Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸುವ ಅಭ್ಯರ್ಥಿಗಳು ಪುನಃ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿಂತೆ, 2023ನೇ ಸಾಲಿನಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಪೂರೈಸಿದ ಅಭ್ಯರ್ಥಿಗಳಿಗೆ ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸಲು ಮೇಲಿನ ಉಲ್ಲೇಖದನ್ವಯ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. ಅವರುಗಳಲ್ಲಿ ಕೆಲವು ಅಭ್ಯರ್ಥಿಗಳು ಉನ್ನತ ವ್ಯಾಸಂಗದ ಪರೀಕ್ಷಾ ಪೂರ್ವ ತಯಾರಿ ಹಾಗೂ ಇತರೆ ಕಾರಣಗಳಿಂದ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಗೈರು ಹಾಜರಿಯ ನಂತರ ಪುನಃ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಅಭ್ಯರ್ಥಿಗಳು ಅನುಮತಿ ನೀಡುವಂತೆ ಕೋರಿ ಈ ಆಯುಕ್ತಾಲಯಕ್ಕೆ ಮನವಿ ಸಲ್ಲಿಸಿರುತ್ತಾರೆ. ಅದರಂತೆ, ಅನುಬಂಧದಲ್ಲಿ ನಮೂದಿಸಿರುವ 45 ಅಭ್ಯರ್ಥಿಗಳಿಗೆ ಅವರು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿಯೇ ಪುನಃ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅನುಮತಿಸಿದ. ಸದರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ವಿವರಗಳನ್ನು ಉಲ್ಲೇಖದನ್ವಯ ಪರಿಶೀಲಿಸಿ ಅವರುಗಳ ಹೆಸರು, ನೋಂದಣಿ ಸಂಖ್ಯೆ ಮತ್ತು ನಿಯುಕ್ತಿಗೊಂಡ…
ಬೆಂಗಳೂರು : ಸಾರಿಗೆ ಸಿಬ್ಬಂದಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು, ಅವರ ಹಲವು ವರ್ಷಗಳ ಬೇಡಿಕೆಯಾದ ನಗದು ರಹಿತ ಆರೋಗ್ಯ ಸೇವೆಗೂ ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ. ಈಗಾಗಲೇ ಸಾರಿಗೆ ಸಚಿವರು ನೌಕರರ ಸಂಘಟನೆಗಳೊಂದಿಗೆ ಅವರ ಬೇಡಿಕೆಗಳಿಗೆ ಸಂಬಂಧಿಸಿ ದಂತೆ ಮಾತುಕತೆ ನಡೆಸಿದ್ದು, ಅವುಗಳಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿದೆ. ಅದರಲ್ಲಿ ಪ್ರಮುಖವಾಗಿ 1. ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸೇವಾ ವಿಮುಕ್ತಿ ಹೊಂದಿದ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ವ್ಯತ್ಯಾಸದ ಮೊತ್ತ ಪಾವತಿಸಲು ರೂ.224 ಕೋಟಿ ಗಳನ್ನು ನೀಡಲು ಸರ್ಕಾರವು ದಿನಾಂಕ: 07.12 2024 ರಂದು ಸರ್ಕಾರಿ ಆದೇಶ ಹೊರಡಿಸಿದೆ. ಅಧಿವೇಶನದ ನಂತರ ಹಣ ಬಿಡುಗಡೆಯಾಗಲಿದೆ 2. ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣೆಯ ಪಟ್ಟಿ ಬಿಡುಗಡೆ ಮಾಡಲಾಗಿದೆ. 2. ಭವಿಷ್ಯನಿಧಿ ಮತ್ತು ಡೀಸೆಲ್ ಬಾಕಿ ಹಣ ಪಾವತಿಗಾಗಿ ಸರ್ಕಾರವೇ ಗ್ಯಾರೆಂಟಿ ನೀಡಿ ರೂ.2000 ಕೋಟಿ ಲೋನ್ ನೀಡಿದೆ.…
ನವದೆಹಲಿ : ಕೊರೊನಾ ವೈರಸ್ ನಿಂದ ಪ್ರತಿವಾರ ವಿಶ್ವದಾದ್ಯಂತ 1,700 ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಜನರು ಈಗ ಕೋವಿಡ್ ಅನ್ನು ಲಘುವಾಗಿ ಪರಿಗಣಿಸುತ್ತಿದ್ದರೂ, ಅದು ಇನ್ನೂ ಗಂಭೀರವಾಗಿಯೇ ಉಳಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಘಾತಕಾರಿ ವರದಿ ಹೇಳುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಈ ಸಾಂಕ್ರಾಮಿಕ ರೋಗದ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜುಲೈ 2024 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯಲ್ಲಿ, ಕರೋನಾದಿಂದಾಗಿ ಪ್ರಪಂಚದಾದ್ಯಂತ ಇನ್ನೂ ಸಾವಿರಾರು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಕೊರೊನಾ ವೈರಸ್ ಪ್ರತಿ ವಾರ 1,700 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರ ಗಂಭೀರತೆಯನ್ನು ಪರಿಗಣಿಸಿ, WHO ಕಳವಳ ವ್ಯಕ್ತಪಡಿಸಿದೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. ಇದರಿಂದ…
ಬಳ್ಳಾರಿ : ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಲಾಗಿದ್ದು, ಇದೀಗ ಮತ್ತೆ 3 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಈಗಾಗಲೇ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಇದೀಗ ಮತ್ತೆ 3 ಲಕ್ಷ ರೂ.ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿತರು ಸಾವನ್ನಪ್ಪಿದ್ದರು. ಘಟನೆ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿತ್ತು. ಇದೀಗ ಈ ಪರಿಹಾರ ಮೊತ್ತವನ್ನು 3 ಲಕ್ಷ ಹೆಚ್ಚು ನೀಡಲಾಗುವುದು ಸಚಿವ ಜಮೀರ್ ಅಹ್ಮದ್ ಘೋಷಿಸಿದ್ದಾರೆ.
ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸತ್ತರೆ, ಅದು ಭಾವನಾತ್ಮಕವಾಗಿ ತುಂಬಾ ಸವಾಲಿನ ಸಂಗತಿಯಾಗಿದೆ. ಈ ಸವಾಲಿನ ಪ್ರಯಾಣದಲ್ಲಿ, ಆ ವ್ಯಕ್ತಿಯ ಅಧಿಕೃತ ದಾಖಲೆಗಳನ್ನು ಅಂದರೆ ಐಡಿ ಪುರಾವೆಯನ್ನು ಏನು ಮಾಡಬೇಕು ಎಂಬ ಪ್ರಶ್ನೆ ಯಾವಾಗಲೂ ಉದ್ಭವಿಸುತ್ತದೆ? ಈ ದಾಖಲೆಗಳನ್ನು ಇಟ್ಟುಕೊಳ್ಳಬೇಕೆ? ಒಪ್ಪಿಸಬೇಕೆ ಎಂಬ ಗೊಂದಲ ಇರುತ್ತದೆ. ವ್ಯಕ್ತಿಯ ಮರಣದ ನಂತರ ಈ ದಾಖಲೆಗಳೊಂದಿಗೆ ನೀವು ಏನು ಮಾಡಬೇಕೆಂದು ಇಲ್ಲಿದೆ ಮಾಹಿತಿ. ಆಧಾರ್ ಕಾರ್ಡ್ ಆಧಾರ್ ಕಾರ್ಡ್ ಅನ್ನು ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಲ್ಲಿ ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಸತ್ತರೆ, ಈ ಕಾರ್ಡ್ನೊಂದಿಗೆ ಏನು ಮಾಡಬೇಕು? ಪ್ರಸ್ತುತ, ಆಧಾರ್ ಕಾರ್ಡ್ ನೀಡುವ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ನಿಷ್ಕ್ರಿಯಗೊಳಿಸುವ ಬಗ್ಗೆ ಯಾವುದೇ ನಿಯಮಗಳನ್ನು ಮಾಡಿಲ್ಲ. ಇದರರ್ಥ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಒಬ್ಬ ವ್ಯಕ್ತಿಯು ಸತ್ತರೆ ನೀವು ಅದನ್ನು ನವೀಕರಿಸಲಾಗುವುದಿಲ್ಲ. ಈ ಪರಿಸ್ಥಿತಿಯಲ್ಲಿ, ಯಾರೂ ಈ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳದಂತೆ ನೀವು ಈ ಕಾರ್ಡ್…
ಮೈಸೂರು : ಮೈಸೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಬೈಕ್ ಓಡಿಸುವಾಗ ಹೃದಯಾಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೃದಯಾಘಾತವಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ಚಾಮರಾಜನಗರ ತಾಲೂಕಿನ ನಂಜೆದೇವರಪುರದ ರವಿ ಎಂದು ಗುರುತಿಸಲಾಗಿದೆ. ಬೈಕ್ ಓಡಿಸಿಕೊಂಡು ಬರುತ್ತಿದ್ದ ವೇಳೆ ಏಕಏಕಿ ಹೃದಯಾಘಾತವಾಗಿದ್ದು, ಬೈಕ್ ಸವಾರ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿಯಿಯಲ್ಲಿ ಸೆರೆಯಾಗಿದೆ. ಬೈಕ್ ಸವಾರನಿಗೆ ಹಾರ್ಟ್ ಅಟ್ಯಾಕ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿದ ಬೈಕ್, ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಬೈಕ್ ಸವಾರ ರವಿ ಮೃತಪಟ್ಟಿದ್ದಾರೆ. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9 ರಿಂದ 20ರವರೆಗೆ ಚಳಿಗಾಲ ಅಧಿವೇಶನ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಈ ಬಾರಿಯ ಚಳಿಗಾಲ ಅಧಿವೇಶನ ಬಿಸಿ ಬಿಸಿ ಚರ್ಚೆ, ವಾಕ್ಸಮರಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ಮುಡಾ ಹಗರಣದ ಆರೋಪ, ವಕ್ಫ್ ಆಸ್ತಿ ವಿವಾದ ಚರ್ಚೆಗೆ ಪ್ರಮುಖ ಬಿಂದುಗಳಾಗಬಹದು. ವಕ್ಫ್ ವಿವಾದ, ಪಡಿತರ ಚೀಟಿ ಗೊಂದಲ, ಮುಡಾ ಹಗರಣ ಸೇರಿ ಸಾಲು ಸಾಲು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳು ವಿಪಕ್ಷಗಳು ಸಜ್ಜಾಗಿವೆ. ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಚಾಟಿ ಬೀಸಲು ವಿಪಕ್ಷಗಳು ತಯಾರಿ ನಡೆಸಿವೆ. ಹಾಗೇ ಉತ್ತರ ಕರ್ನಾಟಕದ ಜಲ್ವಂತರ ಸಮಸ್ಯೆಗಳಾದ ಮೂಲಭೂತ ಸೌಕರ್ಯದ ವಿಚಾರಕ್ಕೆ ಈ ಬಾರಿಯಾದರೂ ಪರಿಹಾರ ಸಿಗುತ್ತಾ ಕಾದು ನೋಡಬೇಕಿದೆ.
