Author: kannadanewsnow57

ಮೈಸೂರು : ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಇದ್ದು, ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಇದ್ದು, ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲಿಯೇ ಏರ್ಪಡಿಸುವಂತೆ ಕೆ.ಪಿ.ಎಸ್.ಸಿ ಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಶಾಸಕ ಮುನಿರತ್ನ ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್.ಐ ಟಿಗೆ ವಹಿಸಬೇಕೆಂದು ಇಂದು ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಮಾತನಾಡಿ ತೀರ್ಮಾನಿಸುತ್ತೇವೆ ಎಂದರು. ಈ ಬಾರಿ ರಾಜ್ಯದಲ್ಲಿ 60,000 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯಾಗಿತ್ತು.…

Read More

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯದಲಿನ ಹಳದಿ ಬೋರ್ಡ್ ಟ್ಯಾಕ್ಸಿ ಹಾಗೂ ಆಟೋ ಚಾಲಕರ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾನಿಧಿ ಯೋಜನೆ ಸೌಲಭ್ಯಕ್ಕಾಗಿ ರಾಜ್ಯದಲ್ಲಿನ ಹಳದಿ ಬೋರ್ಡ್‌ ಟ್ಯಾಕ್ಸಿ ಚಾಲಕರ ಮತ್ತು ಆಟೋ ಚಾಲಕರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಸೇವಾ ಸಿಂಧು ವೆಬ್‌ ಪೋರ್ಟಲ್‌ ಮೂಲಕ ಗ್ರಾಮ ಒನ್‌, ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಚಾಲಕರು, ಪೋಷಕರ ಚಾಲನಾ ಅನುಜ್ಞಾ ಪತ್ರ ಸಂಖ್ಯೆ, ಆಧಾರ್‌ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್‌ ಸಂಖ್ಯೆಯೊಂದಿಗೆ ವೆಬ್‌ಸೈಟ್‌ https://sevasindhu.karnataka.gov.in/Sevasindhu/Kannada ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು: ಬೆಸ್ಕಾಂನಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸೆ.21ರ ಇಂದು, ಸೆ.22ರ ನಾಳೆ ವಿದ್ಯುತ್ ವ್ಯತ್ತಯ ಉಂಟಾಗಲಿದೆ. ಸೆ.21 ರ ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಸ್ಕಾಂ ( BESCOM ) ಮಾಹಿತಿ ಹಂಚಿಕೊಂಡಿದ್ದು, 66/11 ಕೆವಿಎ ಸಹಕಾರನಗರ ಕೇಂದ್ರದಲ್ಲಿ , ಟ್ರಾನ್ಸ್ ಫಾರ್ಮರ್ 1, 2 & 3 ಮತ್ತು ಬೇಸ್ ಮತ್ತು 66ಕೆವಿ ಬಸ್ ನಿರ್ವಹಣೆ ಕೆಲಸಗಳಿಂದಾಗಿ ದಿನಾಂಕ 21.09.2024 ರಂದು ಬೆಳಿಗ್ಗೆ 10:00 ರಿಂದ ಸಂಜೆ 16:00 ಗಂಟೆಗಳವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು…

Read More

ಬೆಂಗಳೂರು : ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಿವಿಲ್ ಸೇವೆಗಳ ನೇರ ನೇಮಕಾತಿಗೂ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ಒದಗಿಸುವ ಸಂಬಂಧ ಗಜೆಟ್ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 2024ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ: 14)ರ 3ನೇ ಪ್ರಕರಣದ 2(ಎ) ಉಪ ಪ್ರಕರಣವನ್ನು ಪ್ರಕರಣ 8 ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ, ಕರಡು ನಿಯಮಗಳನ್ನು ದಿನಾಂಕ:15.02.2024ರ ರಾಜ್ಯ ಪತ್ರ ವಿಶೇಷ ಸಂಚಿಕೆಯ ಭಾಗ-IV-ಎ (ನಂ.84) ರಲ್ಲಿ ಅಧಿಸೂಚನೆ ಸಂಖ್ಯೆ:ಸಿಆಸುಇ 295 ಸನನಿ 2023, ದಿನಾಂಕ:15.02.2024ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಬಹುದಾದಂತಹ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿರುವುದರಿಂದ, ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ:15ನೇ ಫೆಬ್ರವರಿ 2024ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿರುವುದರಿಂದ, ಮತ್ತು ಸ್ವೀಕೃತವಾಗಿರುವ ಆಕ್ಷೇಪಣೆಗಳು ಮತ್ತು…

