Author: kannadanewsnow57

ಬೆಂಗಳೂರು: ಕನ್ನಡದ ಸುಪ್ರಸಿದ್ದ ಆಂಕರ್ ಅನುಶ್ರೀ ವೆಡ್ಸ್ ರೋಷನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್.28ರಂದು ಬೆಂಗಳೂರಲ್ಲಿ ಮದುವೆ ನಡೆಯಲಿದೆ. ಸದ್ಯ ಅನುಶ್ರೀ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು. ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್ ಆಗಿದ್ದು, ಆಗಸ್ಟ್ 28 ರಂದು ಹಸೆಮಣೆ ಏರಲಿದ್ದಾರೆ.ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ. ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ. ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಅನುಶ್ರೀ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಶ್ರೀ ಅವರ ಆಮಂತ್ರಣ ಪತ್ರಿಕೆ ರಿಲೀವ್ ಆಗಿದ್ದು, ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತ್ರ ಅರ್ಧಾಂಗಿಯಾಗುವ ಹೊಸ ಮನ್ವಂತರಕ್ಕೆ ಸಮಯ ಬಂದಿದೆ. ಅನುಶ್ರೀ ವೆಡ್ಸ್ ರೋಷನ್ ಮಹೂರ್ತವು ದಿನಾಂಕ 28-08-2025ರ ಗುರುವಾರ ಬೆಳಗ್ಗೆ 10.56ಕ್ಕೆ ನಡೆಯಲಿದೆ ಎಂಬುದಾಗಿ ತಿಳಿಸಿದ್ದಾರೆ. ಅನುಶ್ರೀ ವೆಡ್ ರೋಷನ್ ಅವರ ಮದುವೆಯು ಆಗಸ್ಟ್.28ರಂದು ಬೆಂಗಳೂರಿನ…

Read More

ಪಣಜಿ: ಐದು ವರ್ಷದ ಮಗುವಿನ ಪೋಷಕರು ಒಂದನೇ ತರಗತಿಗೆ ಪ್ರವೇಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗೋವಾ ಹೈಕೋರ್ಟ್ ವಜಾಗೊಳಿಸಿದೆ. ಗೋವಾ ರಾಜ್ಯ ಸರ್ಕಾರವು ಡಿಸೆಂಬರ್ 13, 2022 ರ NEP, 2020 ಮತ್ತು RTE ಕಾಯ್ದೆ, 2009 ರ ಸುತ್ತೋಲೆಯನ್ನು 2025-26 ರಿಂದ ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ನಂತರ ವಜಾಗೊಳಿಸಲಾಗಿದೆ. NEP ಪ್ರಕಾರ, ಮಗುವು 1 ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಲು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರು ವರ್ಷಗಳನ್ನು ಪೂರ್ಣಗೊಳಿಸಬೇಕು ಎಂದು ಮಗುವಿನ ತಂದೆ ಹೈಕೋರ್ಟ್ಗೆ ಸಲ್ಲಿಸಿದರು. ಅರ್ಜಿದಾರರ ಮಗನಿಗೆ 5 ವರ್ಷ ಮತ್ತು 11 ತಿಂಗಳು. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ಮೊದಲ ತರಗತಿಗೆ ಪ್ರವೇಶಕ್ಕೆ ವಯಸ್ಸಿನ ಮಿತಿ ಆರು ವರ್ಷ ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು. ಆದ್ದರಿಂದ, ಅರ್ಜಿದಾರರ ಮಗನನ್ನು ಕಾನ್ವೆಂಟ್ ಒಂದನೇ ತರಗತಿಗೆ ಸೇರಿಸಲಿಲ್ಲ. ಇದನ್ನು ವಿರೋಧಿಸಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಸರ್ಕಾರಕ್ಕೆ ಈ ವಿಷಯವನ್ನು ಸ್ಪಷ್ಟಪಡಿಸುವಂತೆ ಕೇಳಿತ್ತು. ಅದರ…

