Subscribe to Updates
Get the latest creative news from FooBar about art, design and business.
Author: kannadanewsnow57
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಪದವಿ ವಿದ್ಯಾರ್ಥಿನಿ ವರ್ಷಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಚೇತನ್ ನನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಬಡಾವಣೆ ನಿವಾಸಿಯಾಗಿರುವ ಚೇತನ್ ಕ್ಯಾನ್ಸರ್ ಥರ್ಡ್ ಸ್ಟೇಜ್ ನಲ್ಲಿದ್ದಾನೆ. ವಿದ್ಯಾರ್ಥಿನಿ ಚಿತ್ರದುರ್ಗ ನಗರದ ಬಾಲಕಿಯರ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ನಿನ್ನೆ ವಿದ್ಯಾರ್ಥಿನಿ ಶವ ಚಿತ್ರದುರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿತ್ತು.
ಬೆಂಗಳೂರು : 66/11ಕೆ.ವಿ. ಆಸ್ಟಿನ್ ಟೌನ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 21.08.2025 (ಗುರುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಿಕ್ಟೋರಿಯ ಲೇಔಟ್, ಪಾಮ್ ಗ್ರೂವು ರೋಡ್, ಬಾಲಾಜಿ ಥಿಯೆಟರ್, ಅಗ್ರಂ ವಿವೆಕನಗರ,ಸಣ್ಣೆಣಹಳ್ಳಿ, ವೊನ್ನರ್ ಪೇಟೆ, ಆಂಜನೆಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾಟ್ರಸ್, ಲಿಂಡನ್ ಸ್ಟ್ರೀಟ್, ಪಾಮ್ ಗ್ರೂವು ರೋಡ್, ಕ್ಷೇವಿಯರ್ ಲೇಔಟ್, ಯಲಗುಂಟೆ ಪಾಳ್ಯಮ್, ಏರ್ ಫೋರ್ಸ್, ಲೈಫ್ ಸ್ಟೈಲ್ ಕ್ಯಾಂಬ್ಲ್ ರೋಡ್ ಜಂಕ್ಷನ್, ರಿಚ್ಮಂಡ್ ರೋಡ್, ರುದ್ರಪ್ಪ ಗಾರ್ಡನ್, ಎಮ್ ಜಿ ಗಾರ್ಡನ್, ಆಸ್ಟಿನ್ಟೌನ್ ನೀಲಸಂದ್ರ, ಬಜಾರ್ಸ್ಟ್ರೀಟ್, ಆರ್ ಕೆ ಗಾರ್ಡನ್, ಬೆಂಗಳೂರು ಫರ್ನಿಚರ್ ,ರೋಸ್ ಗಾರ್ಡನ್, ಒ.ಆರ್.ಸಿ ರಸ್ತೆ, ಮತ್ತು ಸುತ್ತಮುತ್ತಲಿನ ಸ್ಥಳ. 66/11ಕೆವಿ ಪೂರ್ವಾಂಕರ ಪಾಮ್ ಬೀಚ್ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 21.08.2025 (ಗುರುವಾರ) ರಂದು ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.…
ಒಬ್ಬ ಆರೋಗ್ಯವಂತ ವ್ಯಕ್ತಿಯ ತೂಕ ಎಷ್ಟಿರಬೇಕು. ಇನ್ನು ಇಷ್ಟು ಎತ್ತರವಿದ್ದ ವ್ಯಕ್ತಿಯ ತೂಕ ಎಷ್ಟಿರಬೇಕು. ವ್ಯಕ್ತಿಯ ಎತ್ತರಕ್ಕೂ ಹಾಗು ತೂಕಕ್ಕೂ ಏನಾದರೂ ಸಂಬಂಧ ಇದೆಯೇ..? ಅಥವಾ ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇರಬೇಕು..? ಯಾವ ವಯಸ್ಸಿನಲ್ಲಿ ಎಷ್ಟು ತೂಕವಿದ್ದರೆ ಉತ್ತಮ? ಇಂತಹ ಗೊಂದಲಗಳು ಅನೇಕರಲ್ಲಿ ಇವೆ. ಇವುಗಳಿಗೆ ಉತ್ತರ ಕೊಡುವ ಪ್ರಯತ್ನವೇ ಈ ಲೇಖನ. ನೀವು ಇದೇ ರೀತಿಯ ಗೊಂದಲ ಹೊಂದಿದ್ದರೆ ವಯಸ್ಸು ಮತ್ತು ಎತ್ತರಕ್ಕೆ ಅನುಗುಣವಾಗಿ ವ್ಯಕ್ತಿಯ ತೂಕ ಎಷ್ಟು ಇರಬೇಕೆಂದು ನಾವು ನಿಮಗೆ ತಿಳಿಸುತ್ತೇವೆ. ವೈದ್ಯಕೀಯ ಲೋಕದ ಪ್ರಕಾರ ಒಂದು ಮಗು ಜನಿಸಿದ ಸಮಯದಲ್ಲಿ ಅದು ಗಂಡಾಗಿದ್ದರೆ ಅದರ ತೂಕ 3.3 ಕೆಜಿ ಇರಬೇಕು. ಅದೇ ಹೆಣ್ಣುಮಗುವಾಗಿದ್ದರೆ 3.2 ಕೆಜಿ ಇರಬೇಕು. ಅದೇ ರೀತಿಯಾಗಿ 3 ರಿಂದ 5 ತಿಂಗಳ ಗಂಡು ಮಗುವಿನ ತೂಕ 6 ಕೆಜಿ ಇರಬೇಕು. ಹೆಣ್ಣು ಮಗುವಿನ ತೂಕ 5.4 ಕೆಜಿಯ ಸಮೀಪದಲ್ಲಿರಬೇಕು. ಒಂದು ವರ್ಷ ತುಂಬಿದ ಮಗುವಿನ ತೂಕ 9.2 ಕೆಜಿ ಇರಬೇಕು.…