Read More

ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ, ನಾವು ಬಹುಶಃ ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ನೀವು ನಿಮ್ಮ ದೈನಂದಿನ ದಿನಚರಿಯನ್ನು ನಡೆಸುತ್ತಿದ್ದೀರಿ, ಆದರೆ ನೀವೇ ಎಷ್ಟು ಮೋಸ ಹೋಗುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ತಿಳಿದುಕೊಳ್ಳುವುದು ನಿಮಗೆ ಮುಖ್ಯವಾಗಿದೆ. ನೀವು ತಿನ್ನುವ ವಸ್ತುವಿನಲ್ಲಿ ಏನು ಮಿಶ್ರಣವಾಗಿದೆ ಎಂದು ನಿಮಗೆ ತಿಳಿದಿದೆಯೇ? ಸಸ್ಯಾಹಾರಿಗಳಿಗೆ ಇದು ಮುಖ್ಯವಾಗಿದೆ, ಅವರು ತಿನ್ನುವ ಯಾವುದರಲ್ಲಿ ಏನು ಮಿಶ್ರಣವಾಗಿದೆ ಮತ್ತು ಏನು ಇಲ್ಲ ಎಂದು ತಿಳಿದುಕೊಳ್ಳಿ. ಹಂದಿ ಕೊಬ್ಬು ಅಥವಾ ಟ್ಯಾಲೋ ಎಂದು ಕರೆಯಲ್ಪಡುವ ಪ್ರಾಣಿಗಳ ಕೊಬ್ಬನ್ನು ಕೆಲವು ಆಹಾರಗಳು ಮತ್ತು ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಪ್ರಾಣಿಗಳ ಕೊಬ್ಬನ್ನು ಬೆರೆಸಬಹುದಾದ ಕೆಲವು ಸಾಮಾನ್ಯ ವಸ್ತುಗಳು ಇಲ್ಲಿವೆ: ಮಾರ್ಗರೀನ್: ಕೆಲವು ವಿಧದ ಮಾರ್ಗರೀನ್ ಪ್ರಾಣಿಗಳ ಕೊಬ್ಬನ್ನು ಹೊಂದಿರುತ್ತದೆ, ವಿಶೇಷವಾಗಿ ಅವುಗಳು ‘ಸುವಾಸನೆ’ ಅಥವಾ ‘ನೈಸರ್ಗಿಕ ಕೊಬ್ಬು’ ಎಂದು ಉಲ್ಲೇಖಿಸಲಾಗುತ್ತದೆ. ಬಿಸ್ಕತ್ತುಗಳು ಮತ್ತು ಕುಕೀಗಳು: ಅನೇಕ ಬಿಸ್ಕತ್ತುಗಳು ಮತ್ತು ಕುಕೀಗಳು ಪ್ರಾಣಿಗಳ ಕೊಬ್ಬನ್ನು ಒಳಗೊಂಡಿರುತ್ತವೆ. ಪ್ಯಾಟೀಸ್ ಮತ್ತು ಸಾಸೇಜ್‌ಗಳು: ಸಾಸೇಜ್‌ಗಳು,…

