Author: kannadanewsnow57

ಫಿಲಿಪೈನ್ಸ್ನಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ಫಿಲಿಪೈನ್ಸ್ನ ಸ್ಯಾಕ್ಸರ್ಗೆನ್ನಿಂದ 106 ಕಿಲೋಮೀಟರ್ ದೂರದಲ್ಲಿರುವ ಸೆಲೆಬೆಸ್ ಸಮುದ್ರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 7.1 ರಷ್ಟಿತ್ತು. ಭೂಕಂಪದ ಆಳವು 620 ಕಿ.ಮೀ ಆಗಿದ್ದು, ಇದರ ಪರಿಣಾಮವು ದೊಡ್ಡ ಪ್ರದೇಶದಲ್ಲಿ ಕಂಡುಬಂದಿದೆ. ಆದಾಗ್ಯೂ, ಅಂತಹ ಪ್ರಬಲ ಭೂಕಂಪನದ ನಂತರವೂ, ಯಾವುದೇ ದೊಡ್ಡ ಹಾನಿ ವರದಿಯಾಗಿಲ್ಲ. ಭೂಕಂಪದ ನಂತರ ಯಾವುದೇ ಸುನಾಮಿ ಎಚ್ಚರಿಕೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಫಿಲಿಪೈನ್ಸ್ನ ಮಿಂಡನಾವೊದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಇದರ ಆಳ 650 ಕಿಲೋಮೀಟರ್. https://twitter.com/NCS_Earthquake/status/1811225929840271606?ref_src=twsrc%5Etfw%7Ctwcamp%5Etweetembed%7Ctwterm%5E1811225929840271606%7Ctwgr%5E718d18269755089dfba86acba0ab2f556864869e%7Ctwcon%5Es1_c10&ref_url=https%3A%2F%2Fapi-news.dailyhunt.in%2F

Read More

ಬೆಂಗಳೂರು : ನಡುರಸ್ತೆಯಲ್ಲೇ ಲಾರಿ ಹೊತ್ತಿ ಉರಿದ ಪರಿಣಾಮ ಟಿವಿಎಸ್‌ ಕಂಪನಿಯ 40 ಕ್ಕೂ ಹೆಚ್ಚು ಬೈಕ್‌ ಗಳು ಸುಟ್ಟುಭಸ್ಮವಾಗಿರುವ ಘಟನೆ ನಡೆದಿದೆ. ತಮಿಳುನಾಡಿನ ಟಿವಿಎಸ್‌ ಕಂಪನಿಗೆ ಸೇರಿದ ಲಾರಿವೊಂದು ಹೊಸ ಟಿವಿಎಸ್‌ ಬೈಕ್‌ ಗಳನ್ನು ಸಾಗಿಸುತ್ತಿದ್ದ ವೇಳೆ ಆನೇಕಲ್‌ ಬಳಿಯ ಧಮ್ಮರನಹಳ್ಳಿಯಲ್ಲಿ ಏಕಾಏಕಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಆದರೆ 40 ಕ್ಕೂ ಹೆಚ್ಚು ಹೊಸ ಟಿವಿಎಸ್‌ ಬೈಕ್‌ ಗಳು ಸುಟ್ಟು ಕರಕಲಾಗಿವೆ.

Read More

ಮೈಸೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅವ್ಯವಹಾರಕ್ಕೆ ಸಂಬಂದಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ದಿನಾಂಕ 10.07.2024 ರಂದು ಮಾನ್ಯ ಲೋಕಾಯುಕ್ತ ಕಚೇರಿಗೆ, ಮಾನವ ಹಕ್ಕುಗಳ ಆಯೋಗಕ್ಕೆ, ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವಿರುದ್ಧ ದೂರು ಸಲ್ಲಿಸಲಾಗಿದ್ದು ಆಗಿರುವ ವಂಚನೆಗಳಿಗೆ, ಸರ್ಕಾರದ ತಾರತಮ್ಯ ಧೋರಣೆಗಳಿಗೆ, ಚುನಾವಣೆ ಕಚೇರಿಗೆ ತಪ್ಪು ಮಾಹಿತಿ ನೀಡಿರುವ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ರೀತಿಯ ಕ್ರಮವನ್ನು ತೆಗೆದುಕೊಳ್ಳುವಂತೆ ಕೊರಳಾಗಿರುತ್ತದೆ.

