Author: kannadanewsnow57

ಬೆಂಗಳೂರು : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ ನಡಸಲಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರ,ಪ್ರತಿಭಟನೆಯಲ್ಲಿ ನಿರತ ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ ಎಂಬುದು ಸುಳ್ಳು ಸುದ್ದಿ. 2021ರಲ್ಲಿ ಹರಿಯಾಣದ ಕರ್ನಲ್ನಲ್ಲಿ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಫೋಟೋವನ್ನು ಕರ್ನಾಟಕದ್ದೆಂದು ಕೆಲವು ಮಾಧ್ಯಮಗಳು ತಪ್ಪಾಗಿ ತೋರಿಸುತ್ತಿವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇನ್ನು ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜೊತೆ ಚರ್ಚಿಸಿ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಲಾಗಿದೆ. ಕಾರ್ಖಾನೆಗಳು ಒಂದು ಟನ್ಗೆ ಹಿಂದೆ ನಿಗದಿಯಾಗಿದ್ದ ₹3,200ರ ಜೊತೆಗೆ ₹50 ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ₹50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ.10.5 ಇಳುವರಿ ಪ್ರಮಾಣ ಇರುವ ಪ್ರತಿ…

Read More

ನವದೆಹಲಿ : 13.8 ಕೋಟಿ ಭಾರತೀಯರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿ ತಿಳಿಸಿದೆ. ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಭಾರತವು ಈಗ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (CKD) ಬಳಲುತ್ತಿರುವ ಜನರನ್ನು ಹೊಂದಿದೆ. 2023 ರಲ್ಲಿ, 13.8 ಕೋಟಿ ಭಾರತೀಯರು CKD ಯಿಂದ ಬಳಲುತ್ತಿದ್ದರು, ಇದು ಚೀನಾದ 15.2 ಕೋಟಿ ನಂತರ ಎರಡನೆಯದು ಎಂದು ವರದಿ ಬಹಿರಂಗಪಡಿಸುತ್ತದೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯೂಯೇಷನ್ (IHME) ನ ಸಂಶೋಧಕರ ನೇತೃತ್ವದ ಜಾಗತಿಕ ಅಧ್ಯಯನವು 1990 ಮತ್ತು 2023 ರ ನಡುವೆ 204 ದೇಶಗಳು ಮತ್ತು ಪ್ರಾಂತ್ಯಗಳ ಆರೋಗ್ಯ ದತ್ತಾಂಶವನ್ನು ವಿಶ್ಲೇಷಿಸಿದೆ. CKD ವಿಶ್ವಾದ್ಯಂತ ಸಾವಿಗೆ ಒಂಬತ್ತನೇ ಪ್ರಮುಖ ಕಾರಣವಾಗಿದ್ದು, ಕಳೆದ ವರ್ಷವಷ್ಟೇ ಸುಮಾರು 15 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಅದು ಕಂಡುಹಿಡಿದಿದೆ. CKD ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿ ಹೊರಹೊಮ್ಮುತ್ತಿದೆ…

Read More

ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬು ಬೆಳಗಾರರಿಗೆ ಸಿಹಿಸುದ್ದಿ ನೀಡಿದ್ದು, ಕಬ್ಬು ಬೆಳೆಗೆ ಹೆಚ್ಚುವರಿಯಾಗಿ ಒಟ್ಟಾರೆ 100 ರೂಪಾಯಿ ನಿಗದಿ ಮಾಡುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಎಷ್ಟೇ ರಿಕವರಿ ಇದ್ದರೂ ಟನ್ ಗೆ 100 ರೂಪಾಯಿ ನೀಡಲು ಆದೇಶಿಸಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಜೊತೆಗೆ ಶುಕ್ರವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ ರೂ.50, ಸಕ್ಕರೆ ಕಾರ್ಖಾನೆ ಮಾಲೀಕರಿಂದ 50 ರೂಪಾಯಿ ಹೆಚ್ಚುವರಿ ಹಣ ಪಾವತಿಗೆ ನಿರ್ಧರಿಸಲಾಗಿತ್ತು. ಶನಿವಾರ ಪ್ರತಿ ಟನ್ ಗೆ ಹೆಚ್ಚುವರಿ 100 ರೂಪಾಯಿ ಪಾವತಿಗೆ ಆದೇಶಿಸಲಾಗಿದೆ. ಬೆಳೆಗಾರರಿಗೆ ಮೊದಲ ಕಂತು ಪಾವತಿಗೆ 14 ದಿನಗಳ ಗಡುವು ನೀಡಲಾಗಿದೆ. ಈ ಕುರಿತಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಕ್ಕರೆ ಹಂಗಾಮಿನಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ನ್ಯಾಯಯುತ…

