Author: kannadanewsnow57

ನವದೆಹಲಿ :ಮಧುಮೇಹ ಮತ್ತು ತೂಕ ನಷ್ಟಕ್ಕೆ ಸೂಚಿಸಲಾದ ಸೆಮಾಗ್ಲುಟೈಡ್ ಎಂಬ ಔಷಧವು ಮಧುಮೇಹ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯ ರೋಗಿಗಳಲ್ಲಿ ಪ್ರಮುಖ ಮೂತ್ರಪಿಂಡ ಕಾಯಿಲೆ, ಹೃದಯರಕ್ತನಾಳದ ಘಟನೆಗಳು ಮತ್ತು ಅಕಾಲಿಕ ಸಾವಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಶುಕ್ರವಾರ ತಿಳಿಸಿದ್ದಾರೆ. ವಾರಕ್ಕೊಮ್ಮೆ ಸೆಮಾಗ್ಲುಟೈಡ್ ಪಡೆದ ರೋಗಿಗಳು ಪ್ಲಸೀಬೊ ಪಡೆದ ರೋಗಿಗಳಿಗೆ ಹೋಲಿಸಿದರೆ ಮೂತ್ರಪಿಂಡದ ಕಾಯಿಲೆ ಉಲ್ಬಣಗೊಳ್ಳುವ ಮತ್ತು ಹೃದಯರಕ್ತನಾಳದ ಅಥವಾ ಮೂತ್ರಪಿಂಡ ಸಂಬಂಧಿತ ಕಾರಣಗಳಿಂದ ಅಕಾಲಿಕ ಮರಣದ ಅಪಾಯವನ್ನು ಶೇಕಡಾ 24 ರಷ್ಟು ಕಡಿಮೆ ಮಾಡಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ. 3,500 ಕ್ಕೂ ಹೆಚ್ಚು ಭಾಗವಹಿಸುವವರನ್ನು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಅನುಸರಿಸಿದ ಪ್ರಯೋಗವು ವಾರಕ್ಕೊಮ್ಮೆ ಚಿಕಿತ್ಸೆಯು ಹೃದಯಾಘಾತದಂತಹ ಪ್ರಮುಖ ಹೃದಯರಕ್ತನಾಳದ ಘಟನೆಗಳ ಅಪಾಯವನ್ನು ಶೇಕಡಾ 18 ರಷ್ಟು ಮತ್ತು “ಎಲ್ಲಾ ಕಾರಣಗಳ ಸಾವಿನ” ಅಪಾಯವನ್ನು ಶೇಕಡಾ 20 ರಷ್ಟು ಕಡಿಮೆ ಮಾಡಿದೆ ಎಂದು ತೋರಿಸಿದೆ. ಸಂಶೋಧನೆಗಳು ಮಧುಮೇಹ ವಿರೋಧಿ ಔಷಧಿಯಾದ ಸೆಮಾಗ್ಲುಟೈಡ್ನ ಪ್ರಯೋಜನಗಳಿಗೆ ಪುರಾವೆಗಳನ್ನು ಹೆಚ್ಚಿಸಿವೆ, ಇದನ್ನು…

