Author: kannadanewsnow57

ಬೆಂಗಳೂರು : ʼಬೆಂಗಳೂರು ಕೌಶಲ್ಯ ಶೃಂಗಸಭೆʼಯನ್ನು ಇದೇ ನವೆಂಬರ್ 5 ಮತ್ತು 6 ರಂದು ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದು,ಯುವಶಕ್ತಿಯ ಭವಿಷ್ಯವನ್ನು ಇನ್ನಷ್ಟು ಬಲಪಡಿಸಲು, ಕೌಶಲ್ಯಗಳನ್ನು ಜಗತ್ತಿಗೆ ತಕ್ಕಂತೆ ವಿಸ್ತರಿಸಲು ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ನಮ್ಮ ಸರ್ಕಾರವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ʼಬೆಂಗಳೂರು ಕೌಶಲ್ಯ ಶೃಂಗಸಭೆʼಯನ್ನು ಇದೇ ನವೆಂಬರ್ 5 ಮತ್ತು 6 ರಂದು ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಿದೆ. ಬನ್ನಿ, ಭಾಗವಹಿಸಿ, ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಪ್ರವೇಶ ಉಚಿತವಾಗಿದ್ದು, ನೋಂದಣಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. konfhub.com/checkout/bengaluru-skill-summit-2025?ticketId=56659… https://twitter.com/CMofKarnataka/status/1985224515195142434

Read More

ಬೆಂಗಳೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ನಿಧನ ಅತೀವ ದುಃಖ ತಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿಪುರದ ನಿವಾಸಿಯಾಗಿದ್ದ ಓಬಳಯ್ಯ ಅವರು ಇಡೀ ದೇಶಕ್ಕೆ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದವರು. ಜೊತೆಗೆ ಆಸಕ್ತರಿಗೆ ವೀಣೆ ತಯಾರಿಕೆಯ ಕೌಶಲ್ಯವನ್ನು ಕಲಿಸಿ, ಸಾಂಪ್ರದಾಯಿಕ ಸಾಹಿತ್ಯದ ನಿರಂತರತೆಯನ್ನು ಕಾಪಾಡುವಲ್ಲಿ ಶ್ರಮಿಸಿದ್ದರು.ಹಿರಿಯ ಜೀವ ಓಬಳಯ್ಯನವರ ಅಗಲಿಕೆಯಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ಸಾಕಿದ ನಾಯಿಯನ್ನೇ ಮಹಿಳೆಯೊಬ್ಬರು ಹತ್ಯೆಗೈದಿರುವ ಘಟನೆ ನಡೆದಿದೆ. ಬೆಂಗಳೂರಿನ ನಲ್ಲಿ ವಾಕಿಮಗ್ ಕರೆದುಕೊಂಡು ಹೋಗುವಾಗ ಲಿಫ್ಟ್ ನಲ್ಲಿ ಸಾಕಿದ ನಾಯಿಯನ್ನೇ ಕೊಲೆ ಮಾಡಿದ್ದಾರೆ. ಗೂಫಿ ಎಂಬ ನಾಯಿಯನ್ನು ಪುಷ್ಪಲತಾ ಎಂಬ ಮಹಿಳೆ ಕೊಲೆ ಮಾಡಿದ್ದಾರೆ. ಅ.31 ರಂದು ಬಾಗಲೂರಿನ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ. ರಾಶಿ ಎಂಬುವರು ಸಾಕಿದ್ದ ಗೂಫಿ ಎಂಬ ಮುದ್ದಾದ ಶ್ವಾನ, ನಾಯಿ ನೋಡಿಕೊಳ್ಳಲು ಪುಷ್ಪಲತಾರನ್ನು ರಾಶಿ ನೇಮಿಸಿದ್ದರು. ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಂಗಾರೆಡ್ಡಿ : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿರುವ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.  ತೆಲಂಗಾಣದ ಸರ್ಕಾರಿ ಬಸ್ ಹಾಗೂ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ದೇಹಗಳು ಛಿದ್ರಗೊಂಡವು. ಈ ಅಪಘಾತದಲ್ಲಿ ತಾಯಿ, 3 ತಿಂಗಳ ಮಗುವೂ ಸಾವನ್ನಪ್ಪಿದೆ. ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಮಗು, ತಾಯಿಯ ತೋಳುಗಳಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿತು. ರಸ್ತೆಯಲ್ಲಿ ತಾಯಿ ಮತ್ತು ಮಗು ಸಾಯುತ್ತಿರುವ ದೃಶ್ಯಗಳು ಹೃದಯವಿದ್ರಾವಕವಾಗಿವೆ. ತಾಯಿ ಮತ್ತು ಮಗು ಛಿದ್ರಗೊಂಡ ಜೀವಿಗಳಂತೆ ರಸ್ತೆಯಲ್ಲಿ ಅಕ್ಕಪಕ್ಕದಲ್ಲಿ ಮಲಗಿರುವ ಫೋಟೋ ಎಲ್ಲರನ್ನೂ ಕಣ್ಣೀರು ಸುರಿಸುವಂತೆ ಮಾಡುತ್ತದೆ. ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಬಸ್ನಲ್ಲಿ 70 ಪ್ರಯಾಣಿಕರಿದ್ದರು. ಚೆವೆಲ್ಲಾ ಮಂಡಲದ ಮಿರ್ಜಗುಡ ಬಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಒಟ್ಟು 24 ಜನರು ಸಾವನ್ನಪ್ಪಿದ್ದಾರೆ. ಒಟ್ಟು…

