Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ನಾಳೆ ಐತಿಹಾಸಿಕ ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ನಂದಿಗಿರಿಧಾಮ ಪ್ರವೇಶ ಬಂದ್ ಮಾಡಲಾಗಿದೆ. ನಾಳೆ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮುಂಜಾಗ್ರತಾ ಕರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ.
ರಾಮನಗರ : ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಶಬರಿಮಲೆ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ ಬರುವಾಗ ಹೃದಯಾಘಾತದಿಂದ 18 ವರ್ಷದ ಅಯ್ಯಪ್ಪನ ಭಕ್ತನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿ ಪ್ರಜ್ವಲ್ (18) ಮೃತ ಯುವಕ. ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ವಾಸವಾಗಿದ್ದರು. ಕಳೆದ 3 ದಿನಗಳ ಹಿಂದೆ ತಂದೆ ಹಾಗೂ ಸ್ನೇಹಿತರ ಜೊತೆ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮುಗಿಸಿ, ಬೆಟ್ಟ ಇಳಿಯುವಾಗ ಪ್ರಜ್ವಲ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ : ಬೆಳಗಾವಿ ತಾಲ್ಲೂಕಿನ ಅಂಬೇವಾಡಿ ಗ್ರಾಮದಲ್ಲಿ ರೈತ ಯಲ್ಲಪ್ಪದ ಗುರವ್ ಕೃಷಿ ಕೆಲಸದಲ್ಲಿ ತೊಡಗಿದ್ದಾಗ, ಎಡಗೈ ಹೆಬ್ಬೆರಳಿಗೆ ಹಾವಿನ ಮರಿ ಕಚ್ಚಿದ್ದು, ಕೂಡಲೇ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ಹಾವು ಹಾಕಿಕೊಂಡು, ಅದರ ಸಮೇತ ಜಿಲ್ಲಾಸ್ಪತ್ರೆಗೆ ಬಂದ ದಾಖಲಾಗಿರುವ ಘಟನೆ ನಡೆದಿದೆ. ಹೌದು, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ರೈತನಿಗೆ ಹಾವು ಕಚ್ಚಿದ್ದು, ಹಾವಿನ ಸಮೇತವೇ ರೈತ ಆಸ್ಪತ್ರೆಗೆ ಬಂದು ದಾಖಲಾದ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಗುರವ ಅವರಿಗೆ ಹಾವು ಕಚ್ಚಿದೆ. ಬಳಿಕ ಕಚ್ಚಿದ ಹಾವಿನ ಸಮೇತ ರೈತ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರಿಗೆ ಹಾವನ್ನು ತೋರಿಸಿ, ಇದೇ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ತಿಳಿಸಿದ್ದಾನೆ. ಕೊಳಕು ಮಂಡಲ ಹಾವು ಕಡಿದ ಹಿನ್ನೆಲೆಯಲ್ಲಿ ಸ್ಥಿತಿ ಗಂಭೀರವಾಗಿದ್ದು, ತುರ್ತು ಘಟಕದಲ್ಲಿ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯುವಜನರಲ್ಲಿ ಹೊಸ ಗಡ್ಡ ಶೈಲಿಗಳು ಜನಪ್ರಿಯವಾಗುತ್ತಿವೆ. ಅನೇಕ ಜನರು ಫ್ರೆಂಚ್ ಗಡ್ಡದ ನೋಟವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದರೆ, ಅನೇಕ ಜನರು ಉದ್ದನೆಯ ಗಡ್ಡವನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಿದ್ದಾರೆ. ಆದರೆ ಅನೇಕ ಜನರು ಕ್ಲೀನ್ ಶೇವ್ ಮಾಡಿಕೊಂಡು ಪ್ರತಿದಿನ ಶೇವ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಜನರು ತಮ್ಮ ಆಯ್ಕೆಯ ಪ್ರಕಾರ ಹೇಗೆ ಕ್ಷೌರ ಮಾಡಿಕೊಳ್ಳಬೇಕು ಮತ್ತು ಹೇಗೆ ಸ್ಟೈಲ್ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆ, ಆದರೆ ಅದು ಆರೋಗ್ಯಕ್ಕೂ ನೇರ ಸಂಬಂಧ ಹೊಂದಿದೆ. ಅನೇಕ ಜನರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ ಮತ್ತು ಪ್ರತಿದಿನ ಗಡ್ಡವನ್ನು ಬೋಳಿಸಿಕೊಳ್ಳುವುದು ಅವರಿಗೆ ಹಾನಿಕಾರಕವಾಗಿದೆ. ಒಂದು ತಿಂಗಳಲ್ಲಿ ಜನರು ಎಷ್ಟು ಬಾರಿ ಗಡ್ಡ ಶೇವ್ ಮಾಡಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ ಶೇವ್ ಮಾಡುವುದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಕಾನ್ಪುರದ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ಚರ್ಮರೋಗ ತಜ್ಞ ಡಾ. ಯುಗಲ್ ರಜಪೂತ್ ತಿಳಿಸಿದ್ದಾರೆ . ಆದರೆ, ಗಡ್ಡ ಉದ್ದವಾಗಿದ್ದರೆ, ಅದನ್ನು ಪ್ರತಿದಿನ ಚೆನ್ನಾಗಿ ತೊಳೆಯುವುದು ಮುಖ್ಯ. ದಿನದ ಗದ್ದಲದಿಂದಾಗಿ,…
ಬೆಂಗಳೂರು : ರಾಜ್ಯದ ಪರೀಕ್ಷಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕೆಇಎ ನಡೆಸುವ ಪರೀಕ್ಷೆಗಳ ಸಮಯದಲ್ಲಿ ವಸ್ತ್ರಸಂಹಿತೆ ವಿಚಾರದಲ್ಲಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಏಕರೂಪ ವಸ್ತ್ರಸಂಹಿತೆ ಸಿದ್ದಪಡಿಸಿದೆ. ಹೌದು, ರಾಜ್ಯದಲ್ಲಿ ಸಿಇಟಿ ಸೇರಿದಂತೆ ಕೆಇಎ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಮಂಗಳಸೂತ್ರ, ಕಾಲುಂಗುರ ಧರಿಸಲು ಅನುಮತಿ ನೀಡಿದೆ. ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್, ಕಾಲರ್ ಇಲ್ಲದ ಶರ್ಟ್ ಧರಿಸಬೇಕು. ಆದರೆ ಜಿಪ್ ಪ್ಯಾಕೇಟ್, ದೊಡ್ಡ ಬಟನ್ ಇರಬಾರದು. ಪೂರ್ಣ ತೋಳಿನ ಶರ್ಟ್, ಕುರ್ತಾ, ಜೀನ್ಸ್ ಪ್ಯಾಂಟ್‌ಗೆ ಅವಕಾಶ ಇಲ್ಲ. ಶೂ ನಿಷೇಧ. ಚಪ್ಪಲಿಗೆ ಮಾತ್ರ ಅವಕಾಶ. ಲೋಹದ ಸರ, ಕಿವಿಯೋಲೆಗಳು, ಉಂಗುರ, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮಾಂಗಳ ಸೂತ್ರ, ಕಾಲುಂಗರ ಬಿಟ್ಟು ಇತರೆ ಆಭರಣ ನಿಷೇಧಿಸಲಾಗಿದೆ. ವಿಸ್ತಾರವಾದ ವಿನ್ಯಾಸ ಹೊಂದಿರುವ ಬಟ್ಟೆಗೆ ನಿಷೇಧ. ಪೂರ್ಣ ತೋಳಿನ ಬಟ್ಟೆ/ಜೀನ್ಸ್ ಪ್ಯಾಂಟ್ ನಿಷೇಧ. ತೆಳು ಚಪ್ಪಲಿ ಕಡ್ಡಾಯ ಎಂದು ಕೆಇಎ ತಿಳಿಸಿದೆ.
ನವದೆಹಲಿ : ರೈಲಿನಲ್ಲಿ ಪ್ರಯಾಣಿಸುವವರಿಗೆ ಒಂದು ಪ್ರಮುಖ ಬದಲಾವಣೆ ಬರಲಿದೆ. IRCTC (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಹೊಸ ನೀತಿಯನ್ನು ಪ್ರಕಟಿಸಿದೆ, ಅದರ ಅಡಿಯಲ್ಲಿ ಜುಲೈ 1, 2025 ರಿಂದ, ತಮ್ಮ IRCTC ಖಾತೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡಿ ಪರಿಶೀಲಿಸಿರುವ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್ಗಳು ಲಭ್ಯವಿರುತ್ತವೆ. ಬಾಟ್ಗಳು ಮತ್ತು ನಕಲಿ ಬುಕಿಂಗ್ಗಳನ್ನು ತಡೆಗಟ್ಟಲು ಮತ್ತು ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಗುರುತಿನ ಪರಿಶೀಲನೆಯು ಟಿಕೆಟ್ಗಳ ಕಪ್ಪು ಮಾರುಕಟ್ಟೆಯನ್ನು