Author: kannadanewsnow57

ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೇಸಿಗೆ ಬಿಸಿಲು ಹೆಚ್ಚಾದಂತೆ ಮಾಂಸ, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ತರಕಾರಿಗಳ ಬೆಲೆ ಹೆಚ್ಚಾಗುತ್ತಿದ್ದು, ಸೌತೆ ಕಾಯಿ, ನಿಂಬೆ ಹಣ್ಣು ಸೇರಿದಂತೆ ಅಗತ್ಯ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.ದಿನದಿಂದ ದಿನಕ್ಕೆ ಬಿಸಿಲಿನ ತಾಪವು ಹೆಚ್ಚಾಗುತ್ತಿದ್ದು, ಬಿಸಿಲಿನ ಪ್ರಮಾಣ ಇದೇ ರೀತಿ ಹೆಚ್ಚಾಗುತ್ತಿದ್ದರೆ ತರಕಾರಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬೀನ್ಸ್ ಕೆಜಿಗೆ 70 ರೂ. ಇದ್ದರೆ ಮೂಲಂಗಿ 35 ರೂ, ಹಾಗಲಕಾಯಿ 60 ರೂ, ಈರುಳ್ಳಿ 40 ರೂ. ಬೆಂಡೆಕಾಯಿ 30 ರೂ. ಬೆಳ್ಳಳ್ಳಿ 300 ರೂ. ಮೆಣಸಿನಕಾಯಿ 60 ರೂ, ನುಗ್ಗೆಕಾಯಿ 80 ರೂ.ಗೆ ಮಾರಟವಾಗುತ್ತಿದೆ. ಚಿಕನ್, ಮಟನ್ ಬೆಲೆ ಏರಿಕೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಕಿನ್ ಔಟ್ ಬಾಯ್ಲರ್ ಕೋಳಿ ಕೆಜಿಗೆ 230-240 ರೂ.ವರೆಗೆ ಏರಿಕೆಯಾಗಿದೆ. ಕುರಿ ಮಾಂಸ 700-800 ರೂವರೆಗೆ ಮಾರಾಟವಾಗುತ್ತಿದೆ.

Read More

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬುಧವಾರ ಗರಿಷ್ಠ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ 44.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಲಬುರಗಿಯಲ್‌ಇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ತಾಪಮಾನವಾಗಿದೆ. ಕಲಬುರಗಿಯ ಜಿಲ್ಲೆಯ ನೆಲೋಗಿಯಲ್ಲಿ 42.2, ಸೇಡಂನ ಅಡಕಿಯಲ್ಲಿ 43.5 ಕಲಬುರಗಿ ಪಟ್ಟಣದಲ್ಲಿ 43.5 ಸೇರಿದಂತೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಬುಧವಾರ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ ನೀಡಿದ್ದು, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮಾಸಿಕ 15 ರಿಂದ 19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅತಿಥಿ ಉಪನ್ಯಾಸಕರ ಈ ಸಾಂದರ್ಭಿಕ ರಜೆ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ.ಇದಕ್ಕೆ ಆಕ್ಷೇಪಿಸಿರುವ ಅತಿಥಿ ಉಪನ್ಯಾಸಕರು ರಜೆ ದಿನದ ಕಾರ್ಯಭಾರ ಬೇರೆ ದಿನ ಸರಿದೂಗಿಸಬೇಕು ಎನ್ನುವುದಾದರೆ ಅದು ರಜೆ ಹೇಗಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರ ಷರತ್ತು ರಹಿತವಾಗಿ ಬೇಡಿಕೆ ಈಡೇರಿಸಲು ಸಿದ್ಧವಾಗಿದ್ದರೂ ಅಧಿಕಾರಿಗಳು ಬಿಡುತ್ತಿಲ್ಲ. ಅನಗತ್ಯ ಸಲಹೆ ನೀಡಿ ಅನುಕೂಲವಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