Read More

ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗೀಸರ್ ಬಳಸುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾಗಿದ್ದು, ಹೆಚ್ಚಾಗಿ ಬಿಸಿ ನೀರನ್ನು ಬಳಸುತ್ತಾರೆ. ಗೀಸರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಇಲ್ಲದಿದ್ದರೆ ಅಪಾಯ ಖಂಡಿತ. ಅದನ್ನು ಬಳಸುವ ಮೊದಲು ಇಲ್ಲಿದೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು. ಮಾರುಕಟ್ಟೆಯಲ್ಲಿ ಮುಖ್ಯವಾಗಿ ನಾಲ್ಕು ವಿಧದ ಗೀಸರ್ ಗಳು ಲಭ್ಯವಿದ್ದು, ಇದರಲ್ಲಿ ಎಲೆಕ್ಟ್ರಿಕ್ ವಾಟರ್ ಗೀಸರ್, ಇನ್ ಸ್ಟಂಟ್ ವಾಟರ್ ಗೀಸರ್, ಸ್ಟೋರೇಜ್ ಗೀಸರ್, ಗ್ಯಾಸ್ ಗೀಸರ್ ಸೇರಿವೆ. ಈ ವಿವಿಧ ರೀತಿಯ ಗೀಸರ್‌ಗಳಿಗೆ ಸುರಕ್ಷತೆ, ಮುನ್ನೆಚ್ಚರಿಕೆಗಳು ಮತ್ತು ನಿರ್ವಹಣೆ ವಿಭಿನ್ನವಾಗಿದೆ. ಗೀಸರ್ ಸುರಕ್ಷತಾ ಸಲಹೆಗಳು ಗೀಸರ್ ಅನ್ನು ಸರಿಯಾದ ತಾಪಮಾನದಲ್ಲಿ ಹೊಂದಸಬೇಕು ಗೀಸರ್ ಅನ್ನು ಬಳಸುವಾಗ ಸರಿಯಾದ ತಾಪಮಾನವನ್ನು ಹೊಂದಿಸಬೇಕು. ಹೆಚ್ಚಿನ ತಾಪಮಾನದ ಸೆಟ್‌ನಿಂದಾಗಿ ನೀರು ಹೆಚ್ಚಾಗಿ ಬಿಸಿಯಾಗುತ್ತದೆ. ಇದಲ್ಲದೇ ವಿದ್ಯುತ್ ಕೂಡ ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಗೀಸರ್‌ ತಾಪಮಾನವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಗೀಸರ್ ತಾಪಮಾನವನ್ನು 45-40 ಡಿಗ್ರಿಗಳ ನಡುವೆ ಇಡಬೇಕು. ಗೀಸರ್ ಅನ್ನು ಸುಡುವ ವಸ್ತುಗಳಿಂದ ದೂರವಿಡಿ…

Read More

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, ಒಟ್ಟು 15 ಮಂದಿ ತಹಶೀಲ್ದಾರ್‌, 24 ಮಂದಿ ಪಿಎಸ್‌ ಐಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಈ ಕೆಳಕಂಡ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಪಿಎಸ್‌ ಐ ಅಧಿಕಾರಿಗಳ ಪಟ್ಟಿ ವರ್ಗವಣೆಗೊಂಡತಹಶೀಲ್ದಾರ್‌

