Subscribe to Updates
Get the latest creative news from FooBar about art, design and business.
Author: kannadanewsnow57
ಶೋಪಿಯಾನ್ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಶಂಕಿತ ಭಯೋತ್ಪಾದಕರು ವಲಸೆ ಕಾರ್ಮಿಕನ ಮೇಲೆ ಗುಂಡು ಹಾರಿಸಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ ದಿಲ್ರನ್ಜೀತ್ ಸಿಂಗ್ ಅವರ ಮೇಲೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಹೆರ್ಪೊರಾ ಪ್ರದೇಶದಲ್ಲಿ ರಾತ್ರಿ 9 ಗಂಟೆಗೆ ಗುಂಡು ಹಾರಿಸಲಾಗಿದೆ. ಸಿಂಗ್ ಅವರನ್ನು ಶೋಪಿಯಾನ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿಂದ ಅವರನ್ನು ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಈ ಪ್ರದೇಶವನ್ನು ಸುತ್ತುವರೆದಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ಸಿಇಟಿ ಪರೀಕ್ಷೆಯ ಪ್ರವೇಶ ಪತ್ರಗಳು ಡೌನ್ ಲೋಡ್ ಆಗುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಯುಜಿಸಿಇಟಿ 2024ಕ್ಕೆ ಸಂಬಂಧಿಸಿದಂತೆ ಯುಜಿನೀಟ್ ಅನ್ನು ಮಾತ್ರ ಆಯ್ಕೆ ಮಾಡಿರುವ ಅಭ್ಯರ್ಥಿಗಳಿಗೆ ಸಿಇಟಿ ಪ್ರವೇಶ ಪತ್ರ ಡೌನ್‌ಲೋಡ್ ಆಗುವುದಿಲ್ಲ. ಸದರಿ ಅಭ್ಯರ್ಥಿಗಳಿಗೆ ನೀಟ್ ಸೀಟು ಹಂಚಿಕೆಯಲ್ಲಿ (ವೈದ್ಯಕೀಯ/ದಂತವೈದ್ಯಕೀಯ/ಆಯುಷ್) ಭಾಗವಹಿಸಲು ಅವಕಾಶವಿರುತ್ತದೆ ಎಂದು ತಿಳಿಸಿದೆ.
ಯುಗಾದಿ ಹಬ್ಬದ ದಿನ ಮುಂಜಾನೆ ಎದ್ದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮನೆಯನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗುತ್ತದೆ. ಈ ದಿನ ದೇವರಿಗೆ ಪೂಜೆ ಮಾಡಿ ಹಬ್ಬದ ತಿನಿಸು ತಿನ್ನುವ ಮುನ್ನ ಬೇವು ಬೆಲ್ಲ ಸೇವನೆ ಮಾಡಲಾಗುತ್ತದೆ. ಬೇವು ಬೆಲ್ಲದ ಸೇವನೆ ಯಾಕೆ ಮಾಡಬೇಕು ಅನ್ನೋದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬೇವು ಬೆಲ್ಲವನ್ನು ಮಿಕ್ಸ್ ಮಾಡಿಕೊಂಡು ಎರಡನ್ನೂ ಸೇವನೆ ಮಾಡಬೇಕು. ಯಾಕೆ ಗೊತ್ತ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ನೀಡಲಾಗುತ್ತದೆ. . ಜೀವನದಲ್ಲಿ ನಮಗೆ ಕೇವಲ ಸಂತೋಷ ಮಾತ್ರ ಬೇಕು ಎಂದರೆ ಸಿಗೋದಿಲ್ಲ. ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ಎರಡು ಜೊತೆಯಾದಾಗ ಮಾತ್ರ ಜೀವನದ ನಿಜವಾದ ಅರ್ಥ ನಮಗೆ ತಿಳಿಯುತ್ತದೆ.…