Read More

ನವದೆಹಲಿ : ದೇಶಾದ್ಯಂತ ತಾಪಮಾನ ಹೆಚ್ಚಳವಾಗಿದ್ದು, ಸಾರ್ವಜನಿಕರ ಆರೋಗ್ಯದ ಕುರಿತು ಭಾರತೀಯ ಹವಾಮಾನ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತ ಹವಾಮಾನ ಇಲಾಖೆ (IMD) ಯು ಪ್ರಸಕ್ತ ವರ್ಷದಲ್ಲಿ ಅತೀ ಹೆಚ್ಚು ತಾಪಮಾನ (heat wave) ಕುರಿತು ಹೊರಡಿಸಿದ ಮುನ್ಸೂಚನೆ ಅನ್ವಯ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನವನ್ನು ಸೂಚಿಸುತ್ತದೆ. ಪ್ರಸ್ತುತ, ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD)ಯು 2024 ರ ಏಪ್ರಿಲ್ 01 ರಂದು ಬಿಡುಗಡೆ ಮಾಡಲಾದ ಹವಾಮಾನ ಸಂಭವನೀಯತೆಯ ಮುನ್ನೋಟವನ್ನು ಆಧರಿಸಿ, ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ ಮಾಹೆಯಿಂದ ಮೇ- 2024 ರ ಅವಧಿಯಲ್ಲಿ ಮುಂಬರುವ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದು ಸೂಚಿಸಿರುತ್ತದೆ. ತಾಪಮಾನದ ಮುನ್ಸೂಚನೆಯ ಹೆಚ್ಚಳವು ರಾಜ್ಯದಾದ್ಯಂತ ಸಾಮಾನ್ಯ ಶಾಖದ ಅಲೆಗಳ…

Read More

ನವದೆಹಲಿ : ಮಹಿಳೆಯರಿಗಾಗಿ ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಗಳನ್ನು ನಡೆಸುತ್ತದೆ, ಈ ಯೋಜನೆಗಳ ಅಡಿಯಲ್ಲಿ, ಮಹಿಳೆಯರು ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೆ. ಅಂತಹ ಒಂದು ಯೋಜನೆ ಇದೆ, ಇದರ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿಯಿಲ್ಲದೆ ಐದು ಲಕ್ಷ ರೂಪಾಯಿಗಳ ಸಾಲವನ್ನು ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅನೇಕ ಸಾರ್ವಜನಿಕ ಸಭೆಗಳಲ್ಲಿ ಈ ಯೋಜನೆಯನ್ನು ಉಲ್ಲೇಖಿಸಿದ್ದಾರೆ. ಈ ಯೋಜನೆಯ ಹೆಸರು ಲಖ್ಪತಿ ದೀದಿ ಯೋಜನೆ, ಇದು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವಾಗಿದೆ. ಇಂದು ನಾವು ಈ ಯೋಜನೆಯ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಅವರನ್ನು ಸಮರ್ಥರನ್ನಾಗಿ ಮಾಡಲು ಸರ್ಕಾರವು ಈ ಯೋಜನೆಯನ್ನು ನಡೆಸುತ್ತಿದೆ, ಪ್ರತಿವರ್ಷ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಮತ್ತು ಇಲ್ಲಿಯವರೆಗೆ ಕೋಟ್ಯಂತರ ಮಹಿಳೆಯರು ಲಖ್ಪತಿ ದೀದಿ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರದ ಪ್ರಕಾರ, ಇದುವರೆಗೆ ಒಂದು ಕೋಟಿಗೂ ಹೆಚ್ಚು ಮಹಿಳೆಯರನ್ನು ಈ ಯೋಜನೆಯ ಲಾಭ ಪಡೆದಿದ್ದಾರೆ. ಬಡ್ಡಿ…

