Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪದ ಹಿನ್ನೆಲೆಯಲ್ಲಿ ವಕೀಲ ಜಗದೀಶ್ ಅವರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ನಿನ್ನೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಎಂಬುವರು ವಕೀಲ ಜಗದೀಶ್ ವಿರುದ್ಧ ದೂರು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾತಿ ಆಧಾರಿತ ಪ್ರಚೋದನಕಾರಿ ಮಾತುಗಳನ್ನಾಡಿ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವಕೀಲ ಜಗದೀಶ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಲದಲ್ಲಿರುವ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ನೋಟಿಸ್ ನೀಡಲು ಜಗದೀಶ್ ಅವರ ಮನೆಗೆ ಪೊಲೀಸರು ಹೋದಾಗ ಬಾಗಿಲು ತೆಗೆಯದೆ ನೊಟೀಸ್ ಪಡೆದುಕೊಳ್ಳಲು ನಿರಾಕರಿಸಿದ್ದರು. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಜಗದೀಶ್ ಅವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಜಗದೀಶ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಉಡುಪಿ : ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂತ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲಾಗಿತ್ತು. ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಹಿರಿಯಡ್ಕ ಸಬ್ ಜೈಲಿನಲ್ಲಿರುವ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಕೋರ್ಟ್ ಆದೇಶದ ಹಿನ್ನೆಲೆ ಮಹೇಶ್ ತಿಮರೋಡಿ ಈಗ ಹಿರಿಯಡ್ಕ ಸಬ್ ಜೈಲು ನಲ್ಲಿದ್ದಾರೆ. ಇಂದು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಲಿದೆ ಅಂತ ತಿಳಿದು ಬಂದಿದೆ. ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದಂತ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ, ಉಡುಪಿಯ ಬ್ರಹ್ಮಾವರ ತಾಲ್ಲೂಕಿನ ಸಂಚಾರಿ ನ್ಯಾಯಪೀಠದ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಬೆಂಗಳೂರು : ಬೆಂಗಳೂರಿನಲ್ಲಿ 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಕುಸುಮಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ನಿನ್ನೆ ಸಂಜೆ 6:30ಕ್ಕೆ ಕುಸುಮಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಮು ಹಾಗೂ ಶೋಭಾ ದಂಪತಿಯ ಕುಸುಮಾ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದಳು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು : ಮಹಿಳೆಯೊಬ್ಬಳು ಲವರ್ ಗಾಗಿ ಸ್ವಂತ ಅತ್ತೆಯನ್ನೇ ಮುದ್ದೆಯಲ್ಲಿ ವಿಷ ಹಾಕಿ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ. ಅಶ್ವಿನಿ ಎಂಬ ಮಹಿಳೆ ಅತ್ತೆ ದೇವೀರಮ್ಮ(75) ಅವರನ್ನು ಕೊಲೆ ಮಾಡಿದ್ದಾಳೆ. ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನು ಕೊಲೆ ಮಾಡಿದ್ದಾಳೆ. ಅಶ್ವಿನಿ ಪ್ರಿಯಕರ ಆಂಜನೇಯ ಎಂಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅತ್ತೆ ದೇವೀರಮ್ಮ ಅಡ್ಡಿಯಾಗಿದ್ದಳು. ಪ್ರಿಯಕರನಿಗಾಗಿ ಅಶ್ವಿನಿ ಮನೆಯಲ್ಲಿ ಚಿನ್ನಾಭರಣ ಹಾಗೂ ಕಳುವು ಮಾಡುತ್ತಿದ್ದಳು. ಕದ್ದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ಆಂಜನೇಯನಿಗೆ ಕೊಡುತ್ತಿದ್ದಳು. ಈ ವಿಷಯ ಗೊತ್ತಾದ ಬಳಿಕ ಅತ್ತೆಯನ್ನೇ ಸೊಸೆ ಅಶ್ವಿನಿ ವಿಷ ಹಾಕಿ ಕೊಂದಿದ್ದಾಳೆ. ಬಳಿಕ ಮನೆಯವರಿಗೆ ದೇವಿರಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ನಂಬಿಸಿದ್ದಳು. ಮನೆಯಲ್ಲಿ 100 ಗ್ರಾಂ ಚಿನ್ನ ಹಾಗೂ 50 ಸಾವಿರ ಹಣ ಕಳುವಾಗಿದ್ದರಿಂದ ಅಶ್ವಿನಿ ನಾದಿನಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಳ್ಳತನದ ಪ್ರಕರಣದ ತನಿಖೆ ನಡೆಸಿದಾಗ ಹತ್ಯೆಯ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ವಿಚಾರಣೆ…
ಬೆಂಗಳೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಸಮೀರ್ ಗೆ ವಿಚಾರಣೆಗೆ ಹಾಜರಾಗುಂತೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಯೂಟ್ಯೂಬರ್ ಸಮೀರ್ ಗೆ ಆಗಸ್ಟ್ 24 ರಂದು ವಿಚಾರಣೆಗೆ ಹಾಜರಾಗುಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುಂತೆ ನೋಟಿಸ್ ನೀಡಿದ್ದಾರೆ. ಎಐ ವೀಡಿಯೋ ಸೃಷ್ಠಿಸಿ ಗಲಭೆಗೆ ಪ್ರಚೋದನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣವು ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್.19ರಂದು ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ನವದೆಹಲಿ : ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕ್ಯಾನ್ಸರ್ ಗೆ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಫ್ಲೋರಿಡಾ ವಿವಿಯು ಮಹತ್ವದ ಸಂಶೋಧನೆಯನ್ನು ನಡೆಸಿದೆ. ಇದುವರೆಗೂ ಎಲ್ಲಾ ರೀತಿಯ ಸಂಶೋಧನೆಗಳು ಕ್ಯಾನ್ಸರ್ ಗಡ್ಡೆಯನ್ನು ನಾಶ ಮಾಡುವ ಉದ್ದೇಶದೊಂದಿಗೆ ನಡೆಸಲಾಗು ತ್ತಿತ್ತು. ಆದರೆ ಫ್ಲೋರಿಡಾ ವಿವಿಯ ವಿಜ್ಞಾನಿಗಳ ತಂಡ ನೇರವಾಗಿ ಟ್ಯೂಮರ್ ನಿಯಂತ್ರಣದ ಬದಲಾಗಿ ಟ್ಯೂಮರ್ ವಿರುದ್ಧ ದೇಹದಲ್ಲಿ ಪ್ರತಿಕಾಯ ಶಕ್ತಿಯನ್ನು ಪ್ರಚೋದಿಸುವ ಮತ್ತು ಟ್ಯೂಮರ್ ಚಿಕಿತ್ಸೆಗೆ ಸ್ಪಂದಿಸುವ ರೀತಿಯಲ್ಲಿ ಉತ್ತೇಜಿಸುವ ಆಧಾರದಲ್ಲಿ ಸಂಶೋಧನೆ ನಡೆಸಿದೆ. ಕೋವಿಡ್ ಲಸಿಕೆಯಲ್ಲಿ ಬಳಸಲಾದ ಎಂಆರ್ ಎನ್ಎ ಪದ್ಧತಿ ಆಧರಿಸಿ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಈ ವೇಳೆ ಅದು ಕ್ಯಾನ್ಸರ್ ಟ್ಯೂಮರ್ ವಿರುದ್ಧ ದೇಹದ ಪ್ರತಿಕಾಯಗಳು ಹೋರಾಡಲು ಪ್ರಚೋದಿಸಿದ್ದು, ಟ್ಯೂಮರ್ ಗುಣಪಡಿಸಿದ್ದು ಕಂಡುಬಂದಿದೆ.ಈ ಮೂಲಕ ಇದು ಭವಿಷ್ಯದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್ ಗೆ ದಿವ್ಯೌಷಧ ಆಗಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದೆ.
ಬೆಂಗಳೂರು: ರಾಜ್ಯಾಧ್ಯಂತ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಕೇವಲ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ, ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ಮಾಡಿದ್ರೇ 10,000 ದಂಡ ಹಾಗೂ ಜೈಲು ಶಿಕ್ಷೆ ಕಾಯಂ ಎಂಬುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಿದ್ದು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಲಾಗಿದೆ. ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಮಾರಾಟ ಮಾಡುವುದು ಜಲಮಾಲಿನ್ಯ(ತಡೆ ಮತ್ತು ನಿಯಂತ್ರಣ)ಕಾಯ್ದೆ 1974ರ ಕಲಂ33(ಎ) ರನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ತಯಾರಿಕೆ ಹಾಗೂ ಬಳಕೆ ಮಾಡುವುದು…
