Author: kannadanewsnow57

ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಂಗೇರಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಅಣ್ಣ, ತಂಗಿ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಂಗಳೂರಿನ ಕೆಂಗೇರಿ ಬಳಿ ನೀರು ತರಲು ಹೋಗಿದ್ದ ವೇಳೆ ಅಣ್ಣ, ತಂಗಿ ನಾಪತ್ತೆಯಾಗಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, ಇದೀಗ ಅಣ್ಣ ಜಾನ್ ಸೀನಾ (13) ಶವ ಪತ್ತೆಯಾಗಿದ್ದು, ತಂಗಿ ಮಹಾಲಕ್ಷ್ಮಿ ಮಹೃದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತರ ತಾಯಿ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ನೀರು ತರಲು ಹೋಗಿದ್ದಾಗ ಆಟವಾಡ್ತಿದ್ದ ವೇಳೆ ನೀರಿಗೆ ಬಿದ್ದಿದ್ದರು.

Read More

ಡಮಾಸ್ಕಸ್: ರಾಜಧಾನಿ ಡಮಾಸ್ಕಸ್ ನ ಪಶ್ಚಿಮಕ್ಕೆ ನಾಗರಿಕ ವಾಹನವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ ಮಝೆಹ್ ನೆರೆಹೊರೆಯ ಪೂರ್ವ ಭಾಗದಲ್ಲಿರುವ ಗೋಲ್ಡನ್ ಮಝೆಹ್ ಹೋಟೆಲ್ ಬಳಿ ಇರುವ ವಾಹನದ ಮೇಲಿನ ದಾಳಿಯು ಸುತ್ತಮುತ್ತಲಿನ ಆಸ್ತಿಗಳಿಗೆ ವಸ್ತು ಹಾನಿಯನ್ನುಂಟು ಮಾಡಿದೆ ಎಂದು ಸಚಿವಾಲಯ ಸೋಮವಾರ ತಿಳಿಸಿದೆ. ಇದಕ್ಕೂ ಮುನ್ನ, ಸಿರಿಯನ್ ರಾಜ್ಯ ಟೆಲಿವಿಷನ್ ಈ ದಾಳಿಯನ್ನು “ಆಕ್ರಮಣಕಾರಿ ಕೃತ್ಯ” ಎಂದು ಹೇಳಿದರೆ, ಬ್ರಿಟನ್ ಮೂಲದ ಕಾವಲು ಗುಂಪು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಈ ದಾಳಿಯನ್ನು ಇಸ್ರೇಲಿ ಡ್ರೋನ್ ಎಂದು ಹೇಳಿದೆ, ಇದು ಈ ಪ್ರದೇಶದಲ್ಲಿ ಇಸ್ರೇಲಿ ಕಾರ್ಯಾಚರಣೆಗಳಿಗೆ ಸಂಬಂಧಿಸಿದ “ನಡೆಯುತ್ತಿರುವ ಹತ್ಯೆಗಳ” ಭಾಗವಾಗಿರಬಹುದು ಎಂದು ಸೂಚಿಸುತ್ತದೆ. ದಾಳಿಯ ಬಗ್ಗೆ ಇಸ್ರೇಲ್ ಕಡೆಯವರು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುದ್ಧ ಪೀಡಿತ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಮಿಲಿಟಿಯಾಗಳು…

Read More

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿಚಾರಣೆಯನ್ನು ನವೆಂಬರ್ 26 ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ಅದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಅವರ ವಿಚಾರಣೆಯ ಮುಂದೂಡಲು ಡಿಕೆಶಿ ಪರ ವಕೀಲರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಬಿಜೆಪಿ ಶಾಸಕ ಯತ್ನಾಳ್ ಬೆನ್ನಲ್ಲೇ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ಸಲ್ಲಿಕೆ ಮಾಡಿದೆ. ಸಿಬಿಐ ತನಿಖೆಗೆ ನೀಡಿದ ಸಮ್ಮತಿಯನ್ನು ಸರ್ಕಾರ ಹಿಂಪಡೆದುಕೊಂಡಿತ್ತು. ಸಿಬಿಐ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ‘ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಶಿವಕುಮಾರ್ ಅವರ ಅಕ್ರಮ ಆಸ್ತಿಗಳ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳುವ ಕಾಂಗ್ರೆಸ್ ಸರ್ಕಾರದ…