Read More

ಹೈದರಾಬಾದ್ : ಬಿಸಿನೀರಿಗಾಗಿ ವಾಟರ್ ಹೀಟರ್ ಬಳಸುವವರೇ ಎಚ್ಚರ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮೊಹಮ್ಮದ್ ನಗರ ಮಂಡಲದ ತುಂಕಿಪಲ್ಲಿಯಲ್ಲಿ ವ್ಯಕ್ತಿಯೊಬ್ಬರು ವಾಟರ್ ಹೀಟರ್ ಶಾಕ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ರಾವುತ್ತು ಸೈಲು ಅವರು ಹೈದರಾಬಾದ್‌ಗೆ ಹೋಗುವಾಗ ಸ್ನಾನಕ್ಕೆಂದು ಬಕೆಟ್‌ನಲ್ಲಿ ವಾಟರ್ ಹೀಟರ್ ಹಾಕಿದ್ದರು. ಸ್ವಲ್ಪ ಸಮಯದ ನಂತರ, ನೀರು ಬೆಚ್ಚಗಾಗುತ್ತಿದೆಯೇ ಎಂದು ನೋಡಲು ಅವರು ಹೀಟರ್ ಅನ್ನು ಹೊರತೆಗೆಯಲು ಪ್ರಯತ್ನಿಸಿದರು. ಈ ವೇಳೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಣಸುವಾಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಸೈಲು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಪುತ್ರ ಸತೀಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read More

ಕೊಲ್ಲಂ: ಅಡುಗೆ ಅನಿಲ ಸಿಲಿಂಡರ್ ಆನ್ ಮಾಡಿ ಲೈಟರ್ ಒತ್ತಿ ಮಹಿಳೆಯೊಬ್ಬರು ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ. ಎನ್.ರತ್ನಮ್ಮ (74) ಮೃತ ದುರ್ದೈವಿ. ಅವರು ಮಯನಾಡಿನ ಪಲ್ಲಿಪುರಜಿಕಂ ನಿವಾಸದಲ್ಲಿ ನಿಧನರಾದರು. ಸೆ. 16ರಂದು ಬೆಳಗಿನ ಜಾವ 4.30ಕ್ಕೆ ಅಪಘಾತ ಸಂಭವಿಸಿದೆ. ರತ್ನಮ್ಮ ಬೆಳಗ್ಗೆ ಚಹಾ ಮಾಡಲು ಅಡುಗೆ ಮನೆ ಬಾಗಿಲು ತೆರೆದು ಗ್ಯಾಸ್ ಆನ್ ಮಾಡಿ ಲೈಟರ್ ಒತ್ತಿದಾಗಲೇ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ದೇಹದಾದ್ಯಂತ ವ್ಯಾಪಿಸಿತು. ರತ್ನಮ್ಮ ಕಿರುಚುತ್ತಾ ಸಭಾಂಗಣಕ್ಕೆ ಓಡಿ ಅಲ್ಲೇ ಕುಸಿದು ಬಿದ್ದರು. ಕಿರುಚಾಟ ಕೇಳಿ ಪಕ್ಕದ ಕೋಣೆಯಲ್ಲಿ ಮಲಗಿದ್ದ ಸೊಸೆ ಚಿತ್ರಾ ಗಾಬರಿಗೊಂಡು ಸಭಾಂಗಣಕ್ಕೆ ಬಂದು ರತ್ನಮ್ಮ ಅವರ ಮೈಮೇಲೆ ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಅದು ಸಹಾಯ ಮಾಡಲಿಲ್ಲ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೊಮ್ಮಕ್ಕಳು ಚಿತ್ರಾ ಜೊತೆ ಬ್ಯಾಗ್ ಒದ್ದೆ ಮಾಡಿ ಬೆಂಕಿ ನಂದಿಸಿದರು. ರತ್ನಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸಮೀಪದ ಖಾಸಗಿ…

