Author: kannadanewsnow57

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ರೂಪಾಂತರ ತಳಿ ಜೆಎನ್.1 (JN.1) ವೈರಸ್​​ ಅಟ್ಟಹಾಸ ಹೆಚ್ಚಳವಾಗುತ್ತಿದೆ.ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಿದೆ.ಕೇರಳ ಮತ್ತು ಕರ್ನಾಟಕದಲ್ಲಿ ಇದು ಮತ್ತಷ್ಟು ಹಬ್ಬಿದೆ. ಇದುವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿದ್ದು ಈವರೆಗೆ 199 ಜನರಲ್ಲಿ ಜೆಎನ್.1 ವೈರಸ್ ಸೋಂಕು ತಗುಲಿದೆ. 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ಸೋಂಕು ತಗುಲಿದೆ.28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.

Read More

ಮೈಸೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC)ಯ ಬಸ್ ಮತ್ತು ಜೀಪ್ ಮಧ್ಯೆ ಸಂಭವಿಸಿದ ಅಪಘಾತ ದಲ್ಲಿ ಮೂವರು ಮೃತಪಟ್ಟ ಘಟನೆ ಹುಣಸೂರು ಪಟ್ಟಣದ ಅಯ್ಯಪ್ಪಸ್ವಾಮಿ ಬೆಟ್ಟದ ಬಳಿ ನಡೆದಿದೆ. ಘಟನೆಯಲ್ಲಿ ಜೀಪ್​ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ. ಮೃತಪಟ್ಟವರೆಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ.ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಶಿವಮೊಗ್ಗ:ಶಿವಮೊಗ್ಗ ಏರ್​​ಪೋರ್ಟ್​​ ಸೇರಿದಂತೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮಾಡಿರುವ ನ್ಯಾಷನಲ್ ಸಂಸ್ಥೆ ಮೇಲೆ ED ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣಕಾಸಿನ ವ್ಯವಹಾರದ ಮೇಲೆ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಇಡಿ ದಾಳಿ ನಡೆದಿದೆ. ತೀರ್ಥಹಳ್ಳಿಯ ಸುಲೈಮಾನ್ ಎಂಬುವರಿಗೆ   ನ್ಯಾಷನಲ್ ಸಂಸ್ಥೆ ಸೇರಿದೆ.ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ಅವರ ಮನೆ ಮೇಲೂ ಕೂಡ ದಾಳಿ ಮಾಡಿದ್ದಾರೆ. ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಳು ದಾಳಿ ನೆಡೆಸಿರುವ ಶಂಕೆ ವ್ಯಕ್ತವಾಗಿದೆ. ಹೈವೇ ಮತ್ತು ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನೂ ಈ ಕಂಪನಿಯೇ ನಡೆಸುತ್ತಿದೆ.

Read More