Read More

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತ ವೇತನದ ಕುರಿತಂತೆ ರಾಜ್ಯ ಸರ್ಕಾರವು ನಿವೃತ್ತಿ ವೇತನ ನಿಯಮಗಳನ್ನು ಸರಳೀಕರಿಸಿದ್ದು, ನಿವೃತ್ತಿ ವೇತನ ಕಡತಗಳನ್ನು ವಿಳಂಬ ಮಾಡದೆ ಸಿದ್ದಪಡಿಸಬೇಕು. ವಿಳಂಬವಾದಲ್ಲಿ ನೌಕರನಿಗೆ ಆರ್ಥಿಕ ತೊಂದರೆಗಳಾಗುತ್ತವೆ ಎಂದು ಸೂಚನೆ ನೀಡಲಾಗಿದೆ. ಕಚೇರಿ ಮುಖ್ಯಸ್ತರು ನಿವೃತ್ತರಾಗುವ ನಾನ್ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದಿರಬೇಕು. ಕಚೇರಿ ಮುಖ್ಯಸ್ತರು ನಿವೃತ್ತರಾಗುವ ಗೆಜೆಟೆಡ್ ನೌಕರನಿಂದ ನಮೂನೆ-1ಬಿ ನಲ್ಲಿ ಒಂದು ವರ್ಷ ಮೊದಲೇ ವಿವರಗಳನ್ನು ಪಡೆದು ಮಹಾಲೇಖಪಾಲರಿಗೆ ಸಲ್ಲಿಸಬೇಕು. ನಿವೃತ್ತನಾಗುವ ಸರ್ಕಾರಿ ನೌಕರನಿಂದ ಪಡೆದ ನಮೂನೆ-1ಬಿ ವಿವರಗಳನ್ನು ಮತ್ತು ಇತರೆ ದಾಖಲೆಗಳನ್ನು ನಿವೃತ್ತಿ ದಿನಾಂಕಕ್ಕಿಂತ ಮೂರು ತಿಂಗಳು ಮುಂಚಿತವಾಗಿ ಮಹಾಲೇಖಪಾಲರಿಗೆ ಕಳುಹಿಸಬೇಕು. 285 ಮೇರೆಗೆ ನಿವೃತ್ತರಾಗುವ ನೌಕರರ ವಿವರಗಳನ್ನು 1 ಬಿ ನಮೂನೆಯಲ್ಲಿ ಸ್ವಯಂ ನಿವೃತ್ತಿ ಅಂಗೀಕಾರ ಆದೇಶ ಬಂದ ನಂತರ ಪಡೆದು ನಿವೃತ್ತಿ ವೇತನ ಕಡತ ತಯಾರಿಸಬೇಕು. ಮಹಾಲೇಖಪಾಲರು ಪ್ರತಿ ವರ್ಷದ ಜನವರಿ31 ಮತ್ತು ಜುಲೈ-31 ನಲ್ಲಿ ಮುಂದಿನ 12 ಮತ್ತು 18…

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಲಾಕಪ್‌ ಡೆತ್‌ ನಿಂದ ವ್ಯಕ್ತಿ ಸಾವನ್ನಪ್ಪಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಾವನ್ನಪ್ಪಿದ ಆದೀಲ್‌ ನ ತಂದೆಯೇ ಇದು ಲಾಕಪ್‌ ಡೆತ್‌ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವಿಗೆ ಪೊಲೀಸರು ಕಾರಣರಲ್ಲ, ಲೋ ಬಿಪಿಯಾಗಿ ನನ್ನ ಮಗ ಸಾವನ್ನಪ್ಪಿದ್ದಾನೆ. ನನ್ನ ಮಗನ ದೇಹದ ಮೇಲೆ ಯಾವುದೇ ಗಾಯಗಳಿಲ್ಲ ಎಂದು ಆದೀಲ್‌ ತಂದೆಯೇ ಸ್ಪಷ್ಟನೆ ನೀಡಿದ್ದಾರೆ. ಚನ್ನಗಿರಿಯ ಟಿಪ್ಪು ನಗರದ ವಾಸಿ ಬಡಿಗೆ ಕೆಲಸಗಾರ ಆದಿಲ್‌ ಮೃತ ವ್ಯಕ್ತವಾಗಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದ ಶಂಕೆ ಮೇರೆ ಪೊಲೀಸರು ಆದಿಲ್‌ ನನ್ನು ಶುಕ್ರವಾರ ಮಧ್ಯಾಹ್ನ ಠಾಣೆಗೆ ಕರೆತಂದು, ವಿಚಾರಣಗೊಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಲಾಕಪ್‌ ನಲ್ಲಿದ್ದ ಆದಿಲ್‌ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆತನನ್ನು ಚಿಕಿತ್ಸಗೆಂದು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು, ಸ್ಥಳೀಐರು ಸೇರಿ ಸುಮಾರು ೫೦೦…

Read More

ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಜಿ.ಆರ್. ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಮೇ.27 ರಂದು ಸಿಸಿಬಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ತೆಲುಗು ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಪಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ನಟ-ನಟಿಯರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಳಿಕ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದು ರಕ್ತಪರೀಕ್ಷೆ ನಡೆಸಿದ್ದು, ಈ ವೇಳೆ ನಟಿ ಹೇಮಾ ಸೇರಿದಂತೆ ಹಲವರು ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದೆ.

