Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪ ನಡೆದ ಕಾಲ್ತುಳಿತ ಪ್ರಕರಣವನ್ನು ರಾಜ್ಯ ಸರಕಾರವು ಸಿಐಡಿ ತನಿಖೆಗೆ ಒಳಪಡಿಸಿದೆ. ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಸಿಬಿಯ ಸಂಭ್ರಮಾಚರಣೆಯ ವೇಳೆ 11 ಮಂದಿ ಸಾವಿಗೀಡಾಗಿರುವ ಪ್ರಕರಣದ ಬಗ್ಗೆ ತೆಗೆದುಕೊಂಡ ನಿರ್ಧಾರಗಳನ್ನು ತಿಳಿಸಿದರು. ಎರಡು ಎಫ್ಐಆರ್ಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಮತ್ತೊಂದು ಕಡೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಲಾಗಿದೆ. ಕೆಎಸ್ಸಿಎ, ಆರ್ಸಿಬಿ, ಡಿಎನ್ಎ ಎಂಟರ್ಟೈನ್ಮೆಂಟ್ನ ಮ್ಯಾನೇಜ್ಮೆಂಟ್ ವಿರುದ್ಧ ಎಫ್ಐಆರ್ ದಾಖಲಿದ್ದು, ಅವರ ಪ್ರತಿನಿಧಿಗಳನ್ನು ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರ್ ಸಿ ಬಿ ಮಾನ್ಯೇಜ್ ಮೆಂಟ್ ನ ನಾಲ್ವರು ಆಯೋಜಕರನ್ನು ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರ್ ಸಿಬಿ…
ನವದೆಹಲಿ :: ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಹಣದುಬ್ಬರವನ್ನು ಸಮತೋಲನದಲ್ಲಿಡುವ ಪ್ರಯತ್ನದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿ ಸಮಿತಿಯ (MPC) ಪ್ರಮುಖ ಸಭೆಯಲ್ಲಿ ಮತ್ತೊಮ್ಮೆ ಬಡ್ಡಿದರಗಳ ಕುರಿತು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಜೂನ್ 6, 2025 ರಂದು ಕೊನೆಗೊಂಡ ಮೂರು ದಿನಗಳ ಸಭೆಯ ನಂತರ, RBI ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೊ ದರದ ಕುರಿತು ಇತ್ತೀಚಿನ ಘೋಷಣೆಯನ್ನು ಮಾಡಿದರು. https://twitter.com/ANI/status/1930846601318109253?ref_src=twsrc%5Egoogle%7Ctwcamp%5Eserp%7Ctwgr%5Etweet https://twitter.com/ANI/status/1930847824490770799?ref_src=twsrc%5Egoogle%7Ctwcamp%5Eserp%7Ctwgr%5Etweet ನಿರ್ಧಾರವೇನು? RBI ಸತತ ಮೂರನೇ ಬಾರಿಗೆ ಬಡ್ಡಿದರಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಈ ಬಾರಿಯೂ ಸಹ, ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು (bps) ಕಡಿಮೆ ಮಾಡಲಾಗಿದೆ. ಈಗ ರೆಪೊ ದರವು 5.50% ಕ್ಕೆ ಇಳಿದಿದೆ, ಅದು ಮೊದಲು 6.00% ಆಗಿತ್ತು. ಈ ಕ್ರಮವು ಸಾಲ ತೆಗೆದುಕೊಳ್ಳುವ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ – ವಿಶೇಷವಾಗಿ ಗೃಹ ಸಾಲಗಳು, ವಾಹನ ಸಾಲಗಳು ಮತ್ತು ವೈಯಕ್ತಿಕ ಸಾಲಗಳ EMI ಕಡಿಮೆಯಾಗುವ ಸಾಧ್ಯತೆಯಿದೆ. ಕೊನೆಯ ಎರಡು ಕಡಿತಗಳು…
