Author: kannadanewsnow57

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ/ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಹರಾಗಿರುತ್ತಾರೆ. ಯೋಜನೆಗೆ ಅರ್ಹ ಅವಲಂಬಿತರು ಯಾರು? ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “ಕುಟುಂಬ” (Family) ಅಂದರೆ, ಸರ್ಕಾರಿ ನೌಕರರ ಪತಿ ಅಥವಾ ಪತ್ನಿ b. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು. C. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ) 3. KASS ಯೋಜನೆಗೆ ಒಳಪಡದ ನೌಕರರ ವರ್ಗ ಸಾರ್ವಜನಿಕ ವಲಯದ (public sector…

Read More

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ವಂಚಕರು ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತಿದ್ದು, ಇದೀಗ ಸಂಕ್ರಾಂತಿಗೆ ಶಾಪಿಂಗ್ ಮಾಡಿ ಹಬ್ಬದ ದಿನದಂದು ಉಚಿತ ರೀಚಾರ್ಜ್ ಪಡೆಯಿರಿ ಸೇರಿದಂತೆ ಹಲವು ಉಡುಗೊರೆ ಇರುವ ಮೆಸೇಜ್ ಕಳುಹಿಸಿ ವಂಚನೆ ಎಸಗುತ್ತಿದ್ದಾರೆ. ನಿಮ್ಮ ಫೋನ್ ಮತ್ತು ವಾಟ್ಸಾಪ್ ಸಂಖ್ಯೆಗಳಿಗೆ ಬಂದಿರುವ ಸಂದೇಶಗಳನ್ನು ನೋಡಿದರೆ ಬ್ಯಾಂಕ್ ಖಾತೆಗಳಲ್ಲಿರುವ ಹಣವೆಲ್ಲಾ ಖಾಲಿಯಾಗಲಿದೆ ಎಂದು ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ. ಇ-ಕಾಮರ್ಸ್ ವೆಬ್‌ಸೈಟ್‌ಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೆಸರಿನಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಉದ್ದೇಶದಿಂದ ವಾಟ್ಸಪ್ ಗ್ರೂಪ್ ಗಳನ್ನು ಆಯೋಜಿಸಿ ಆಹ್ವಾನ ನೀಡಲಾಗುತ್ತಿದೆ. ಹೊಸ ಬಟ್ಟೆ, ವಾಹನ ಖರೀದಿಗೆ ರಿಯಾಯಿತಿ ನೀಡುವಂತೆ ಇ-ಮೇಲ್ ಹಾಗೂ ವಾಟ್ಸ್ ಆಪ್ ನಂಬರ್ ಗಳಿಗೆ ಜಾಹೀರಾತುಗಳನ್ನು ಕಳುಹಿಸಲಾಗುತ್ತಿದೆ. ಇತ್ತೀಚಿಗೆ ಸಿಎಂ ಹೆಸರಿನಲ್ಲಿ ಉಚಿತ ರೀಚಾರ್ಜ್ ಆಫರ್ ಎಂದು ಲಿಂಕ್ ಕಳುಹಿಸುತ್ತಿದ್ದಾರೆ, ರೂ.749 ಮೌಲ್ಯದ 3 ತಿಂಗಳ…

Read More

ಶಬರಿಮಲೆ : ಇಂದು ಮಕರ ಸಂಕ್ರಾಂತಿ ಶುಭದಿನದಂದು ಶ್ರೀ ಅಯ್ಯಪ್ಪ ಕ್ಷೇತ್ರವಾದ ಶಬರಿಮಲೆಯಲ್ಲಿ ಸಂಜೆ ಮಕರಜ್ಯೋತಿ ದರ್ಶನವಾಗಲಿದೆ. ಹೀಗಾಗಿ, ಮಕರವಿಳಕ್ಕು ಆಚರಣೆ ಮತ್ತು ಮಕರಜ್ಯೋತಿ ದರ್ಶನಕ್ಕಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಇಂದು ಪವಿತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಕರಜ್ಯೋತಿ ಕಾಣಲಿದ್ದು, ಸುಮಾರು 1.5 ಲಕ್ಷ ಭಕ್ತರು ಶಬರಿಮಲೆಗೆ ಆಗಮಿಸಿ ಈ ಕ್ಷಣವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಸಂಜೆ 6 ಗಂಟೆಯಿಂದ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಲಿವೆ. ಸಂಜೆ 6 ಗಂಟೆ ವೇಳೆಗೆ ಪೊನ್ನಂಬಾಲಮೇಡು ಬೆಟ್ಟದಲ್ಲಿ ಮಕರಜ್ಯೋತಿ ಕಾಣಲಿದೆ. ಮಕರವಿಳ್ಳಕ್ಕು ಹಬ್ಬ ಜ. 19 ರಂದು ಅಂತ್ಯಗೊಳ್ಳಲಿದೆ. ಮಕರ ಜ್ಯೋತಿಯ ಐತಿಹಾಸಿಕ ಹಿನ್ನಲೆ ಶಬರಿಮಲೆಯ ಪ್ರಮುಖ ಕಾರ್ಯಕ್ರಮವೆಂದರೆ ಮಕರ ಜ್ಯೋತಿ (ಸಾಮಾನ್ಯವಾಗಿ ಜನವರಿ 14 ರಂದು). ತಿರುವಾಭರಣಂ ಅಥವಾ ಭಗವಂತನ ಪವಿತ್ರ ಆಭರಣಗಳು (ಪಂದಳಂ ರಾಜನು ಪ್ರಸ್ತುತಪಡಿಸಿದ) ಮೂರು ಪೆಟ್ಟಿಗೆಗಳಲ್ಲಿ ಶಬರಿಮಲೆಗೆ ಆಗಮಿಸುತ್ತವೆ. ಆಭರಣ ಪೆಟ್ಟಿಗೆಗಳ ಆಗಮನದ ನಂತರ ಇಡೀ ಪರ್ವತವು ಈ ಕಾರ್ಯಕ್ರಮವನ್ನು ವೀಕ್ಷಿಸಲು ಅಲ್ಲಿ ನೆರೆದಿದ್ದ…