Read More

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ವೈರಲ್ ಆದಾಗ ಭಯಪಡೆದೇ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳು ವೈರಲ್ ಆಗದಂತೆ ತಡೆಯಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ. ಸೈಬರ್ ಅಪರಾಧಗಳನ್ನು ದಾಖಲಿಸಲು ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ. ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಫೋಟೋಗಳು, ವಿಡಿಯೋಗಳು ವೈರಲ್ ಆಗದಂತೆ ತಡೆಯಲು WWW.stopncii.org ಈ ವೆಬ್ ಸೈಟ್ ಗೆ ಹೋಗಿ ರಿಪೋರ್ಟ್ ಮಾಡಬಹುದು. ಈ ಹಂತಗಳನ್ನು ಅನುಸರಿಸಿ ಮೊದಲಿಗೆ Google ಗೆ ಹೋಗಿ WWW.stopncii.org ವೆಬ್ ಸೈಟ್ ಸರ್ಚ್ ಮಾಡಿ ಕ್ರಿಯೇಟ್ ಯುವರ ಕೇಸ್ ಅಂತ ಬರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಅಗ್ರಿ ಕ್ಲಿಕ್ ಮಾಡಿ, ಮೈಸೆಲ್ಫ್, ಕ್ಲಿಕ್ ಮಾಡಿ,ಬಳಿಕ ಪ್ರಾವೈಟ್ ಪ್ಲೇಸ್ ಅಂತ ಕ್ಲಿಕ್ ಮಾಡಿ. ಬಳಿಕ Iam Nude ar semi Nude ಅಂತ ಬರುತ್ತೆ ಅಲ್ಲಿ Yes ಅಂತ ಕ್ಲಿಕ್ ಮಾಡಿದ್ರೆ Next ಅಂತ…

Read More

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಭದ್ರಾ ಕಾಲುವೆಗೆ ಕಾರು ಬಿದ್ದು ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಹೊಸೂರು ಬಳಿಯ ಭದ್ರಾ ಮುಖ್ಯ ಕಾಲುವೆಯಲ್ಲಿ ಕಾರು ನಾಲೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಲ್ಲಿಕಾರ್ಜುನ (29) ಹಾಗೂ ಸಿದ್ದೇಶ್ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾವಣಗೆರೆ ಮೂಲದ 6 ಜನ ಮಂಗಳೂರು ಕಡೆ ಪ್ರವಾಸಕ್ಕೆ ಹೋಗಿದ್ರು,ಪ್ರವಾಸ ಮುಗಿಸಿ ವಾಪಸ್ ಬರುವಾಗ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಭದ್ರಾ ಕಾಲುವೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಾವು, 6 ಮಂದಿ ಈಜಿ ದಡ ಸೇರಿದ್ದಾರೆ.  ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Read More