Read More

ನವದೆಹಲಿ: ಭಾರತದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನಕ್ಕೆ ಹೋಗುತ್ತಿದ್ದಂತೆ, ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಮತ್ತೊಮ್ಮೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದಾರೆ. ವಿಶೇಷವೆಂದರೆ, ಮದ್ಯದ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಚೌಧರಿ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದರು. “ಶಾಂತಿ ಮತ್ತು ಸೌಹಾರ್ದತೆಯು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿ” ಎಂದು ಚೌಧರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಬರೆದಿದ್ದಾರೆ. ಮೇ 10 ರಂದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಜ್ರಿವಾಲ್ ಮಧ್ಯಂತರ ಜಾಮೀನು ಪಡೆದಾಗ, ಚೌಧರಿ ಈ ಬೆಳವಣಿಗೆಯನ್ನು ಭಾರತೀಯ ಪ್ರಧಾನಿಗೆ “ಮತ್ತೊಂದು ಯುದ್ಧ” ನಷ್ಟ ಎಂದು ಕರೆದಿದ್ದರು. https://twitter.com/fawadchaudhry/status/1794250973361373297?ref_src=twsrc%5Etfw%7Ctwcamp%5Etweetembed%7Ctwterm%5E1794250973361373297%7Ctwgr%5E69ed96eda34780270f29eff6723719b9b1a47c24%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fhindustantimes-epaper-dh6a1e8229c99f4403a520ea1f381dcb4f%2Floksabhaelectionsphase61113crorevoterstocastvotein58seatstosealfateof889candidates10points-newsid-n611534372

Read More

ರಾಯಚೂರು : ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಘೋರ ದುರಂತವೊಂದು ಸಂಭವಿಸಿದ್ದು, ಅರೆಬರೆ ವಿದ್ಯುತ್‌ ಕಾಮಗಾರಿಗೆ 2 ವರ್ಷದ ಕಂದಮ್ಮ ಬಲಿಯಾಗಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಅರೆಬರೆ ವಿದ್ಯುತ್‌ ಕಾಮಗಾರಿಯಿಂದ ವಿದ್ಯುತ್‌ ಶಾಕ್‌ ನಿಂದ ಎರಡು ವರ್ಷದ ಮಗು ಮೃತಪಟ್ಟಿದೆ. ಬೋರ್‌ ವೆಲ್‌ ಬಳಿ ಗ್ರಾಮಪಂಚಾಯಿತಿ ಸಿಬ್ಬಂದಿಗಳು ಅರೆಬರೆ ವಿದ್ಯುತ್‌ ಕಾಮಗಾರಿ ನಡೆಸಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ವಿದ್ಯುತ್‌ ಶಾಕ್‌ ನಿಂದ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More

ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾಹಿತಿ ನೀಡಿದ್ದಾರೆ. ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ ಡೋಕರೆ ಎಂಬಾತನನ್ನು ಬೆಳಗಾವಿ ಗ್ರಾಮೀಣಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿಣೈ ಗ್ರಾಮದ ತಿಪ್ಪಣ ಎಂಬಾತ ಮೂರು ವರ್ಷದಿಂದ ಅದೇ ಗ್ರಾಮದ ಯುವತಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಯುವತಿ ಬಿಕಾಂ ಓದುತ್ತಿದ್ದು, ನಿತ್ಯ ಕಾಲೇಜಿಗೆ ಹೋಗುವಾಗಲೂ ಮದುವೆಯಾಗುವಂತೆ ರೇಗಿಸುತ್ತಿದ್ದ. ಇದರಿಂದ ಬೇಸತ್ತ ಯುವತಿ ಓದು ನಿಲ್ಲಿಸಿದ್ದಾಳೆ. ಆದರೂ ತಿಪ್ಪಣ ಮನೆಗೆ ಹೋಗಿ ಯುವತಿ ತಾಯಿಗೂ ಬೆದರಿಕೆ ಹಾಕಿದ್ದಾನೆ. ಕಳೆದ  ಕೆಲ ದಿನಗಳ ಹಿಂದೆ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ತಿಪ್ಪಣ್ಣ, ಮನೆ ಹಿಂಬಾಗಿಲಿನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಇದರಿಂದ ರೋಸಿ ಹೋದ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಮತ್ತೆ ತಿಪ್ಪಣ…