Read More

ಬೆಂಗಳೂರು : ಇಂದಿನಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸುತ್ತಿದೆ. ವಿದ್ಯುತ್ ಮೀಟರ್ ರೀಡರುಗಳು ಎಲ್ಲ ಮನೆಗಳನ್ನು ಜಿಯೋಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಲಿದ್ದಾರೆ. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ರಾಜ್ಯದ ಜನತೆ ಸಹಕರಿಸಬೇಕು ಎಂದು ಆಯೋಗದ ಅಧ್ಯಕ್ಷರಾದ ಮಧುಸೂಧನ್ ಆರ್ ನಾಯ್ಕ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸುವ ಬದ್ಧತೆಯೊಂದಿಗೆ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಕೆಲಸಗಳಾಗಿರುವ ಮನೆ ಪಟ್ಟಿ ಮತ್ತು ಅವುಗಳ ನಕ್ಷೆ (ಮ್ಯಾಪಿಂಗ್) ಸಿದ್ಧಪಡಿಸುವ ಕಾರ್ಯವನ್ನು ಒಳಗೊಂಡಿರುತ್ತದೆ. ಅದು ರಾಜ್ಯದಾದ್ಯಂತ ಎಲ್ಲಾ ಮನೆಗಳ ಸಂಪೂರ್ಣ ಎಣಿಕೆ, ಅನುಕ್ರಮ ಸಂಖ್ಯೆಗಳನ್ನು ನೀಡುವುದು ಮತ್ತು ಮ್ಯಾಪಿಂಗ್ ಮಾಡುವ ಕೆಲಸವನ್ನು ಸಾಧ್ಯವಾಗಿಸುತ್ತದೆ. ರಾಜ್ಯದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವುದರಿಂದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ…

Read More

ಬೆಂಗಳೂರು : ರಾಷ್ಟ್ರೀಯ ಮಕ್ಕಳ ಹಕ್ಕುಗಳ ನಿರ್ದೇಶನಾಲಯದಿಂದ ನೂತನ ವಿನ್ಯಾಸದ  ಮಕ್ಕಳ ಸಹಾಯವಾಣಿ 1098 ಲೊಗೋವನ್ನು ಬಿಡುಗಡೆ ಮಾಡಲಾಗಿದ್ದು, ಈ ಲೋಗೋದಲ್ಲಿ  1098 ಚೈಲ್ಡ್ ಲೈನ್  ಹೆಲ್ಪ್ ಲೈನ್ ಎಂದು ಇಂಗ್ಲೀಷ್ ನಲ್ಲಿ ಬರೆದ, ಅಡಿಯಲ್ಲಿ  24×7  ಮತ್ತು ಮೂಲೆಯಲ್ಲಿ ರಿಸೀವರ್ ಚಿಹ್ನೆ, ಮೇಲ್ಬಾಗದಲ್ಲಿ  ಬಾಲಕಿ ಮತ್ತು ಬಾಲಕ ತೋರಿಸುವ ರೇಖಾ ಚಿತ್ರಹೊಂದಿದೆ.  ಮಕ್ಕಳ ರಕ್ಷಣಾ ನಿರ್ದೇಶನಾಲಯವು ಮಕ್ಕಳ ಮೇಲೆ ಆಗುವ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯ, ಬಿಕ್ಷಾಟನೆಯಿಂದ ಶೋಷಣೆಗೊಳಗಾದ,  ಶಿಕ್ಷಣದಿಂದ ವಂಚಿತರಾದ ಹಾಗೂ ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂಥ ಪ್ರಕರಣವನ್ನು ಕಡಿಮೆ ಮಾಡಲು  ಮಕ್ಕಳಿಗಾಗಿ 24 ಗಂಟೆ ಚಾಲನೆಯಲ್ಲಿರುವ 1098 ಸಹಾಯವಾಣಿ ದೇಶಾದ್ಯಂತ 1999 ರಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ  ಪ್ರಾರಂಭಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 01, 2023 ರಿಂದ ಪ್ರಾರಂಭವಾಗಿದ್ದು, ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ 1098 ಕಾರ್ಯನಿರ್ವಹಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112…

Read More

2025-26 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆ ಕಟಾವಿನ ನಂತರ ಹಾಗೂ ಸ್ಥಳ ನಿರ್ದಿಷ್ಟ ವಿಕೋಪಗಳಿಂದ ಬೆಳೆ ನಷ್ಟ ಪರಿಹಾರಕ್ಕೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಕಟಾವು ಕೈಗೊಳ್ಳುವ ಎರಡು ವಾರದೊಳಗಾಗಿ ಚಂಡಮಾರುತ ಸಹಿತ ಮಳೆ ಅಥವಾ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ರೈತರು ನೇರವಾಗಿ ವಿಮಾ ಸಂಸ್ಥೆಯ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬೇಕು. ಅದೇ ರೀತಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಅತಿಯಾದ ಮಳೆ, ಬೆಳೆ ಮುಳುಗಡೆ, ಆಲಿಕಲ್ಲು ಮಳೆ, ಭೂ ಕುಸಿತ ಇಂತಹ ಅವಘಡಗಳಿಂದ ಬೆಳೆ ನಷ್ಟವಾದರೆ ಅವಗಡ ಸಂಭವಿಸಿದ 72 ಗಂಟೆಯೊಳಗಾಗಿ ರೈತರು…