Read More

ವಾಷಿಂಗ್ಟನ್, : ಭಾರತದ ಆರ್ಥಿಕತೆಯು (Indian economy) 2024ರಲ್ಲಿ ಶೇ.7.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ವಿಶ್ವಬ್ಯಾಂಕ್ (World Bank) ಹೇಳಿದೆ. ಒಟ್ಟಾರೆಯಾಗಿ, ದಕ್ಷಿಣ ಏಷ್ಯಾದಲ್ಲಿ ಬೆಳವಣಿಗೆಯು 2024 ರಲ್ಲಿ ಶೇಕಡಾ 6.0 ಕ್ಕೆ ಬಲವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಮುಖ್ಯವಾಗಿ ಭಾರತದಲ್ಲಿ ದೃಢವಾದ ಬೆಳವಣಿಗೆ ಮತ್ತು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಚೇತರಿಕೆಯಿಂದ ಪ್ರೇರಿತವಾಗಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ತನ್ನ ಇತ್ತೀಚಿನ ದಕ್ಷಿಣ ಏಷ್ಯಾ ಅಭಿವೃದ್ಧಿ ನವೀಕರಣದಲ್ಲಿ ತಿಳಿಸಿದೆ. ವರದಿಯ ಪ್ರಕಾರ, ಮುಂದಿನ ಎರಡು ವರ್ಷಗಳವರೆಗೆ ದಕ್ಷಿಣ ಏಷ್ಯಾವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿ ಉಳಿಯುವ ನಿರೀಕ್ಷೆಯಿದೆ, 2025 ರಲ್ಲಿ ಬೆಳವಣಿಗೆಯು 6.1% ಎಂದು ಅಂದಾಜಿಸಲಾಗಿದೆ. “ಈ ಪ್ರದೇಶದ ಆರ್ಥಿಕತೆಯ ಬಹುಭಾಗವನ್ನು ಹೊಂದಿರುವ ಭಾರತದಲ್ಲಿ, ಉತ್ಪಾದನಾ ಬೆಳವಣಿಗೆಯು ಮಧ್ಯಮ ಅವಧಿಯಲ್ಲಿ 6.6% ಕ್ಕೆ ಮರಳುವ ಮೊದಲು ಹಣಕಾಸು ವರ್ಷ 23/24 ರಲ್ಲಿ 7.5% ತಲುಪುವ ನಿರೀಕ್ಷೆಯಿದೆ, ಸೇವೆಗಳು ಮತ್ತು ಉದ್ಯಮದಲ್ಲಿನ ಚಟುವಟಿಕೆಯು ದೃಢವಾಗಿ ಉಳಿಯುವ ನಿರೀಕ್ಷೆಯಿದೆ” ಎಂದು ಬ್ಯಾಂಕ್ ತನ್ನ ವರದಿಯಲ್ಲಿ…

Read More

ಬೆಂಗಳೂರು : ದಿನಾಂಕ: 01.04.2006 ರ ಪೂರ್ವದಲ್ಲಿ ನೇಮಕಾತಿಯಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನಾ ವ್ಯಾಪ್ತಿಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ದಿನಾಂಕ:01-04-2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಸಂಬಂಧಪಟ್ಟ ಸರ್ಕಾರಿ ನೌಕರರಿಂದ ಅಭಿಮತ ಪಡೆದು ಕ್ರಮ ಕೈಗೊಳ್ಳುವ ಸಂಬಂಧ ಈ ಕಳಕಂಡ ಷರತ್ತುಗಳಿಗೆ ಒಳಪಟ್ಟು ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ. 1. ದಿನಾಂಕ:01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ದಿನಾಂಕ:30.06.2024ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಈ ಆಯ್ಕೆಯನ್ನು…

Read More

ಬೆಂಗಳೂರು : ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ / ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಿದ್ದು, ಮುಂದಿನ 2024-25 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE (ಪರೀಕ್ಷೆಗಳು/ ಮೌಲ್ಯಂಕನ,ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2024 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು…