Read More

ಬೆಂಗಳೂರು: ಹೊಸ ರೇಷನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಈಗ ಮತ್ತೆ ಅವಕಾಶ ನೀಡಲಾಗಿದೆ. ಬಿಪಿಎಲ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಆಹಾರ ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದೆ. ವೆಬ್​ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್​​ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಪಿಎಲ್ ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ಬಿಪಿಎಲ್ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಈಗಾಗಲೇ ಪಡಿತರ ಚೀಟಿ ಹೊಂದಿರದೇ ಇರೋರು ಅರ್ಜಿ ಸಲ್ಲಿಸಬಹುದು ಹೊಸದಾಗಿ ಮದುವೆಯಾದ ದಂಪತಿಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದು ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಎಂಬುದು ನಿರ್ಧರಿತವಾಗಿರಲಿದೆ. ಪಡಿತರ ಚೀಟಿಗಾಗಿ ಅರ್ಜಿ…

Read More

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ದೆಹಲಿಯ ರಾಷ್ಟ್ರಪತಿ ಭವನದ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದರು. ಮುರ್ಮು ಅವರು ಕ್ರೀಡೆ ಮತ್ತು ಆಟಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಬಗ್ಗೆ ಪ್ರಸಿದ್ಧ ಆಟಗಾರ್ತಿ ಸೈನಾ ನೆಹ್ವಾಲ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದಾಗ ನೋಡಲಾಯಿತು ಎಂದು ರಾಷ್ಟ್ರಪತಿ ಭವನ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದೆ. ರಾಷ್ಟ್ರಪತಿಯವರ ಸ್ಪೂರ್ತಿದಾಯಕ ಹೆಜ್ಜೆಯು ಭಾರತವು ಬ್ಯಾಡ್ಮಿಂಟನ್-ಶಕ್ತಿ ಕೇಂದ್ರವಾಗಿ ಹೊರಹೊಮ್ಮುವುದನ್ನು ಗಮನದಲ್ಲಿಟ್ಟುಕೊಂಡು, ಮಹಿಳಾ ಆಟಗಾರರು ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಿದ್ದಾರೆ” ಎಂದು ರಾಷ್ಟ್ರಪತಿ ಭವನ ಹೇಳಿದೆ. https://Twitter.com/rashtrapatibhvn/status/1811055739806568744?ref_src=twsrc%5Etfw%7Ctwcamp%5Etweetembed%7Ctwterm%5E1811055739806568744%7Ctwgr%5E2aaf28f318836e501ab29769c6bf0abf7fb32075%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalangchange%3Dtruelaunch%3Dtrue ಮಹಿಳಾ ಪದ್ಮ ಪ್ರಶಸ್ತಿ ವಿಜೇತರನ್ನು ಒಳಗೊಂಡ ‘ಹರ್ ಸ್ಟೋರಿ – ಮೈ ಸ್ಟೋರಿ’ ಉಪನ್ಯಾಸ ಸರಣಿಯ ಭಾಗವಾಗಿ ಸೈನಾ ನೆಹ್ವಾಲ್ ಗುರುವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಭಾಷಣ ಮಾಡಲಿದ್ದಾರೆ ಮತ್ತು ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ

Read More

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ.  ಪ್ರಕಟಿತ ಪರೀಕ್ಷೆ ಫಲಿತಾಂಶದ ದತ್ತಾಂಶದಂತೆ 69,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳುವ ಬಗ್ಗೆ ಪರೀಕ್ಷಾ ಮಂಡಳಿ ಮಹತ್ವದ ಮಾಹಿತಿ ನೀಡಿದೆ. ಆ ಬಗ್ಗೆ ಮುಂದೆ ಓದಿ.  ಎಸ್ ಎಸ್ ಎಲ್ ಸಿ ಪರೀಕ್ಷೆ-2 ಪ್ರಕಟವಾದ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ದಿನಾಂಕ 10-07-2024ರಿಂದ 17-07-2024ರವರೆಗೆ ಅವಕಾಶ ನೀಡಲಾಗಿದೆ ಅಂತ ತಿಳಿಸಿದೆ. ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಪರೀಕ್ಷೆಗಳು ದಿನಾಂಕ 02-08-2024ರಿಂದ 09-08-2024ರವರೆಗೆ ನಡೆಸಲಾಗುತ್ತದೆ ಅಂತ ಮಾಹಿತಿ ನೀಡಿದೆ. SSLC ಪರೀಕ್ಷೆ-3ಕ್ಕೆ ಸಂಬಂಧಿಸಿದಂತೆ ಸ್ಕ್ಯಾನ್ ಪ್ರತಿ, ಮರುಎಣಿಕೆಗೆ ಮತ್ತು ಮರು ಮೌಲ್ಯ ಮಾಪನಕ್ಕೆ ಮಂಡಳಿಯಿಂದ ಮಹತ್ವದ ಮಾಹಿತಿ ದಿನಾಂಕ 10-07-2024ರಿಂದ 15-07-2024ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು…