Read More

ಹಾಸನ : ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡು ಹಾಸನದಲ್ಲಿ ವಾಸವಾಗಿದ್ದ ಮೂವರು ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡು ಹಾಸನದಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂದು ಗುರುತಿಸಲಾಗಿದೆ. ಮೂವರು ಬಾಂಗ್ಲಾ ವಲಸಿಗರು ಪಶ್ಚಿಮ ಬಂಗಾಳದ ವಿಳಾಸವಿರುವ ನಕಲಿ ಆಧಾರ್ ಕಾರ್ಡ್ ಹೊಂದಿದ್ದರು. ಘಟನೆ ಸಂಬಂಧ ಪೆನಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಂಗೇರಿ ಕೆರೆಯಲ್ಲಿ ಕೊಚ್ಚಿ ಹೋಗಿದ್ದ ಅಣ್ಣ, ತಂಗಿ ಪೈಕಿ ಇದೀಗ ಅಣ್ಣನ ಶವ ಪತ್ತೆಯಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಅಣ್ಣ, ತಂಗಿ ನಾಪತ್ತೆಯಾಗಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಅಣ್ಣ ಜಾನ್ ಸೀನಾ (13) ಶವ ಪತ್ತೆಯಾಗಿದ್ದು, ತಂಗಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

Read More

ಇಂದು ನಮ್ಮ ದೇಶದಲ್ಲಿ ಹೆಚ್ಚಿನ ಶೇಕಡಾವಾರು ಜನರಿಗೆ ಸಮಸ್ಯೆಗಳನ್ನು ಉಂಟುಮಾಡುವ ಕಾಯಿಲೆಗಳಲ್ಲಿ ಕಿಡ್ನಿ ಕಲ್ಲುಗಳು ಒಂದು. ಇವು ಅನೇಕ ಜನರಲ್ಲಿ ಕಂಡುಬರುತ್ತವೆ. ಕಿಡ್ನಿ ಕಲ್ಲುಗಳು ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬರಲ್ಲೂ ಕಂಡುಬರುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಮೂತ್ರಪಿಂಡದ ಕಲ್ಲುಗಳು ರೂಪುಗೊಂಡ ನಂತರ, ಕಾಳಜಿಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ನೀವು ಅವುಗಳನ್ನು ಹೇಗೆ ಕರಗಿಸಿದರೂ ಅವು ಮತ್ತೆ ಹಿಂತಿರುಗುತ್ತವೆ. ಆದ್ದರಿಂದ ಅವರ ಬಗ್ಗೆ ಜಾಗರೂಕರಾಗಿರಿ. ಆದರೆ ಈ ಕೆಳಗೆ ತಿಳಿಸಿರುವ ಪವರ್ ಫುಲ್ ಟಿಪ್ ಅನ್ನು ಪಾಲಿಸಿದರೆ ಕಿಡ್ನಿಯಲ್ಲಿ ಕಲ್ಲುಗಳು ಬರುವುದಿಲ್ಲ. ಈ ಸಲಹೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೇಸಿಗೆ ಕಾಲ ಬಂದಿದೆ. ನಾವು ಎಲ್ಲಿ ನೋಡಿದರೂ ಕಲ್ಲಂಗಡಿಗಳು. ಬಿಸಿ ವಾತಾವರಣದಲ್ಲಿ ಜನರು ತಂಪಾದ ಕಲ್ಲಂಗಡಿಗಳನ್ನು ತಿನ್ನುತ್ತಾರೆ. ಆದರೆ ಕಲ್ಲಂಗಡಿ ತಿಂದ ನಂತರ ಕೆಲವರು ಅದರೊಳಗಿನ ಬೀಜಗಳನ್ನು ಬಿಸಾಡುತ್ತಾರೆ. ಆದರೆ ಹಾಗೆ ಮಾಡಬೇಡಿ. ಏಕೆಂದರೆ ಕಲ್ಲಂಗಡಿ ಬೀಜಗಳಿಗೆ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಶಕ್ತಿ ಇದೆ. ಅದಕ್ಕಾಗಿ ಏನು ಮಾಡಬೇಕೆಂದು ಈಗ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನಟ ದರ್ಶನ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದಾದ ಬಳಿಕ ನಟ ದರ್ಶನ್ ಅವರ ಪರ ವಕೀಲರು ಜಾಮಿನು ಕೋರಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಂದು ಹೈಕೋರ್ಟ್ ಈ ಒಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಲಾಗಿದೆ. ಹೌದು ಜಾಮೀನು ನಟ ದರ್ಶನ್ ಪರ ವಕೀಲ ಎಸ್ ಸುನಿಲ್ ಕುಮಾರ್ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಎಸ್. ವಿಶ್ವಜೀತ್ ಅವರಿದ್ದ ಹೈಕೋರ್ಟ್ ಏಕ ಸದಸ್ಯಪೀಠದಲ್ಲಿ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಲಾಗಿದೆ. ನಟ ದರ್ಶನ್ ಗೆ ತೀವ್ರ ಬೆನ್ನು ನೋವು : ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಬೆನ್ನು ನೋವಿನಿಂದ…