Read More

ಬೆಂಗಳೂರು : ಇಂದು ವರ್ಷದ ಮೊದಲ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿ ನಾಡಿನಲ್ಲಿಡೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಅದೇ ರೀತಿಯಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನವು ಇಂದು ವಿಶೇಷ ವಿಸ್ಮಯಕ್ಕೆ ಕಾರಣವಾಗಲಿದೆ. ಏಕೆಂದರೆ ಸಂಕ್ರಾಂತಿ ಹಬ್ಬದ ದಿನದಂದು ಸೂರ್ಯನು ದಕ್ಷಿಣ ಪಥದಿಂದ ಉತ್ತರಪದಕೆತನ ದಿಕ್ಕನ್ನು ಬದಲಿಸುವ ವೇಳೆ ಈ ಒಂದು ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿರುವ ಶಿವನ ಮೂರ್ತಿಗೆ ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ವರ್ಷಕ್ಕೆ ಸಂಕ್ರಾಂತಿ ಹಬ್ಬದ ದಿನದಂದೇ ಈ ಒಂದು ವಿಸ್ಮಯ ಹಾಗೂ ಕೌತುಕ ಘಟನೆ ಜೋಳದಲ್ಲಿದ್ದು ಇದನ್ನು ಕಣ್ತುಂಬಿಕೊಳ್ಳಲು ಅಪಾರ ಪ್ರಮಾಣದ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಇಂದು ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರುತ್ತೆ ಅನ್ನೋದರ ಮೇಲೆ ಭವಿಷ್ಯ ಹೇಳಲಾಗುವುದು. ಇನ್ನು ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಗೆ ವಿಶೇಷಪೂಜೆ, ಅಲಂಕಾರ ಮಾಡಲಾಗುವುದು. ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ತೆರೆದಿರಲಿದೆ. ನಂತರ…

Read More

ಬೆಂಗಳೂರು : ಇಂದು ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಕಳೆದ ಬಾರಿ 10 ಕಬ್ಬುಗಳ ಒಂದು ಕಟ್ಟು 400 ರೂ. ಇದ್ರೆ ಈ ಬಾರಿ 500 ರೂ.ಗೆ ತಲುಪಿದೆ. ಇನ್ನು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ತೆಂಗಿನ ಕಾಯಿ ಬೆಲೆ 50 ರಿಂದ 60 ರೂ.ವರೆಗೆ ತಲುಪಿದೆ. ಮಲ್ಲಿಗೆ ಕೆಜಿಗೆ 250 ರೂ. ಇದ್ರೆ, ಕಾಕಡ ಕಜಿಗೆ 230 ರೂ. ಇದೆ. ಗುಲಾಬಿ ಕೆಜಿಗೆ 160 ರೂ, ಸೇವಂತಿಗೆ ಕೆಜಿಗೆ 150-170 ರೂ. ಚೆಂಡು ಹೂವು 110 ರೂ.ಗೆ ಮಾರಾಟವಾಗುತ್ತಿದೆ.

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಗ್ರಹಗಳ ರಾಜನಾದ ಸೂರ್ಯ ದೇವರು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಿಂದೂ ಧರ್ಮದ ಪ್ರಮುಖ ಹಬ್ಬವಾಗಿದೆ. ಈ ದಿನ ಸೂರ್ಯ ದೇವರನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪೂಜಿಸುವುದರಿಂದ ಜಾತಕನ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಿಂದ, ಸೂರ್ಯನ ಉತ್ತರಾಯಣ ಚಲನೆ ಪ್ರಾರಂಭವಾಗುತ್ತದೆ ಮತ್ತು ಈ ಕಾರಣಕ್ಕಾಗಿ ಇದನ್ನು ಉತ್ತರಾಯಣ ಎಂದೂ ಕರೆಯಲಾಗುತ್ತದೆ.  ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಹಬ್ಬವು ಜನವರಿ 15 ರಂದು ನಡೆಯುತ್ತದೆ. ಇದು ಸೂರ್ಯ ದೇವರು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 2025 ರಲ್ಲಿ, ಮಕರ ಸಂಕ್ರಾಂತಿ ಜನವರಿ 14 ರ ಮಂಗಳವಾರ ಬೆಳಿಗ್ಗೆ 9:03 ರಿಂದ ಪ್ರಾರಂಭವಾಗುತ್ತದೆ. ಪುಣ್ಯಕಾಲ (ಶುಭ ಅವಧಿ) ಜನವರಿ 14…