Read More

ನವದೆಹಲಿ :CA ಇಂಟರ್ಮೀಡಿಯೇಟ್ ಮತ್ತು CA ಫೈನಲ್ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು. CA ಫೌಂಡೇಶನ್ ಫಲಿತಾಂಶವು ದಿನದ ನಂತರ ಬಿಡುಗಡೆಯಾಗಲಿದೆ. ಪರೀಕ್ಷೆಗಳು ಸೆಪ್ಟೆಂಬರ್ 2025 ರ ಅವಧಿಯಲ್ಲಿ ನಡೆದವು. ಈ ಹಿಂದೆ, ICAI ಈ ಸಮಯದಲ್ಲಿ ಫಲಿತಾಂಶಗಳ ದಿನಾಂಕಗಳು ಮತ್ತು ಸಮಯವನ್ನು ಪ್ರಕಟಿಸಿತ್ತು. ಅಭ್ಯರ್ಥಿಗಳು ತಿಳಿದುಕೊಳ್ಳಬೇಕಾದ ಸಂಪೂರ್ಣ ವಿವರಗಳು ಇಲ್ಲಿವೆ: ICAI CA ಫಲಿತಾಂಶ 2025: ಪರಿಶೀಲಿಸುವುದು ಹೇಗೆ? ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: icai.nic.in (ಅಥವಾ icaiexam.icai.org). ಮುಖಪುಟದಲ್ಲಿ, “CA ಫಲಿತಾಂಶ ಸೆಪ್ಟೆಂಬರ್ 2025” ಗಾಗಿ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ. ನಿಮ್ಮ ರೋಲ್ ಸಂಖ್ಯೆ, ನೋಂದಣಿ ಸಂಖ್ಯೆ ಮತ್ತು ಪ್ರದರ್ಶಿಸಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಸಲ್ಲಿಸು ಬಟನ್ ಕ್ಲಿಕ್ ಮಾಡಿ. ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ. ಭವಿಷ್ಯದ ಬಳಕೆಗಾಗಿ ಸ್ಕೋರ್-ಕಾರ್ಡ್ ಅನ್ನು ಡೌನ್ಲೋಡ್ ಮಾಡಿ ಮತ್ತು ಉಳಿಸಿ. ಗಮನಿಸಬೇಕಾದ ಪ್ರಮುಖ ವಿಷಯಗಳು: ಫಲಿತಾಂಶವು ಆನ್ಲೈನ್ನಲ್ಲಿ ಮಾತ್ರ ಲಭ್ಯವಿರುತ್ತದೆ.…

Read More

ದಕ್ಷಿಣ ಕನ್ನಡ : ತಲೆಮರೆಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಪತ್ತೆಯಾಗಿದ್ದು, 50 ದಿನಗಳ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಪ್ರತ್ಯಕ್ಷರಾಗಿದ್ದು, ಬೆಳ್ತಂಗಡಿ ಕೋರ್ಟ್ ಗೆ ಹಾಜರಾಗಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರು ಬರೋಬ್ಬರಿ 50 ದಿನಗಳ ಬಳಿಕ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ ಗೆ ಹಾಜರಾಗಿದ್ದಾರೆ.

Read More

ನವದೆಹಲಿ : ತೆಲಂಗಾಣದಲ್ಲಿ ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮುಗುಚಿ 24 ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದ ಉಂಟಾದ ಜೀವಹಾನಿ ತೀವ್ರ ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ಸಂತ್ರಸ್ತ ಜನರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ…” ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಾಂಡೂರು ಡಿಪೋಗೆ ಸೇರಿದ ಆರ್ ಟಿಸಿ ಬಸ್ ಗೆ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಚೇವೆಲ್ಲಾ ಮಂಡಲದ ಮಿರ್ಜಾಗುಡಾ ಬಳಿ ಈ ಘಟನೆ ನಡೆದಿದೆ. ಬಸ್ ಮೇಲೆ ಜಲ್ಲಿಕಲ್ಲು ಲೋಡ್ ಬಿದ್ದಿದ್ದು,…