Read More

ಕಲಬುರಗಿ : ರೈತರ 3.50 ಕೋಟಿ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂದ ಕೇಂದ್ರ ಬಿಜೆಪಿ ಸರ್ಕಾರ, ಶ್ರೀಮಂತರ 12 ಲಕ್ಷ ಕೋಟಿ‌ ಸಾಲ ಮನ್ನಾ ಮಾಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳಿದರೆ, ನಾವು ಬದುಕು ಕಟ್ಟುವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ನಮ್ಮ ಸರ್ಕಾರದ ಜನಪರ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ ಧರ್ಮದ ಮಿತಿ ದಾಟಿ ಎಲ್ಲರಿಗೂ ತಲುಪಿಸುತ್ತಿರುವುದು ನೋಡಿ ಬಿಜೆಪಿ ನಾಯಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.‌ ಜನರ ತೆರಿಗೆಯ ದುಡ್ಡನ್ನು ಈ ಯೋಜನೆಗಳ ಮೂಲಕ ಮತ್ತೆ ಜನರಿಗೆ ವಾಪಸ್ ಕೊಡುತ್ತಿದ್ದೇವೆ. ಇದಕ್ಕೆ ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದಾರೆ. ” ಬಿಜೆಪಿಗರು ಬರೀ ವಾಟ್ಸಪ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುತ್ತಾರೆ ಅವರಿಗೆ ವಾಸ್ತವ ಗೊತ್ತಿಲ್ಲ.‌ ಬಡತನ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸಂಸದ ಉಮೇಶ ಜಾಧವ ಅವರು…

Read More

ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ, ಏಪ್ರಿಲ್ ಫೂಲ್ ದಿನದಂದು ಆತ್ಮಹತ್ಯೆ ಮಾಡಿಕೊಂಡಂತೆ ನಟಿಸಿ ತನ್ನ ಸ್ನೇಹಿತರನ್ನು ತಮಾಷೆ ಮಾಡಲು ಪ್ರಯತ್ನಿಸುತ್ತಿದ್ದ 11 ನೇ ತರಗತಿ ವಿದ್ಯಾರ್ಥಿ ಸ್ಟೂಲ್ ಮೇಲೆ ಕಾಲು ಜಾರಿ ಬಿದ್ದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯು ವಿಡಿಯೋ ಚಾಟ್ನಲ್ಲಿದ್ದಾಗ ತನ್ನ ನಕಲಿ ಆತ್ಮಹತ್ಯೆ ಪ್ರಯತ್ನದಿಂದ ತನ್ನ ಸ್ನೇಹಿತರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಘಟನೆಯ ನಂತರ, ಮೃತನ ಸ್ನೇಹಿತರು ಕುಟುಂಬಕ್ಕೆ ಮಾಹಿತಿ ನೀಡಿದರು, ನಂತರ ಕುಟುಂಬವು ಮೃತನ ಕೋಣೆಗೆ ಧಾವಿಸಿತು, ಅಲ್ಲಿ ಅವನು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಕೆಳಕ್ಕೆ ಇಳಿಸಲಾಯಿತು ಮತ್ತು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ವರದಿಗಳು ಸೂಚಿಸುತ್ತವೆ. ಹೇಳಿಕೆಗಳ ಪ್ರಕಾರ, ಕುತ್ತಿಗೆಗೆ ಹಗ್ಗವನ್ನು ಸುತ್ತಿ, ಸ್ಟೂಲ್ ಮೇಲೆ ನಿಂತು, ವಿದ್ಯಾರ್ಥಿ ತನ್ನ ನಕಲಿ ಆತ್ಮಹತ್ಯೆಯ ಬಗ್ಗೆ ತನ್ನ ಸ್ನೇಹಿತನೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡುತ್ತಿದ್ದನು. ಈ ವೇಳೆ ಸ್ಟೂಲ್ ಜಾರಿ ಬಿದ್ದು…

Read More