ನವದೆಹಲಿ : ಸಾಲಗಾರರಿಗೆ ಆರ್ ಬಿಐ ಸಿಹಿಸುದ್ದಿ ನೀಡಿದ್ದು, ಸತತ ಮೂರನೇ ಬಾರಿಗೆ ಆರ್ಬಿಐ ಪ್ರಮುಖ ಸಾಲ ದರವನ್ನು ಕಡಿತಗೊಳಿಸಿದ್ದು, ಶೇ. 5.5 ಕ್ಕೆ ಇಳಿಸಿದೆ. ಎಂಪಿಸಿ (ಹಣಕಾಸು ನೀತಿ ಸಮಿತಿ) ರೆಪೊ ದರವನ್ನು 50 ಬೇಸಿಸ್ ಪೌಂಡ್ಗಳಿಂದ 5.5% ಕ್ಕೆ ಇಳಿಸಲು ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. MPC ಸಭೆಯ ಫಲಿತಾಂಶಗಳನ್ನು ತಿಳಿಸಿದ RBI ಗವರ್ನರ್ ಸಂಜಯ್ ಮಲ್ಹೋತ್ರಾ, ಸತತ ಮೂರನೇ ಬಾರಿಗೆ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ 5.5% ಕ್ಕೆ ಇಳಿಸುವುದಾಗಿ ಘೋಷಿಸಿದರು. https://twitter.com/ANI/status/1930846601318109253?ref_src=twsrc%5Egoogle%7Ctwcamp%5Eserp%7Ctwgr%5Etweet https://twitter.com/ANI/status/1930847824490770799?ref_src=twsrc%5Egoogle%7Ctwcamp%5Eserp%7Ctwgr%5Etweet
ಚೆನ್ನೈ : ಮಲಯಾಳಂ ನಟ ಶೈನ್ ಟಾಮ್ ಚಾಕೊ ಮತ್ತು ಅವರ ಕುಟುಂಬ ಶುಕ್ರವಾರ ಬೆಳಿಗ್ಗೆ ತಮಿಳುನಾಡು ಬಳಿ ಕಾರು ಅಪಘಾತಕ್ಕೀಡಾಗಿದೆ. ಅವರ ತಂದೆ ಸಿಪಿ ಚಾಕೊ ಸ್ಥಳದಲ್ಲೇ ಸಾವನ್ನಪ್ಪಿದರೆ, ನಟ ಮತ್ತು ಅವರ ತಾಯಿಗೆ ತೀವ್ರ ಗಾಯಗಳಾಗಿವೆ. ಅಪಘಾತದ ಸಮಯದಲ್ಲಿ, ಶೈನ್ ಅವರ ತಾಯಿ, ಸಹೋದರ, ತಂದೆ ಮತ್ತು ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದರು.ಸೈನ್ ಮತ್ತು ಅವರ ತಾಯಿಯನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಅವರ ಸಹೋದರ ಮತ್ತು ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ.
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿ ನಾಲ್ವರು ಆಯೋಜಕರು ಅರೆಸ್ಟ್ ಆಗುತ್ತಿದಂತೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಮುಖ್ಯಸ್ಥ ನಾಪತ್ತೆಯಾಗಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್ ಎ ಮಾಲೀಕ ವೆಂಕಟ್ ವರ್ಧನ್ ನಾಪತ್ತೆಯಾಗಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರ್ ಸಿ ಬಿ ಮಾನ್ಯೇಜ್ ಮೆಂಟ್ ನ ಮೂವರು ಆಯೋಜಕರನ್ನು ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರ್ ಸಿಬಿ ಮ್ಯಾನೇಜ್ಮೆಂಟ್ ಸಿಬ್ಬಂದಿ ನಿಖಲ್ ಸೋಸಲೆ, DNA ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ , ಕಿರಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ ಸಿಬಿ,ಡಿಎನ್ ಎ,ಕೆಎಸ್ ಸಿಎ ಪ್ರತಿನಿಧಿಸುವವರನ್ನ ಅರೆಸ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಮೂರು ಸಂಸ್ಥೆಗಳ ಪ್ರತಿನಿಧಿಸುವ ವ್ಯಕ್ತಿಗಳ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಇವರ ಮೇಲೆ ಎಫ್ ಐಆರ್ ರಿಜಿಸ್ಟರ್…