ನವದೆಹಲಿ: ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ( Maharashtra Governor CP Radhakrishnan ) ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (National Democratic Alliance – NDA) ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. https://twitter.com/ANI/status/1958048588581265811?ref_src=twsrc%5Egoogle%7Ctwcamp%5Eserp%7Ctwgr%5Etweet ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಬಿಜೆಪಿ ನೇತೃತ್ವದ ಎನ್ಡಿಎ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದ ಬಿಜೆಪಿ ಸಂಸದೀಯ ಮಂಡಳಿಯ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರೋಗ್ಯ ಕಾರಣಗಳಿಂದಾಗಿ ಜುಲೈ 21 ರಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹಠಾತ್ ರಾಜೀನಾಮೆ ನೀಡಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ಈ ಘೋಷಣೆ ಮಾಡಿದ್ದಾರೆ. 74 ವರ್ಷದ…
ಬೆಂಗಳೂರು : 2025-26ನೇ ಶೈಕ್ಷಣಿಕ ಸಾಲಿನ ಉಳಿಕೆ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ದಾಸ್ತಾನು ಮಾಹಿತಿಯನ್ನು SATS ತಂತ್ರಾಂಶದಲ್ಲಿ ಇಂಧೀಕರಿಸುವ ಸಂಬಂಧ ಉಲ್ಲೇಖಿತ ಜ್ಞಾಪನದಲ್ಲಿ ಹಾಗೂ ಈ ಕಛೇರಿಯ ಅನೇಕ ಸುತ್ತೋಲೆಗಳಲ್ಲಿ ಉಚಿತ/ಅನುದಾನಿತ/ಅನುದಾನ ರಹಿತ ಹಾಗೂ ಇತರೇ ಇಲಾಖೆಯಿಂದ ನಡೆಯುತ್ತಿರುವ ಶಾಲೆಗಳು ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆಯನ್ನು ಸಲ್ಲಿಸಿರುವ ಬಗ್ಗೆ ಪರಿಶೀಲಿಸಲು ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿದ ನಂತರದಲ್ಲಿ ಉಳಿಕೆಯಾಗುವ ಪಠ್ಯಪುಸ್ತಕಗಳನ್ನು ಬ್ಲಾಕ್ ಹಂತಕ್ಕೆ ಹಿಂಪಡೆದು ಸದರಿ ಮಾಹಿತಿಯನ್ನು SATS ತಂತ್ರಂಶದಲ್ಲಿ Return to block ಅಡಿಯಲ್ಲಿ ದಾಸ್ತಾನು ಮಾಹಿತಿಯನ್ನು ತಪ್ಪದೇ ದಾಖಲಿಸುವಂತೆ ಈಗಾಗಲೇ ತಿಳಿಸಲಾಗಿರುತ್ತದೆ. ಈ ಸಂಬಂಧ 2026-27ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲು ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘ(ರಿ)ದಲ್ಲಿ ಮಾಡಿಕೊಳ್ಳಬೇಕಾಗಿರುವುದಿಂದ. ಈಗಾಗಲೇ 2025-26ನೇ ಸಾಲಿನಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಾಲೆಯಿಂದ…
ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತನ ಸಿನಿಮಾ ನಿರ್ದೇಶಕ ಪ್ರೇಮ್ ಗೆ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಖ್ಯಾತ ನಿರ್ದೇಶಕ ಪ್ರೇಮ್ ಅವರಿಗೆ ಎರಡು ಎಮ್ಮೆ ಕೊಡ್ತಿನಿ ಎಂದು 4.5 ಲಕ್ಷ ಹಣ ಪಡೆದು ಆರೋಪಿ ವಂಚನೆ ಮಾಡಿದ್ದಾನೆ. ಇದೀಗ ತಮ್ಮ ಮ್ಯಾನೇಜರ್ ಮೂಲಕ ನಿರ್ದೇಶಕ ಪ್ರೇಮ್ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿಗೆ ಮುಂದಾಗಿದ್ದ ಪ್ರೇಮ್ ಅವರಿಗೆ ಗುಜರಾತ್ ಮೂಲದ ವನರಾಜ್ ಬಾಯ್ ಎಂಬಾತನಿಗೆ ಎಮ್ಮೆ ಖರೀದಿಗೆ ಮುಂಗಡ 25 ಸಾವಿರ ನೀಡಲಾಗಿತ್ತು. ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡೀಯೋ ಕಳಿಸಿದ್ದ. ಈ ಹಿನ್ನಲೆ ಎಮ್ಮೆ ಬರುತ್ತೆ ಎಂದು ನಂಬಿ 4.5 ಲಕ್ಷ ಹಣವನ್ನೂ ಆನ್ ಲೈನ್ ಮೂಲಕ ಪ್ರೇಮ್ ನೀಡಿದ್ದರು. ಆದರೆ ಒಂದು ವಾರದಲ್ಲಿ ಎಮ್ಮೆ ಕೊಡ್ತಿನಿ ಎಂದವನು ಹಣದೊಂದಿಗೆ ಪರಾರಿ ಆಗಿದ್ದ, ಇದೀಗ ಪೊಲೀಸ್…