Read More

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನನ್ ಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್‌ಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸೂಚನೆ ಕೊಟ್ಟಿದ್ದರು. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿ ನಟ ದರ್ಶನ್ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಕೂಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಈ ವೇಳೆ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ. ಜೈಲಾಧಿಕಾರಿಗಳಿಂದ ದರ್ಶನ್ ಬೆನ್ನು ನೋವಿನ ಬಗ್ಗೆ ವೈದ್ಯರು ನೀಡಿರುವ…

Read More

ನವದೆಹಲಿ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 6.52 ಕ್ಕೆ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ ”ಭೂಕಂಪದ ಕೇಂದ್ರಬಿಂದು 19.38 ಉತ್ತರ ಅಕ್ಷಾಂಶ ಮತ್ತು 77.46 ಪೂರ್ವ ರೇಖಾಂಶದಲ್ಲಿತ್ತು ಮತ್ತು ಭೂಮಿಯ ಮೇಲ್ಮೈಗೆ 5 ಕಿ.ಮೀ ಆಳದಲ್ಲಿತ್ತು ” ಎಂದು ಎನ್ಸಿಎಸ್ನ ಮಂಗಳವಾರದ ಪೋಸ್ಟ್ನಲ್ಲಿ ತಿಳಿಸಲಾಗಿದೆ. ನಾಂದೇಡ್ ಜಿಲ್ಲೆಯಲ್ಲಿ ಅಥವಾ ಸುತ್ತಮುತ್ತ ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ನಾಂದೇಡ್ ಭಾರತದ ಭೂಕಂಪನ ನಕ್ಷೆಯಲ್ಲಿ ವಲಯ 2 ರಲ್ಲಿದೆ, ಇದು ಭೂಕಂಪಗಳಿಗೆ ಕಡಿಮೆ ಗುರಿಯಾಗುತ್ತದೆ. ಈ ನಗರವು ಮಹಾರಾಷ್ಟ್ರದ ಮರಾಠಾವಾಡಾ ವಿಭಾಗದಲ್ಲಿ ಗೋದಾವರಿ ನದಿಯ ಉತ್ತರ ದಡದಲ್ಲಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 4.2 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿತ್ತು.

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ನಟ ದರ್ಶನ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅದಾದ ಬಳಿಕ ನಟ ದರ್ಶನ್ ಅವರ ಪರ ವಕೀಲರು ಜಾಮಿನು ಕೋರಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಂದು ಹೈಕೋರ್ಟ್ ಈ ಒಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಲಾಗಿದೆ. ಹೌದು ಜಾಮೀನು ನಟ ದರ್ಶನ್ ಪರ ವಕೀಲ ಎಸ್ ಸುನಿಲ್ ಕುಮಾರ್ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಎಸ್. ವಿಶ್ವಜೀತ್ ಅವರಿದ್ದ ಹೈಕೋರ್ಟ್ ಏಕ ಸದಸ್ಯಪೀಠದಲ್ಲಿ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಲಾಗಿದೆ.

Read More