Read More

ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಕಲೆಯನ್ನು ಉತ್ತೇಜಿಸಲು ಅಂಚೆ ಇಲಾಖೆಯು ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲು 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಎಸ್ಪಿಎಆರ್ಎಸ್ಹೆಚ್(ಸ್ಪರ್ಶ್) ಅಂಚೆ ಚೀಟಿಗಳನ್ನು ಸಂಗ್ರಹಿಸುವ ಸಾಮರ್ಥ್ಯ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ನೀಡುವ ವಿಧ್ಯಾರ್ಥಿವೇತನವಾಗಿದೆ. ಪಠ್ಯಕ್ರಮವನ್ನು ಬಲಪಡಿಸುವುದು ಮತ್ತು ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ಚಿಕ್ಕವಯಸ್ಸಿನ ಮಕ್ಕಳಲ್ಲಿ ಅಂಚೆಚೀಟಿ ಸಂಗ್ರಹವನ್ನು ಉತ್ತೇಜಿಸುವುದೇ ಈ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಈ ಹವ್ಯಾಸವು ಅವರಿಗೆ ಜ್ಞಾನಾರ್ಜನೆ, ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. 2025 ರ ವಾರ್ಷಿಕ ಪರೀಕ್ಷೆಯಲ್ಲಿ ಶೇ.60 ಅಂಕಗಳನ್ನು ಹೊಂದಿರುವ, ಅಂಚೆ ಚೀಟಿ ಸಂಗ್ರಹಣಾ ಠೇವಣಿ ಖಾತೆಯನ್ನು ಹೊಂದಿರುವ, ಕ್ಲಬ್ ಅಂಚೆ ಚೀಟಿ ಸಂಗ್ರಹಣಾ ಸದಸ್ಯತ್ವ ಹೊಂದಿರುವ ಮತ್ತು ಅಂಚೆ ಚೀಟಿ ಸಂಗ್ರಹವನ್ನು ಹವ್ಯಾಸವಾಗಿ ಅನುಸರಿಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ರೂ. 6000/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ ಅಂಚೆ ಚೀಟಿ ಸಂಗ್ರಹಣಾ ರಸಪ್ರಶ್ನೆ…

Read More

ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆಲವು ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕ್ರಮಕೈಗೊಳ್ಳಲು ಹಾಗೂ ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸುವ ಸಂಬಂಧ ಈ ಸೂಚನೆಗಳನ್ನು ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಅನಧಿಕೃತವಾಗಿ ತಯಾರಿಸುವ /ಮಾರಾಟ ಮಾಡುವ ವ್ಯಕ್ತಿ/ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹ/ ಬಣ್ಣಲೇಪಿತ ವಿಗ್ರಹಗಳನ್ನು ಯಾವುದೇ ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವೈಜ್ಞಾನಿಕ ರೀತಿಯಲ್ಲಿ ವಿಸರ್ಜಿಸುವುದು. ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ, ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮವಹಿಸುವುದು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ವಿಗ್ರಹಗಳನ್ನು…