Read More

ಬೆಂಗಳೂರು : ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (ಕೆಎಸ್‌ಡಿಎಲ್‌) ಸಂಸ್ಥೆಯು ವಿಜಯಪುರದ ಬಳಿ ಮೈಸೂರು ಸ್ಯಾಂಡಲ್‌ ಸೋಪು ಉತ್ಪಾದನಾ ಘಟಕ ಸ್ಥಾಪಿಸಲಿದ್ದು, 400 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಈ ಕುರಿತು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದು, ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜೆಂಟ್ಸ್‌ (ಕೆಎಸ್‌ಡಿಎಲ್‌) ಸಂಸ್ಥೆಯು ವಿಜಯಪುರದ ಇಟ್ಟಂಗಿಹಾಳ ರಸ್ತೆ ಬದಿಯ 10 ಎಕರೆ ಪ್ರದೇಶದಲ್ಲಿ ಶೀಘ್ರವೇ ಮೈಸೂರು ಸ್ಯಾಂಡಲ್‌ ಸೋಪು ಉತ್ಪಾದನಾ ಘಟಕ ಸ್ಥಾಪಿಸಲಿದೆ ಎಂದು ತಿಳಿಸಿದ್ದಾರೆ. ಈ ಘಟಕ ಆರಂಭದಿಂದ 400 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಉತ್ತರ ಕರ್ನಾಟಕದ ಜನರಿಗೆ ಮಾತ್ರವಲ್ಲದೇ ಮಹಾರಾಷ್ಟ್ರದವರೆಗೂ ಗುಣಮಟ್ಟದ ಸಾಬೂನು, ಇತರೆ ಉತ್ಪನ್ನ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Read More

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯವಿಭಾಗದ ಎನ್-7ಉಪ ವಿಭಾಗದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 16.01.2025 ರಂದು ಬೆಳಗ್ಗೆ 10:00 ಯಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 16 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ “ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್0, ಬಿ-ನಗರ, ಲಕ್ಷ್ಮೀ ನಗರ, ಹೆಚ್.ವಿ.ಕೆ.ಲೌಟ್. , ಕರ್ನಾಟಕ ಲೇಔಟ್, ಕಮಲಾ ನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಕಛೇರಿ ಸುತ್ತಮುತ್ತ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋಡಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಂಸಲೇಕಾ ಹೋಮ್ ಸುತ್ತಮುತ್ತ, ಶಂಕರಮಾತಾ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ರಾಜಾಜಿ ನಗರ 2ನೇ ಬ್ಲಾಕ್, ಇ.ಎಸ್.ಐ.ಹೋಸ್ಪಿಟ್.…

Read More

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಗ್ರಂಥಾಲಯದ ಫಲಕವನ್ನು ಅನಾವರಣಗೊಳಿಸಿದರು. ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಪ್ರಮುಖ ಅಂಶಗಳು ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ. – ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ – ಮನೆಯ ಮಾಲೀಕರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು. – ಪುಸ್ತಕಗಳ ಖರೀದಿ ಹಾಗೂ…

Read More

ಬೆಂಗಳೂರು: ಎಲ್ಲಾ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಂಫರ್ ಗಿಫ್ಟ್ ನೀಡಿದ್ದಾರೆ. ಶಾಸಕರಿಗೆ ತಲಾ 10 ಕೋಟಿ ಅನುದಾವನವನ್ನು ಘೋಷಣೆ ಮಾಡಿದ್ದಾರೆ. ಕಳೆದ ಬೆಳಗಾವಿಯಲ್ಲಿ ನಡೆದಂತ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸಕರಿಗೆ ಅನುದಾನ ಬಿಡುಗಡೆಯ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಿಎಲ್ ಪಿ ಸಭೆಯಲ್ಲಿ ಶಾಸಕರಿಗೆ ಅನುದಾನವನ್ನು ನೀಡುವ ಘೋಷಣೆ ಮಾಡಿದ್ದಾರೆ. ಎಲ್ಲಾ ಪಕ್ಷದ ಶಾಸಕರಿಗೂ ತಲಾ 10 ಕೋಟಿ ಅನುದಾನವನ್ನು ನೀಡಿದ್ದೇವೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ 10 ಕೋಟಿ ಅನುದಾನ ಕೊಡ್ತಿರೋದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷ ಹೋರಾಟ, ತ್ಯಾಗ, ಬಲಿದಾನಗಳಿಂದ ಕಟ್ಟಿದ್ದಾಗಿದೆ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ ಎಂದರು. ಸರ್ದಾರ್ ವಲ್ಲಭಬಾಯಿ…

Read More