Read More

ಯೂರೋ 2024 ರ ಸೆಮಿಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2-1 ಗೋಲುಗಳ ಜಯದೊಂದಿಗೆ ಇಂಗ್ಲೆಂಡ್ ಫೈನಲ್ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡವನ್ನು ಎದುರಿಸಲಿದ್ದಾರೆ. ಫ್ರಾನ್ಸ್ ತಂಡವನ್ನು ಸೋಲಿಸಿ ಸ್ಪೇನ್ ಫೈನಲ್ ಪ್ರವೇಶಿಸಿತು. ಕ್ಸೇವಿ ಸಿಮನ್ಸ್ ಅವರ ಆರಂಭಿಕ ಗೋಲಿನ ಸಹಾಯದಿಂದ ನೆದರ್ಲ್ಯಾಂಡ್ಸ್ ಸೆಮಿಫೈನಲ್ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ದಿನದ ಆರಂಭವು ಇಂಗ್ಲೆಂಡ್ಗೆ ಉತ್ತಮವಾಗಿರಲಿಲ್ಲ. ಆದಾಗ್ಯೂ, ಪಂದ್ಯವನ್ನು 2-1 ರಿಂದ ಗೆಲ್ಲುವ ಮೂಲಕ, ಅವರು ಅದ್ಭುತ ರೀತಿಯಲ್ಲಿ ದಿನವನ್ನು ಕೊನೆಗೊಳಿಸಿದರು. ಇಂಗ್ಲೆಂಡ್ ಸತತ ಎರಡನೇ ಆವೃತ್ತಿಯಲ್ಲಿ ಫೈನಲ್ ತಲುಪಿದೆ. ಅವರು ಕೊನೆಯ ಬಾರಿಗೆ 2021 ರಲ್ಲಿ ಇಟಲಿ ವಿರುದ್ಧದ ಪ್ರಶಸ್ತಿ ಪಂದ್ಯದಲ್ಲಿ ಸೋತರು. ಮಂಗಳವಾರ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಸ್ಪೇನ್ ಫೈನಲ್ ಗೆ ತಯಾರಿ ನಡೆಸಲು ಹೆಚ್ಚುವರಿ 24 ಗಂಟೆಗಳ ಕಾಲಾವಕಾಶವನ್ನು ಪಡೆಯಲಿದೆ. ಜುಲೈ 14 ರಂದು ಇಂಗ್ಲೆಂಡ್ ಮತ್ತು ಸ್ಪೇನ್ ನಡುವಿನ ಯೂರೋ 2024 ಪ್ರಶಸ್ತಿ ಪಂದ್ಯ ನಡೆಯಲಿದೆ.

Read More

ಬೆಂಗಳೂರು : ಅಕ್ರಮ ಜಮೀನು ಮಾರಾಟಕ್ಕೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಆರ್‌ ಟಿಸಿಗಳನ್ನು ಆಧಾರ್‌ ಗೆ ಲಿಂಕ್‌ ಮಾಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಸುಮಾರು 4 ಕೋಟಿ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನು ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಮೈಸೂರು ವಿಭಾಗದಲ್ಲಿ 1.37 ಕೋಟಿ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 36 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 35 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಇದೇ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ಮೂಲಕ ಯಾರದ್ದೋ…

Read More