ಬೆಂಗಳೂರು : ಕೃಷಿ ಜಮೀನಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೃಷಿ ಜಮೀನಿಗೆ ದಾರಿ ನೀಡುವ ಕುರಿತು ಮಹತ್ವದ ಸೂಚನೆ ನೀಡಿದೆ. ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ನ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ‘ದಾರಿ’ ಸಮಸ್ಯೆ ಇದು ಬಳಕೆದಾರ ರೈತರುಗಳಿಗೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ‘ದಾರಿ’ ಸಮಸ್ಯೆ ಬಹುಕಾಲದಿಂದಲೂ ಇದ್ದು ಅಕ್ಕಪಕ್ಕದ ಜಮೀನುಗಳ ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿರುತ್ತದೆ ಹಾಗೂ ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿರುತ್ತವೆ. ಕಂದಾಯ ಇಲಾಖೆಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಊರಿನ ವ್ಯಾಪ್ತಿಯ ನಕ್ಷೆಯನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಲು ಅವಕಾಶ ನೀಡಲಾಗುತ್ತಿದೆ. ನೀವು ನಿಮ್ಮೂರಿನ ಕಂದಾಯ ನಕ್ಷೆಯನ್ನು ಕುಳಿತಲ್ಲೇ ಡೌನ್ ಲೋಡ್ ಮಾಡಿಕೊಳ್ಳಲು ಮುಂದಿನ ಹಂತಗಳನ್ನು…
ಬೆಂಗಳೂರು : ನೋಂದಾಯಿತ ಕಾರ್ಮಿಕರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿದ್ದ ಅವಧಿಯಲ್ಲಿ ಮರಣ ಹೊಂದಿದ್ದಲ್ಲಿ ಮಾತ್ರ ಅವರ ಪತಿ/ ಪತ್ನಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿಯ ನಕಲು ಪ್ರತಿ ಪಿಂಚಣಿ ಮಂಜೂರಾತಿ ಆದೇಶ ರೇಷನ್ ಕಾರ್ಡ್ ಪ್ರತಿ ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ಬ್ಯಾಂಕ್ ಖಾತೆ ವಿವರ ಮರಣ ಪ್ರಮಾಣ ಪತ್ರ ಮೃತರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ ಅರ್ಜಿದಾರರ ಕೋರಿಕೆ ಪತ್ರ
BIG NEWS : `ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : `ವಿವಿಧ ಭತ್ಯೆಗಳ ಮರು ಪಾವತಿ’ ಕುರಿತು ಸರ್ಕಾರದಿಂದ ಮಹತ್ವದ ಆದೇಶ.!
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ತಪ್ಪಾಗಿ/ಹೆಚ್ಚುವರಿಯಾಗಿ/ಕಡಿಮೆಯಾಗಿ ಪಾವತಿಸಲಾದ ವಿವಿಧ ಭತ್ಯೆಗಳನ್ನು ಸರಿಪಡಿಸಿ ಮರುಪಾವತಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1) ರ ಆದೇಶದಂತೆ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ವೃಂದ/ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಗಳನ್ನು 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ವಿಶೇಷ ಭತ್ಯೆ ಮಂಜೂರಾತಿ ಕುರಿತಂತೆ ಹೊರಡಿಸಲಾದ ಹಿಂದಿನ ಎಲ್ಲಾ ಆದೇಶಗಳು ದಿನಾಂಕ: 01.01.2019 ರಿಂದ ಜಾರಿಗೆ ಬರುವಂತೆ ನಿರಸಗೊಳ್ಳುತ್ತದೆ. ಶೀಘ್ರಲಿಪಿಗಾರರು, ಹಿರಿಯಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ಇವರುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ. ವರಂತು ಸಚಿವರು/ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯುಕ್ತಿಗೊಳಿಸಲಾಗಿರುವ ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ನೀಡಬಹುದಾಗಿದೆ. ಹೆಚ್‌ಆರ್‌ಎಂಎಸ್…