Read More

ಮೈಸೂರು : ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲಿ ನಡೆದಿದೆ ಎನ್ನಲಾದ ಲಾಕ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ  ಚನ್ನಗಿರಿ ಪಟ್ಟಣದಲ್ಲಿ ಲಾಕ್‌ ಡೆತ್‌ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದಿರುವುದು ಲಾಕಪ್‌ ಡೆತ್‌ ಅಲ. ಆರೋಪಿಗೆ ಪಿಟ್ಸ್‌ ಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರೊಳಗೆ ಆರೋಪಿ ಸಾವನ್ನಪ್ಪಿದ್ದಾನೆ. ಆದರೂಊ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ನನ್ನ ಮಗ ರಾಕೇಶ್‌ ೨೦೧೬ ರಲ್ಲಿ ಸತ್ತು ಹೋಗಿದ್ದಾನೆ. ರಾಕೇಶ್‌ ಸತ್ತು ೮ ವರ್ಷವಾಗಿದೆ. ಈಗ ರಾಕೇಶ್‌ ಸಾವಿನ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ರಾಜಕೀಯಕ್ಕಾಗಿ ಮಗ ರಾಕೇಶ್ ಸಾವಿನ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ರಾಕೇಶ್‌ ಸತ್ತು ೮ ವರ್ಷಗಳು ಆಗಿದೆ. ಈಗ ಯಾಕೆ ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಈ ವಿಚಾರ ಪ್ರಸ್ತಾಪ ಮಾಡುವುದು ಮೂರ್ಖತನ ಎಂದು ಕುಮಾರಸ್ವಾಮಿ…

Read More

ಮೈಸೂರು : ನನ್ನ ಮಗ ರಾಕೇಶ್‌ 2016 ರಲ್ಲಿ ಸತ್ತು ಹೋಗಿದ್ದಾನೆ. ರಾಕೇಶ್‌ ಸತ್ತು 8 ವರ್ಷವಾಗಿದೆ. ಈಗ ರಾಕೇಶ್‌ ಸಾವಿನ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಮಗ ರಾಕೇಸ್‌ ಸಾವಿನ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ರಾಕೇಶ್‌ ಸತ್ತು 8 ವರ್ಷಗಳು ಆಗಿದೆ. ಈಗ ಯಾಕೆ ಅದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. ಈ ವಿಚಾರ ಪ್ರಸ್ತಾಪ ಮಾಡುವುದು ಮೂರ್ಖತನ ಎಂದು ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇನ್ನೂ ಚನ್ನಗಿರಿ ಪಟ್ಟಣದಲ್ಲಿ ಲಾಕ್‌ ಡೆತ್‌ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಚನ್ನಗಿರಿಯಲ್ಲಿ ನಡೆದಿರುವುದು ಲಾಕಪ್‌ ಡೆತ್‌ ಅಲ. ಆರೋಪಿಗೆ ಪಿಟ್ಸ್‌ ಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರೊಳಗೆ ಆರೋಪಿ ಸಾವನ್ನಪ್ಪಿದ್ದಾನೆ. ಆದರೂಊ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Read More

ನವದೆಹಲಿ : ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಇಂದು ದೆಹಲಿಯಲ್ಲಿ ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದರು. ತಮ್ಮ ನಿಯೋಜಿತ ಮತಗಟ್ಟೆಯಲ್ಲಿ ಮೊದಲ ಪುರುಷ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಸ್ ಜೈಶಂಕರ್ ಕೂಡ ಮತ ಚಲಾಯಿಸಲು ಪ್ರಮಾಣಪತ್ರವನ್ನು ಪಡೆದರು. “ನಾನು ಈ ಬೂತ್ನಲ್ಲಿ ಮೊದಲ ಪುರುಷ ಮತದಾರನಾಗಿದ್ದೆ” ಎಂದು ಜೈಶಂಕರ್ ತಮ್ಮ ಪ್ರಮಾಣಪತ್ರವನ್ನು ಹಿಡಿದು ಹೇಳಿದರು. ದೆಹಲಿಯ ಮತದಾರರು ಮತ್ತೊಮ್ಮೆ ಮೋದಿ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವನ್ನು ವಿದೇಶಾಂಗ ಸಚಿವರು ವ್ಯಕ್ತಪಡಿಸಿದರು. ಇದು ದೇಶಕ್ಕೆ ನಿರ್ಣಾಯಕ ಕ್ಷಣವಾಗಿರುವುದರಿಂದ ಜನರು ಹೊರಬಂದು ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಜೈಶಂಕರ್ ನಂತರ ಪ್ರಮಾಣಪತ್ರದೊಂದಿಗೆ ತಮ್ಮ ಫೋಟೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. https://twitter.com/DrSJaishankar/status/1794197972814893471?ref_src=twsrc%5Etfw%7Ctwcamp%5Etweetembed%7Ctwterm%5E1794197972814893471%7Ctwgr%5E52ed7bfd2d3a4386ee8808a53830198d1430f1b0%7Ctwcon%5Es1_c10&ref_url=https%3A%2F%2Fapi-news.dailyhunt.in%2F

Read More