Subscribe to Updates
Get the latest creative news from FooBar about art, design and business.
Author: kannadanewsnow57
ಯುವಕನೊಬ್ಬ ತನ್ನ ಗೆಳತಿಯನ್ನು ಭೇಟಿಯಾಗಲು 100 ಕಿಲೋಮೀಟರ್ ನಡೆದ. ಆದರೆ, ಕೊನೆಗೆ ಅಲ್ಲಿಗೆ ಹೋದ ನಂತರ, ಅವನಿಗೆ ಭಯಾನಕ ಅನುಭವವಾಯಿತು. ಗೆಳತಿಯನ್ನು ಭೇಟಿಯಾಗಲು ಹೋದ ಪ್ರೇಮಿಯನ್ನು ಕುಟುಂಬ ಸದಸ್ಯರು ಒತ್ತೆಯಾಳಾಗಿಟ್ಟುಕೊಂಡು ಥಳಿಸಿದ್ದಾರೆ. ಸುಮಾರು 13 ಗಂಟೆಗಳ ಕಾಲ ಆತನನ್ನು ಒತ್ತೆಯಾಳಾಗಿಟ್ಟ ನಂತರ, ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲಿ ಪೊಲೀಸರು ಎರಡೂ ಪಕ್ಷಗಳ ನಡುವೆ ರಾಜಿ ಮಾಡಿಕೊಂಡರು. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣವು ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯ ಬುಡಕಟ್ಟು ಪ್ರದೇಶವಾದ ಪಿಪ್ರಾಹಿಯಲ್ಲಿ ನಡೆದಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ರೇವಾ ಜಿಲ್ಲೆಯ ಬೈಕುಂತ್ಪುರ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಯುವಕನೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಪಿಪ್ರಾಹಿಯ ಹುಡುಗಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿಕೊಂಡ. ಇದರ ನಂತರ, ಆಗಸ್ಟ್ 17 ರಂದು, ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಮೌಗಂಜ್ ಜಿಲ್ಲೆಯ ಪಿಪ್ರಾಹಿ ಗ್ರಾಮಕ್ಕೆ ತಲುಪಿದನು. ಹುಡುಗಿಯ ಕುಟುಂಬಕ್ಕೆ ಇದರ ಸುಳಿವು ಸಿಕ್ಕಿತು. https://youtu.be/VBn_D9PceME?si=4xKmNabPX9CSRQQG ಹುಡುಗಿಯ ಕುಟುಂಬ…
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ಸೇವಾ ಸಿಂಧೂ ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಹಾಗೂ ಪರಿಶೀಲನೆಗೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ ಸೂಚಿಸಲ್ಪಟ್ಟ ಇಲಾಖೆಯ ಕಚೆÃರಿಗಳಿಗೆ ತಮ್ಮ ಎಲ್ಲ ಮೂಲ ಅಂಕಪಟ್ಟಿ ಹಾಗೂ ಇತರೆ ಪ್ರಮಾಣ ಪತ್ರಗಳೊಂದಿಗೆ ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸಿ ಶೀಘ್ರವಾಗಿ ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೂ ಈಗಾಗಲೇ ನೋಂದಾಯಿಸಿಕೊAಡು ಹಣ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ ಮೂರು ತಿಂಗಳಿಗೊಮ್ಮೆ 25ನೇ ದಿನಾಂಕದೊಳಗೆ ಸ್ವಯಂ-ಘೋಷಣೆಯನ್ನು ಮಾಡಿಕೊಳ್ಳಬೇಕಾಗಿರುತ್ತದೆ. ಜೂನ್, ಜುಲೈ, ಆಗಸ್ಟ್ ಮಾಹೆಯ ಸ್ವಯಂ-ಘೋಷಣೆಯನ್ನು ಆಗಸ್ಟ್ ತಿಂಗಳಿನ 25ನೇ ದಿನಾಂಕದೊಳಗೆ ಸ್ವಯಂ-ಘೋಷಣೆಯನ್ನು ಮಾಡಿಕೊಳ್ಳಬೇಕೆಂದು ಈ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚÉÃರಿ ದೂರವಾಣಿ ಸಂಖ್ಯೆ: 08172-296374 ನ್ನು ಸಂಪರ್ಕಿಸುವAತೆ ಹಾಸನ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ನವದೆಹಲಿ : `INDIA’ ಮೈತ್ರಿಕೂಟದ ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರು ಕಾಂಗ್ರೆಸ್ ಅಧ್ಯಕ್ಷ-ರಾಜ್ಯಸಭೆಯ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಸದಸ್ಯ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಎನ್ಸಿಪಿ-ಎಸ್ಸಿಪಿ ಮುಖ್ಯಸ್ಥ ಶರದ್ ಪವಾರ್, ಎಸ್ಪಿ ಸಂಸದ ರಾಮ್ ಗೋಪಾಲ್ ಯಾದವ್, ಡಿಎಂಕೆ ಸಂಸದ ತಿರುಚಿ ಶಿವ, ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಮೈತ್ರಿಕೂಟದ ಹಲವಾರು ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. INDIA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ, ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರು ನಾಮಪತ್ರ ಸಲ್ಲಿಸುವ ಮುನ್ನ ಪ್ರೇರಣಾ ಸ್ಥಳದಲ್ಲಿ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದರು. https://twitter.com/ANI/status/1958410550833995922?ref_src=twsrc%5Egoogle%7Ctwcamp%5Eserp%7Ctwgr%5Etweet https://twitter.com/ANI/status/1958411780918480901?ref_src=twsrc%5Egoogle%7Ctwcamp%5Eserp%7Ctwgr%5Etweet https://twitter.com/ANI/status/1958404797465522604?ref_src=twsrc%5Egoogle%7Ctwcamp%5Eserp%7Ctwgr%5Etweet
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನಸಭೆಯಲ್ಲಿ ಮಂಡಿಸಿದ್ದಂತ ಜನಸಂದಣಿ ನಿಯಂತ್ರಣ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ಈ ಬಗ್ಗೆ ಇಂದು ಗೃಹ ಸಚಿವ.ಡಾ.ಜಿ.ಪರಮೇಶ್ವಾರ್ ವಿವರಣೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಜನಸಂದಣಿ ನಿಯಂತ್ರಣ ವಿಧೇಯಕ ಮಂಡಿಸಿದ್ದರು. 2025ನೇ ಸಾಲಿನ ಜನಸಂದಣಿ ನಿಯಂತ್ರಣ ವಿಧೇಯಕವನ್ನು ಮಂಡಿಸಲಾಗಿತ್ತು. ಜನಸಂದಣಿ ನಿಯಂತ್ರಣ ಮಾಡಲು ಸರ್ಕಾರದಿಂದ ಕಾನೂನು ರೂಪಿಸಲು ಈ ಮಸೂಧೆಯನ್ನು ಮಂಡಿಸಲಾಗಿತ್ತು. ಆರ್ ಸಿ ಬಿ ಘಟನೆ ಬಳಿಕ ಸರ್ಕಾರ ಎಚ್ಚೆತ್ತು ಈ ಕಾನೂನು ರೂಪಿಸಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ 7 ಸಾವಿರಕ್ಕಿಂತ ಕಡಿಮೆ ಜನ ಸೇರಿದಂದ್ರೆ ಠಾಣೆಯಿಂದ ಅನುಮತಿ ಪಡೆಯಬೇಕು. 7-50 ಸಾವಿರದೊಳಗೆ ಜನ ಸೇರಿದ್ರೆ ಡಿವೈಎಸ್ ಪಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದಿಂದ ಜನಸಂದಣಿ ನಿಯಂತ್ರಣಕ್ಕೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಮುಂಬೈ : : ದೇಶೀಯ ಷೇರು ಮಾರುಕಟ್ಟೆಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿದವು. ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 373.33 ಅಂಕಗಳ ಏರಿಕೆಯಾಗಿ 82,231.17 ಅಂಕಗಳಿಗೆ ತಲುಪಿತು ಮತ್ತು ಎನ್ಎಸ್ಇ ನಿಫ್ಟಿ 94.3 ಅಂಕಗಳ ಏರಿಕೆಯಾಗಿ 25,144.85 ಅಂಕಗಳಿಗೆ ತಲುಪಿತು. ಸೆನ್ಸೆಕ್ಸ್ನಲ್ಲಿ ಸೇರಿಸಲಾದ 30 ಕಂಪನಿಗಳಲ್ಲಿ, ಬಜಾಜ್ ಫಿನ್ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಟ್ರೆಂಟ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಲಾಭದಲ್ಲಿವೆ. ಮತ್ತೊಂದೆಡೆ, ಎಟರ್ನಲ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಕುಸಿತ ಕಂಡವು. ಏಷ್ಯಾದ ಮಾರುಕಟ್ಟೆಗಳಲ್ಲಿ, ಚೀನಾದ ಶಾಂಘೈ ಎಸ್ಎಸ್ಇ ಕಾಂಪೋಸಿಟ್ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಲಾಭದಲ್ಲಿದ್ದರೆ, ಹಾಂಗ್ ಕಾಂಗ್ನ ಹ್ಯಾಂಗ್ ಸೆಂಗ್ ಮತ್ತು ಜಪಾನ್ನ ನಿಕ್ಕಿ 225 ನಷ್ಟದಲ್ಲಿದ್ದವು. ಬುಧವಾರ ಯುಎಸ್ ಮಾರುಕಟ್ಟೆಗಳು ನಕಾರಾತ್ಮಕ ಪ್ರವೃತ್ತಿಯೊಂದಿಗೆ ಮುಕ್ತಾಯಗೊಂಡವು. ಅಂತರರಾಷ್ಟ್ರೀಯ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ ಶೇ 0.43 ರಷ್ಟು ಏರಿಕೆಯಾಗಿ $67.13…
ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲಹಂಕದ ಕೋಗಿಲು ಕ್ರಾಸ್ ಮಾರುತಿ ನಗರದಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಘಟನೆಯಲ್ಲಿ 11 ವರ್ಷದ ಬಾಲಕಿ ತನ್ವಿಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ವಿಕೃಷ್ಣ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಬೈಕ್ ಸ್ಕಿಡ್ ಆಗಿ ಬಾಲಕಿ ತನ್ವಿಕೃಷ್ಣ ಕೆಳಗೆ ಬಿದ್ದಿದ್ದಾಳೆ. ಕೆಳಗೆ ಬಿದ್ದ ಬಾಲಕಿ ಮೇಲೆಯೇ ಬಿಎಂಟಿಸಿ ಬಸ್ ಹರಿದಿದೆ. ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಹೈದರಾಬಾದ್: ಹೈದರಾಬಾದ್ ನಗರದ ಮಿಯಾಪುರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರಾದ ಐವರು ಒಂದೇ ಕುಟುಂಬದವರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತರಲ್ಲಿ ಚಿಕ್ಕಮ್ಮ, ಚಿಕ್ಕಪ್ಪ, ಪತ್ನಿ, ಪತಿ ಮತ್ತು ಎರಡು ವರ್ಷದ ಮಗು ಸೇರಿರುವುದು ದುರದೃಷ್ಟಕರ. ಮಿಯಾಪುರ ವ್ಯಾಪ್ತಿಯ ಮಕ್ತ ಮಹಬೂಬ್ಪೇಟೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದುಬಂದಿಲ್ಲ. ಮೃತರನ್ನು ಕರ್ನಾಟಕದ ಕಲಬುರಗಿ ಜಿಲ್ಲೆಯ ಸೇಡಂ ಮಂಡಲದ ರಂಜೋಲಿಯ ಲಕ್ಷಯ್ಯ (60), ವೆಂಕಟಮ್ಮ (55), ಅನಿಲ್ (32), ಕವಿತಾ (24) ಹಾಗೂ 2 ವರ್ಷದ ಮಗು ಎಂದು ಗುರುತಿಸಲಾಗಿದೆ.
ನವದೆಹಲಿ : ದೇಶದ ಉನ್ನತ ಸರ್ಕಾರಿ ಬ್ಯಾಂಕಿನಲ್ಲಿ 10277 ಖಾಲಿ ಇರುವ ಕ್ಲರ್ಕ್ (ಗ್ರಾಹಕ ಸೇವಾ ಸಹಾಯಕ) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ಸೇರಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದು ಅಂದರೆ ಆಗಸ್ಟ್ 21, 2025. ಪದವೀಧರರಾಗಿರುವ ಮತ್ತು ಬ್ಯಾಂಕಿನಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಎಲ್ಲಾ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ ibps.in ಗೆ ಭೇಟಿ ನೀಡುವ ಮೂಲಕ ತಕ್ಷಣವೇ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಗ್ರಾಹಕ ಸೇವಾ ಅಸೋಸಿಯೇಟ್ ಹುದ್ದೆಗೆ ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯನ್ನು ನಡೆಸಲಿದೆ. ಈ ನಿಟ್ಟಿನಲ್ಲಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಅಧಿಸೂಚನೆಯ ಮೂಲಕ, 11 ಪಿಎಸ್ಬಿಗಳಲ್ಲಿ ಒಟ್ಟು 10277 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆಯು ಆಗಸ್ಟ್ 1 ರಿಂದ ಆಗಸ್ಟ್ 21 ರವರೆಗೆ ಇರಲಿದೆ. ಆದ್ದರಿಂದ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ www.ibps.in ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು ಮತ್ತು ವಿವರಗಳು: ಆಗಸ್ಟ್ 1…
ಉಡುಪಿ : ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ, ಇಡೀ ಬಿಜೆಪಿಯೇ ಕಾರಣ ಎಂದು ಹೇಳಿದ್ದಾರೆ. ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆ ನಿವಾಸಕ್ಕೆ ಉಡುಪಿಯ ಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಆಗಮಿಸಿ ವಶಕ್ಕೆ ಪಡೆದಿದೆ. ಆಗಸ್ಟ್ 16 ರಂದು ಫೇಸ್ಬುಕ್ ಪೇಜ್ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ…
ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ಷಡ್ಯಂತ್ರ ನಡೆಯುತ್ತಿರುವುದನ್ನು ಖಂಡಿಸಿ ಬಿಜೆಪಿಯ ಮತ್ತೊಂದು ತಂಡ ಇಂದು ಧರ್ಮಸ್ಥಳ ಚಲೋ ಅಭಿಯಾನ ಹಮ್ಮಿಕೊಂಡಿದೆ. ಇಂದು ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಘಟಕ ಕೊಡಿಗೆಹಳ್ಳಿ ಗೇಟ್ನ ಗುಂಡಾಂಜನೇಯ ದೇವಸ್ಥಾನದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 500ಕ್ಕೂ ಹೆಚ್ಚು ವಾಹನಗಳಿಂದ ಯಾತ್ರೆ ಆರಂಭ ಮಾಡಲಾಗಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್ ಹರೀಶ್ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದೆ.ಗುಂಡಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಮಾಡಿ ಯಾತ್ರೆ ಆರಂಭ ಮಾಡಲಾಗಿದೆ.