ತಡೆಯುತ್ತದೆ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ಗಳನ್ನು ಪಡೆಯುವುದು ಸುಲಭವಾಗುತ್ತದೆ ಎಂದು IRCTC ನಂಬುತ್ತದೆ. ನೀವು ಇಲ್ಲಿಯವರೆಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಸಾಧ್ಯವಾದಷ್ಟು ಬೇಗ ಈ ಕೆಲಸವನ್ನು ಮಾಡಿ, ಇಲ್ಲದಿದ್ದರೆ ಜುಲೈ 1 ರ ನಂತರ ನೀವು ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಅಸಾಧ್ಯವಾಗಬಹುದು. IRCTC ಯೊಂದಿಗೆ ಆಧಾರ್ ಲಿಂಕ್ ಮಾಡುವುದು ತುಂಬಾ ಸುಲಭ ನಿಮ್ಮ IRCTC ಖಾತೆಯನ್ನು ಆಧಾರ್ನೊಂದಿಗೆ…
ವಿಶ್ವದಲ್ಲಿ 30 ರಿಂದ 70 ವಯಸ್ಸಿನ 1.28 ಬಿಲಿಯನ್ ಜನರು ಹೈಪರ್ ಟೆನ್ಷನ್ ಗೆ ಒಳಗಾಗಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಮೂವರಲ್ಲಿ ಒಬ್ಬರು ಹೈಪರ್ ಟೆನ್ಷನ್ ( ರಕ್ತದ ಒತ್ತಡ) ದಿಂದ ಬಳಲುತ್ತಿದ್ದಾರೆ. ಶೇ. 46 ರಷ್ಟು ಮಂದಿ ತಾವು ಹೈಪರ್ ಟೆನ್ಷನ್ ನಿಂದ ಬಳಲುತ್ತಿರುವ ಮಾಹಿತಿಯೇ ಗೊತ್ತಿಲ್ಲ. ಶೇ. 42 ರಷ್ಟು ಮಂದಿಗೆ ಮಾತ್ರ ಚಿಕಿತ್ಸೆ ಪಡೆದು ಗುಣಮುಖರಾಗಲು ಅವಕಾಶವಿದೆ. ಶೇ. 46 ರಷ್ಟಿರುವ ಹೈಪರ್ ಟೆನ್ಷನ್ ಪ್ರಮಾಣವನ್ನು 2030 ರ ಒಳಗೆ ಶೇ. 33 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವ ಹೈಪರ್ ಟೆನ್ಷನ್ ಲೀಗ್ ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸುತ್ತಿವೆ. ಕರ್ನಾಟಕದಲ್ಲಿ ಹೈಪರ್ ಟೆನ್ಷನ್: ಭಾರತದಲ್ಲಿ ಒಟ್ಟಾರೆ ಜನಸಂಖ್ಯೆ ಪೈಕಿ ಪುರುಷರಲ್ಲಿ ಶೇ. 26.96, ಮಹಿಳೆಯರಲ್ಲಿ ಶೇ. 25 ರಷ್ಟು ಮಂದಿ ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಮಂದಿ ರಕ್ತದ ಒತ್ತಡದಿಂದ ಬಳಲುತ್ತಿದ್ದು,…
ಬೆಂಗಳೂರು: ಭಾರತೀಯ ಸೇನೆಗೆ ಅಗ್ನಿವೀರರ ನೇಮಕಾತಿಗೆ ಕರ್ನಾಟಕದಿಂದ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಇದೇ ಜೂನ್ 30ರಿಂದ ಜುಲೈ 10ರವರೆಗೆ ಈ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಭ್ಯರ್ಥಿಗಳು ಈಗಾಗಲೇ ಭಾರತೀಯ ಸೇನೆಯ ಅಧಿಕೃತ ವೆಬ್ ಪೋರ್ಟಲ್ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಆಧರಿಸಿ ಕ್ರಮವಾಗಿ www. joinindianarmy.nic.in ವೆಬ್ ಸೈಟ್ ನಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು. ಮೂಲ ಪ್ರವೇಶ ಪತ್ರವನ್ನು ಕೊಂಡೊಯ್ಯುವುದು ಅವಶ್ಯ. ಆಧಾರ್ ಕಾರ್ಡ್ ಮೂಲ ಪ್ರತಿಯನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಕಡ್ಡಾಯ. ಸಾಮಾನ್ಯ ಪರೀಕ್ಷೆ ಮೂಲಕ ನೇಮಕಾತಿ ಮಾಡಲಾಗುತ್ತಿದ್ದು,ಸಾಮಾನ್ಯ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಗಣಿತ ಮತ್ತು ಲಾಜಿಕಲ್ ರಿಸನಿಂಗ್ ಕುರಿತು ಪ್ರಶ್ನೆಗಳಿರಲಿವೆ. ಜೊತೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆ. ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ನಡೆಯಲಿದೆ.
