Subscribe to Updates
Get the latest creative news from FooBar about art, design and business.
Author: kannadanewsnow57
ಚೆನ್ನೈ : ಶಾಲಾ ಪ್ರವೇಶ ಬಯಸುವ ಮಗು ವರ್ಗಾವಣೆ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಒತ್ತಾಯಿಸದಂತೆ ಕೇಳಿದ್ದು, ಮದ್ರಾಸ್ ಹೈಕೋರ್ಟ್ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆಗಳು / ಸೂಚನೆಗಳು / ಆದೇಶಗಳನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಶಾಲಾ ಶುಲ್ಕವನ್ನು ಪಾವತಿಸದಿರುವ ಅಥವಾ ವಿಳಂಬವಾಗಿ ಪಾವತಿಸುವ ಬಗ್ಗೆ ಟಿಸಿಯಲ್ಲಿ ಅನಗತ್ಯ ನಮೂದುಗಳನ್ನು ಮಾಡದಂತೆ ನ್ಯಾಯಾಲಯವು ಶಾಲೆಗಳಿಗೆ ಸೂಚಿಸಿದೆ. ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ, ಆರ್ಟಿಇ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಪ್ರಾರಂಭಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಪೋಷಕರಿಂದ ಶುಲ್ಕದ ಬಾಕಿಯನ್ನು ಸಂಗ್ರಹಿಸಲು ಶಾಲೆಗಳಿಗೆ ಟಿಸಿ ಒಂದು ಸಾಧನವಲ್ಲ ಎಂದು ಗಮನಿಸಿದ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಮತ್ತು ನ್ಯಾಯಮೂರ್ತಿ ಸಿ.ಕುಮಾರಪ್ಪನ್ ಅವರ ನ್ಯಾಯಪೀಠ, ಶುಲ್ಕದ ಬಾಕಿಗೆ ಸಂಬಂಧಿಸಿದಂತೆ ಟಿಸಿಯಲ್ಲಿ ನಮೂದು ಮಾಡಿದಾಗ, ಅದು ಮಗುವಿಗೆ ಕಳಂಕ ತರುತ್ತದೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮಾನಸಿಕ ಕಿರುಕುಳದ ಒಂದು ರೂಪವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಶುಲ್ಕವನ್ನು ಪಾವತಿಸದ ಅಥವಾ…
ಬೆಂಗಳೂರು : ನಕಲಿ ದಾಖಲೆ ಮೋಸದ ವ್ಯವಹಾರಗಳಿಂದ ನಿಮ್ಮ ಆಸ್ತಿ ರಕ್ಷಣೆಗಾಗಿ ಕೂಡಲೇ ಜಮೀನಿನ ದಾಖಲೆಯ ಜೊತೆ ಆಧಾರ್ ಲಿಂಕ್ ಮಾಡುವಂತೆ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ. ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದ್ದಾರೆ. ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ…
ಬೀದರ್ : ಮದ್ಯ ಪ್ರಿಯರೇ ಎಚ್ಚರ. ಇನ್ಮುಂದೆ ರಾಜ್ಯದ ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಶಾಲೆಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಯಾರಾದ್ರೂ ಮದ್ಯ ಸೇವಿಸಿವುದು ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಯ ಸುತ್ತ ಮದ್ಯ ಮಾರಾಟ ಕುರಿತ ಮಕ್ಕಳು ಮನವಿ ಸಲ್ಲಿಸಿದ್ದಾರೆ. ಕ್ರಮಕ್ಕೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಗಾರ್ಡನ್ ಇರುವುದು ವಾಯು ವಿಹಾರಕ್ಕೆ ಮಾತ್ರ. ಇಲ್ಲಿ ಮದ್ಯ ಸೇವನೆ ಮಾಡುವುದರಿಂದ ಅಲ್ಲಿನ ವಾತಾವರಣ ಕಲುಷಿತವಾಗುತ್ತಿದೆ. ಇದು ಸಾರ್ವಜನಿಕವಾದ ಸ್ಥಳವಾಗಿದ್ದು, ಅದರ ಪವಿತ್ರತೆಯನ್ನು ಕಾಯ್ದುಕೊಳ್ಳುವುದು ಎಲ್ಲ ಜವಾಬ್ದಾರಿ. ಮದ್ಯ ಕುಡಿಯುವುದು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.