Read More

ಹೈದರಾಬಾದ್ : ತೆಲಂಗಾಣದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮುಗುಚಿ 24 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಾಂಡೂರು ಡಿಪೋಗೆ ಸೇರಿದ ಆರ್ ಟಿಸಿ ಬಸ್ ಗೆ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಚೇವೆಲ್ಲಾ ಮಂಡಲದ ಮಿರ್ಜಾಗುಡಾ ಬಳಿ ಈ ಘಟನೆ ನಡೆದಿದೆ. ಬಸ್ ಮೇಲೆ ಜಲ್ಲಿಕಲ್ಲು ಲೋಡ್ ಬಿದ್ದಿದ್ದು, ಹಲವು ಪ್ರಯಾಣಿಕರು ಅದರಲ್ಲಿ ಸಿಲುಕಿಕೊಂಡರು. ಈ ಅಪಘಾತದಲ್ಲಿ ಟಿಪ್ಪರ್ ಚಾಲಕ ಸೇರಿ 24ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಬಸ್ನಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನೌಕರರು ಎಂದು ಪೊಲೀಸರು ಹೇಳುತ್ತಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಪ್ರತಿದಿನ ಬೆಳಿಗ್ಗೆ ಹೈದರಾಬಾದ್ಗೆ ಹೋಗುತ್ತಾರೆ. ಭಾನುವಾರ ರಜೆ ಇದ್ದ ಕಾರಣ ಕೆಲವರು ತಮ್ಮ ಮನೆಗಳಿಗೆ ತೆರಳಿ ವಾಪಸ್ ಪ್ರಯಾಣ ಬೆಳೆಸಿದರು. ಈ…

Read More

ನಮಗೆ ವಯಸ್ಸಾದಂತೆ, ಪ್ರತಿಯೊಬ್ಬರ ಜೀರ್ಣಕ್ರಿಯೆಯ ಶಕ್ತಿ ಸ್ವಾಭಾವಿಕವಾಗಿಯೇ ನಿಧಾನಗೊಳ್ಳುತ್ತದೆ. ನಾವು ಚಿಕ್ಕವರಿದ್ದಾಗ, ನಾವು ಎಷ್ಟೇ ತಿಂದರೂ ಯಾವುದೇ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆದರೆ ನಾವು ವಯಸ್ಸಾದಾಗ, ನಮ್ಮ ಜೀರ್ಣಕ್ರಿಯೆಯ ಶಕ್ತಿ ನಿಧಾನವಾಗುತ್ತದೆ ಮತ್ತು ನಮ್ಮ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದಾಗ್ಯೂ, ಜೀರ್ಣಕ್ರಿಯೆಯ ಶಕ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಕೆಲವು ಜನರು ಯಾವುದೇ ವಯಸ್ಸಿನಲ್ಲಿ ಮಾಂಸಾಹಾರಿ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು. ಆದರೆ ಕೆಲವರಿಗೆ, ಅವರು ತುಂಬಾ ಕಡಿಮೆ ತಿಂದರೂ, ಮಾಂಸಾಹಾರಿ ಆಹಾರವು ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದಾಗಿ, ಅವರು ಅಜೀರ್ಣ ಮತ್ತು ಅನಿಲದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಾಗ್ಯೂ, ನಾವು ಮಾಂಸಾಹಾರಿ ಆಹಾರವನ್ನು ಸೇವಿಸಿದಾಗ ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ಮಾಡಲು, ನಾವು ಕೆಲವು ಮನೆ ಸಲಹೆಗಳನ್ನು ಅನುಸರಿಸಬೇಕು. ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ನಾವು ಈ ಸಲಹೆಗಳನ್ನು ಅನುಸರಿಸಿದರೆ, ನಮ್ಮ ಜೀರ್ಣಕ್ರಿಯೆಯ ಶಕ್ತಿಯನ್ನು ಸುಲಭವಾಗಿ ಹೆಚ್ಚಿಸಬಹುದು. ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ..? ಸಾಮಾನ್ಯವಾಗಿ, ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ತೆಗೆದುಕೊಳ್ಳುವ…

Read More

ಹೈದರಾಬಾದ್ : ತೆಲಂಗಾಣದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದ್ದು, ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮುಗುಚಿ 20 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ 1 ವರ್ಷದ ಹೆಣ್ಣು ಮಗು, 11 ಮಹಿಳೆಯರು ಹಾಗೂ 9 ಮಂದಿ ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಾಂಡೂರು ಡಿಪೋಗೆ ಸೇರಿದ ಆರ್ ಟಿಸಿ ಬಸ್ ಗೆ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಚೇವೆಲ್ಲಾ ಮಂಡಲದ ಮಿರ್ಜಾಗುಡಾ ಬಳಿ ಈ ಘಟನೆ ನಡೆದಿದೆ. ಬಸ್ ಮೇಲೆ ಜಲ್ಲಿಕಲ್ಲು ಲೋಡ್ ಬಿದ್ದಿದ್ದು, ಹಲವು ಪ್ರಯಾಣಿಕರು ಅದರಲ್ಲಿ ಸಿಲುಕಿಕೊಂಡರು. ಈ ಅಪಘಾತದಲ್ಲಿ ಟಿಪ್ಪರ್ ಚಾಲಕ ಸೇರಿ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 15 ತಿಂಗಳ ಮಗುವೂ ಸೇರಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಬಸ್ನಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು…

Read More