Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿ ಪ್ರಯತ್ನ ನಡೆಸುವ ಗುರಿಯೊಂದಿಗೆ ನಾಸಾ ಶೀಘ್ರದಲ್ಲೇ ಭಾರತೀಯ ಗಗನಯಾತ್ರಿಗಳಿಗೆ ಸುಧಾರಿತ ತರಬೇತಿ ನೀಡಲಿದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರು ಶುಕ್ರವಾರ ಹೇಳಿದ್ದಾರೆ. ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಮತ್ತು ಯುಎಸ್ ಕಮರ್ಷಿಯಲ್ ಸರ್ವಿಸ್ (ಯುಎಸ್ಸಿಎಸ್) ಬೆಂಗಳೂರಿನಲ್ಲಿ ಆಯೋಜಿಸಿದೆ. “ನಾಸಾ ಶೀಘ್ರದಲ್ಲೇ ಭಾರತೀಯ ಗಗನಯಾತ್ರಿಗಳಿಗೆ ಸುಧಾರಿತ ತರಬೇತಿಯನ್ನು ನೀಡಲಿದೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿ ಪ್ರಯತ್ನವನ್ನು ಹೆಚ್ಚಿಸುವ ಗುರಿಯೊಂದಿಗೆ, ಈ ವರ್ಷ ಅಥವಾ ಸ್ವಲ್ಪ ಸಮಯದ ನಂತರ, ಇದು ನಮ್ಮ ನಾಯಕರ ಭೇಟಿಯ ಭರವಸೆಗಳಲ್ಲಿ ಒಂದಾಗಿದೆ. ಪರಿಸರ ವ್ಯವಸ್ಥೆಗಳು, ಭೂಮಿಯ ಮೇಲ್ಮೈ, ನೈಸರ್ಗಿಕ ಅಪಾಯಗಳು, ಸಮುದ್ರ ಮಟ್ಟ ಏರಿಕೆ ಮತ್ತು ಕ್ರಯೋಸ್ಪಿಯರ್ ಸೇರಿದಂತೆ ಎಲ್ಲಾ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡಲು ನಾವು ಶೀಘ್ರದಲ್ಲೇ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿಸಾರ್ ಉಪಗ್ರಹವನ್ನು ಉಡಾವಣೆ ಮಾಡುತ್ತೇವೆ ” ಎಂದು ಗಾರ್ಸೆಟ್ಟಿ ಯುಎಸ್ಐಬಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಶಾಂತಿಯ ಅನ್ವೇಷಣೆಯಾಗಿರಲಿ ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಯಾಗಿರಲಿ,…
ಬೈರುತ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ ಗೆ ‘ಆಶ್ಚರ್ಯಕರ’ ಮಿಲಿಟರಿ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೆ ಬೆನ್ನಲ್ಲೇ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಇಸ್ರೇಲ್ ವಿರುದ್ಧ “ಆಶ್ಚರ್ಯಕರ” ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಶುಕ್ರವಾರ ದೂರದರ್ಶನ ಭಾಷಣದಲ್ಲಿ ಹಿಜ್ಬುಲ್ಲಾ ನಾಯಕ ನಸ್ರಲ್ಲಾ, ನಮ್ಮ ಪ್ರತಿರೋಧದಿಂದ ನೀವು ಆಶ್ಚರ್ಯಗಳನ್ನು ನಿರೀಕ್ಷಿಸಬೇಕು, ಇಸ್ರೇಲ್ನಿಂದ ಯಾವುದೇ ಆಶ್ಚರ್ಯಕರ ದಾಳಿಗಳನ್ನು ಎದುರಿಸಲು “ಪ್ರತಿರೋಧ” ಉತ್ತಮವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಗುರುವಾರ ಹಲವಾರು ಇಸ್ರೇಲಿ ಜನರಲ್ಗಳೊಂದಿಗಿನ ಸಭೆಯಲ್ಲಿ, ನೆತನ್ಯಾಹು ಇಸ್ರೇಲ್ “ಉತ್ತರಕ್ಕಾಗಿ ವಿವರವಾದ, ಪ್ರಮುಖ ಮತ್ತು ಆಶ್ಚರ್ಯಕರ ಯೋಜನೆಗಳನ್ನು ಹೊಂದಿದೆ. ನಾವು ಉತ್ತರದ ಮುಂಚೂಣಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.ಇಸ್ರೇಲ್ ನೂರಾರು ಹಿಜ್ಬುಲ್ಲಾ ಸದಸ್ಯರನ್ನು ನಿರ್ಮೂಲನೆ ಮಾಡಿದೆ ಎಂದು ನೆತನ್ಯಾಹು ಹೇಳಿದರು. 2023 ರ ಅಕ್ಟೋಬರ್ 8 ರಂದು ಲೆಬನಾನ್-ಇಸ್ರೇಲ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಯಿತು, ಹಿಂದಿನ ದಿನ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಗೆ ಬೆಂಬಲವಾಗಿ ಹಿಜ್ಬುಲ್ಲಾ ಇಸ್ರೇಲ್ ಕಡೆಗೆ ರಾಕೆಟ್ಗಳನ್ನು ಹಾರಿಸಿದ ನಂತರ. ನಂತರ ಇಸ್ರೇಲ್…