ಈ ವರ್ಷದ ಮೊದಲ ಸೂರ್ಯಗ್ರಹಣವು ಮೆಕ್ಸಿಕೊ ಮತ್ತು ಅಮೆರಿಕದಲ್ಲಿ ಪ್ರಾರಂಭವಾಗಿತ್ತು. ಸಂಪೂರ್ಣ ಸೂರ್ಯಗ್ರಹಣವು ಮೊದಲು ಮೆಕ್ಸಿಕೊದ 603 ಕಿಲೋಮೀಟರ್ ಇಸ್ಲಾ ಸೊಕೊರೊ ದ್ವೀಪವನ್ನು ಪ್ರವೇಶಿಸಿತು. ಈ ವೇಳೆ ಸಂಪೂರ್ಣ ಕತ್ತಲೆ ಆವರಿಸಿತ್ತು. ಸೂರ್ಯ ಗ್ರಹಣವು ಕೆನಡಾದಲ್ಲಿಯೂ ಗೋಚರಿಸುತ್ತದೆ. ಯುಎಸ್ನಲ್ಲಿ, ಗ್ರಹಣದ ಹಾದಿಯಲ್ಲಿರುವ ಕನಿಷ್ಠ 12 ರಾಜ್ಯಗಳು ಸುಮಾರು 4 ನಿಮಿಷ 28 ಸೆಕೆಂಡುಗಳ ಕಾಲ ಕತ್ತಲೆಯಲ್ಲಿ ಆವರಿಸಿದ್ದವು. ಅದೇ ಸಮಯದಲ್ಲಿ, 54 ದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಸಂಭವಿಸಿದೆ. ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರಿಸಿಲ್ಲ, ಏಕೆಂದರೆ ಗ್ರಹಣ ಪ್ರಾರಂಭವಾದಾಗ, ಇಲ್ಲಿ ರಾತ್ರಿಯಾಗಿತ್ತು. ಇದು ಕಳೆದ ಹಲವು ವರ್ಷಗಳ ಅತ್ಯಂತ ವಿಶಿಷ್ಟ ಖಗೋಳ ಘಟನೆಯಾಗಲಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ (ನಾಸಾ) ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣವನ್ನು ಲೈವ್ ಸ್ಟ್ರೀಮ್ ಮಾಡಿದ್ದು, ಸೂರ್ಯ ಗ್ರಹಣದ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದೆ. https://twitter.com/NASA/status/1777399079124742451?ref_src=twsrc%5Etfw%7Ctwcamp%5Etweetembed%7Ctwterm%5E1777399079124742451%7Ctwgr%5E46a306f5a40a4bf274ff60f682d5125374d10589%7Ctwcon%5Es1_c10&ref_url=https%3A%2F%2Fapi-news.dailyhunt.in%2F https://twitter.com/VishalVerma_9/status/1777404114592243999?ref_src=twsrc%5Etfw%7Ctwcamp%5Etweetembed%7Ctwterm%5E1777404114592243999%7Ctwgr%5E46a306f5a40a4bf274ff60f682d5125374d10589%7Ctwcon%5Es1_c10&ref_url=https%3A%2F%2Fapi-news.dailyhunt.in%2F https://twitter.com/queeenthang/status/1777407233514439114?ref_src=twsrc%5Etfw%7Ctwcamp%5Etweetembed%7Ctwterm%5E1777407233514439114%7Ctwgr%5E46a306f5a40a4bf274ff60f682d5125374d10589%7Ctwcon%5Es1_c10&ref_url=https%3A%2F%2Fapi-news.dailyhunt.in%2F https://twitter.com/patel_Hardik_0/status/1777412071522717772?ref_src=twsrc%5Etfw%7Ctwcamp%5Etweetembed%7Ctwterm%5E1777412071522717772%7Ctwgr%5E46a306f5a40a4bf274ff60f682d5125374d10589%7Ctwcon%5Es1_c10&ref_url=https%3A%2F%2Fapi-news.dailyhunt.in%2F https://twitter.com/VishalVerma_9/status/1777410654661640488?ref_src=twsrc%5Etfw%7Ctwcamp%5Etweetembed%7Ctwterm%5E1777410654661640488%7Ctwgr%5E46a306f5a40a4bf274ff60f682d5125374d10589%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಬೆಂಗಳೂರು: ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಕಣದಿಂದ 53 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ್ರೆ, ಕಣದಲ್ಲಿ ಬರೋಬ್ಬರಿ 247 ಅಭ್ಯರ್ಥಿಗಳಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ಇಂದು ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಏಪ್ರಿಲ್.6ರಂದು ಒಬ್ಬರು ಹಾಗೂ ಇಂದು 52 ಸೇರಿದಂತೆ 53 ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದೆ. ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳಿದ್ದಾರೆ. ಇವರಲ್ಲಿ 226 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಆಗಿದ್ದಾರೆ ಎಂದು ಹೇಳಿದೆ. ಮೊದಲ ಹಂತದ ಲೋಕಸಭಾ ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.? ಉಡುಪಿ-ಚಿಕ್ಕಮಗಳೂರು: 10 ಹಾಸನ: 15 ದಕ್ಷಿಣ ಕನ್ನಡ: 9 ಚಿತ್ರದುರ್ಗ: 20 ತುಮಕೂರು: 18 ಮಂಡ್ಯ: 14 ಮೈಸೂರು: 18 ಚಾಮರಾಜನಗರ: 14 ಬೆಂಗಳೂರು ಗ್ರಾಮೀಣ: 15 ಬೆಂಗಳೂರು…
54 ವರ್ಷಗಳ ಬಳಿಕ ಯುರೋಪ್ನಲ್ಲಿ ಅತಿ ಉದ್ದದ ಸೂರ್ಯಗ್ರಹಣ ಗೋಚರಿಸಿದೆ. ಬಾಹ್ಯಾಕಾಶ ಸಂಸ್ಥೆ ಸೌರ ಗ್ರಹಣದ ಫೋಟೋಗಳನ್ನು ಹಂಚಿಕೊಂಡಿದೆ. ಯುರೋಪಿನ ಅನೇಕ ನಗರಗಳು ಹಗಲಿನಲ್ಲಿ ಕತ್ತಲೆಯಲ್ಲಿ ಮುಳುಗಿದ್ದವು. ಭಾರತೀಯ ಕಾಲಮಾನ ರಾತ್ರಿ 9:12 ಕ್ಕೆ ಪ್ರಾರಂಭವಾದ ಸೂರ್ಯಗ್ರಹಣವು 5 ಗಂಟೆ 10 ನಿಮಿಷಗಳ ಕಾಲ ನಡೆಯಿತು. ಈ ಸಮಯದಲ್ಲಿ, ಜನರು ಈ ಅಪರೂಪದ ಖಗೋಳ ಘಟನೆಯ ಚಿತ್ರಗಳನ್ನು ತೀವ್ರವಾಗಿ ಕ್ಲಿಕ್ಕಿಸಿದರು. ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯಗ್ರಹಣದ ಕೆಲವು ವಿಶೇಷ ಚಿತ್ರಗಳನ್ನು ಹಂಚಿಕೊಂಡಿದೆ. ಇದರಲ್ಲಿ ಗ್ರಹಣದ ಉದಯಿಸುತ್ತಿರುವ ಸ್ಥಿತಿಯನ್ನು ತೋರಿಸಲಾಗಿದೆ. ಇದಲ್ಲದೆ, ಅಂತಹ ಅನೇಕ ಚಿತ್ರಗಳನ್ನು ಸಹ ಸೆರೆಹಿಡಿಯಲಾಗಿದೆ, https://twitter.com/NASA/status/1777465163777470865
ಯುಗಾದಿ ಹಬ್ಬವನ್ನು ದೇಶದ ವಿವಿಧ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ. ಹಬ್ಬಗಳ ಹೆಸರು ಬೇರೆ ಬೇರೆ ಆದರೂ ಎಲ್ಲೆಡೆ ಅದರ ಮಹತ್ವ ಏಲ್ಲಾ ಕಡೆ ಒಂದೇ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಯುಗಾದಿ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ಈ ದಿನ ತಳಿರು ತೋರಣವನ್ನು ಅಂದರೆ ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲುಗಳಿಂದ ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ಕಟ್ಟುವರು. ಆ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ. ಇವೆಲ್ಲವುಗಳ ಜೊತೆಗೆ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ…
