹೃದಯಾಘಾತಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದು, ಅಂಗಡಿಯಲ್ಲಿ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಿದ್ದಗಿ ತಾಂಡಾದ ನಿವಾಸಿ ಜಯಾಬಾಯಿ (52) ಅಂಗಡಿಯಲ್ಲೇ ಎದೆನೋವಿನಿಂದ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹಾಸನ : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹಾಸನ ಮೂಲದ ವ್ಯಕ್ತಿಯೊಬ್ಬ ಬಸ್ ನಲ್ಲಿ ಪ್ರಯಾಣಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ದೊಡ್ಡಮಂಡಿಗನಹಳ್ಳಿಯ ವೆಂಕಟೇಶ್ (55) ಮೃತ ದುರ್ದೈವಿಯಾಗಿದ್ದು, ಬೆಂಗಳೂರು ಸಮೀಪದ ಸೋಲೂರಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಕಳೆದ 3 ವರ್ಷಗಳಿಂದ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ವೆಂಕಟೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ಮೃತದೇಹ ರವಾನಿಸಲಾಗುತ್ತಿದೆ.
ಲಾಹೋರ್ : ಪಾಕಿಸ್ತಾನದ ಮನೆಗಳಲ್ಲಿ ಸಿಂಹಗಳು ಮತ್ತು ಚಿರತೆಗಳನ್ನು ಸಾಕುವುದು ಸಾಮಾನ್ಯವಾಗಿದೆ. ಆದಾಗ್ಯೂ, ಈ ಹವ್ಯಾಸವು ಒಬ್ಬ ವ್ಯಕ್ತಿಗೆ ತುಂಬಾ ದುಬಾರಿಯಾಗಿದೆ. ಅವನ ಸಾಕು ಸಿಂಹ ಇದ್ದಕ್ಕಿದ್ದಂತೆ ಮನೆಯಿಂದ ತಪ್ಪಿಸಿಕೊಂಡಿದ್ದು, ಇಡೀ ಪ್ರದೇಶದಲ್ಲಿ ಭೀತಿಯನ್ನುಂಟುಮಾಡಿತು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಸಿಂಹವು ಮನೆಯ ಗೋಡೆಯಿಂದ ಹಾರಿ ಬೀದಿಯಲ್ಲಿ ಓಡುತ್ತಿರುವುದನ್ನು ಕಾಣಬಹುದು. ಸಿಸಿಟಿವಿ ದೃಶ್ಯಗಳು ವೈರಲ್ ಶುಕ್ರವಾರ ಈ ಘಟನೆಯ ಬಗ್ಗೆ ಮಾಹಿತಿ ನೀಡುತ್ತಿರುವ ಲಾಹೋರ್ ಪೊಲೀಸರು, ಘಟನೆಯ ಸಿಸಿಟಿವಿ ದೃಶ್ಯಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ದೃಶ್ಯಗಳಲ್ಲಿ, ಸಿಂಹವು ಮನೆಯ ಗೋಡೆಯಿಂದ ಹಾರಿ ಬೀದಿಯಲ್ಲಿ ಓಡಿ ಮೊದಲು ಮಹಿಳೆಯ ಮೇಲೆ ದಾಳಿ ಮಾಡುವುದನ್ನು ಸ್ಪಷ್ಟವಾಗಿ ಕಾಣಬಹುದು. ಇದರ ನಂತರ, ಸಿಂಹವು ಚಿಕ್ಕ ಮಗು ಸೇರಿದಂತೆ 2 ಜನರ ಮೇಲೆ ಬೇಟೆಯಾಡುತ್ತದೆ. https://twitter.com/TheInsiderPaper/status/1941160553432707573?ref_src=twsrc%5Etfw%7Ctwcamp%5Etweetembed%7Ctwterm%5E1941160553432707573%7Ctwgr%5Ec14bd7e6d7eb6ccc7cf1fc2295c3ec429a7b52f6%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalaunch%3Dtrue ದಾಳಿಗೊಳಗಾದ ಮಹಿಳೆ ಮತ್ತು 2 ಮಕ್ಕಳು ಲಾಹೋರ್ ಪೊಲೀಸರ ಪ್ರಕಾರ, ಈ ವೀಡಿಯೊ ಗುರುವಾರ ರಾತ್ರಿಯದ್ದಾಗಿದೆ. ಸಿಂಹವು ಮೊದಲು ಮಹಿಳೆಯ ಮೇಲೆ…
ಬೆಂಗಳೂರು : ನನಗೆ ಸಚಿವ ಸ್ಥಾನ ಬೇಡ, ಡಿ.ಕೆ. ಶಿವಕುಮಾರ್ ಅವರು ಸಿಎಂ ಆದ್ರೆ ಸಾಕು ಎಂದು ಶಾಸಕ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕೆಂದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಮುಂದೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು. ಅಧಿಕಾರದ ಒಂಡಬಡಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಶಾಸಕನಾಗಿ 6 ತಿಂಗಳಾಗಿದೆ. ಕಾಂಗ್ರೆಸ್ ನಲ್ಲಿ ನಾನು ಸಕ್ರೀಯವಾಗಿ ಓಡಾಡುತ್ತಿಲ್ಲ. ಚನ್ನಪಟ್ಟಣ ತಾಲೂಕಿನ ಕೆಲಸ ಮಾಡಿಕೊಂಡಿದ್ದೇನೆ. ನನಗೆ ಮಂತ್ರಿ ಸ್ಥಾನದ ಆಸಕ್ತಿ ಇಲ್ಲ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ್ರೆ ಬೆಂಬಲ ನೀಡುತ್ತೇನೆ ಎಂದರು.
ಚೆನ್ನೈ : ಬೆಳ್ಳಂಬೆಳಗ್ಗೆ ತಮಿಳುನಾಡಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಶಾಲಾ ವಾಹನ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಬೆಳಿಗ್ಗೆ ತಮಿಳುನಾಡಿನ ಕಡಲೂರು ಬಳಿಯ ಸೆಮ್ಮಂಕುಪ್ಪಂನಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಶಾಲಾ ವ್ಯಾನ್ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಹಾದುಹೋಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳ ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಬೆಂಗಳೂರು: ನಾಡಿನ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯು ಯಶಸ್ವಿಯಾಗಿ 2 ವರುಷ ಪೂರೈಸಿದ್ದು, ಈ ಹೊತ್ತಿನಲ್ಲಿ ಬರೋಬ್ಬರಿ 500 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಹೌದು,ಸರ್ಕಾರದ ಮಹತ್ವಾಕಾಂಕ್ಷೆ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆ-ಶಕ್ತಿ ಗ್ಯಾರಂಟಿ ಯೋಜನೆಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 500 ಕೋಟಿ ತಲುಪಲಿದೆ. ಶಾಲಾ ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಕುಟುಂಬ ನಿರ್ವಹಣೆಗಾಗಿ ದುಡಿಮೆಗೆ ತೆರಳುವ ಮಹಿಳೆಯರು, ತನ್ನ ಮತ್ತು ತನ್ನವರ ವೈದ್ಯಕೀಯ ಚಿಕಿತ್ಸೆಯ ಉದ್ದೇಶಕ್ಕಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವ ತಾಯಂದಿರ ಮುಖದಲ್ಲಿ ನೆಮ್ಮದಿಯ ಮಂದಹಾಸ ಮೂಡಿರುವುದು ಈ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿ.
ರಾಯಚೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಮಸ್ಕಿ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಮಸ್ಕಿ ತಾಲೂಕಿನ ಪಗಡದಿನ್ನಿ ಕ್ಯಾಂಪ್‌ನ ಶರಣಬಸವ (32) ಮೃತ ವ್ಯಕ್ತಿಯಾಗಿದ್ದು, ಎದೆನೋವಿನಿಂದ ನರಳುತ್ತಿದ್ದ ಶರಣಬಸವನನ್ನು ಆತನ ಸ್ನೇಹಿತರು ಚಿಕಿತ್ಸೆಗಾಗಿ ಬೈಕ್ ನಲ್ಲಿಯೇ ಮಸ್ಕಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಅಲ್ಲಿದ್ದ ನರ್ಸ್‌ಗಳು ಆತನಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಕೂಡ ಫಲಕಾರಿಯಾಗಿರಲಿಲ್ಲ. ಪ್ರಾಣ ಉಳಿಸಲು ಆತನ ಸ್ನೇಹಿತರು, ಸಂಬಂಧಿಕರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಬಳಿಕ ಆರೋಗ್ಯ ಕೇಂದ್ರದಿಂದ ಸಿಂಧನೂರು ತಾಲೂಕಾಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನರಳಾಡಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ `ಹಾರ್ಟ್ ಅಟ್ಯಾಕ್’ ಗೆ 11 ಜನರು ಬಲಿ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 11 ಮಂದಿ ಹೃದಯಾಘಾತಕ್ಎಕ ಬಲಿಯಾಗಿದ್ದಾರೆ. ತುಮಕೂರಿನಲ್ಲಿ ಮೂವರು ನಿನ್ನೆ ಒಂದೇ…