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೀವು ಬೈಕು, ಕಾರು ಅಥವಾ ಯಾವುದೇ ಇತರ ನಾಲ್ಕು ಅಥವಾ ತ್ರಿಚಕ್ರ ವಾಹನಗಳನ್ನ ಖರೀದಿಸಿದರೂ, ನಿಮಗೆ ನೋಂದಣಿ ಪ್ರಮಾಣಪತ್ರ ಅಥವಾ ಆರ್‌ಸಿ ನೀಡಲಾಗುತ್ತದೆ. ನೀವು ವಾಹನದ ಮಾಲೀಕರು ಎಂಬುದಕ್ಕೆ ಆರ್‌ಸಿ ಅಧಿಕೃತ ಪುರಾವೆಯಾಗಿದೆ. ನೀವು ವಾಹನ ಚಾಲನೆ ಮಾಡುವಾಗ ಅಥವಾ ರಸ್ತೆಯಲ್ಲಿ ಪ್ರಯಾಣಿಸುವಾಗ ಆರ್‌ಸಿ ಕೊಂಡೊಯ್ಯುವುದು ಬಹಳ ಮುಖ್ಯ. ಸಂಚಾರಿ ಪೊಲೀಸರು ನಿಮ್ಮನ್ನು ತಡೆದರೆ, ಅವರು ಮೊದಲು ಕೇಳುವುದು ಎರಡೇ ಎರಡು. ಚಾಲನಾ ಪರವಾನಗಿ, ಆರ್‌ಸಿ. ಆದ್ರೆ, ನಿಮ್ಮ ಆರ್‌ಸಿ ಕಳೆದುಹೋದ್ರೆ ನೀವು ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಆರ್‌ಸಿಯನ್ನ ಆನ್‌ಲೈನ್’ನಲ್ಲಿ ಡೌನ್‌ಲೋಡ್ ಮಾಡಬಹುದು. ಇದನ್ನು ವಾಹನ ಪೋರ್ಟಲ್ ಮೂಲಕ ಬಹಳ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಆನ್‌ಲೈನ್‌ನಲ್ಲಿ ಆರ್‌ಸಿ ಡೌನ್‌ಲೋಡ್ ಮಾಡುವ ಪ್ರಕ್ರಿಯೆ.! * ಅಧಿಕೃತ ವಾಹನ ಪೋರ್ಟಲ್’ಗೆ ಹೋಗಿ. * “ಆನ್‌ಲೈನ್ ಸೇವೆ” ಮೇಲೆ ಕ್ಲಿಕ್ ಮಾಡಿ ಮತ್ತು “ವಾಹನ ಸೇವೆ” ಆಯ್ಕೆಮಾಡಿ. * ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ…
ಬೆಂಗಳೂರು : ಕರ್ನಾಟಕದ ಎಲ್ಲಾ ಆರೋಗ್ಯ ಸಂಸ್ಥೆಗಳನ್ನೊಳಗೊಂಡಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಾದ್ಯಂತ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕಡತದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ ಬಳಸಲ್ಪಡುತ್ತಿರುವ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಮೀಸಲಾದ ಹಾರ್ಡ್ವೇರ್ ಸಾಧನಗಳ ಮೂಲಕ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣೀಕರಣವನ್ನು ಅವಲಂಭಿಸಿದೆ. ಹಾರ್ಡ್ ವೇರ್. ಸಾಧನಗಳಿಗೆ ಆಗಾಗೆ ನಿರ್ವಹಣೆ, ದುರಸ್ತಿ ಮತ್ತು ಆವರ್ತಕ ಬದಲಾವಣೆಗಳ ಅಗತ್ಯವಿದ್ದು, ಇದು ಇಲಾಖೆಗೆ ಗಣನೀಯ ಪುನರಾವರ್ತಿತ ವೆಚ್ಚಗಳಿಗೆ ಕಾರಣವಾಗಿದೆ. ಬಯೋಮೆಟ್ರಿಕ್ ಸಾಧನಗಳ ಸ್ಥಿರ ಸ್ವರೂಪದಿಂದಾಗಿ ಹಾಜರಾತಿ ಗುರುತಿಸುವಿಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸಿದೆ. ಕ್ಷೇತ್ರ ಸಿಬ್ಬಂದಿ ಮತ್ತು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಅಸಮರ್ಥತೆಗಳನ್ನು ಸೃಷ್ಟಿಸುತ್ತದೆ. ಈ ವ್ಯವಸ್ಥೆಯ ಸೀಮಿತ ವಿಸ್ತರಣೆ, ಅಂದರೆ ಹೊಸ ಸೌಲಭ್ಯಗಳಿಗೆ ವಿಸ್ತರಿಸಲು ಹಾರ್ಡ್ವೇರ್ ಹೂಡಿಕೆಗಳು: ಮತ್ತು ಭೌತಿಕ ಸ್ವಾಪನಾ ಪ್ರಕ್ರಿಯೆಗಳ ಅಗತ್ಯವಿದೆ. ಇದಲ್ಲದೆ, ಹಾರ್ಡ್ ವೇರ್ ವೈಫಲ್ಯಗಳು ಮತ್ತು ಸಂಪರ್ಕ ಸಮಸ್ಯೆಗಳು ಆಗಾಗೆ, ವ್ಯವಸ್ಥೆಯ…