ಬೆಂಗಳೂರು : ಮೇ. 29 ರಿಂದ 2024-25 ಸಾಲಿನ ಶಾಲೆಗಳು ಪ್ರಾರಂಭವಾಗಲಿದ್ದು, ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ / ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಮೇ. 29 ರಿಂದ 2024-25 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE (ಪರೀಕ್ಷೆಗಳು/ ಮೌಲ್ಯಂಕನ,ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2024 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ…
ಬೆಂಗಳೂರು : ವಿಧಾನಪರಿಷತ್ ಚುನಾವಣೆ, ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರಣದಿಂದ ಜೂನ್ ಮೊದಲ ವಾರ ಐದು ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್, ಮದ್ಯದಂಗಡಿಗಳು ಬಂದ್ ಆಗಲಿವೆ. ಜೂನ್ 1 ರಿಂದ 6ರ ವರೆಗೆ ವೈನ್ ಶಾಪ್, ಎಂಆರ್ಪಿ ಔಟ್ಲೇಟ್ಗಳು ಬಂದ್ ಆಗಲಿವೆ. ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಸಲುವಾಗಿ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನ ಬಂದ್ ಮಾಡುವಂತೆ ಆದೇಶವನ್ನು ಹೊರಡಿಸಲಾಗಿದೆ. ಇದಲ್ಲದೇ ಜೂನ್ 3 ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯುವುದರಿಂದ ಜೂನ್ 1ರ ಸಂಜೆ 4 ಗಂಟೆಯಿಂದಲೇ ಬಾರ್ ಬಂದ್ ಆಗಲಿದ್ದು, ಜೂನ್ 3 ರವರೆಗೆ ಬಂದ್ ಮಾಡಬೇಕಾಗುತ್ತೆ. ಇನ್ನೂ ಜೂನ್ 4 ರಂದು ದೇಶದ್ಯಾಂತ ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿರುವ ಹಿನ್ನಲೆಯಲ್ಲಿ ಅಂದ ಕೂಡ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.ಜೂನ್ 6 ರಂದು ಎಂಎಲ್ಸಿ ಮತ ಎಣಿಕೆ ಇರೋದ್ರಿಂದ ಅಂದೂ ಸಹ ಬಾರ್ ಬಂದ್ ಮಾಡುವಂತೆ…
ದಾವಣಗೆರೆ : ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆಂದು ಕರೆ ತಂದಿದ ವ್ಯಕ್ತಿಯೊಬ್ಬ ದಾವಣಗೆರೆ ಜಿಲೆಲಯ ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯಲ್ಲೇ ಸಾವನ್ನಪ್ಪಿದ್ದು, ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಪೊಲೀಸ್ ವ್ಯಾನ್ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಚನ್ನಗಿರಿಯ ಟಿಪ್ಪು ನಗರದ ವಾಸಿ ಬಡಿಗೆ ಕೆಲಸಗಾರ ಆದಿಲ್ ಮೃತ ವ್ಯಕ್ತವಾಗಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆ ಮೇರೆ ಪೊಲೀಸರು ಆದಿಲ್ ನನ್ನು ಶುಕ್ರವಾರ ಮಧ್ಯಾಹ್ನ ಠಾಣೆಗೆ ಕರೆತಂದು, ವಿಚಾರಣಗೊಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಲಾಕಪ್ ನಲ್ಲಿದ್ದ ಆದಿಲ್ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಚಿಕಿತ್ಸಗೆಂದು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ಸ್ಥಳೀಐರು ಸೇರಿ ಸುಮಾರು ೫೦೦ ಕ್ಕೂ ಹೆಚ್ಚು ಮಂದಿ ಶುಕ್ರವಾರ ರಾತ್ರಿ ಠಾಣೆಯ ಮುಂದೆ ಪ್ರತಿಭಟನೆ ನಡೆರಸಿದ್ದಾರೆ. ಈ ವೇಳೆ ಪೊಲೀಸರು ಠಾಣೆಗೆ ಬಿಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಉದ್ರಿಕ್ತರು ಪೊಲೀಸ್ ವಾಹನದ ಮೇಲೆ ಕಲ್ಲು…
ಗಾಝಾ : ವಿಶ್ವಸಂಸ್ಥೆಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇಸ್ರೇಲ್ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಗಾಝಾದ ರಫಾ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಐಸಿಜೆ ಇಸ್ರೇಲ್ ಗೆ ಆದೇಶಿಸಿದೆ. ಐಸಿಜೆ ತನ್ನ ಆದೇಶದಲ್ಲಿ ಪ್ಯಾಲೆಸ್ತೀನ್ ಜನರಿಗೆ “ತಕ್ಷಣದ ಅಪಾಯ” ವನ್ನು ಉಲ್ಲೇಖಿಸಿದೆ. ರಫಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಆಕ್ರಮಣ ಮತ್ತು ಇತರ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಇಸ್ರೇಲ್ನ ರಾಫಾ ಮೇಲಿನ ದಾಳಿಯ ಬಗ್ಗೆ ನ್ಯಾಯಾಧೀಶರು ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದ್ದಾರೆ. ಮೇ 7ರಂದು ಇಸ್ರೇಲ್ ರಫಾ ಮೇಲೆ ದಾಳಿ ನಡೆಸಿತ್ತು. ಇದು ಮೇ 18 ರ ಹೊತ್ತಿಗೆ ಸುಮಾರು 800,000 ಫೆಲೆಸ್ತೀನೀಯರನ್ನು ಸ್ಥಳಾಂತರಿಸಿದೆ. ಈ ಅಪಾಯಗಳನ್ನು ಈಗ ಅರಿತುಕೊಳ್ಳಲು ಪ್ರಾರಂಭಿಸಲಾಗಿದೆ ಮತ್ತು ದಾಳಿಗಳು ಮುಂದುವರಿದರೆ ತೀವ್ರಗೊಳ್ಳುತ್ತವೆ ಎಂದು ನ್ಯಾಯಾಧೀಶರು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಹೇಳಿದರು. ವಿಚಾರಣೆಯ ಸಮಯದಲ್ಲಿ, ಗಾಜಾ ಪಟ್ಟಿಯ ಜನರ ವಿನಾಶಕಾರಿ ಜೀವನ ಪರಿಸ್ಥಿತಿಗಳು ಹದಗೆಟ್ಟಿವೆ ಎಂದು ನ್ಯಾಯಾಲಯ ವಿಷಾದಿಸಿತು. ದೀರ್ಘಕಾಲದ ಮತ್ತು ವ್ಯಾಪಕವಾದ ಆಹಾರದ ಕೊರತೆಯಿಂದಾಗಿ, ಅಲ್ಲಿನ ಜನರ…
ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಕೃತಕ ಬುದ್ಧಿಮತ್ತೆಯಿಂದಾಗಿ (AI) “ಬಹುಶಃ ನಮ್ಮಲ್ಲಿ ಯಾರಿಗೂ ಕೆಲಸ ಸಿಗುವುದಿಲ್ಲ” ಎಂದು ಟೆಸ್ಲಾ ಮತ್ತು ಎಕ್ಸ್ ಮಾಲೀಕ ಎಲೋನ್ ಮಸ್ಕ್ ಸಂದರ್ಶನವೊಂದರಲ್ಲಿ ಹೇಳಿದರು. ವಿವಾ ಟೆಕ್ ಈವೆಂಟ್ನಲ್ಲಿ ವೆಬ್ಕ್ಯಾಮ್ ಮೂಲಕ ಮಾತನಾಡಿದ ಎಲೋನ್ ಮಸ್ಕ್, ಕೃತಕ ಬುದ್ಧಿಮತ್ತೆ (ಎಐ) ಅಂತಿಮವಾಗಿ ಎಲ್ಲಾ ಉದ್ಯೋಗಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಬಹುಶಃ ನಮ್ಮಲ್ಲಿ ಯಾರಿಗೂ ಕೆಲಸ ಸಿಗುವುದಿಲ್ಲ. ಭವಿಷ್ಯದಲ್ಲಿ, ಎಐ ಮತ್ತು ರೋಬೋಟ್ ಗಳು ನಿಮಗೆ ಬೇಕಾದ ಯಾವುದೇ ಸರಕು ಮತ್ತು ಸೇವೆಗಳನ್ನು ಒದಗಿಸುತ್ತವೆ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಬಗ್ಗೆ ಮಸ್ಕ್ ಕಳವಳ ಮಸ್ಕ್ ಈ ಹಿಂದೆ ಎಐ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ಈಗ ಗುರುವಾರ ತಮ್ಮ ಮುಖ್ಯ ಭಾಷಣದಲ್ಲಿ, ಅವರು ತಂತ್ರಜ್ಞಾನವನ್ನು ತಮ್ಮ “ಅತಿದೊಡ್ಡ ಭಯ” ಎಂದು ಬಣ್ಣಿಸಿದರು. ಅವರು ಇಯಾನ್ ಬ್ಯಾಂಕ್ಸ್ ಅವರ “ಕಲ್ಚರ್ ಬುಕ್ ಸೀರೀಸ್” ಅನ್ನು ಉಲ್ಲೇಖಿಸಿದರು, ಇದು ಸುಧಾರಿತ ತಂತ್ರಜ್ಞಾನದಿಂದ ಚಾಲಿತವಾದ ಸಮಾಜದ ಕಾಲ್ಪನಿಕ ಚಿತ್ರಣವಾಗಿದೆ, ಇದು ಅತ್ಯಂತ…
ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ಶೀಘ್ರವೇ ಅರ್ಜಿ ಹಾಕಲು ಪ್ರಾರಂಭವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿತ್ತು ಹಾಗೂ ತಿದ್ದುಪಡಿ ಕೂಡ ಅವಕಾಶ ಮಾಡಿಕೊಟ್ಟಿತ್ತು. ಆದರೆ ತುಂಬಾ ಸಲ ಅವಕಾಶ ಕೊಟ್ಟಿದ್ದರೂ ಸರ್ವರ್ ಸಮಸ್ಯೆಯಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ತುಂಬಾ ಜನರಿಗೆ ಸಾಧ್ಯವಾಗಿಲ್ಲ ಹೀಗಾಗಿ ಮತ್ತೆ ಈ ಅವಕಾಶ ನೀಡುತ್ತಿದೆ. ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಸರಕಾರವು ಜೂನ್ ತಿಂಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತೆ ಎಂಬ ಮಾಹಿತಿ ಕೂಡ ನೀಡಿದ್ದು, ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರು ಈ ಕೆಳಗಡೆ ನೀಡಿದ ಎಲ್ಲಾ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ನಂತರ ನಿಮಗೆ ಜೂನ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, APL Ration Card ) ಹೇಗೆ ಅರ್ಜಿ ಸಲ್ಲಿಸಬಹುದು.? ಅದಕ್ಕೆ ಬೇಕಿರುವಂತ…
ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು : ರಾಜ್ಯಾದ್ಯಂತ ಮೇ. 29 ರಿಂದ 2024-25 ನೇ ಸಾಲಿನ ಶಾಲೆಗಳು ಆರಂಭವಾಗಲಿದ್ದು, ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಈ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಮಕ್ಕಳನ್ನು ಈ ಬಾರಿ ಹೊಸದಾಗಿ ಒಂದನೇ ತರಗತಿ ಪ್ರವೇಶಕ್ಕೆ ಹೊರಟಿದ್ದರೆ ನೀವು ಈ ವಿಷಯಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು. ಒಂದನೇ ತರಗತಿ ಅಡ್ಮಿಷನ್ಗೆ ಮೊದಲನೇಯದಾಗಿ ಮಗುವಿನ ಆಧಾರ್ ಕಾರ್ಡ್ ಹೊಂದಿರಲೇ ಬೇಕಾಗುತ್ತದೆ. ರೇಷನ್ ಕಾರ್ಡ್ ಮತ್ತು ಮಗುವಿನ ಭಾವಚಿತ್ರವನ್ನು ನೀಡಬೇಕಾಗುತ್ತದೆ. 2 ಭಾವಚಿತ್ರವನ್ನು ನೀಡುವುದು ಕಡ್ಡಾಯ. ಇವಿಷ್ಟು ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ. ಒಂದನೇ ತರಗತಿ ಪ್ರವೇಶಕ್ಕೆ ಈ ದಾಖಲೆಗಳು ಕಡ್ಡಾಯ ಮಗುವಿನ ಆಧಾರ್ ಕಾರ್ಡ್ ಮಗುವಿನ ಜನನ ಪ್ರಮಾಣ ಪತ್ರ ಮಗುವಿನ ಜಾತಿ ಪ್ರಮಾಣ ಪತ್ರ ರೇಷನ್ ಕಾರ್ಡ್ ಪೋಷಕರ ಆಧಾರ್ ಕಾರ್ಡ್ ತಂದೆ ಅಥವಾ ತಾಯಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹೆಣ್ಣುಮಗುವಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್