ಈಗ ಎಟಿಎಂಗಳಿಂದ ಹಣ ಹಿಂಪಡೆಯಲು ನಿಮಗೆ ಕಾರ್ಡ್ ಅಗತ್ಯವಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಮತ್ತು ಯುಪಿಐ ಅಪ್ಲಿಕೇಶನ್ ಬಳಸಿ ನೀವು ಸುಲಭವಾಗಿ ಹಣವನ್ನು ಹಿಂಪಡೆಯಬಹುದು. ಹೌದು, ಈ ‘ಇಂಟರ್ಆಪರೇಬಲ್ ಕಾರ್ಡ್ಲೆಸ್ ಕ್ಯಾಶ್ ವಿತ್ಡ್ರಾವಲ್’ (ಐಸಿಸಿಡಬ್ಲ್ಯೂ) ತಂತ್ರಜ್ಞಾನದ ಮೂಲಕ ನೀವು ಈ ಹಣವನ್ನು ಹಿಂಪಡೆಯಬಹುದು. ಇದು ಎಲ್ಲಾ ವರ್ಗದ ಜನರಿಗೆ ಸುರಕ್ಷಿತವಾಗಿದೆ. ಜೊತೆಗೆ ಅನುಕೂಲಕರವಾಗಿದೆ. ಮೊದಲು, ಜನರು ಡೆಬಿಟ್ ಕಾರ್ಡ್ಗಳನ್ನು ಎಟಿಎಂಗಳಿಗೆ ಕೊಂಡೊಯ್ಯುತ್ತಿದ್ದರು. ಪಿನ್ ಅಥವಾ ಕಾರ್ಡ್ ಸ್ಕಿಮ್ಮಿಂಗ್ ಅನ್ನು ಮರೆತುಬಿಡುವ ಭಯವಿತ್ತು. ಆದರೆ ಈಗ ಐಸಿಸಿಡಬ್ಲ್ಯೂ ತಂತ್ರಜ್ಞಾನದೊಂದಿಗೆ, ಜನರು ಗೂಗಲ್ ಪೇ, ಫೋನ್ಪೇ, ಪೇಟಿಎಂ, ಭೀಮ್ನಂತಹ ಯುಪಿಐ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಹಣವನ್ನು ಹಿಂಪಡೆಯಬಹುದು. ಈ ಪ್ರಕ್ರಿಯೆಯಲ್ಲಿ, ನೀವು ‘ಎಟಿಎಂ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು’ ಮತ್ತು ‘ಯುಪಿಐ ಪಿನ್’ ಮೂಲಕ ದೃಢೀಕರಿಸಬೇಕು. ಇದರಲ್ಲಿ ಯಾವುದೇ ಕಾರ್ಡ್ ಅಗತ್ಯವಿಲ್ಲ. ಈ ಹೊಸ ವ್ಯವಸ್ಥೆಯಲ್ಲಿನ ಪ್ರಕ್ರಿಯೆಯು ತುಂಬಾ ಸುಲಭ. ಮೊದಲು, ಯಾವುದೇ ‘ಐಸಿಸಿಡಬ್ಲ್ಯೂ ಬೆಂಬಲಿತ’ ಎಟಿಎಂಗೆ ಭೇಟಿ ನೀಡಿ. ನಂತರ ‘ಯುಪಿಐ ಕ್ಯಾಶ್ ವಿತ್ಡ್ರಾವಲ್’…

Read More

ಹ್ಯಾಕರ್‌ಗಳಿಗೆ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡುವುದು ಇಂದು ದೊಡ್ಡ ವಿಷಯವಲ್ಲ. ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಕಂಡುಹಿಡಿಯಬಹುದಾದ ಕೆಲವು ಚಿಹ್ನೆಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. ನಿಮ್ಮ ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತಿದ್ದರೆ, ಹ್ಯಾಕರ್‌ಗಳು ನಿಮ್ಮ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸಾಧ್ಯತೆಯಿದೆ ಅಥವಾ ನಿಮ್ಮ ಮೇಲೆ ನಿರಂತರವಾಗಿ ಬೇಹುಗಾರಿಕೆ ನಡೆಸುತ್ತಿರುವ ಅಪ್ಲಿಕೇಶನ್ ಇದೆ. ನಿಮ್ಮ ಸ್ಮಾರ್ಟ್‌ಫೋನ್ ನಿರಂತರವಾಗಿ ಬಿಸಿಯಾಗುತ್ತಿದ್ದರೆ, ನೀವು ಜಾಗರೂಕರಾಗಿರಬೇಕು, ಏಕೆಂದರೆ ಫೋನ್ ಅನ್ನು ಬ್ಯಾಕೆಂಡ್‌ನಲ್ಲಿ ಬಳಸುತ್ತಿರುವಾಗ ಅಥವಾ ಯಾವುದೇ ಅಪ್ಲಿಕೇಶನ್ ಚಾಲನೆಯಲ್ಲಿರುವಾಗ, ಫೋನ್ ಬಿಸಿಯಾಗುತ್ತದೆ. ನೀವು ಮಾಡದಿರುವ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಂತಹ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯಿಂದ ಅಂತಹ ಯಾವುದೇ ಪೋಸ್ಟ್ ಮಾಡಲಾಗುತ್ತಿದ್ದರೆ, ನಿಮ್ಮ ಫೋನ್ ಹ್ಯಾಕ್ ಆಗಿರುವ ಅಥವಾ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ. ನಿಮ್ಮ ಫೋನ್ ಇದ್ದಕ್ಕಿದ್ದಂತೆ ತುಂಬಾ ನಿಧಾನವಾಗಿದ್ದರೆ, ನೀವು ಎಚ್ಚರವಾಗಿರಬೇಕು. ಇದೂ ಕೂಡ ಹ್ಯಾಕ್ ಆಗಿರುವ ಸೂಚನೆ. ನಿಮ್ಮ ಫೋನ್‌ನ ಅಪ್ಲಿಕೇಶನ್‌ಗಳು ಪದೇ…