ನವದೆಹಲಿ :ಬುಧವಾರ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಹಲ್ಲೆ ನಡೆದ ಸ್ವಲ್ಪ ಸಮಯದ ನಂತರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಜೇಶ್ಭಾಯ್ ಖಿಮ್ಜಿ ಸಕಾರಿಯಾ ಎಂದು ಗುರುತಿಸಲಾಗಿದ್ದು, ಅವರು ಗುಜರಾತ್ನ ರಾಜ್ಕೋಟ್ನವರು ಎಂದು ಹೇಳಿಕೊಳ್ಳುತ್ತಾರೆ. ಮುಖ್ಯಮಂತ್ರಿಗೆ ಕಾಗದವನ್ನು ನೀಡಿ, ಕೂಗಿ, ಕಪಾಳಮೋಕ್ಷ ಮಾಡಿದ್ದಾನೆ. “ಮುಖ್ಯಮಂತ್ರಿ ನಿವಾಸದಲ್ಲಿ ಜಾನ್ ಸುನ್ವೈ ಸಂದರ್ಭದಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ” ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. https://twitter.com/ANI/status/1958043029287092652?ref_src=twsrc%5Egoogle%7Ctwcamp%5Eserp%7Ctwgr%5Etweet
ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್ ಹರಿದು ಪ್ರಯಾಣೀಕ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಜಯನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಹರಿದ ಪರಿಣಾಮ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದರಿಂದ ಬಸ್ ನ ಮುಂದಿನ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನವದೆಹಲಿ : ಆನ್ಲೈನ್ ಗೇಮಿಂಗ್ ಮಸೂದೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಆನ್ಲೈನ್ ಗೇಮಿಂಗ್ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ ಲೋಕಸಭೆಯಲ್ಲಿ ಪರಿಚಯಿಸಲು ಸಜ್ಜಾಗಿದೆ. ಈ ಮೂಲಕ ಆನ್ ಲೈನ್ ಗೇಮ್ ಆಡಿದ್ರೆ 3 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ. ದಂಡ ವಿಧಿಸುವ ಸಾಧ್ಯತೆ ಇದೆ. ಈ ಮಸೂದೆಯು ಆನ್ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳ ಕೊಡುಗೆ ಮತ್ತು ಪ್ರಚಾರಕ್ಕಾಗಿ ನಿಯಮಗಳು ಮತ್ತು ನಿಬಂಧನೆಗಳನ್ನು ಸುಗಮಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಅನುಸರಣೆ ಮಾಡದಿರುವುದಕ್ಕೆ ಸಂಬಂಧಿತ ದಂಡಗಳು ಮತ್ತು ಶಿಕ್ಷೆಗಳನ್ನು ವ್ಯಾಖ್ಯಾನಿಸುತ್ತದೆ. ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದ್ದು, ಅನಧಿಕೃತ ಬೆಟ್ಟಿಂಗ್ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಇದನ್ನು ಇಂದು ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ.ಇಂಥ ಬೆಟ್ಟಿಂಗ್ ಆ್ಯಪ್ಗಳ ಪರ ಪ್ರಚಾರವನ್ನೂ ನಿರ್ಬಂಧಿಸಲಾಗಿದ್ದು ಅದನ್ನೂ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.…
ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಬಿಎಂಟಿಸಿ ಬಸ್ ಹರಿದು ಪ್ರಯಾಣೀಕ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಜಯನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಹರಿದ ಪರಿಣಾಮ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದಿದ್ದರಿಂದ ಬಸ್ ನ ಮುಂದಿನ ಚಕ್ರಕ್ಕೆ ಸಿಲುಕಿ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