ನಿಮ್ಮ ಫೋನ್’ನಲ್ಲಿ ಯಾವುದೇ ಬದಲಾವಣೆಗಳನ್ನ ಗಮನಿಸಿದ್ದೀರಾ.? ನೀವು ಕರೆ ಮಾಡಿದಾಗ ದೊಡ್ಡ ಅಕ್ಷರಗಳಲ್ಲಿ ಬರುತ್ತಿದೆಯೇ.? ಮತ್ತು ಕಾಲ್, ವಿಡಿಯೋ ಕಾಲ್, ರೆಕಾರ್ಡ್, ಹೋಲ್ಡ್, ಆಡ್ ಮೈ ಕ್ಯಾಮೆರಾ, ಸ್ಪ್ಯಾಮ್, ಎಲ್ಲಾ ಕರೆಗಳು, ಮಿಸ್ಡ್ ಕಾಲ್’ಗಳಂತಹ ಎಲ್ಲಾ ಡೇಟಾವನ್ನ ಪರದೆಯ ಮೇಲೆ ಪಡೆಯುತ್ತಿದ್ದೀರಾ.? ನೀವು ಇದರ ಬಗ್ಗೆ ಚಿಂತಿತರಾಗಿದ್ದೀರಾ.? ಚಿಂತಿಸಬೇಡಿ, ಇದೆಲ್ಲವೂ ನವೀಕರಣದ ಭಾಗವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಈ ಬದಲಾವಣೆಗಳು ವಿಶೇಷವಾಗಿ OnePlus, Realme, Moto ಮತ್ತು Oppo ಫೋನ್’ಗಳಲ್ಲಿ ಗೋಚರಿಸುತ್ತವೆ. ಈ ಬದಲಾವಣೆಗಳು ಬಳಕೆದಾರರ ಅನುಭವವನ್ನು ಮತ್ತಷ್ಟು ಸರಳಗೊಳಿಸುವ ಮತ್ತು ಕರೆ ಮಾಡುವ ಇಂಟರ್ಫೇಸ್ ಸುಧಾರಿಸುವ ಗುರಿಯನ್ನು ಹೊಂದಿವೆ. ಅನೇಕ ಬ್ರ್ಯಾಂಡ್’ಗಳು ಆಪರೇಟಿಂಗ್ ಸಿಸ್ಟಮ್ಗಳು ಮತ್ತು Google ಸ್ಟಾಕ್ ಆಂಡ್ರಾಯ್ಡ್ ಆಧರಿಸಿ ಹೊಸ ವೈಶಿಷ್ಟ್ಯಗಳನ್ನ ಪರಿಚಯಿಸುತ್ತಿವೆ. Realme : Realme UI 3.0 ಮತ್ತು 4.0 ನಂತಹ ಆವೃತ್ತಿಗಳಲ್ಲಿ Google Phone ಅಪ್ಲಿಕೇಶನ್ ಅನ್ನು ಸಂಯೋಜಿಸಿದೆ. ಕೆಲವು ಸರಣಿಗಳು ತಮ್ಮದೇ ಆದ ಡಯಲರ್ಗೆ ಸ್ಪ್ಯಾಮ್ ಪತ್ತೆ ವೈಶಿಷ್ಟ್ಯವನ್ನು ಸೇರಿಸಿವೆ. OnePlus…
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಆರ್ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶುಕ್ರವಾರ ಗಡ್ಚಿರೋಲಿ ಪೊಲೀಸರು ತೇಜಸ್ವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡ್ಚಿರೋಲಿಯ ಬಿಜೆಪಿ ಶಾಸಕ ಮಿಲಿಂದ್ ನರೋಟೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 356 (ಮಾನನಷ್ಟ), ಸೆಕ್ಷನ್ 352 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 353 (ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಹೇಳಿಕೆಗಳು) ಅಡಿಯಲ್ಲಿ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನ್ಯೂಯಾರ್ಕ್: ನಯಾಗರಾ ಜಲಪಾತದಿಂದ 54 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 5 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಬಸ್ನಲ್ಲಿದ್ದ ಐದು ಪ್ರಯಾಣಿಕರು ಶುಕ್ರವಾರ ನ್ಯೂಯಾರ್ಕ್ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ಗಮನ ಬೇರೆಡೆಗೆ ತಿರುಗಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವಾಸಿಗರು ನಯಾಗರಾ ಜಲಪಾತಕ್ಕೆ ಭೇಟಿ ನೀಡಿ ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಬಫಲೋದಿಂದ ಪೂರ್ವಕ್ಕೆ 25 ಮೈಲುಗಳು (40 ಕಿಲೋಮೀಟರ್) ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಯಾಣಿಕರು ಭಾರತೀಯ, ಚೈನೀಸ್ ಮತ್ತು ಫಿಲಿಪಿನೋ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಪರೇಟರ್ ವಿಚಲಿತರಾದರು, ನಿಯಂತ್ರಣ ಕಳೆದುಕೊಂಡರು, ಅತಿಯಾಗಿ ಸರಿಪಡಿಸಿದರು ಮತ್ತು ಅಲ್ಲಿಗೆ ತಲುಪಿದರು ಎಂದು ನಂಬಲಾಗಿದೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸ್ ಕಮಾಂಡರ್ ಮೇಜರ್ ಆಂಡ್ರೆ ರೇ ಶುಕ್ರವಾರ ಸಂಜೆ ಸ್ಥಳದಲ್ಲಿ ಹೇಳಿದರು.