Read More

ಕೊಪ್ಪಳ  : ಓಲಾ ಬ್ಯಾಟರಿ ಬೈಕ್ ದುರಸ್ತಿ ಮಾಡುವಲ್ಲಿ ಹಾಗೂ ದೂರುದಾರರ ಮನವಿಗೆ ಸ್ಪಂದಿಸದೇ ಸೇವಾ ನ್ಯೂನ್ಯತೆ ಎಸಗಿದ ಹಿನ್ನೆಲೆಯಲ್ಲಿ ದೂರುದಾರರಿಗೆ ಬಡ್ಡಿ ಸಹಿತ ಪರಿಹಾರ ಮೊತ್ತ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ. ದೂರುದಾರರಾದ ಕಾರಟಗಿಯ ವಿಜಯಮಹಾಂತೇಶ ಕೆ. ತಂದೆ ಶರಣಪ್ಪ ಕೆ. ಅವರು ಓಲಾ ಕಂಪನಿಯ ಓಲಾ ಎಸ್-1 ಪ್ರೋ 3ನೇ ಜಿನ್ ಸ್ಕೂಟಿಯನ್ನು ದಿನಾಂಕ:04/03/2025 ರಂದು ಬುಕ್ ಮಾಡಿ ವಾಹನದ ಸಂಪೂರ್ಣ ಹಣ ರೂ.1,53,915/- ಗಳನ್ನು ದಿನಾಂಕ:05/03/2025 ರಂದು ಎದುರುದಾರರಿಗೆ ಪಾವತಿ ಮಾಡಿದ್ದರು. ಎದುರುದಾರ ಕಂಪನಿಯವರು ದಿನಾಂಕ:20/03/2025 ರಂದು ವಾಹನವನ್ನು ದೂರುದಾರರ ವಶಕ್ಕೆ ನೀಡಿದ್ದರು. ದೂರುದಾರರು ವಾಹನವನ್ನು ಪಡೆದ ಎರಡೇ ದಿನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ದಿನಾಂಕ:22/03/2025 ರಂದು ಎದುರುದಾರ ಕಂಪನಿಯ ಕಾರಟಗಿ ಶೋರೂಮ್‌ಗೆ ವಾಹನವನ್ನು ಹಿಂದಿರುಗಿಸಿದ್ದರು. ವಾಹನದಲ್ಲಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸಿಕೊಡುವಂತೆ ಹಲವು ಬಾರಿ ಎದುರುದಾರರಲ್ಲಿ ವಿನಂತಿಸಿದರೂ ಸಹ ಎದುರುದಾರರು ವಾಹನದಲ್ಲಿ ಉಂಟಾದ ತಾಂತ್ರಿಕ ದೋಷವನ್ನು ನಿವಾರಿಸಿ, ವಾಹನವನ್ನು ಹಿಂದಿರುಗಿಸಿ…