ನವದೆಹಲಿ : ಪ್ರಸ್ತುತ, ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದು, 10 ರೂ. ಚಹಾ ಕುಡಿದ್ರೂ ಫೋನ್ ಪೇ ಮತ್ತು ಗೂಗಲ್ ಪೇ ಮಾಡುತ್ತಿದ್ದಾರೆ. ಅನೇಕ ಜನರು ತಮ್ಮ ಜೇಬಿನಲ್ಲಿ ಹಣವನ್ನ ಇಟ್ಟುಕೊಳ್ಳುವುದನ್ನ ಮರೆತಿದ್ದಾರೆ. ನಿಮ್ಮ ಫೋನ್’ನಲ್ಲಿ ಹಣವಿದ್ದರೆ, ನೀವು ಎಲ್ಲಿಗೆ ಹೋದರೂ.? ಅವರು ಅದನ್ನ ಯಾವುದಕ್ಕೂ ಸ್ಕ್ಯಾನ್ ಮಾಡುತ್ತಾರೆ ಎಂದು ಹೇಳುತ್ತಾರೆ. ಆದಾಗ್ಯೂ, ಡಿಜಿಟಲ್ ಹೆಚ್ಚು ಅವಲಂಬಿಸುವುದು ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣವಾಗಬಹುದು. ತುರ್ತು ಸಮಯದಲ್ಲಿ, ಫೋನ್ ಚಾರ್ಜಿಂಗ್ ಖಾಲಿಯಾಗುವುದು, ಡಿಜಿಟಲ್ ಪಾವತಿಗಳನ್ನು ಸ್ವೀಕರಿಸದಿರುವುದು, ಫೋನ್ನಲ್ಲಿ ಡೇಟಾ ಖಾಲಿಯಾಗುವುದು ಮತ್ತು ಕೆಲವೊಮ್ಮೆ ಬ್ಯಾಂಕ್ ಸರ್ವರ್’ಗಳು ಡೌನ್ ಆಗುವಂತಹ ಘಟನೆಗಳು ಸಂಭವಿಸುತ್ತವೆ. ಇಂತಹ ಸಮಯದಲ್ಲಿ, ಡಿಜಿಟಲ್ ಪಾವತಿಗಳನ್ನ ಹೆಚ್ಚು ಅವಲಂಬಿಸಿರುವವರು ಬಹಳ ತೊಂದರೆಯಲ್ಲಿದ್ದಾರೆ. ಇವೆಲ್ಲವೂ ತಿಳಿಯದೆ ಬರುವ ಸಂದರ್ಭಗಳು. ಆದರೆ, ಈಗ ಬ್ಯಾಂಕ್ ನಿಮಗೆ ಮುಂಚಿತವಾಗಿ ಎಚ್ಚರಿಕೆ ನೀಡಿದೆ. ಈ ತಿಂಗಳ 8ನೇ ತಾರೀಖಿನಂದು ಬೆಳಿಗ್ಗೆ 2.30 ರಿಂದ ಬೆಳಿಗ್ಗೆ 6.30 ರವರೆಗೆ ತನ್ನ UPI ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ. HDFC ಬ್ಯಾಂಕ್ ಈ…
ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿ `ರೇಷನ್ ಕಾರ್ಡ್’ ಇದ್ರೆ `ಉಚಿತ ಹೊಲಿಗೆ ಯಂತ್ರ’ ಸೇರಿ ಸಿಗಲಿವೆ ಈ 8 ಸೌಲಭ್ಯಗಳು.!
ಬೆಂಗಳೂರು : ಭಾರತ ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತದೆ, ಪ್ರಮುಖ ಯೋಜನೆಗಳಲ್ಲಿ ಒಂದು ರೇಷನ್ ಕಾರ್ಡ್. ಇಂದಿಗೂ ಸಹ ಸರಿಯಾದ ಚಿಕಿತ್ಸೆ ಅಥವಾ ಆಹಾರ ವ್ಯವಸ್ಥೆ ಮಾಡಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಈ ನಿರ್ಗತಿಕರಿಗೆ, ಭಾರತ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತ ಪಡಿತರವನ್ನು ಒದಗಿಸುತ್ತದೆ. ಇದಲ್ಲದೇ ಹಲವರಿಗೆ ಅತ್ಯಂತ ಕಡಿಮೆ ದರದಲ್ಲಿ ಪಡಿತರವನ್ನೂ ನೀಡಲಾಗುತ್ತದೆ. ಪಡಿತರ ಚೀಟಿಯ ಪ್ರಯೋಜನಗಳು ಪಡಿತರ ಚೀಟಿಯು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಪಡಿತರವನ್ನು ಪಡೆಯುವ ಮಾಧ್ಯಮ ಮಾತ್ರವಲ್ಲ, ಅದರ ಮೂಲಕ ಹಲವಾರು ಸೌಲಭ್ಯಗಳನ್ನು ಸಹ ಪಡೆಯಬಹುದು. ಪಡಿತರ ಚೀಟಿದಾರರು ಈ ಕೆಳಗಿನ 8 ಪ್ರಯೋಜನಗಳನ್ನು ಪಡೆಯುತ್ತಾರೆ: ಉಚಿತ ಪಡಿತರ: ನಿರ್ಗತಿಕರಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳ ಉಚಿತ ವಿತರಣೆ. ಕೈಗೆಟುಕುವ ದರದಲ್ಲಿ ಪಡಿತರ: ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿಪಡಿಸಿದ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳು ಸಿಗುತ್ತವೆ. ಸರ್ಕಾರದ ಯೋಜನೆಗಳಲ್ಲಿ ಭಾಗಿ: ಪಡಿತರ ಚೀಟಿ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬಹುದು.…