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷದ ಹೊಸತು ಹೊಸತು ತರುತಿದೆ’ ಎಂದು ವರಕವಿ ದ.ರಾ.ಬೇಂದ್ರೆಯವರ ಯುಗಾದಿ ಬಗೆಗಿನ ಸುಂದರ ಗೀತೆಯನ್ನು ರಚಿಸಿದ್ದಾರೆ. ಪ್ರತಿ ಯುಗಾದಿ ಬಂದಾಗ ಈ ಹಾಡು ಮನಸಿನಲಿ ಗುನುಗುತ್ತದೆ. ಇದೀಗ ಮತ್ತೆ ಯುಗಾದಿ ಮನೆಮನೆಗಳಲ್ಲಿ ಬಂದಿದೆ… ಯುಗಾದಿ ಅಥವಾ ಉಗಾದಿ ಎಂದರೆ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು ಅರ್ಥ. . ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ…
ಬೆಂಗಳೂರು : ಲೋಕಸಭೆ ಕ್ಷೇತ್ರ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ನಮೂನೆ-12 ಎ ಭರ್ತಿ ಮಾಡಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 26ರ ಶುಕ್ರವಾರ ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7 ರ ಮಂಗಳವಾರ ನಡೆಸುತ್ತಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಮೂನೆ 12 ಎ ಫಾರಂ ಅನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ. ಈ ಫಾರಂ ಅನ್ನು ಮತದಾನ ದಿನದಂದು ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಾವು ಕರ್ತವ್ಯ ನಿರ್ವಹಿಸಬಹುದಾದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡಲು ಈ ನಮೂನೆಯನ್ನು ನೀಡಬೇಕಾಗಿದ್ದು, ಬಳಿಕ ನಮೂನೆ 12 ಬಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ನೀಡಲಾಗುತ್ತದೆ. ನಮೂನೆ 12 ಎ ನಲ್ಲಿ ತಾವು ಕರ್ತವ್ಯ ನಿರ್ವಹಿಸುವ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ನೀಡಬೇಕಾಗಿದ್ದು, ತಮ್ಮ ಮತದಾರರ ಗುರುತಿನ…
ಬೆಂಗಳೂರು: ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವಂತ 364 ಭೂಮಾಪಕರ ಹುದ್ದೆಗಳ ( Land Surveyors Recruitment ) ಭರ್ತಿಗೆ ಕೆಪಿಎಸ್ಸಿಯಿಂದ ( KPSC ) ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವಂತ 364 ಭೂಮಾಪಕರ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ. ಹುದ್ದೆಗಳ ವಿವರ ಉಳಿಕೆ ಮೂಲ ವೃಂದ – 264 ಹುದ್ದೆಗಳು ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದ – 100 ಹುದ್ದೆಗಳು ವೇತನ ಶ್ರೇಣಿ – ರೂ.23,500 ರಿಂದ ರೂ.47,650 ಪ್ರಮುಖ ದಿನಾಂಕಗಳು ಭೂಮಾಪಕರ 100 ಹುದ್ದೆಗಳಿಗೆ ದಿನಾಂಕ 11-03-2024ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-04-2024 ಆಗಿದೆ. ತಾತ್ಕಾಲಿಕ ಸ್ಪರ್ಧಾತ್ಮಕ ಪರೀಕ್ಷೆಯು ಕನ್ನಡ ಭಾಷಾ ಪರೀಕ್ಷೆ ದಿನಾಂಕ 06-07-2024, ಸ್ಪರ್ಧಾತ್ಮಕ ಪರೀಕ್ಷೆಯು ದಿನಾಂಕ 07-07-2024ರಂದು ನಡೆಸಲು…