Read More

ಸರ್ಕಾರವು 2025-26 ನೇ ಸಾಲಿನಲ್ಲಿ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ ನೇಮಕವಾಗಿದ್ದು, ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಳಿಜೋಳ(ಹೈಬ್ರಿಡ್) ರೂ.3699/- ಹಾಗೂ ಬಿಳಿಜೋಳ(ಮಾಲ್ದಂಡಿ) ರೂ.3749/- ರಂತೆ ದರ ನಿಗದಿಪಡಿಸಲಾಗಿದೆ. ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮೂರೂ ಖರೀದಿ ಕೇಂದ್ರಗಳಿಗೆ ಖರೀದಿ ಅಧಿಕಾರಿಯನ್ನಾಗಿ ಕೊಪ್ಪಳ ಎಪಿಎಂಸಿ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆಯ ಮಳಿಗೆ ವ್ಯವಸ್ಥಾಪಕ ಮೃತ್ಯುಂಜಯ ಕೋನಾಪುರ ಅವರನ್ನು ನೇಮಕ ಮಾಡಲಾಗಿದೆ. ಪ್ರತಿ ರೈತರಿಂದ ಹಿಡುವಳಿಯನ್ನು ಆಧಾರಿಸಿ ಪ್ರತಿ ಎಕರೆಗೆ 15 ಕ್ವಿಂ. ನಂತೆ ಗರಿಷ್ಟ 150 ಕ್ವಿಂ. ಬಿಳಿ ಜೋಳವನ್ನು ಖರೀದಿಸಲಾಗುವುದು. ರೈತರ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಆಧಾರದಲ್ಲಿ ಕೈಗೊಳ್ಳಲಿದ್ದು, ನವೆಂಬರ್ 15 ರಿಂದ 2026 ರ ಮಾರ್ಚ್ 30 ರವರೆಗೆ ರೈತರ ನೋಂದಣಿಯನ್ನು ನಡೆಸಲಾಗುವುದು. ಹಾಗೂ 2026 ರ ಜನವರಿ 1 ರಿಂದ ಮಾರ್ಚ್…

Read More

ಕೃಷ್ಣಗಿರಿ: ಎದುರು ಮನೆಯ ಮಹಿಳೆಯೊಂದಿಗಿನ ಸಲಿಂಗ ಕಾಮಕ್ಕಾಗಿ ತನ್ನ ಶಿಶುವನ್ನು ಕೊಂದು, ನಂತರ ತನ್ನ ಪತಿಯೊಂದಿಗೆ ನಾಟಕವಾಡಿದ ತಾಯಿಯ ಕ್ರೂರ ಕೃತ್ಯ ಹೊಸೂರು ಪ್ರದೇಶದಲ್ಲಿ ತೀವ್ರ ಆಘಾತ ಮತ್ತು ದುಃಖಕ್ಕೆ ಕಾರಣವಾಗಿದೆ. ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿಯ ಕೆಲಮಂಗಲಂ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಟ್ಟಿ ಗ್ರಾಮದ ಸುರೇಶ್ (30) ಅವರು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಭಾರತಿ (25). ಅವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು 5 ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಅವರು ಮಗುವಿಗೆ ಧ್ರುವ ಎಂದು ಹೆಸರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ, ಸುರೇಶ್ ಅವರ ಪತ್ನಿ ಭಾರತಿ ಮತ್ತು ಎದುರು ಮನೆಯ ಅವಿವಾಹಿತ ಮಹಿಳೆ ಸುಮಿತ್ರಾ (22) ಸಂಬಂಧವನ್ನು ಪ್ರಾರಂಭಿಸಿದ್ದಾರೆ. ಕಾಲಾನಂತರದಲ್ಲಿ, ಅದು ಸಲಿಂಗಕಾಮಿ ಸಂಬಂಧವಾಗಿ ಮಾರ್ಪಟ್ಟಿದೆ. ಇಬ್ಬರೂ ಪ್ರತಿದಿನ ವಾಟ್ಸಾಪ್ನಲ್ಲಿ ಮಾತನಾಡುತ್ತಿದ್ದರು ಮತ್ತು ಆಗಾಗ್ಗೆ ಖಾಸಗಿಯಾಗಿ ಭೇಟಿಯಾಗುತ್ತಿದ್ದರು. ಒಂದು ಹಂತದಲ್ಲಿ, ಭಾರತಿಗೆ ಸುಮಿತ್ರಾ ಮೇಲಿನ ಅಪರಿಮಿತ ಪ್ರೀತಿ ಅವಳ ಎದೆಯ ಮೇಲೆ “ಸುಮಿ”…

Read More