ಹಾಸನ: ಹಾಸನದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕಲ್ಲು ಗಣಿಗಾರಿಕೆ ವೇಳೆ ದೊಡ್ಡ ಬಂಡೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಕಾರ್ಮಿಕರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಾಸನ ತಾಲೂಕಿನ ದೂಮಗೆರೆ ಗ್ರಾಮದ ಕಲ್ಲುಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಕೂಲಿ ಕಾರ್ಮಿಕರು ಹಾಸನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಮಿಕರು ಚಾಮರಾಜನಗರ ಮೂಲದವರಾಗಿದ್ದಾರೆ. ಹಾಸನದ ಬಂಡೆ ದೇವರಾಜ್ ಗೆ ಸೇರಿದ ಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ. ಶಾಂತಿ ಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು : ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ನಾಲ್ವರು ಆಯೋಜನರನ್ನು ಬಂಧಿಸಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆರ್ ಸಿ ಬಿ ಮಾನ್ಯೇಜ್ ಮೆಂಟ್ ನ ಮೂವರು ಆಯೋಜಕರನ್ನು ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರ್ ಸಿಬಿ ಮ್ಯಾನೇಜ್ಮೆಂಟ್ ಸಿಬ್ಬಂದಿ ನಿಖಲ್ ಸೋಸಲೆ, DNA ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ , ಕಿರಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ ಸಿಬಿ,ಡಿಎನ್ ಎ,ಕೆಎಸ್ ಸಿಎ ಪ್ರತಿನಿಧಿಸುವವರನ್ನ ಅರೆಸ್ಟ್ ಮಾಡಲು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಮೂರು ಸಂಸ್ಥೆಗಳ ಪ್ರತಿನಿಧಿಸುವ ವ್ಯಕ್ತಿಗಳ ಬಂಧಿಸುವಂತೆ ಸೂಚನೆ ನೀಡಿದ್ದಾರೆ. ಇವರ ಮೇಲೆ ಎಫ್ ಐಆರ್ ರಿಜಿಸ್ಟರ್ ಆಗಿದೆ.
ವಿಯೆಟ್ನಾಂ : ವಿಯೆಟ್ನಾಂನಲ್ಲಿ ನಡೆದ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಭೀಕರ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬುಧವಾರ (ಜೂನ್ 04) ರಂದು ಅತಿ ವೇಗದ ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತಕ್ಕೀಡಾದ ನಂತರ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವೀಡಿಯೊ ತೋರಿಸುತ್ತದೆ. ವಿದ್ಯಾರ್ಥಿಯನ್ನು ಅರ್ಷಿದ್ ಆಶ್ರಿತ್ (21) ಎಂದು ಗುರುತಿಸಲಾಗಿದೆ, ಈತ ಕಾಗಜ್ನಗರ ಪಟ್ಟಣದ ಮಾರುಕಟ್ಟೆ ಪ್ರದೇಶದ ಅರ್ಷಿದ್ ಅರ್ಜುನ್ ಎಂಬ ಉದ್ಯಮಿಯ ಮಗ. ಆಶ್ರಿತ್ ವಿಯೆಟ್ನಾಂನ ಕ್ಯಾನ್ ಥೋ ಸಿಟಿಯಲ್ಲಿ ಎಂಬಿಬಿಎಸ್ ಓದುತ್ತಿದ್ದ. ಅವರು ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದರು. ವರದಿಗಳ ಪ್ರಕಾರ, ಬುಧವಾರ ಸಂಜೆ ಆಶ್ರಿತ್ ತನ್ನ ಸ್ನೇಹಿತನೊಂದಿಗೆ 150CC ಬೈಕ್ನಲ್ಲಿ ಅತಿ ವೇಗದಲ್ಲಿ ಸವಾರಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಳೆಯಿಂದಾಗಿ ರಸ್ತೆ ಒದ್ದೆಯಾಗಿತ್ತು ಮತ್ತು ಜಾರು ರಸ್ತೆಯಲ್ಲಿ ಅವರು ಅತಿ…