Read More

ನವದೆಹಲಿ : ಹಾಲು ಕ್ಯಾಲ್ಸಿಯಂನ ಪವರ್‌ಹೌಸ್ ಆಗಿದ್ದು, ಅದನ್ನು ಕುಡಿದು ಬೆಳೆದವರು ಅದರ ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ದೃಢೀಕರಿಸಬಹುದು, ವಿಶೇಷವಾಗಿ ಮೂಳೆಗಳು ಮತ್ತು ಕೀಲುಗಳಿಗೆ. ಇದು ನಿಮ್ಮ ದೇಹವು ಸ್ವಂತವಾಗಿ ಮಾಡಲು ಸಾಧ್ಯವಾಗದ ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಪ್ರೋಟೀನ್‌ನ ಶಕ್ತಿ ಕೇಂದ್ರವಾಗಿದೆ. ಮತ್ತು ಇತ್ತೀಚಿನ ದಿನಗಳಲ್ಲಿ ತಾಜಾ ಹಾಲು ಪಡೆಯುವುದು ಸುಲಭವಲ್ಲದ ಕಾರಣ, ಹೆಚ್ಚಿನ ಮನೆಗಳು ದೈನಂದಿನ ಅಗತ್ಯಗಳಿಗಾಗಿ ಪ್ಯಾಕೇಜ್ ಮಾಡಿದ ಹಾಲನ್ನು ಅವಲಂಬಿಸಿವೆ. ಅದು ಟೆಟ್ರಾ ಪ್ಯಾಕ್ ಅಥವಾ ಪ್ಯಾಕೆಟ್ ಆಗಿರಲಿ, ಅನೇಕರು ಆ ಹಾಲನ್ನೂ ಕುದಿಸುತ್ತಾರೆ. ಆದಾಗ್ಯೂ, ತಜ್ಞರ ಪ್ರಕಾರ, ನೀವು ಅದನ್ನು ಕುದಿಸಬಾರದು. ಪ್ಯಾಕ್ ಮಾಡಿದ ಹಾಲನ್ನು ಏಕೆ ಕುದಿಸಬಾರದು? ಪ್ಯಾಕ್ ಮಾಡಲಾದ ಹಾಲು ಪಾಶ್ಚರೀಕರಣಕ್ಕೆ ಒಳಗಾಗುತ್ತದೆ – ಇದು ತಿನ್ನಲು ಸುರಕ್ಷಿತವಾಗಿಸಲು ಮತ್ತು ಅದರ ಶೆಲ್ಫ್ ಜೀವಿತಾವಧಿಯನ್ನು ವಿಸ್ತರಿಸಲು ಆಹಾರದಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಾಖ ಚಿಕಿತ್ಸೆ ಪ್ರಕ್ರಿಯೆ. ತಜ್ಞರ ಪ್ರಕಾರ, ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ…

Read More

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಶಾಸಕ ಮುನಿರತ್ನಗೆ ಕೋರ್ಟ್ ಶಾಕ್ ನೀಡಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 23 ಕ್ಕೆ ಮುಂದೂಡಿದೆ. ಶಾಸಕ ಮುನಿರತ್ನ ಅವರು ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಅರ್ಜಿ ವಿಚಾರಣೆ ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 23 ಕ್ಕೆ ಮುಂದೂಡಿದೆ. ಈ ಮೂಲಕ ಶಾಸಕ ಮುನಿರತ್ನಗೆ ಜೈಲೇ ಗತಿ ಆಗಿದೆ. 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೋಲೀಸರು ಬಿಜೆಪಿ ಶಾಸಕ ಮುನಿರತ್ನ ಅವರನ್ನು ಮತ್ತೆ ಬಂಧಿಸಿದ್ದಾರೆ.

Read More

ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ನಿನ್ನೆ ಜಾಮೀನು ಪಡೆದು ಹೊರಬಂದಿದ್ದ ಆರ್​ಆರ್​ ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಇದೀಗ ಅತ್ಯಾಚಾರ ಪ್ರಕರಣದಲ್ಲಿ ರಾಮನಗರದ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಮನಗರದ ರೆಸಾರ್ಟ್ ವೊಂದಕ್ಕೆ ದೂರುದಾರ ಮಹಿಳೆಯನ್ನು ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದಾರೆ.

Read More