Read More

ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇಲ್ಲಿ ಯುಹೆಚ್ಕ್ಯೂ ಕೋಟಾದಡಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್ ನೇಮಕಾತಿ ನಡೆಯಲಿದೆ. 17 1/2 ವರ್ಷದಿಂದ 21 ವರ್ಷದೊಳಗಿನ (2004 ರ ಅಕ್ಟೋಬರ್ 01 ರಿಂದ 2008 ರ ಏಪ್ರಿಲ್ 01 ರ ನಡುವೆ ಜನಿಸಿರುವ) ಮಾಜಿ ಸೈನಿಕರ ಮಕ್ಕಳು ಮತ್ತು ಅವರ ಅವಲಂಬಿತರಿಗಾಗಿ ಅಕ್ಟೋಬರ್ 06 ರಿಂದ ಅಗ್ನಿವೀರ್(ಜನರಲ್ ಡ್ಯೂಟಿ, ಟೆಕ್ನಿಕಲ್), ಅಗ್ನಿವೀರ್(ಟ್ರೇಡ್ಸ್ಮನ್ 8ನೇ ಮತ್ತು 10 ನೇ ತರಗತಿ ಪಾಸ್) ಹಾಗೂ ಅಗ್ನಿವೀರ್ ಸ್ಪೋರ್ಟ್ಸ್ಮೆನ್(ಓಪೆನ್ ಕೆಟಗರಿ) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಗ್ರೂಪ್ ಇಂಜಿನಿಯರಿAಗ್ ಮತ್ತು ಸೆಂಟರ್, ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು(ಪ್ರ) ಇವರು ಪ್ರಕಟಣೆಯಲ್ಲಿ ತಿಳಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ ನಾನು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 2028ರಲ್ಲಿ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆಬರುತ್ತದೆ. ಇದು ನೂರಕ್ಕೆ ನೂರ ರಷ್ಟು ಸತ್ಯ. ಆದರೆ, ಮುಂದಿನ ಅವಧಿಗೆ ನಾನು ಮುಖ್ಯ ಮಂತ್ರಿ ಆಗುವುದಿಲ್ಲ. ಇನ್ನು ಜೆಡಿಎಸ್ 2-3 ಸ್ಥಾನ ಬಂದರೆ ಅದೇ ಹೆಚ್ಚು. ಹೀಗಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲಿ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ, ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಯತ್ನಾಳ್ ಅವರಾಗಲಿ ಅಧಿಕಾರಕ್ಕೆ ಬರುವುದಿಲ್ಲ. ಯತ್ನಾಳ್ ಹೊಸ ಪಕ್ಷ ಮಾಡಿದರೆ ಆ ಸಾಧ್ಯತೆ ಇದ್ದರೂ ಇರಬಹುದು ಎಂದು ಹೇಳಿದರು. https://twitter.com/siddaramaiah/status/1958874340205695163

Read More

ಬೆಂಗಳೂರು : ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ವಿಧಾನ ಪರಿಷತ್ ಸದಸ್ಯೆ, ಹಿರಿಯ ನಟಿ ಉಮಾಶ್ರೀ ಅವರ ಏಕ ವ್ಯಕ್ತಿ ಅಭಿನಯದ “ಶರ್ಮಿಷ್ಠೆ” ನಾಟಕ ವೀಕ್ಷಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಜನಸೇವೆ ಮಾಡುವ ಜೊತೆಗೆ ಆಗಾಗ್ಗೆ ಧಾರವಾಹಿ, ಚಲನಚಿತ್ರ, ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾಸೇವೆ ಮಾಡುವ ಉಮಾಶ್ರೀ ಅವರು ನಾಡಿನ ಹೆಮ್ಮೆಯ ಕಲಾವಿದೆ.ಇಂದಿನ ಶರ್ಮಿಷ್ಠೆ ನಾಟಕದಲ್ಲಿ ಅವರ ಅಭಿಯನ ಮನೋಜ್ಞವಾಗಿತ್ತು. ಕಲಾಸರಸ್ವತಿಯ ಒಲವು ಅವರ ಮೇಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಸೇವೆಯ ಜೊತೆಗೆ ಕಲಾಸೇವೆಯ ಅವರ ಕಾರ್ಯ ಯಾವ ಅಡೆತಡೆಗಳಿಲ್ಲದೆ ಸಾಗಲಿ ಎಂದು ಹಾರೈಸಿದ್ದಾರೆ. ಬೇಲೂರು ರಘುನಂದನ್ ಅವರ ಈ ನಾಟಕಕ್ಕೆ ಚಿದಂಬರರಾವ್ ಜಂಬೆ ವಿನ್ಯಾಸ, ನಿರ್ದೇಶನವಿದೆ. ಅನೂಪ್ ಶೆಟ್ಟಿ ಸಂಗೀತ ವಿನ್ಯಾಸ, ಶಿವಲಿಂಗ ಪ್ರಸಾದ್ ಸಂಗೀತ ನಿರ್ವಹಣೆ, ಪ್ರಮೋದ್ ಶಿಗ್ಗಾಂವ್ ರಂಗಸಜ್ಜಿಕೆ, ವಸ್ತ್ರವಿನ್ಯಾಸವಿದೆ. ಕನ್ನಡ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಕ್ಷೇತ್ರದ ಅಭಿಜಾತ ಕಲಾವಿದೆ ಉಮಾಶ್ರೀ ಅವರು 4 ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಉಮಾಶ್ರೀ ಅವರು…

Read More