ನವದೆಹಲಿ:ಗುರುವಾರ ಬೆಳಿಗ್ಗೆ 11.29 ಕ್ಕೆ, ನೋಯ್ಡಾ ನಿವಾಸಿ ಬಸಂತ್ ಶರ್ಮಾ ಅವರು ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಪಿಸಿಎಲ್) ನಿಂದ ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ 4 ಕೋಟಿ ರೂ.ಗಳ ವಿದ್ಯುತ್ ಬಿಲ್ ಎಂದು ಎಸ್ಎಂಎಸ್ ನೋಡಿ ಆಘಾತಕ್ಕೊಳಗಾಗಿದ್ದಾರೆ. ಸೆಕ್ಟರ್ 122 ರ ಶ್ರಮಿಕ್ ಕುಂಜ್ ನಿವಾಸಿಯಾಗಿರುವ ಶರ್ಮಾ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದು, ಪ್ರಸ್ತುತ ಶಿಮ್ಲಾದಲ್ಲಿ ಅಧಿಕೃತ ತರಬೇತಿ ಪಡೆಯುತ್ತಿದ್ದಾರೆ. ಈ ಬಿಲ್ ಅನ್ನು ತಮ್ಮ ಪತ್ನಿ ಪ್ರಿಯಾಂಕಾ ಶರ್ಮಾ ಅವರ ಹೆಸರಿನಲ್ಲಿ ನೀಡಲಾಗಿದೆ ಎಂದು ಅವರು ಹೇಳಿದರು. “_ಬಿಲ್ ನೋಡಿ ನನಗೆ ಆಘಾತವಾಯಿತು” ಎಂದು ಅವರು ಹೇಳಿದರು. ಉಳಿದ ಎಲ್ಲಾ ತಿಂಗಳುಗಳಿಗೆ 1,490 ರೂ.ಗಳ ಬಿಲ್ ಬಂದಿದೆ ಎಂದು ಶರ್ಮಾ ಹೇಳಿದರು. “ನನ್ನ ಮನೆ ಬಾಡಿಗೆಗೆ ಇದೆ ಮತ್ತು ಬಿಲ್ ನೋಡಿದ ನಂತರ, ನಾನು ನನ್ನ ಬಾಡಿಗೆದಾರನಿಗೆ ಕರೆ ಮಾಡಿ ಎಸ್ಎಂಎಸ್ ಬಗ್ಗೆ ತಿಳಿಸಿದೆ. ಅವರು ಮೂಲಭೂತ ಉಪಕರಣಗಳನ್ನು ಮಾತ್ರ ಬಳಸುತ್ತಿದ್ದಾರೆ ಎಂದು ಅವರು ನನಗೆ ಹೇಳಿದರು”…
ಬೆಂಗಳೂರು : ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದ್ದು, ಪ್ರಸಕ್ತ ಶೈಕ್ಷಿಣಿಕ ಸಾಲಿನಿಂದಲೇ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಿಳ ಮಾಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಸರ್ಕಾರಿ ಕಾಲೇಜುಗಳು, ಸರ್ಕಾರಿ ಅನುದಾನಿತ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಶೇ.50 ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಸೀಟುಗಳಿಗೆ 42,116 ರು. ಶುಲ್ಕ ನಿಗದಿಪಡಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರು. ಅಥವಾ 84,596 ರು. ಶುಲ್ಕ ನಿಗದಿಯಾಗಿದೆ. ಕಾಮೆಡ್-ಕೆ ಕೋಟಾದ ಸೀಟುಗಳಿಗೆ 1,86, 111 ರೂ.ಅಥವಾ 2,61,477 ರು. ಗೆ ಹೆಚ್ಚಳವಾಗಿದೆ.
ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಮೂಲದ 29 ವರ್ಷದ ವ್ಯಕ್ತಿಯನ್ನು ಯುನೈಟೆಡ್ ಸ್ಟೇಟ್ಸ್ನ ಇಂಡಿಯಾನಾದಲ್ಲಿ ನಡೆದ ರಸ್ತೆ ಕ್ರೋಧದ ಘಟನೆಯಲ್ಲಿ ಪತ್ನಿಯ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅವರ ಕುಟುಂಬ ತಿಳಿಸಿದೆ. ಪೊಲೀಸ್ ತನಿಖೆಯಲ್ಲಿ ಲೋಪವಾಗಿದೆ ಎಂದು ಕುಟುಂಬ ಆರೋಪಿಸಿದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ಗೇವಿನ್ ಗೆ ನ್ಯಾಯವನ್ನು ಕೋರಿದೆ. ಇತ್ತೀಚೆಗೆ ಅಮೆರಿಕದಲ್ಲಿ ವಿವಾಹವಾಗಿದ್ದ ಗೇವಿನ್ ದಸೌರ್ ಜುಲೈ 16 ರಂದು ಮೆಕ್ಸಿಕನ್ ಮೂಲದ ಪತ್ನಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗೇವಿನ್ ಮತ್ತು ಟ್ರಕ್ ಚಾಲಕನ ನಡುವೆ ಓವರ್ಟೇಕ್ ಮಾಡುವ ಬಗ್ಗೆ ವಿವಾದ ಭುಗಿಲೆದ್ದಿತು, ನಂತರ ಟ್ರಕ್ ಚಾಲಕ ಅವನ ಮೇಲೆ ಗುಂಡು ಹಾರಿಸಿದನು ಎಂದು ಗೇವಿನ್ ಕುಟುಂಬ ತಿಳಿಸಿದೆ.ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೇವಿನ್ ಯುಎಸ್ ನಲ್ಲಿ ಸಾರಿಗೆ ವ್ಯವಹಾರವನ್ನು ನಡೆಸುತ್ತಿದ್ದರು. ಅವರು ಜೂನ್ ೨೯ ರಂದು ಮೆಕ್ಸಿಕನ್ ಮೂಲದ ಸಿಂಥಿಯಾ ಎಂಬ ಮಹಿಳೆಯನ್ನು ವಿವಾಹವಾದರು. ಜುಲೈ 16 ರ ಸಂಜೆ, ಗೇವಿನ್,…
ಬಳ್ಳಾರಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ವಿಶೇಷ ವರ್ಗಗಳ ಮೀಸಲಾತಿ ಅಡಿಯಲ್ಲಿ 6ನೇ ತರಗತಿಗೆ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ 19 ವಸತಿ ಶಾಲೆಗಳಲ್ಲಿ ವಿಶೇಷ ಮೀಸಲಾತಿ ಅಡಿಯಲ್ಲಿ ಪ್ರಸಕ್ತ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಜು.25 ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೆಇಎ ಇಲಾಖೆ ವೆಬ್‍ಸೈಟ್ https://cetonline.karnataka.gov.in/kreis24d/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇಲಾಖಾ ವ್ಯಾಪ್ತಿಯಲ್ಲಿ ಬರುವ ಸಫಾಯಿ ಕರ್ಮಚಾರಿ, ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರ ಮಕ್ಕಳು (ಶೇ.10), ಬಾಲ ಕಾರ್ಮಿಕರು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು (ಶೇ.10), ಶೇ.25 ಕ್ಕಿಂತ ಹೆಚ್ಚಿನ ಅಂಗವಿಕಲತೆ ಮಕ್ಕಳು, ಹೆಚ್‍ಐವಿ ತುತ್ತಾದ ಮಕ್ಕಳು, ಒಬ್ಬ ಪೆÇೀಷಕ, ಅನಾಥ…
ಬೆಂಗಳೂರು : 2023-24 ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ವೃಂದದ ಸಾಮಾನ್ಯ ವರ್ಗಾವಣೆ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಿಷಯದನ್ವಯ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್-ಬಿ ವೃಂದದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಉಲ್ಲೇಖಿತ ವೇಳಾಪಟ್ಟಿಯಂತೆ ಹಮ್ಮಿಕೊಳ್ಳಲಾಗುತ್ತಿದೆ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು ನೀಡಿದ ಮಾಹಿತಿಯನ್ವಯ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗಿರುವಂತೆ ಕೌನ್ಸಿಲಿಂಗ್‌ಗೆ ಆದ್ಯತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಉಲ್ಲೇಖಿತ ಅಧಿಸೂಚನೆಯಲ್ಲಿನ ವೇಳಾಪಟ್ಟಿಯಂತೆ ಆಯಾ ಜಿಲ್ಲೆಯ ಉಪನಿರ್ದೇಶಕರ ಕಛೇರಿಯಲ್ಲಿಯೇ ಗಣಕೀಕೃತ ಕೌನ್ಸಿಲಿಂಗ್ ಅನ್ನು ನಡೆಸಲಾಗುವುದು. ವಿಭಾಗದೊಳಗಿನ ವರ್ಗಾವಣೆಯಲ್ಲಿ ಆಯಾ ವಿಭಾಗದೊಳಗಿನ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಅಂತರವಿಭಾಗೀಯ ವರ್ಗಾವಣೆಯಲ್ಲಿ ಆಯಾ ವಿಭಾಗವನ್ನು ಹೊರತುಪಡಿಸಿ ಕೋರಿರುವ ಅಂತರ್ ವಿಭಾಗಗಳ ಖಾಲಿ ಹುದ್ದೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ಬಗ್ಗೆ ಪ್ರೋಗ್ರಾಮರ್‌ಗಳೊಂದಿಗೆ ಹಾಜರಿದ್ದು ಯಾವುದೇ ಲೋಪಗಳಾಗದಂತೆ ಕೌನ್ಸಿಲಿಂಗ್‌ಗೆ ಸಂಬಂಧಿಸಿದ ಎಲ್ಲಾ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ ಸಮರ್ಪಕವಾಗಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ತಿಳಿಸಿದೆ. ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುವ ದಿನದಂದು ಕೌನ್ಸಿಲಿಂಗ್ ಪಟ್ಟಿಯಲ್ಲಿರುವ…
ಬೆಂಗಳೂರು : ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಬಿಗ್ ಶಾಕ್ ನೀಡಿದ್ದು, ಪ್ರಸಕ್ತ ಶೈಕ್ಷಿಣಿಕ ಸಾಲಿನಿಂದಲೇ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಿಳ ಮಾಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಸರ್ಕಾರಿ ಕಾಲೇಜುಗಳು, ಸರ್ಕಾರಿ ಅನುದಾನಿತ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಶೇ.50 ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟರ್ ಸೀಟುಗಳಿಗೆ 42,116 ರು. ಶುಲ್ಕ ನಿಗದಿಪಡಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರು. ಅಥವಾ 84,596 ರು. ಶುಲ್ಕ ನಿಗದಿಯಾಗಿದೆ. ಕಾಮೆಡ್-ಕೆ ಕೋಟಾದ ಸೀಟುಗಳಿಗೆ 1,86, 111 ರೂ.ಅಥವಾ 2,61,477 ರು. ಗೆ ಹೆಚ್ಚಳವಾಗಿದೆ.
ಚಿತ್ರದುರ್ಗ : ಕುರಿ ಕಾಯುತ್ತಿದ್ದ ನನ್ನನ್ನು ರಾಜಪ್ಪ ಮೇಸ್ಟ್ರು ಶಾಲೆಗೆ ಸೇರಿಸಿದ್ದಕ್ಕೆ ನಾನು ಇಂದು ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಶೇ.98 ರಷ್ಟು ಅಂಕ ಪಡೆದು ರಾಜ್ಯಕ್ಕೆ 8ನೇ ರ‌್ಯಾಂಕ್ ಗಳಿಸಿದ ಪಿಯುಸಿ ವಿದ್ಯಾರ್ಥಿನಿಯೊಬ್ಬರಿಗೆ ಐ.ಎ.ಎಸ್ ಮಾಡುವಂತೆ ಸಲಹೆ ನೀಡಿ, ಆಕೆಯ ಐಎಎಸ್ ಪರೀಕ್ಷಾ ಸಿದ್ಧತೆಗೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆಂದು ಮಾತು ಕೊಟ್ಟಿದ್ದೇನೆ ಎಂದರು. ಶೋಷಿತ ಸಮುದಾಯದ ಮಕ್ಕಳು ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಶೈಕ್ಷಣಿಕ ಸಾಧನೆ ಮಾಡುವುದನ್ನು ಕಂಡಾಗ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ. ಕುರಿ ಕಾಯುತ್ತಿದ್ದ ನನ್ನನ್ನು ಶಾಲೆಗೆ ಸೇರಿಸಿಕೊಂಡಿದ್ದರಿಂದ ಇಲ್ಲಿಗೆ ಬಂದು ಮುಟ್ಟಿದ್ದೇನೆ. ಇಂದು ನಾನು ರಾಜಪ್ಪ ಮೇಸ್ಟ್ರನ್ನು ನೆನೆದಂತೆ ಈ ಹೆಣ್ಣುಮಗು ಐಎಎಸ್ ಪಾಸಾಗಿ ಉನ್ನತ ಹುದ್ದೆಗೇರಿದರೆ ನನ್ನನ್ನು ನೆನೆದು, ಆಕೆಯೂ ನಾಲ್ಕಾರು ಮಕ್ಕಳಿಗೆ ನೆರವಾಗಬಹುದು. ನಾನು ರಾಜಪ್ಪ ಮೇಸ್ಟ್ರ ಹಾಗೆ…